ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಕ್ಸ್‌ಫರ್ಡ್ 'ಅಸ್ಟ್ರಾಜೆನೆಕಾ' ಕೊವಿಡ್ ಲಸಿಕೆ ಅಂತಿಮ ಪ್ರಯೋಗಕ್ಕೆ ಭಾರತ ಸಿದ್ಧ

|
Google Oneindia Kannada News

ನವದೆಹಲಿ, ಜುಲೈ 28: ಆಕ್ಸ್‌ಫರ್ಡ್ ವಿವಿಯ 'ಅಸ್ಟ್ರಾ ಜೆನೆಕಾ' ಕೊವಿಡ್ ಲಸಿಕೆಯ ಅಂತಿಮ ಹಂತದ ಪ್ರಯೋಗವನ್ನು ಮಾನವನ ಮೇಲೆ ನಡೆಸಲಾಗುತ್ತಿದ್ದು, ಅದಕ್ಕೆ ಭಾರತದ ಐದು ಸ್ಥಳಗಳನ್ನು ಗುರುತಿಸಲಾಗಿದೆ.

Recommended Video

Corona ಮಹಿಳೆಯರಿಗಿಂತ ಪುರುಷರಲ್ಲಿ ಹೆಚ್ಚು | Oneindia Kannada

ಈ ಕುರಿತು ಜೈವಿಕ ತಂತ್ರಜ್ಞಾನ ವಿಭಾಗದ ಕಾಯದರ್ಶಿ ರೇಣು ಸ್ವರೂಪ್ ಮಾಹಿತಿ ನೀಡಿದ್ದಾರೆ.ಆಕ್ಸ್‌ಫರ್ಡ್ -ಅಸ್ಟ್ರಾಜೆನೆಕಾ ಕೊವಿಡ್ 19 ಲಸಿಕೆಯ ಮೂರನೇ ಮತ್ತು ಅಂತಿಮ ಹಂತದ ಪ್ರಯೋಗಗಳಿಗೆ ದೇಶಾದ್ಯಂತ ಐದು ಸ್ಥಳಗಳನ್ನು ಗುರುತಿಸಲಾಗಿದೆ ಎಂದಿದ್ದಾರೆ.

ಆಕ್ಸ್‌ಫರ್ಡ್ ವಿವಿಯ ಅರ್ಧದಷ್ಟು ಕೊರೊನಾ ಲಸಿಕೆ ಭಾರತಕ್ಕೆಆಕ್ಸ್‌ಫರ್ಡ್ ವಿವಿಯ ಅರ್ಧದಷ್ಟು ಕೊರೊನಾ ಲಸಿಕೆ ಭಾರತಕ್ಕೆ

ಲಸಿಕೆಯನ್ನು ದೇಶದಲ್ಲಿ ನೀಡುವ ಮುನ್ನ ಡಾಟಾವನ್ನು ಇಟ್ಟುಕೊಳ್ಳುವುದು ಉತ್ತಮ ಹೀಗಾಗಿ ದೇಶದಲ್ಲೇ ಪ್ರಯೋಗ ನಡೆಯುತ್ತಿದೆ. ಸೇರಂ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ಎನ್ನುವುದೇ ಇಡೀ ವಿಶ್ವದಲ್ಲೇ ದೊಡ್ಡ ಪ್ರಮಾಣದಲ್ಲಿ ಲಸಿಕೆಯನ್ನು ತಯಾರಿಸುವ ಕಂಪನಿಯಾಗಿದೆ.

ಭಾರತದಲ್ಲಿ ಆಕ್ಸ್‌ಫರ್ಡ್ ಕೊರೊನಾ ಲಸಿಕೆ ಪ್ರಯೋಗ ಯಾವಾಗ?ಭಾರತದಲ್ಲಿ ಆಕ್ಸ್‌ಫರ್ಡ್ ಕೊರೊನಾ ಲಸಿಕೆ ಪ್ರಯೋಗ ಯಾವಾಗ?

ಇದು ಆಕ್ಸ್‌ಫರ್ಡ್‌ನ್ನು ಆಯ್ಕೆ ಮಾಡಿಕೊಂಡಿದ್ದು, ಅಸ್ಟ್ರಾಜೆನೆಕಾ ಲಸಿಕೆ ಉತ್ಪಾದನೆ ಮಾಡಲು ಸಮ್ಮತಿ ಸೂಚಿಸಿದ್ದಾರೆ. ಈಗಾಗಲೇ ಎರಡು ಬಾರಿ ಮಾನವ ಪ್ರಯೋಗಗಳು ನಡೆದಿದೆ.

ಮೊದಲ ಪ್ರಯೋಗ ಹೇಗಿತ್ತು?

ಮೊದಲ ಪ್ರಯೋಗ ಹೇಗಿತ್ತು?

ಆಕ್ಸ್ಫರ್ಡ್ ವಿವಿಯ ಅಸ್ಟ್ರಾಜೆನೆಕಾ ಮೊದಲ ಪ್ರಯೋಗವನ್ನು ಕೆಲವೇ ಕೆಲವು ಮಂದಿಯ ಮೇಲೆ ಮಾಡಲಾಗಿತ್ತು. ಅವರಲ್ಲಿ ರೋಗನಿರೋಧಕ ಶಕ್ತಿ ಎಷ್ಟರ ಮಟ್ಟಿಗೆ ಉತ್ಪತ್ತಿಯಾಗುತ್ತದೆ ಎಂದು ತಿಳಿದುಕೊಂಡು, ಬಳಿಕ ಮತ್ತಷ್ಟು ಮಂದಿಯ ಮೇಲೆ ಲಸಿಕೆ ಪ್ರಯೋಗ ಮಾಡಲು ಚಿಂತನೆ ನಡೆಸಲಾಗಿತ್ತು.

ಎರಡನೇ ಪ್ರಯೋಗ ಹೇಗಿತ್ತು?

ಎರಡನೇ ಪ್ರಯೋಗ ಹೇಗಿತ್ತು?

ಅಸ್ಟ್ರಾಜೆನೆಕಾ ಲಸಿಕೆಯ ಎರಡನೇ ಪ್ರಯೋಗದ ಸಂದರ್ಭದಲ್ಲಿ ಜನರನ್ನು ಎರಡು ಗುಂಪುಗಳನ್ನಾಗಿ ವಿಂಗಡಿಸಲಾಗಿತ್ತು. ಮಕ್ಕಳು ಹಾಗೂ ದೊಡ್ಡವರಿಗೆ ಪ್ರತ್ಯೇಕವಾಗಿ ಲಸಿಕೆ ನೀಡಲಾಗಿತ್ತು. ಎರಡು ಹಂತಗಳು ಮಾನವರಲ್ಲಿ ಸುರಕ್ಷತೆ ಮತ್ತು ರೋಗ ನಿರೋಧಕರ ಶಕ್ತಿಯನ್ನು ಕೇಂದ್ರೀಕರಿಸಿದ್ದವು.

ಮೂರನೇ ಹಾಗೂ ಅಂತಿಮ ಹಂತ ಹೇಗಿರಲಿದೆ?

ಮೂರನೇ ಹಾಗೂ ಅಂತಿಮ ಹಂತ ಹೇಗಿರಲಿದೆ?

ಮೂರನೇ ಹಾಗೂ ಅಂತಿಮ ಹಂತದಲ್ಲಿ ಅಸ್ಟ್ರಾಜೆನೆಕಾ ಔಷಧವನ್ನು ಸಾವಿರಾರು ಮಂದಿಯ ಮೇಲೆ ಪ್ರಯೋಗ ಮಾಡಲಾಗುತ್ತದೆ. ಭಾರತದಲ್ಲಿ ಸೈಡಸ್ ಕೆಡಿಲಾ ಹಾಗೂ ಭಾರತ್ ಬಯೋಟೆಕ್ ಎರಡೇ ಕಂಪನಿಗಳು ಮಾನವ ಪ್ರಯೋಗ ಹಂತವನ್ನು ತಲುಪಿವೆ.

ಆಕ್ಸ್‌ಫರ್ಡ್ ವಿವಿಯ ಅರ್ಧದಷ್ಟು ಕೊರೊನಾ ಲಸಿಕೆ ಭಾರತಕ್ಕೆ

ಆಕ್ಸ್‌ಫರ್ಡ್ ವಿವಿಯ ಅರ್ಧದಷ್ಟು ಕೊರೊನಾ ಲಸಿಕೆ ಭಾರತಕ್ಕೆ

ಆಕ್ಸ್‌ಫರ್ಡ್ ವಿವಿಯ ಕೊರೊನಾ ಲಸಿಕೆ ಸಂಪೂರ್ಣ ಯಶಸ್ವಿಯಾದಲ್ಲಿ ಭಾರತಲ್ಲಿಯೇ ಉತ್ಪಾದನೆಯಾಗಲಿದೆ. ಭಾರತಕ್ಕೆ ಉತ್ಪಾದನೆಯ ಅರ್ಧದಷ್ಟು ಲಸಿಕೆ ನೀಡಲಾಗುತ್ತದೆ. ಎಲ್ಲವೂ ಅಂದುಕೊಂಡಂತೆ ಆದಲ್ಲಿ ನಮ್ಮಲ್ಲಿ ಉತ್ಪಾದನೆಯಾಗುವ ಲಸಿಕೆಯ ಶೇ.50 ಭಾರತದ ಬಳಕೆಗೆ ಮೀಸಲಾಗಿರಲಿದೆ ಎಂದು ಸಂಸ್ಥೆ ಮುಖ್ಯಸ್ಥ ಆದಾರ್​ ಪೂನಾವಾಲಾ ಹೇಳಿದ್ದಾರೆ. ನವೆಂಬರ್​​- ಡಿಸೆಂಬರ್​ ವೇಳೆಗೆ ಹತ್ತಾರು ಲಕ್ಷ ಡೋಸ್​ ಉತ್ಪಾದನೆಯಾದರೆ, ಮುಂದಿನ ಮಾರ್ಚ್​ ವೇಳೆಗೆ 3-4 ಕೋಟಿ ಡೋಸ್​ ತಯಾರಾಗಲಿದೆ ಎಂದು ಹೇಳಿದ್ದಾರೆ.

ಯಾರಿಗೆ ಮೊದಲು ಲಸಿಕೆ ನೀಡಲಾಗುತ್ತದೆ ಎನ್ನುವ ಪ್ರಶ್ನೆಗೆ ಉತ್ತರಿಸಿದ ಆದಾರ್​, ಇದನ್ನು ಸರ್ಕಾರವೇ ನಿರ್ಧರಿಸಲಿದೆ. ಆರಂಭದಲ್ಲಿ ಹಿರಿಯರು, ಹೆಚ್ಚು ಅಪಾಯದಲ್ಲಿರುವವರು ಹಾಗೂ ಮುಂಚೂಣಿಯಲ್ಲಿದ್ದು, ಕೋವಿಡ್​ ರೋಗಿಗಳಿಗೆ ಆರೈಕೆ ಮಾಡುತ್ತಿರುವ ವೈದ್ಯ ಸಿಬ್ಬಂದಿಗೆ ನೀಡುವುದು ನ್ಯಾಯಯುತ ಹಂಚಿಕೆಯಾಗಲಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

English summary
Five sites across the country are ready for the third and final phase of human trials of the Oxford-AstraZeneca COVID-19 vaccine, Secretary of Department of Biotechnology (DBT) Renu Swarup Said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X