ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತ-ನೇಪಾಳ ರೈಲು ಸೇವೆ ಆರಂಭ: ಇಲ್ಲಿದೆ ಪ್ರಮುಖ ಮಾಹಿತಿ

|
Google Oneindia Kannada News

ನವದೆಹಲಿ, ಏಪ್ರಿಲ್‌ 04: ಸೀತೆಯ ಜನ್ಮಸ್ಥಳವೆಂದು ಪರಿಗಣಿಸಲಾದ ಜನಕ್‌ಪುರ ಧಾಮದ ಹಿಂದೂ ಯಾತ್ರಾ ಕೇಂದ್ರವು ಶನಿವಾರ ಪುನರಾರಂಭಗೊಂಡಿದೆ. ಈ ನಡುವೆ ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ನೇಪಾಳದ ಪ್ರಧಾನಿ ಶೇರ್ ಬಹದ್ದೂರ್ ದೇವುಬಾ ಅವರು ಭಾರತದ ಜಯನಗರ ಮತ್ತು ನೇಪಾಳದ ಕುರ್ತಾ ನಡುವಿನ ಪ್ರಯಾಣಿಕ ರೈಲು ಸೇವೆಗಳನ್ನು ಉದ್ಘಾಟಿಸಿದರು. ಇದು ನೇಪಾಳದಲ್ಲಿ ಮೊದಲ ಬ್ರಾಡ್ ಗೇಜ್ ಪ್ರಯಾಣಿಕ ರೈಲು ಸೇವೆಯಾಗಿದೆ.

"ಪ್ರಧಾನಿ ದೇವುಬಾಜಿ ಮತ್ತು ನಾನು ಎಲ್ಲಾ ರೀತಿಯಲ್ಲೂ ವ್ಯಾಪಾರ ಮತ್ತು ಗಡಿಯಾಚೆಗಿನ ಸಂಪರ್ಕ ವ್ಯವಸ್ಥೆಗಳಿಗೆ ಆದ್ಯತೆ ನೀಡಲು ಒಪ್ಪಿಕೊಂಡಿದ್ದೇವೆ. ಜಯನಗರ-ಕುರ್ತಾ ರೈಲು ಮಾರ್ಗದ ಆರಂಭವು ಇದರ ಒಂದು ಭಾಗವಾಗಿದೆ," ಎಂದು ನೇಪಾಳದ ಪ್ರಧಾನರೊಂದಿಗೆ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮೋದಿ ಹೇಳಿದರು.

ನೇಪಾಳ ಪ್ರಧಾನಿಯಾಗಿ ದೇವುಬಾ ಪ್ರಮಾಣ ವಚನ ಸ್ವೀಕಾರನೇಪಾಳ ಪ್ರಧಾನಿಯಾಗಿ ದೇವುಬಾ ಪ್ರಮಾಣ ವಚನ ಸ್ವೀಕಾರ

"ಇಂತಹ ಯೋಜನೆಗಳು ಉಭಯ ದೇಶಗಳ ನಡುವೆ ಜನರ ಸುಗಮ, ಸಂಘರ್ಷ ಮುಕ್ತ ಸಂಚಾರಕ್ಕೆ ಉತ್ತಮ ಕೊಡುಗೆ ನೀಡುತ್ತವೆ," ಎಂದು ಕೂಡಾ ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ. ಇನ್ನು ಎರಡು ನೆರೆಯ ದೇಶಗಳ ನಡುವಿನ ರೈಲು ಸಂಪರ್ಕವು ಸುಧಾರಿತ ಗಡಿ ನಿರ್ವಹಣೆ, ಯೋಜಿತ, ಮೂಲಸೌಕರ್ಯಗಳನ್ನು ಆಯ್ದ ಮತ್ತು ಹಂತ ಹಂತವಾಗಿ ಅಭಿವೃದ್ಧಿಪಡಿಸುವ ಒಟ್ಟಾರೆ ಕಾರ್ಯತಂತ್ರದ ಭಾಗವಾಗಿದೆ," ಎಂದು ರೈಲ್ವೆ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ. ಹಾಗಾದರೆ ಈ ರೈಲಿನ ಬಗ್ಗೆ ಅಗತ್ಯ ಮಾಹಿತಿ ಇಲ್ಲಿದೆ ಮುಂದೆ ಓದಿ...

India-Nepal Cross Border Train launched by PM, Here’s All You Need To Know About the Train

ರೈಲಿನ ಬಗ್ಗೆ ಕೊಂಚ ತಿಳಿಯಿರಿ

ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಬಿಹಾರದ ಜಯನಗರ ಮತ್ತು ನೇಪಾಳದ ಬಾರ್ಬಿಡಾಸ್ ನಡುವಿನ ರೈಲು ಸೇವೆಗೆ 784 ಕೋಟಿ ರೂಪಾಯಿ ವೆಚ್ಚವನ್ನು ಮಾಡಿದೆ. ಜಯನಗರ-ಬಿಜಾಲ್‌ಪುರ-ಬಾರ್ದಿಬಾಸ್ ರೈಲು ಸಂಪರ್ಕದ ಉದ್ದವು 68.72 ಕಿಮೀ ಆಗಿದ್ದು, ಅದರಲ್ಲಿ 2.975-ಕಿಮೀ ವಿಸ್ತಾರವು ಭಾರತದಲ್ಲಿದೆ ಮತ್ತು 65.745 ಕಿಮೀ ವಿಸ್ತಾರವು ನೇಪಾಳದಲ್ಲಿದೆ.

ಶೀಘ್ರವೇ ಆರಂಭಗೊಳ್ಳಲಿರುವ 'ಭಾರತ್ ಗೌರವ್' ರೈಲುಗಳ ಬಗ್ಗೆ ಮಾಹಿತಿಶೀಘ್ರವೇ ಆರಂಭಗೊಳ್ಳಲಿರುವ 'ಭಾರತ್ ಗೌರವ್' ರೈಲುಗಳ ಬಗ್ಗೆ ಮಾಹಿತಿ

ಈ ಮಾರ್ಗವು ಬಿಹಾರದ ಮಧುಬನಿ ಜಿಲ್ಲೆಯ ಮೂಲಕ ಹಾದು ಹೋಗುತ್ತದೆ. ನೇಪಾಳದ ಭಾಗದಲ್ಲಿ ದನುಶಾ, ಮಹೋತಾರಿ ಮತ್ತು ಸಿರ್ಹಾ ಜಿಲ್ಲೆಗಳ ಮೂಲಕ ಸಾಗಲಿದೆ. ಜಯನಗರವು ಪೂರ್ವ ಮಧ್ಯ ರೈಲ್ವೆಯ ಸಮಸ್ತಿಪುರ್-ಜಯನಗರ ಬ್ರಾಡ್ ಗೇಜ್ ವಿಭಾಗದ ಅಸ್ತಿತ್ವದಲ್ಲಿರುವ ಟರ್ಮಿನಲ್ ನಿಲ್ದಾಣವಾಗಿದೆ. ಇದು ಭಾರತ-ನೇಪಾಳ ಗಡಿಯ ಸಮೀಪದಲ್ಲಿರುವ ಕೊನೆಯ ರೈಲು ನಿಲ್ದಾಣವಾಗಿದೆ. ನೇಪಾಳ ಸರ್ಕಾರವು ನಡೆಸುತ್ತಿರುವ ನ್ಯಾರೋ-ಗೇಜ್ ರೈಲು ಸೇವೆಯು ಭಾರತದಲ್ಲಿನ ಜಯನಗರದಿಂದ ನೇಪಾಳದ ಜನಕ್‌ಪುರಕ್ಕೆ ಮಾರ್ಚ್ 2014 ರವರೆಗೆ ಕಾರ್ಯನಿರ್ವಹಿಸುತ್ತಿತ್ತು.

India-Nepal Cross Border Train launched by PM, Here’s All You Need To Know About the Train

ಯೋಜನೆಯ ಜಯನಗರ-ಕುರ್ತಾ ವಿಭಾಗ (34.9 ಕಿಮೀ) ಶನಿವಾರದಂದು ಆರಂಭವಾಗಿದೆ. ಜಯನಗರದಿಂದ ಸುಮಾರು 30 ಕಿಮೀ ದೂರದಲ್ಲಿ ಪ್ರಸಿದ್ಧ ಯಾತ್ರಾ ಕೇಂದ್ರವಾದ ಜನಕ್‌ಪುರ ಇದೆ. ಈ ನಿಟ್ಟಿನಲ್ಲಿ ಈ ರೈಲು ಅಧಿಕ ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ. ಇನ್ನು ಜಯನಗರ-ಕುರ್ತಾ ಭಾಗಕ್ಕೆ ಟ್ರ್ಯಾಕ್, ಸಿಗ್ನಲಿಂಗ್, ನಿಲ್ದಾಣದ ಕಟ್ಟಡ ಮತ್ತು ಇತರ ಮೂಲಸೌಕರ್ಯಗಳ ವೆಚ್ಚ ಸುಮಾರು 383 ಕೋಟಿ ರೂಪಾಯಿ ಆಗಿದೆ.

ವಿಭಾಗವು ಒಟ್ಟು ಎಂಟು ನಿಲ್ದಾಣಗಳು ಮತ್ತು ಆರು ನಿಲುಗಡೆ ನಿಲ್ದಾಣಗಳನ್ನು ಹೊಂದಿರುತ್ತದೆ. ಇದು 47 ರೋಡ್‌ ಕ್ರಾಸಿಂಗ್‌ಗಳನ್ನು ಹಾಗೂ 15 ಪ್ರಮುಖ ಸೇತುವೆಗಳನ್ನು ಹೊಂದಿದೆ. ಇದಲ್ಲದೆ, ಮಾರ್ಗದಲ್ಲಿ 127 ಚಿಕ್ಕ ಸೇತುವೆಗಳನ್ನು ಹಾದು ಹೋಗಲಿದೆ. ಆರಂಭಿಕ ಯೋಜನೆಗಳ ಪ್ರಕಾರ, ಪ್ಯಾಸೆಂಜರ್ ರೈಲುಗಳಿಗೆ, ಗಂಟೆಗೆ 100 ಕಿಲೋಮೀಟರ್ ಗರಿಷ್ಠ ವೇಗವನ್ನು ಅನುಮತಿಸಲಾಗುವುದು, ಆದರೆ ಸರಕು ರೈಲುಗಳಿಗೆ ಇದು 65 ಕಿ.ಮೀ. ವೇಗಕ್ಕೆ ಮಾತ್ರ ಅನುಮತಿ ಇದೆ.

ಈ ಮಾರ್ಗದಲ್ಲಿ ರೈಲು ಸೇವೆಯನ್ನು ನಿರ್ವಹಿಸಲು, ಚೆನ್ನೈನ ಇಂಟೆಗ್ರಲ್ ಕೋಚ್ ಫ್ಯಾಕ್ಟರಿಯಲ್ಲಿ ನಿರ್ಮಿಸಲಾದ ಎರಡು ಸೆಟ್ ಡೆಮೊ ಪ್ಯಾಸೆಂಜರ್ ರೇಕ್‌ಗಳನ್ನು ಕೊಂಕಣ ರೈಲ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ ಪೂರೈಸಿದೆ. ಪ್ರತಿ ಡೆಮೋ ರೇಕ್ ಒಂದು ಹವಾನಿಯಂತ್ರಿತ ಕೋಚ್ ಮತ್ತು ನಾಲ್ಕು ಹವಾನಿಯಂತ್ರಿತವಲ್ಲದ ಕೋಚ್‌ಗಳನ್ನು ಹೊಂದಿದೆ. ಒಂದು ಡೆಮೋ ಸೆಟ್‌ನಲ್ಲಿ ಆಸನ ಸಾಮರ್ಥ್ಯ 300 ಮತ್ತು 700 ಮಂದಿ ನಿಲ್ಲಬಹುದಾಗಿದೆ.

English summary
India-Nepal Cross Border Train launched by PM, Here’s All You Need To Know About the Train.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X