ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚೀನಾ ಪ್ರತಿಪಾದಿಸುವ ಎಲ್‌ಎಸಿಯನ್ನು ಎಂದಿಗೂ ಒಪ್ಪಿಕೊಂಡಿಲ್ಲ: ಭಾರತ

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 29: ಚೀನಾವು 1959ರಲ್ಲಿ ಏಕಪಕ್ಷೀಯವಾಗಿ ವ್ಯಾಖ್ಯಾನಿಸಿರುವ ವಾಸ್ತವ ಗಡಿ ನಿಯಂತ್ರಣ ರೇಖೆಯನ್ನು (ಎಲ್‌ಎಸಿ) ತಾನು ಎಂದಿಗೂ ಒಪ್ಪಿಕೊಂಡಿಲ್ಲ ಎಂದು ಭಾರತ ಹೇಳಿದೆ. ಗಡಿಯನ್ನು ಗುರುತಿಸುವ ವಿಚಾರದಲ್ಲಿ ಸಾಮಾನ್ಯ ತಿಳಿವಳಿಕೆಗೆ ಬರಲು ಉಭಯ ದೇಶಗಳ ವಿವಿಧ ಒಪ್ಪಂದಕ್ಕೆ ಚೀನಾ ಬದ್ಧವಾಗಿರಬೇಕಾಗುತ್ತದೆ ಎಂದು ಖಡಕ್ ಉತ್ತರ ನೀಡಿದೆ.

1959ರ ನವೆಂಬರ್ 7ರಂದು ಆಗಿನ ಪ್ರಧಾನಿ ಜವಹರಲಾಲ್ ನೆಹರೂ ಅವರಿಗೆ ಚೀನಾ ಪ್ರಧಾನಿ ಝೋವು ಎನ್ಲೈ ಬರೆದ ಪತ್ರದಲ್ಲಿ ಪ್ರಸ್ತಾಪಿಸಿದ ಎಲ್‌ಎಸಿಗೆ ಬೀಜಿಂಗ್ ಬದ್ಧವಾಗಿದೆ ಎಂಬುದನ್ನು ಚೀನಾ ವಿದೇಶಾಂಗ ಸಚಿವಾಲಯ ಹೇಳಿಕೆ ನೀಡಿತ್ತು. 61 ವರ್ಷಗಳ ಹಿಂದಿನಿಂದಲೂ ಚೀನಾ ಪ್ರತಿಪಾದಿಸುತ್ತಿರುವ ಗಡಿಯನ್ನು ಭಾರತ ನಿರಾಕರಿಸುತ್ತಾ ಬಂದಿದೆ.

ಯುದ್ಧವೂ ಇಲ್ಲ, ಶಾಂತಿಯೂ ಇಲ್ಲ ಪೂರ್ವ ಲಡಾಖ್‌ನಲ್ಲಿ ಅಹಿತಕರ ಪರಿಸ್ಥಿತಿ:ಬದೌರಿಯಾಯುದ್ಧವೂ ಇಲ್ಲ, ಶಾಂತಿಯೂ ಇಲ್ಲ ಪೂರ್ವ ಲಡಾಖ್‌ನಲ್ಲಿ ಅಹಿತಕರ ಪರಿಸ್ಥಿತಿ:ಬದೌರಿಯಾ

1959ರಲ್ಲಿ ಏಕಪಕ್ಷೀಯವಾಗಿ ವ್ಯಾಖ್ಯಾನಿಸಿದ ವಾಸ್ತವ ಗಡಿ ನಿಯಂತ್ರಣ ರೇಖೆಯನ್ನು ಭಾರತ ಎಂದಿಗೂ ಒಪ್ಪಿಕೊಂಡಿಲ್ಲ. ಈ ನಿಲುವು ಸ್ಥಿರವಾಗಿದ್ದು, ಚೀನಾ ಸೇರಿದಂತೆ ಪ್ರತಿಯೊಬ್ಬರಿಗೂ ತಿಳಿದಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅನುರಾಗ್ ಶ್ರೀವಾಸ್ತವ ತಿಳಿಸಿದ್ದಾರೆ.

India Reaction To China: Never Accepted The Unilaterally Defined 1959 LAC

ಚೀನಾವನ್ನು ಎದುರಿಸಲು ಭಾರತದ ಬತ್ತಳಿಕೆಯಲ್ಲಿರುವ ಪ್ರಮುಖ ಅಸ್ತ್ರಗಳಿವುಚೀನಾವನ್ನು ಎದುರಿಸಲು ಭಾರತದ ಬತ್ತಳಿಕೆಯಲ್ಲಿರುವ ಪ್ರಮುಖ ಅಸ್ತ್ರಗಳಿವು

ಎಲ್‌ಎಸಿಯಲ್ಲಿ ಶಾಂತಿ ಮತ್ತು ನೆಮ್ಮದಿ ಕಾಪಾಡುವ 1993ರ ಒಪ್ಪಂದ, ಸೇನಾ ಕ್ಷೇತ್ರದಲ್ಲಿ ಆತ್ಮವಿಶ್ವಾಸ ನಿರ್ಮಿಸುವ ಕ್ರಮಗಳ (ಸಿಬಿಎಂ) 1996ರ ಒಪ್ಪಂದ, ಸಿಬಿಎಂ ಅನುಷ್ಠಾನದ 2005ರ ಒಪ್ಪಂದ ಮತ್ತು ರಾಜಕೀಯ ಮಾನದಂಡ 2005ರ ಒಪ್ಪಂದ ಹಾಗೂ ಹಾಗೂ ಭಾರತ-ಚೀನಾ ಗಡಿ ವಿವಾದ ಬಗೆಹರಿಸುವ ಒಪ್ಪಂದ ಸೇರಿದಂತೆ ಹಲವು ದ್ವಿಪಕ್ಷೀಯ ಒಪ್ಪಂದಗಳು ನಡೆದಿವೆ ಎಂದು ಹೇಳಿದ್ದಾರೆ.

English summary
India has reacted to China's claim of LAC agreement and said, it had never accepted the unilaterally defined 1959 Line of Actual Control.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X