ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲಸಿಕೆ ಕೊರತೆ ನೀಗಿಸಲು ಕೇಂದ್ರ ಸರ್ಕಾರದ ಮಾಸ್ಟರ್‌ ಪ್ಲ್ಯಾನ್

|
Google Oneindia Kannada News

ನವದೆಹಲಿ, ಜೂನ್ 1: ಭಾರತದಲ್ಲಿ ಪ್ರಸಕ್ತ ಉಂಟಾಗಿರುವ ಲಸಿಕೆಗಳ ಕೊರತೆ ನೀಗಿಸಲು ಅಗತ್ಯ ಕ್ರಮ ಕೈಗೊಳ್ಳುತ್ತಿರುವ ವಿಚಾರವನ್ನು ಸರ್ಕಾರ ಅನೇಕ ಸಂದರ್ಭಗಳಲ್ಲಿ ವಿವರಿಸಿದೆ. ಲಸಿಕೆಗಳ ಉತ್ಪಾದನೆ ದೊಡ್ಡ ಪ್ರಮಾಣದಲ್ಲಿ ಹೆಚ್ಚಾಗುವ ಭರವಸೆಗಳು ದೊರೆತಿದೆ. ಈ ಮಧ್ಯೆ ಈಗ ನಡೆಯುತ್ತಿರುವ ಲಸಿಕೆ ಅಭಿಯಾನಕ್ಕೆ ಕ್ರಾಂತಿಕಾರಕ ಬದಲಾವಣೆ ತರುವಂಥ ಬೆಳವಣಿಗೆಗಳು ನಡೆದಿವೆ. ಎರಡು ಮಹತ್ವದ ಅಧ್ಯಯನ ಮುಂದಿನ ಕೆಲವೇ ದಿನಗಳಲ್ಲಿ ಆರಂಭವಾಗಲಿದ್ದು ಇದು ಭಾರತದಲ್ಲಿ ಲಸಿಕೆ ಅಭಿಯಾನಕ್ಕೆ ಇನ್ನಷ್ಟು ವೇಗವನ್ನು ನೀಡುವ ಸಂಭವವಿದೆ.

ಲಸಿಕೆ ಮಿಶ್ರಣದ ಪರೀಕ್ಷೆ (ಭಾರತದಲ್ಲಿ ಸದ್ಯ ನೀಡಲಾಗುತ್ತಿರುವ ಕೋವಿಶೀಲ್ಡ್ ಹಾಗೂ ಕೊವಾಕ್ಸಿನ್ ಲಸಿಕೆಗಳ ಒಂದೊಂದು ಡೋಸ್ ನೀಡುವುದು ಎಷ್ಟು ಪರಿಣಾಮಕಾರಿ ಎಂದು ತಿಳಿದುಕೊಳ್ಳುವುದು) ಮತ್ತು ಕೋವಿಶೀಲ್ಡ್ ಲಸಿಕೆಯ ಒಂದೇ ಡೋಸ್‌ನ ಪರಿಣಾಮದ ಬಗ್ಗೆ ಅಧ್ಯಯನ ಶೀಘ್ರದಲ್ಲಿಯೇ ಆರಂಭವಾಗಲಿದೆ. ಲಸಿಕೆಗಳ ಕೊರತೆಯಾಗುತ್ತಿರುವ ಈ ಸಂದರ್ಭದಲ್ಲಿ ಈ ಅಧ್ಯಯನದ ಫಲಿತಾಂಶದ ಸಾಕಷ್ಟು ಕುತೂಹಲವನ್ನು ಮೂಡಿಸಿದೆ. ಮೂಲಗಳ ಮಾಹಿತಿಯ ಪ್ರಕಾರ ಲಸಿಕೆಗಳ ಮಿಶ್ರಣದ ಬಗೆಗಿನ ಅಧ್ಯಯನ ಈ ತಿಂಗಳಿನಲ್ಲಿ ಆರಂಭವಾಗಲಿದ್ದು ಮುಂದಿನ ಎರಡರಿಂದ ಎರಡೂವರೆ ತಿಂಗಳಲ್ಲಿ ಈ ಅಧ್ಯಯನ ಪೂರ್ಣಗೊಳ್ಳಲಿದೆ.

ಗುಡ್ ನ್ಯೂಸ್: ಅಂತೂ-ಇಂತೂ ಭಾರತದಲ್ಲಿ ಕೊರೊನಾವೈರಸ್ ಕಾಟ ಇಳಿಮುಖಗುಡ್ ನ್ಯೂಸ್: ಅಂತೂ-ಇಂತೂ ಭಾರತದಲ್ಲಿ ಕೊರೊನಾವೈರಸ್ ಕಾಟ ಇಳಿಮುಖ

ಇತ್ತೀಚೆಗೆ ಸುಮಾರು 20 ಜನರು ಆಕಸ್ಮಿಕವಾಗಿ ಎರಡು ಬೇರೆ ಬೇರೆ ಲಸಿಕೆಗಳನ್ನು ಹಾಕಿಸಿಕೊಂಡಿದ್ದ ಘಟನೆ ವರದಿಯಾಗಿತ್ತು. ಆದರೆ ಈ ಬಗ್ಗೆ ಯಾವುದೇ ಆತಂಕಗಳು ಇಲ್ಲ ಎಂದು ಕೇಂದ್ರ ಸರ್ಕಾರ ಹೇಳಿತ್ತು.

India planning to study mixing of corona vaccine doses and Covishield Single-Shot

ನೀತಿ ಆಯೋಗದ ಸದಸ್ಯ ಮತ್ತು ಕೋವಿಡ್ ಟಾಸ್ಕ್ ಫೋರ್ಸ್‌ನ ಮುಖ್ಯಸ್ಥ ವಿಕೆ ಪೌಲ್ ಈ ಬಗ್ಗೆ ಮಾತನಾಡಿ, ಲಸಿಕೆಗಳ ಮಿಶ್ರಣದಿಂದ ಉಂಟಾಗುವ ಅನುಕೂಲಕರ ಪರಿಣಾಮದ ಬಗ್ಗೆ ಆಳವಾದ ಅಧ್ಯಯನದ ಅಗತ್ಯವಿದೆ ಎಂದಿದ್ದರು. ಈ ಮಧ್ಯೆ ಸರ್ಕಾರ ಕೋವಿಶೀಲ್ಡ್ ಲಸಿಕೆಯ ಎರಡು ಡೋಸ್‌ಗಳ ನಡುವಿನ ಅಂತರದ ವಿಸ್ತರಣೆ ಬಗ್ಗೆಯೂ ಸರ್ಕಾರ ಪರಿಶೀಲನೆ ನಡೆಸಲಿದೆ.

ಕೋವಿಶೀಲ್ಡ್ ನ ಒಂದೇ ಡೋಸ್ ಲಸಿಕೆ ನೀಡುವ ಅಧ್ಯಯನದಿಂದ ಪೂರಕ ವರದಿಗಳು ಬಂದಲ್ಲಿ ಹೆಚ್ಚು ಜನರಿಗೆ ಲಸಿಕೆಯನ್ನು ನೀಡಲು ಸರ್ಕಾರಕ್ಕೆ ಸಹಾಯಕವಾಗಲಿದೆ ಎಂದು ಮೂಲಗಳು ಹೇಳಿದೆ. ಈ ಹಿನ್ನೆಲೆಯಲ್ಲಿ ಎರಡು ಲಸಿಕೆಗಳಿಂದ ದೊರೆಯುವ ಪರಿಣಾಮದಿಂದ ಒಂದೇ ಡೋಸ್‌ನಿಂದ ಉಂಟಾಗುವ ಪರಿಣಾಮದ ಬಗ್ಗೆ ಅಧ್ಯಯನವನ್ನು ಆಯ್ಕೆ ಮಾಡಲಾಗಿದೆ.

ಭಾರತದಲ್ಲಿ 1 ಗಂಟೆಗೆ 1 ಲಕ್ಷಕ್ಕೂ ಅಧಿಕ ಮಂದಿಗೆ ಕೊರೊನಾ ಲಸಿಕೆ!ಭಾರತದಲ್ಲಿ 1 ಗಂಟೆಗೆ 1 ಲಕ್ಷಕ್ಕೂ ಅಧಿಕ ಮಂದಿಗೆ ಕೊರೊನಾ ಲಸಿಕೆ!

ಕೊರೊನಾ ವೈರಸ್‌ಗೆ ಅನುಮತಿ ದೊರೆತಿರುವ ಲಸಿಕೆಗಳಲ್ಲಿ ಕೆಲ ಲಸಿಕೆಗಳು ಒಂದೇ ಡೋಸ್‌ನದ್ದಾಗಿದೆ. ಜಾನ್ಸನ್ & ಜಾನ್ಸನ್ ಮತ್ತು ಸ್ಪುಟ್ನಿಕ್ ಲೈಟ್‌ನಂಥ ಕೆಲ ಲಸಿಕೆಗಳು ಒಂದೇ ಡೋಸ್ ನೀಡುವ ಲಸಿಕೆಗಳಾಗಿದೆ. ಹೀಗಾಗಿ ಕೋವಿಶೀಲ್ಡ್ ಲಸಿಕೆ ಕೂಡ ಒಂದೇ ಡೋಸ್‌ನಲ್ಲಿ ನೀಡಲು ಅಗತ್ಯ ಅಧ್ಯಯನ ಆರಂಭವಾಗಲಿದೆ.

English summary
India planning to study mixing of corona vaccine doses and Covishield Single-Shot. know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X