ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಫೆಲ್ ಒಪ್ಪಂದ ವಿಳಂಬಕ್ಕೆ ಮೋದಿಯೇ ಕಾರಣ: ರಾಹುಲ್ ಗಾಂಧಿ

|
Google Oneindia Kannada News

ನವದೆಹಲಿ, ಮಾರ್ಚ್ 03: ಪುಲ್ವಾಮಾದಲ್ಲಿ ಉಗ್ರರ ದಾಳಿಗೆ ಪ್ರತೀಕಾರವಾಗಿ ವೈಮಾನಿಕ ದಾಳಿ ನಡೆಸಿದ ಭಾರತೀಯ ವಾಯುಸೇನೆ ಬಳಿ ರಫೆಲ್ ಯುದ್ಧ ವಿಮಾನ ಇದ್ದಿದ್ದರೆ ಇನ್ನಷ್ಟು ಹೆಚ್ಚಿನ ಬಲ ಸಿಗುತ್ತಿತ್ತು ಎಂದು ಪ್ರಧಾನಿ ಮೋದಿ ಅವರು ಹೇಳಿದ್ದಾರೆ.

ಮೋದಿ ಹೇಳಿಕೆಯನ್ನು ಖಂಡಿಸಿರುವ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರು, ರಫೆಲ್ ಒಪ್ಪಂದ ವಿಳಂಬವಾಗಲು ನೀವೇ ಮುಖ್ಯ ಕಾರಣ. ನಮ್ಮ ದೇಶದಲ್ಲಿ ರಫೇಲ್​ ಇಲ್ಲದಿರುವುದರ ಪರಿಣಾಮ ಈಗ ಅರಿವಾಗಿದೆ. ರಫೇಲ್ ಇದ್ದಿದ್ದರೆ ಏನೆಲ್ಲಾ ಸಾಧ್ಯವಾಗುತ್ತಿತ್ತು ಎಂದು ಇಡೀ ದೇಶ ಒಕ್ಕೋರಲಿನಿಂದ ಮಾತನಾಡಿಕೊಳ್ಳುತ್ತಿದೆ. ಸ್ವಾರ್ಥಪರ ಹಿತಾಸಕ್ತಿ, ರಾಜಕಾರಣದಿಂದಾಗಿ ರಫೇಲ್​ ಇಲ್ಲದಿರುವ ಪರಿಣಾಮವನ್ನು ದೇಶ ಎದುರಿಸುತ್ತಿದೆ ಎಂದು ಮೋದಿ ಹೇಳಿದ್ದರು.

ಪ್ರತಿಪಕ್ಷಗಳಿಗೆ ಟಾಂಗ್​ ನೀಡಿದ್ದ ಪ್ರಧಾನಿ ಮೋದಿ, ನೀವು ಮೋದಿಯನ್ನು ಬೇಕಾದರೆ ಟೀಕಿಸಿ. ಸರ್ಕಾರದ ಯೋಜನೆಗಳಲ್ಲಿ ಹುಳುಕು ಹುಡುಕಿ. ಇದನ್ನು ನಾವು ಸ್ವಾಗತಿಸುತ್ತೇವೆ. ಆದರೆ ದೇಶದ ಹಿತಾಸಕ್ತಿಯನ್ನು ಟೀಕಿಸಿಬೇಡಿ. ಇದರಿಂದ ಮಸೂದ್​ ಅಜರ್​ ಹಾಗೂ ಹಫೀಜ್​ ಸೈಯದ್​ನಂತಹ ಉಗ್ರರಿಗೆ ಬೆಂಬಲ ನೀಡಿದಂತಾಗುತ್ತದೆ ಎಂದು ಅಣಕಿಸಿದ್ದರು.

ಡಿಯರ್ ಪಿಎಂ, ನಿಮಗೆ ನಾಚಿಕೆಯಾಗುವುದಿಲ್ಲವೇ?

ಡಿಯರ್ ಪಿಎಂ, ನಿಮಗೆ ನಾಚಿಕೆಯಾಗುವುದಿಲ್ಲವೇ?

ಪ್ರಧಾನಿ ಮೋದಿ ಅವರ ಸಚಿವಾಲಯದ ಅಧಿಕೃತ ಟ್ವಿಟ್ಟರ್ ಖಾತೆಯಿಂದ ಈ ಬಗ್ಗೆ ಬಂದ ಹಿಂದಿ ಭಾಷೆಯಲ್ಲಿರುವ ಎರಡು ಟ್ವೀಟ್ ಗಳಿಗೆ ಪ್ರತಿಯಾಗಿ ರಾಹುಲ್​ ಗಾಂಧಿ ಅವರು ಇಂಗ್ಲೀಷ್ ನಲ್ಲಿ ಟ್ವೀಟ್ ಮಾಡಿ, ಡಿಯರ್ ಪಿಎಂ, ನಿಮಗೆ ನಾಚಿಕೆಯಾಗುವುದಿಲ್ಲವೇ? ಈಗಾಗಲೇ 30 ಸಾವಿರ ಕೋಟಿ ಹಣವನ್ನು ಕದ್ದು, ನಿಮ್ಮ ಗೆಳೆಯ ಅನಿಲ್ ಅಂಬಾನಿಗೆ ನೀಡಿದ್ದೀರಿ ಎಂದು ರಾಹುಲ್ ಗಾಂಧಿ ಟೀಕಿಸಿದ್ದಾರೆ.

ಯೋಧರ ಜೀವದ ಜತೆ ಆಟವಾಡುತ್ತಿದ್ದೀರಾ

ರಫೇಲ್​ವಿಮಾನ ಪೂರೈಕೆ ತಡವಾಗಲು ನೀವೇ ಕಾರಣ. ವಿಂಗ್​ ಕಮ್ಯಾಂಡರ್ ಅಭಿನಂದನ್​ರಂಥ ಅಧಿಕಾರಿಗಳಿಗೆ ಹಳೆಯ ಔಟ್ ಡೇಟೆಡ್ ಜೆಟ್​ಗಳನ್ನು ನೀಡಿ, ಅವರ ಜೀವದ ಜೊತೆ ಆಟವಾಡ್ತಿದ್ದೀರಾ ಎಂದು ಕುಟುಕಿದ್ದಾರೆ.

ದೇಶದ ಹಿತಾಸಕ್ತಿಯನ್ನು ಟೀಕಿಸಿಬೇಡಿ-ಮೋದಿ

ದೇಶದ ಹಿತಾಸಕ್ತಿಯನ್ನು ಟೀಕಿಸಿಬೇಡಿ. ಇದರಿಂದ ಮಸೂದ್​ ಅಜರ್​ ಹಾಗೂ ಹಫೀಜ್​ ಸೈಯದ್​ನಂತಹ ಉಗ್ರರಿಗೆ ಬೆಂಬಲ ನೀಡಿದಂತಾಗುತ್ತದೆ ಎಂದು ಛೇಡಿಸಿದ್ದ ಪ್ರಧಾನಿ ಮೋದಿ.

ರಫೆಲ್ ಬಗ್ಗೆ ಒಕ್ಕೊರಲಿನಿಂದ ಬೇಡಿಕೆ

ನಮ್ಮ ದೇಶದಲ್ಲಿ ರಫೇಲ್​ ಇಲ್ಲದಿರುವುದರ ಪರಿಣಾಮ ಈಗ ಅರಿವಾಗಿದೆ. ರಫೇಲ್ ಇದ್ದಿದ್ದರೆ ಏನೆಲ್ಲಾ ಸಾಧ್ಯವಾಗುತ್ತಿತ್ತು ಎಂದು ಇಡೀ ದೇಶ ಒಕ್ಕೊರಲಿನಿಂದ ಮಾತನಾಡಿಕೊಳ್ಳುತ್ತಿದೆ ಎಂದ ಮೋದಿ

English summary
The country felt the absence of Rafale jets, Prime Minister Narendra Modi on Saturday said, adding that the nation suffered "a big loss" due to the swaarthneeti (policy of self-interest) and the politics surrounding the deal with France. Rahul Gandhi, who said PM Modi was responsible for the delay in the arrival of Rafale jets.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X