ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಾಕ್ ಆಕ್ರಮಿತ ಕಾಶ್ಮೀರಕ್ಕೆ ಅಮೆರಿಕನ್ ಸಂಸದೆ ಭೇಟಿ: ಭಾರತ ಆಕ್ಷೇಪ

|
Google Oneindia Kannada News

ನವದೆಹಲಿ, ಏ. 21: ಅಮೆರಿಕದ ಸಂಸದೆ ಇಲ್ಹನ್ ಒಮರ್ (Ilhan Omar) ಅವರು ಪಾಕ್ ಆಕ್ರಮಿತ ಕಾಶ್ಮೀರದ (POK- Pakistan Occupied Kashmir) ಭಾಗಕ್ಕೆ ಭೇಟಿ ಕೊಟ್ಟಿರುವ ಘಟನೆ ವರದಿಯಾಗಿದೆ. ನಾಲ್ಕು ದಿನದ ಪಾಕಿಸ್ತಾನದ ಭೇಟಿಯ ಭಾಗಿವಾಗಿ ಅವರು ನಿನ್ನೆ ಪಾಕ್ ಆಕ್ರಮಿತ ಕಾಶ್ಮೀರಕ್ಕೆ ಹೋಗಿರುವುದು ತಿಳಿದುಬಂದಿದೆ. ಈ ವೇಳೆ ಅವರು ಪಾಕಿಸ್ತಾನದ ಈಗಿನ ಪ್ರಧಾನಿ ಶಹಬಾಜ್ ಷರೀಫ್ ಮತ್ತು ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರನ್ನ ಭೇಟಿಯಾಗಿ ಮಾತನಾಡಿದ್ದಾರೆ.

ಕೇಂದ್ರದ ವಿದೇಶಾಂಗ ಸಚಿವಾಲಯದ ವಕ್ತಾರರು ಈ ಬೆಳವಣಿಗೆ ಬಗ್ಗೆ ಪ್ರತಿಕ್ರಿಯಿಸಿದ್ದು, ಅಮೆರಿಕನ್ ಸಂಸದೆಯ ನಡೆಯನ್ನ ಖಂಡಿಸಿದ್ದಾರೆ.

 'Coal' ಕೊಳ್ಳಲು ಕಾಸಿಲ್ಲ, ಪಾಕಿಸ್ತಾನದಲ್ಲಿ 'Power' ಇಲ್ಲ 'Coal' ಕೊಳ್ಳಲು ಕಾಸಿಲ್ಲ, ಪಾಕಿಸ್ತಾನದಲ್ಲಿ 'Power' ಇಲ್ಲ

"ಇವರು ತಮ್ಮ ಸಂಕುಚಿತ ಮನೋಭಾವದ ರಾಜಕಾರಣವನ್ನು ತಮ್ಮೂರಿನಲ್ಲಿ ಮಾಡಿಕೊಳ್ಳಲಿ. ಆದರೆ, ನಮ್ಮ ಭೂಭಾಗದ ಸಮಗ್ರತೆಯನ್ನ ಉಪೇಕ್ಷಿಸಿದರೆ ಅದು ನಮ್ಮ ಆಂತರಿಕ ವಿಚಾರಕ್ಕೆ ತಲೆಹಾಕಿದಂತೆ. ಇದು ಖಂಡನಾರ್ಹ" ಎಂದು ಸಚಿವಾಲಯ ಹೇಳಿಕೆಯಲ್ಲಿ ತಿಳಿಸಲಾಗಿದೆ.

India objects to American MP visit to Pak Occupied Kashmir

ಅಮೆರಿಕದ ಆಡಳಿತಾರೂಢ ಡೆಮಾಕ್ರಟಿಕ್ (Democratic Party) ಪಕ್ಷದ ಲೋಕಸಭೆ ಸದಸ್ಯೆ (United States House of Representatives) ಆಗಿರುವ 39 ವರ್ಷದ ಇಲ್ಹನ್ ಒಮರ್ ಅವರು ಮಿನ್ನೆಸೊಟಾ (Minnesota) ಕ್ಷೇತ್ರವನ್ನು ಪ್ರತಿನಿಧಿಸುತ್ತಾರೆ. ಭಾರತ ವಿರೋಧಿ ಧೋರಣೆಯ ಇವರು ಸ್ವತಂತ್ರ ಕಾಶ್ಮೀರದ ಪರ ವಕಾಲತು ವಹಿಸುತ್ತಾ ಬಂದವರಾಗಿದ್ದಾರೆ. ಇವರು ನಿನ್ನೆ ಪಾಕಿಸ್ತಾನಕ್ಕೆ ಭೇಟಿ ನೀಡಿದ್ದು, ಏಪ್ರಿಲ್ 24ರಂದು ಅಮೆರಿಕಕ್ಕೆ ವಾಪಸ್ಸಾಗಲಿದ್ದಾರೆ.

ಈ ವೇಳೆ ಆಕೆ ಪಾಕಿಸ್ತಾನದ ಸಾಂಸ್ಕೃತಿಕ, ಸಾಮಾಜಿಕ, ರಾಜಕೀಯ ಮತ್ತು ಆರ್ಥಿಕ ಶಕ್ತಿಯನ್ನು ಗುರುತಿಸಲು ಮತ್ತು ಅರಿಯಲು ಲಾಹೋರ್, ಆಜಾದ್ ಜಮ್ಮು ಕಾಶ್ಮೀರ ಪ್ರದೇಶಗಳಿಗೆ ಭೇಟಿ ನೀಡಲಿದ್ದಾರೆ ಎಂದು ಪಾಕಿಸ್ತಾನದ ಪ್ರಧಾನಿ ಕಚೇರಿಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

India objects to American MP visit to Pak Occupied Kashmir

ಅಮೆರಿಕ ಮತ್ತು ಪಾಕಿಸ್ತಾನದ ನಡುವೆ ಮಾತುಕತೆ ನಡೆದಾಗೆಲ್ಲಾ ಸಹಜವಾಗಿ ಕಾಶ್ಮೀರ ವಿಚಾರ ಮುನ್ನೆಲೆಯಲ್ಲಿಯೇ ಇರುತ್ತದೆ. ಅಂತೆಯೇ, ಇಲ್ಹನ್ ಒಮರ್ ಮತ್ತು ಪ್ರಧಾನಿ ಶಾಹಬಾಜ್ ಷರೀಫ್ ನಡುವಿನ ಮಾತುಕತೆ ವೇಳೆ ಕಾಶ್ಮೀರ ವಿಚಾರವನ್ನು ಚರ್ಚಿಸಲಾಯಿತು ಎಂದು ಹೇಳಲಾಗಿದೆ.

ಪಾಕ್ ಪ್ರಧಾನಿ ಶಾಹಬಾಜ್ ಷರೀಫ್ ಅವರು ಇಲ್ಹನ್ ಒಮರ್ ಜೊತೆಗಿನ ಚರ್ಚೆಯ ವೇಳೆ ಕಾಶ್ಮೀರ ವಿಚಾರವನ್ನು ಪ್ರಸ್ತಾಪಿಸಿ ಅದರ ಮಹತ್ವವನ್ನು ತಿಳಿಸಿದ್ದಾರೆ. ಜಮ್ಮು ಮತ್ತು ಕಾಶ್ಮೀರ ಸಮಸ್ಯೆಗೆ ಶಾಂತಿಯುತ ಪರಿಹಾರ ಸಿಕ್ಕರೆ ಅದರ ಆರ್ಥಿಕತೆಗೆ ಪುಷ್ಟಿ ಸಿಗುತ್ತದೆ, ಸಾಮಾಜಿಕ ಪ್ರಗತಿ ಸಾಧ್ಯವಾಗುತ್ತದೆ ಎಂಬ ಅಭಿಪ್ರಾಯವನ್ನು ಷರೀಫ್ ವ್ಯಕ್ತಪಡಿಸಿದ್ದಾರೆ.

ಒಂದು ವರದಿ ಪ್ರಕಾರ, ಅಮೆರಿಕ ಮತ್ತು ಪಾಕಿಸ್ತಾನದ ನಡುವಿನ ಸಂಬಂಧಕ್ಕೆ ಮತ್ತೆ ಪುಷ್ಟಿ ಕೊಡುವ ನಿಟ್ಟಿನಲ್ಲಿ ಇಲ್ಹಮ್ ಒಮರ್ ಭೇಟಿ ನಡೆದಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಇಮ್ರಾನ್ ಖಾನ್ ಅವರು ಬಹುಮತ ಕಳೆದುಕೊಂಡು ಇದೀಗ ಶಾಹಬಾಜ್ ಷರೀಫ್ ಪ್ರಧಾನಿ ಪಟ್ಟ ಪಡೆದಿದ್ದಾರೆ.

India objects to American MP visit to Pak Occupied Kashmir

ಆದರೆ, ಈ ಬೆಳವಣಿಗೆ ಹಿಂದೆ ಅಮೆರಿಕದ ಷಡ್ಯಂತ್ರ ಇದೆ ಇದೆಲ್ಲಾ ಆ ದೇಶ ಮಾಡಿರುವ ಸಂಚು ಎಂದು ಇಮ್ರಾನ್ ಖಾನ್ ಆರೋಪಿಸಿದ್ದರು. ಅಲ್ಲದೇ ಅವರು ಅಧಿಕಾರದಲ್ಲಿದ್ದಾಗ ಅಮೆರಿಕದಿಂದ ದೂರವಾಗಿ ರಷ್ಯಾಗೆ ಪಾಕಿಸ್ತಾನ ಹತ್ತಿರವಾಗತೊಡಗಿತ್ತು. ಕೆಲವಾರು ದಶಕಗಳಿಂದ ವಿವಿಧ ಕಾರ್ಯಾಚರಣೆಯಲ್ಲಿ ಪಾಕಿಸ್ತಾನವನ್ನ ಭಾಗಿಯಾಗಿರಿಸಿಕೊಂಡು ಬಂದಿರುವ ಅಮೆರಿಕ ಈಗ ಹಳಿ ತಪ್ಪುತ್ತಿರುವ ಎರಡೂ ದೇಶಗಳ ಸಂಬಂಧವನ್ನು ಮತ್ತೆ ಉಳಿಸುವ ಉಮೇದಿನಲ್ಲಿದೆ.

ಆ ನಿಟ್ಟಿನಲ್ಲಿ ಪಾಕಿಸ್ತಾನಕ್ಕೆ ಭೇಟಿ ನೀಡಿರುವ ಇಲ್ಹನ್ ಒಮರ್ ಅವರು ಇಮ್ರಾನ್ ಖಾನ್ ಅವರನ್ನೂ ಭೇಟಿಯಾಗಿ ಮಾತನಾಡಿದ್ದಾರೆ.

(ಒನ್ಇಂಡಿಯಾ ಸುದ್ದಿ)

English summary
India today condemned US Congresswoman Ilhan Omar's visit to Pakistan-Occupied Kashmir.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X