ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

1971ರ ಭಾರತ-ಪಾಕಿಸ್ತಾನ ಯುದ್ಧದ 49ನೇ ವರ್ಷದ ವಿಜಯ ದಿವಸ

|
Google Oneindia Kannada News

ನವದೆಹಲಿ, ಡಿಸೆಂಬರ್ 16: ದೇಶದಾದ್ಯಂತ ಇಂದು ವಿಜಯ್ ದಿವಸ ಆಚರಿಸಲಾಗುತ್ತಿದೆ. ಸ್ವತಂತ್ರ ಬಾಂಗ್ಲಾದೇಶ ರಚನೆಗೆ ಕಾರಣವಾದ 1971ರ ಭಾರತ-ಪಾಕಿಸ್ತಾನ ಯುದ್ಧದಲ್ಲಿ ಭಾರತದ ಗೆಲುವನ್ನು ಪ್ರತಿ ಡಿಸೆಂಬರ್ 16ರಂದು ಸಂಭ್ರಮಿಸಲಾಗುತ್ತದೆ.

ವಿಜಯ ದಿವಸದ 49ನೇ ವರ್ಷಾಚರಣೆಯ ಪ್ರಯುಕ್ತ ಪ್ರಧಾನಿ ನರೇಂದ್ರ ಮೋದಿ ಅವರು ರಾಷ್ಟ್ರೀಯ ಯುದ್ಧ ಸ್ಮಾರಕದಲ್ಲಿನ ಶಾಶ್ವತ ಬೆಳಕನಿಂದ ಸ್ವರ್ಣಿಂ ವಿಜಯ್ ಮಶಾಲ್ ದೀಪವನ್ನು ಬೆಳಗಿಸಿದರು. ಬಳಿಕ ಹುತಾತ್ಮ ಯೋಧರಿಗೆ ಗೌರವ ನಮನ ಸಲ್ಲಿಸಿದರು.

ವಿಜಯ್ ದಿವಸ್: ಭಾರತ-ಪಾಕ್ ಯುದ್ಧದ ಬಗ್ಗೆ ತಿಳಿದಿರಬೇಕಾದ 22 ಅಂಶಗಳುವಿಜಯ್ ದಿವಸ್: ಭಾರತ-ಪಾಕ್ ಯುದ್ಧದ ಬಗ್ಗೆ ತಿಳಿದಿರಬೇಕಾದ 22 ಅಂಶಗಳು

ಶಾಶ್ವತ ಬೆಳಕಿನಿಂದ ಮೂಲಕ ಹೊತ್ತಿಸಿದ ವಿಜಯ ಮಶಾಲ್ ಅನ್ನು (ಗೆಲುವಿನ ಪ್ರಕಾಶಗಳು) 1971ರ ಯುದ್ಧದ ಬಳಿಕ ಪರಮ ವೀರಚಕ್ರ ಮತ್ತು ಮಹಾ ವೀರ ಚಕ್ರ ಪ್ರಶಸ್ತಿಗಳನ್ನು ಪಡೆದ ಯೋಧರ ಗ್ರಾಮಗಳು ಸೇರಿದಂತೆ ದೇಶದ ವಿವಿಧ ಭಾಗಗಳಿಗೆ ಕೊಂಡೊಯ್ಯಲಾಗುತ್ತದೆ ಎಂದು ರಕ್ಷಣಾ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.

 India Observing Vijay Diwas On 49th Anniversary Of Indo-Pak War 1971

1971ರ ಯುದ್ಧ ಸುಮಾರು 13 ದಿನಗಳ ಕಾಲ ನಡೆದಿತ್ತು. ಪಾಕಿಸ್ತಾನದ ಸೇನಾ ಜನರಲ್ ಅಮೀರ್ ಅಬ್ದುಲ್ಲಾ ಖಾನ್ ನಿಯಾಜಿ ಅವರು ತಮ್ಮ 93,000 ಸೈನಿಕರೊಂದಿಗೆ ಡಿಸೆಂಬರ್ 16ರಂದು ಭಾರತೀಯ ಸೇನೆ ಮತ್ತು ಮುಕ್ತಿ ವಾಹಿನಿಯ ಎದುರು ಶರಣಾಗಿತ್ತು. ಇದರಿಂದ ಪೂರ್ವ ಪಾಕಿಸ್ತಾನವು ಪಾಕಿಸ್ತಾನದಿಂದ ಬೇರ್ಪಟ್ಟು ಬಾಂಗ್ಲಾದೇಶ ಎಂಬ ಹೊಸ ದೇಶದ ಉಗಮಕ್ಕೆ ಕಾರಣವಾಗಿತ್ತು.

ಬಾಂಗ್ಲಾ ಹುಟ್ಟಿಗೆ ಕಾರಣ; ಇಂದಿರಾ ಎಂಬ 'ದುರ್ಗಿ'ಬಾಂಗ್ಲಾ ಹುಟ್ಟಿಗೆ ಕಾರಣ; ಇಂದಿರಾ ಎಂಬ 'ದುರ್ಗಿ'

ಈ ದಿನದ ಮಹತ್ವದ ಬಗ್ಗೆ ಮಾಹಿತಿ ನೀಡುವ ಸಲುವಾಗಿ ಆಕಾಶವಾಣಿಯು ತನ್ನ ಎಫ್‌ಎಂ ಗೋಲ್ಡ್‌ನಲ್ಲಿ ಇಂದು ರಾತ್ರಿ 9.15ಕ್ಕೆ ವಿಶೇಷ ಕಾರ್ಯಕ್ರಮವನ್ನು ನಿಗದಿಗೊಳಿಸಿದೆ. ಈ ಕಾರ್ಯಕ್ರಮವು 'ನ್ಯೂಸ್ ಆನ್ ಏರ್ ಅಫಿಷಿಯಲ್' ಯೂಟ್ಯೂಬ್ ಚಾನೆಲ್‌ನಲ್ಲಿಯೂ ಲಭ್ಯ.

ಭಾರತ, ಭಾರತೀಯ ಸೈನ್ಯದ ಹೆಮ್ಮೆ ವಿಜಯ ದಿವಸ್ (ಬಾಂಗ್ಲಾ ವಿಮೋಚನೆ)ಭಾರತ, ಭಾರತೀಯ ಸೈನ್ಯದ ಹೆಮ್ಮೆ ವಿಜಯ ದಿವಸ್ (ಬಾಂಗ್ಲಾ ವಿಮೋಚನೆ)

ಪಶ್ಚಿಮ ಬಂಗಾಳದ ಹಲ್ದಿಬಾರಿ ಮತ್ತು ಬಾಂಗ್ಲಾದೇಶದ ನಿಲ್ಫಮರಿ ಜಿಲ್ಲೆಯ ಚಿಲಾಹಟಿ ಪ್ರದೇಶಗಳ ನಡುವೆ ಅಂತರ್ ಗಡಿ ರೈಲು ಸಂಪರ್ಕ ಸೇವೆಯನ್ನು ಪುನರಾರಂಭಿಸುವ ಬಗ್ಗೆ ಭಾರತ ಮತ್ತು ಬಾಂಗ್ಲಾದೇಶ ನಿರ್ಧಾರ ತೆಗೆದುಕೊಂಡಿವೆ. ಸುಮಾರು 55 ವರ್ಷಗಳ ಬಳಿಕ ಇಲ್ಲಿ ರೈಲು ಸಂಚಾರ ನಡೆಯುತ್ತಿದೆ.

English summary
India is observing the 49th Vijay Diwas of Indo-Pakistan war in 1971 which led to the creation of Bangladesh.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X