ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಶ್ವಸಂಸ್ಥೆ ಸಾಮಾನ್ಯ ಸಭೆ ವೇಳೆ ಭಾರತ-ಪಾಕ್ ಮಾತುಕತೆ

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 20: ನ್ಯೂಯಾರ್ಕ್‌ನಲ್ಲಿ ನಡೆಯಲಿರುವ ವಿಶ್ವಸಂಸ್ಥೆಯ ಸಮಾನ್ಯ ಸಭೆಯ ಸಂದರ್ಭದಲ್ಲಿ ಉಭಯ ರಾಷ್ಟ್ರಗಳ ವಿದೇಶಾಂಗ ಸಚಿವರ ಸಭೆ ನಡೆಸುವ ಪಾಕಿಸ್ತಾನದ ಮನವಿಗೆ ಭಾರತ ಒಪ್ಪಿಗೆ ಸೂಚಿಸಿದೆ.

ಶಾಂತಿಯುತ ಮಾತುಕತೆ ಪುನಾರಂಭ: ಮೋದಿಗೆ ಇಮ್ರಾನ್ ಖಾನ್ ಪತ್ರ ಶಾಂತಿಯುತ ಮಾತುಕತೆ ಪುನಾರಂಭ: ಮೋದಿಗೆ ಇಮ್ರಾನ್ ಖಾನ್ ಪತ್ರ

ಆದರೆ, ಈ ಸಭೆಯು ಪಾಕಿಸ್ತಾನದೆಡೆಗಿನ ತನ್ನ ನೀತಿಗಳಲ್ಲಿ ಯಾವುದೇ ಬದಲಾವಣೆಯನ್ನು ಸೂಚಿಸುವುದಿಲ್ಲ ಮತ್ತು ಮಾತುಕತೆಯ ಆರಂಭ ಎಂಬ ಅರ್ಥವೂ ಅಲ್ಲ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಸ್ಪಷ್ಟಪಡಿಸಿದೆ.

India pakistan foreign minister meeting on sidelines of UNGA

ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಸಂದರ್ಭದಲ್ಲಿ ಒಂದು ಸೂಕ್ತ ದಿನ ಮತ್ತು ಸಮಯದಂದು ಎರಡೂ ದೇಶಗಳ ವಿದೇಶಾಂಗ ಸಚಿವರು ಭೇಟಿ ಮಾಡಲಿದ್ದಾರೆ.

ಪಾಕಿಸ್ತಾನ ಪರ ಬೇಹುಗಾರಿಕೆ, ಬಿಎಸ್‌ಎಫ್‌ ಜವಾನ ಬಂಧನಪಾಕಿಸ್ತಾನ ಪರ ಬೇಹುಗಾರಿಕೆ, ಬಿಎಸ್‌ಎಫ್‌ ಜವಾನ ಬಂಧನ

ನಾವು ಯಾವುದೇ ಕಾರ್ಯಸೂಚಿಯನ್ನು ಇದುವರೆಗೂ ಅಂತಿಮಗೊಳಿಸಿಲ್ಲ. ಈಗ ಸಭೆಗೆ ಒಪ್ಪಿಗೆ ಸೂಚಿಸಿದ್ದೇವಷ್ಟೇ ಎಂದು ಸಚಿವಾಲಯದ ವಕ್ತಾರ ರವೀಶ್ ಕುಮಾರ್ ಗುರುವಾರ ತಿಳಿಸಿದ್ದಾರೆ.

ಕರ್ತಾರ್‌ಪುರ ಕಾರಿಡಾರ್ ಅನ್ನು ಓಡಾಟಕ್ಕೆ ಪುನಃ ಮುಕ್ತಗೊಳಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಈ ಬಗ್ಗೆ ಪಾಕಿಸ್ತಾನ ಸರ್ಕಾರದಿಂದ ಅನೇಕ ವರ್ಷಗಳಿಂದ ಯಾವುದೇ ಅಧಿಕೃತ ಸಂವಹನ ನಡೆದಿಲ್ಲ. ಈ ವಿವಾದದ ಕುರಿತು ಸಾಮಾನ್ಯ ಸಭೆಯ ಸಂದರ್ಭದ ಭೇಟಿ ವೇಳೆ ಸುಷ್ಮಾ ಸ್ವರಾಜ್ ಅವರು ಪ್ರಸ್ತಾಪಿಸಲಿದ್ದಾರೆ ಎಂದು ಹೇಳಿದ್ದಾರೆ.

English summary
India agreed to pakistan request for a meeting of the foreign ministers of the two countries on the sidelines of the UNGA in new york.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X