ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತೀಯ ಸೇನೆ ಸೇರುತ್ತಿದೆ ಭೀಕರ ಅಸ್ತ್ರ ಎಸ್‌-400, ಏನಿದರ ಸಾಮರ್ಥ್ಯ?

|
Google Oneindia Kannada News

ನವದೆಹಲಿ, ಅಕ್ಟೋಬರ್ 04: ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಎರಡು ದಿನಗಳ ಭೇಟಿಗೆಂದು ಭಾರತಕ್ಕೆ ಬಂದಿದ್ದಾರೆ. ಈ ಭೇಟಿ ಹಲವು ಕಾರಣಗಳಿಗೆ ಅತ್ಯಂತ ಮಹತ್ವದ್ದಾಗಿದೆ. ವಿಶೇಷವಾಗಿ ರಷ್ಯಾದಿಂದ ಭಾರತ ಖರೀದಿಸುತ್ತಿರುವ ಶಸ್ತ್ರಾಸ್ತ್ರದ ವಿಶ್ವದ ಚಿತ್ತ ಇತ್ತ ನೆಡುವಂತೆ ಮಾಡಿದೆ.

ಹೌದು ಭಾರತವು ರಷ್ಯಾದಿಂದ ಎಸ್‌-400 ಟ್ರಿಯಂಫ್‌ ಎಂಬ ವೈಮಾನಿಕ ದಾಳಿಗಳನ್ನು ಎದುರಿಸಬಲ್ಲ ಅತ್ಯಾಧುನಿಕ ಮಿಸೈಲ್ ಅನ್ನು ಖರೀದಿಸುತ್ತಿದೆ. ಈ ಸಂಬಂಧ ಒಪ್ಪಂದವನ್ನು ಇಂದು ಮೋದಿ ಮತ್ತು ವ್ಲಾಡಿಮಿರ್ ಪುಟಿನ್ ಸಹಿ ಮಾಡಲಿದ್ದಾರೆ.

ರಷ್ಯಾದಿಂದ ಕ್ಷಿಪಣಿ ನಿರೋಧಕ ವ್ಯವಸ್ಥೆ ಖರೀದಿ: ಪುಟಿನ್ ಜತೆ ಮೋದಿ ಚರ್ಚೆರಷ್ಯಾದಿಂದ ಕ್ಷಿಪಣಿ ನಿರೋಧಕ ವ್ಯವಸ್ಥೆ ಖರೀದಿ: ಪುಟಿನ್ ಜತೆ ಮೋದಿ ಚರ್ಚೆ

ಅಮೆರಿಕ ಸಹ ರಷ್ಯಾದೊಂದಿಗೆ ಭಾರತ ಶಸ್ತ್ರಾಸ್ತ್ರ ಖರೀದಿಸಬಾರದು ಎಂದು ಎಚ್ಚರಿಕೆ ನೀಡಿದರೂ ಸಹ ಅದನ್ನು ಲೆಕ್ಕಿಸದೆ ಭಾರತವು ರಷ್ಯಾದ ಎಸ್‌-400 ಆಂಟಿ ಏರ್‌ಕ್ರಾಫ್ಟ್‌ ಮಿಸೈಲ್ ಅನ್ನು ಕೊಳ್ಳುತ್ತಿದೆ. ರಷ್ಯಾದೊಂದಿಗೆ ಶಸ್ತ್ರಾಸ್ತ್ರ ಒಪ್ಪಂದ ಮಾಡಿಕೊಂಡರೆ ನಿರ್ಭಂಧ ಹೇರುತ್ತೇವೆ ಎಂದು ಅಮೆರಿಕ ಎಚ್ಚರಿಕೆಯನ್ನೂ ಭಾರತ ನಿರ್ಲಕ್ಷಿಸಿ ಈ ಮಿಸೈಲ್ ಖರೀದಿಸುತ್ತಿದೆ.

ಎಸ್‌-400 ಟ್ರಿಂಯಂಫ್ ಆಂಟಿ ಏರ್‌ಕ್ರಾಫ್ಟ್‌ ಮಿಸೈಲ್‌ನ ವಿಶೇಷತೆ ಏನು ಎಂಬ ಮಾಹಿತಿ ಇಲ್ಲಿದೆ ಓದಿ...

ಶತ್ರು ವಿಮಾನಗಳನ್ನು ಆಕಾಶದಲ್ಲೆ ಹೊಡೆದುರುಳಿಸುತ್ತದೆ

ಶತ್ರು ವಿಮಾನಗಳನ್ನು ಆಕಾಶದಲ್ಲೆ ಹೊಡೆದುರುಳಿಸುತ್ತದೆ

ಶತ್ರು ದೇಶಗಳ ವಾಯು ದಾಳಿಯನ್ನು ಸಶಕ್ತವಾಗಿ ತಡೆಯುವ ಸಾಮರ್ಥ್ಯ ಎಸ್‌-400 ಗೆ ಇದೆ. ಶತ್ರು ವಿಮಾನಗಳನ್ನು ದೂರದಲ್ಲಿಯೇ ಗುರುತಿಸಿ ನಿಖರವಾಗಿ ಅದರ ಮೇಲೆ ದಾಳಿ ಮಾಡುವ ಸಾಮರ್ಥ್ಯ ಈ ಮಿಸೈಲ್‌ಗೆ ಇದೆ. ವಿಮಾನ ಮಾತ್ರವಲ್ಲದೆ ಶತ್ರು ಹಾರಿಸಿರುವ ಕ್ಷಿಪಣಿ, ಡ್ರೋನ್‌ ಅನ್ನು ಸಹ ಗುರುತಿಸಿ ಆಕಾಶದಲ್ಲಿ ಹೊಡೆದುರುಳಿಸುತ್ತದೆ.

ಒಂದೇ ಬಾರಿ ಹಲವು ಗುರಿಗಳ ಮೇಲೆ ದಾಳಿ ಮಾಡಬಲ್ಲದು

ಒಂದೇ ಬಾರಿ ಹಲವು ಗುರಿಗಳ ಮೇಲೆ ದಾಳಿ ಮಾಡಬಲ್ಲದು

ಒಂದೇ ಬಾರಿ ಹಲವು ಗುರಿಗಳ ಮೇಲೆ ದಾಳಿ ಮಾಡುವ ಸಾಮರ್ಥ್ಯ ಸಹ ಈ ಎಸ್‌-400 ಗೆ ಇದೆ. ಆಗಸದಲ್ಲಿ ಒಂದಕ್ಕಿಂತ ಹೆಚ್ಚು ಶತ್ರು ವಿಮಾನಗಳಿದ್ದರೆ ಪ್ರತಿಯೊಂದರ ವೇಗ, ದೂರ ಎಲ್ಲವೂ ಭಿನ್ನವಾಗಿದ್ದರೂ ಸಹ ಅವುಗಳ ಮೇಲೆ ನಿಖರವಾಗಿ ಗುರಿ ಇಟ್ಟು ಕ್ಷಿಪಣಿ ಮೂಲಕ ಉಡಾಯಿಸುವ ಸಾಮರ್ಥ್ಯ ಇರುವ ಶಕ್ತಿಶಾಲಿ ಮಿಸೈಲ್ ಇದು.

ಎರಡೂ ದೇಶಗಳಿಗೆ ಮಹತ್ವವಾದ ರಷ್ಯಾ ಅಧ್ಯಕ್ಷ ಪುಟಿನ್ ಭಾರತ ಭೇಟಿ ಎರಡೂ ದೇಶಗಳಿಗೆ ಮಹತ್ವವಾದ ರಷ್ಯಾ ಅಧ್ಯಕ್ಷ ಪುಟಿನ್ ಭಾರತ ಭೇಟಿ

400 ಕಿ.ಮೀ ದೂರದಲ್ಲಿರುವ ಗುರಿಯ ಮೇಲೂ ದಾಳಿ

400 ಕಿ.ಮೀ ದೂರದಲ್ಲಿರುವ ಗುರಿಯ ಮೇಲೂ ದಾಳಿ

400 ಕಿ.ಮೀಟರ್‌ ದೂರದಲ್ಲಿ 30 ಕಿ.ಮೀಟರ್‌ ಎತ್ತರದಲ್ಲಿ ಹಾರುತ್ತಿರುವ ಶತ್ರು ವಿಮಾನ, ಶತ್ರು ದೇಶ ಹಾರಿಸಿದ ಮಿಸೈಲ್, ಡ್ರೋನ್‌ ಯಾವುದಾದರನ್ನಾದರೂ ಪತ್ತೆ ಹಚ್ಚಿ ದಾಳಿ ಮಾಡಬಲ್ಲ ಸಾಮರ್ಥ್ಯ ಇದಕ್ಕಿದೆ. 400 ಕಿ.ಮೀ ದೂರದಲ್ಲಿ 30 ಕಿ.ಮೀ ಎತ್ತರದಲ್ಲಿ ಹಾರುತ್ತಿರುವ ವಸ್ತುವನ್ನು ಹೊಡೆದಿರುಳಿಸುವ ಇನ್ನಾವುದೇ ಶಸ್ತ್ರ ವಿಶ್ವದಲ್ಲೇ ಇಲ್ಲ.

ಏಳು ಎಸ್‌-400 ಮಿಸೈಲ್‌ ಖರೀದಿಗೆ ಒಪ್ಪಂದ

ಏಳು ಎಸ್‌-400 ಮಿಸೈಲ್‌ ಖರೀದಿಗೆ ಒಪ್ಪಂದ

ಒಟ್ಟು ಏಳು ಎಸ್‌-400 ಮಿಸೈಲ್‌ಗಳಿಗೆ ಭಾರತ ಬೇಡಿಕೆ ಇಟ್ಟಿದೆ. ಮೊದಲ ಎರಡು ಮಿಸೈಲ್‌ಗಳು ಒಪ್ಪಂದವಾದ ಎರಡು ವರ್ಷದಲ್ಲಿ ಭಾರತೀಯ ವಾಯು ಸೇನೆಯ ಕೈಸೇರಲಿವೆ. ಇನ್ನುಳಿದ ಐದು ಮಿಸೈಲ್‌ಗಳು ಐದು ವರ್ಷಗಳ ಒಳಗಾಗಿ ಸರಬರಾಜು ಮಾಡಲಾಗುತ್ತದೆ.

ರಷ್ಯಾದಿಂದ ರಕ್ಷಣಾ ಸಾಧನ ಖರೀದಿ: ಭಾರತದ ಮೇಲೆ ಅಮೆರಿಕ ನಿರ್ಬಂಧ?ರಷ್ಯಾದಿಂದ ರಕ್ಷಣಾ ಸಾಧನ ಖರೀದಿ: ಭಾರತದ ಮೇಲೆ ಅಮೆರಿಕ ನಿರ್ಬಂಧ?

ಒಂದು ಎಸ್‌-400 ಬೆಲೆ ಎಷ್ಟು?

ಒಂದು ಎಸ್‌-400 ಬೆಲೆ ಎಷ್ಟು?

ಇದರ ರೆಡಾರ್‌ ಬಹುಕಾರ್ಯ ಮಾಡುವಂತೆ ವಿನ್ಯಾಸ ಮಾಡಲಾಗಿದೆ. ಯುದ್ಧ ರಂಗದಲ್ಲಿ ಉಪಯೋಗಕ್ಕೆ ಬರುವ ಹಲವು ಕಾರ್ಯಗಳನ್ನು ಮಾಡುವಂತೆ ಇದನ್ನು ವಿನ್ಯಾಸ ಮಾಡಲಾಗಿದೆ. ಒಂದು ಎಸ್‌-400 ಬೆಲೆ 368.28 ಕೋಟಿ ರೂಪಾಯಿಗಳು.

ಅಮೆರಿಕದ ಶಸ್ತ್ರಕ್ಕಿಂತಲೂ ಉತ್ತಮ ಎಸ್‌-400

ಅಮೆರಿಕದ ಶಸ್ತ್ರಕ್ಕಿಂತಲೂ ಉತ್ತಮ ಎಸ್‌-400

ಅಮೆರಿಕದ ಟಾಡ್‌ (TAAD)ಗಿಂತಲೂ ಈ ಎಸ್‌-400 ಸಾಕಷ್ಟು ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ ಎಂದು ಹಲವು ದೇಶಗಳು ಹೇಳಿವೆ. ಭಾರತವು 2015ರಿಂದಲೂ ಎಸ್‌-400 ಅನ್ನು ತನ್ನ ಸೇನಾ ಶಸ್ತ್ರಾಗಾರಕ್ಕೆ ಸೇರಿಸಿಕೊಳ್ಳಲು ಯತ್ನಿಸಿತ್ತು. ಆದರೆ ಅಮೆರಿಕ ಅಡ್ಡಗಾಲು ಹಾಕಿದ್ದ ಕಾರಣ ತಡೆಹಿಡಿಯಲಾಗಿತ್ತು.

English summary
India purchasing 7 s-400 triumf anti aircraft missile from Russia. S-400 said to be a game changer for Indian Air force. Here are list of its capability and specialties.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X