ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಬೂಲ್‌ನಿಂದ ವಿಮಾನ ಸಂಚಾರಕ್ಕೆ ಅನುಮತಿ ನೀಡಲಿದೆ ಭಾರತ

|
Google Oneindia Kannada News

ನವದೆಹಲಿ, ಅಕ್ಟೋಬರ್ 01; ಅಫ್ಘಾನಿಸ್ತಾನ ತಾಲಿಬಾನ್ ಉಗ್ರರ ವಶವಾದ ಬಳಿಕ ದೇಶಕ್ಕೆ ವಿಮಾನ ಸೇವೆ ರದ್ದಾಗಿದೆ. ಈಗ ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ಇಸ್ಲಾಮಿಕ್ ಎಮಿರೇಟ್ ಅಫ್ಘಾನಿಸ್ತಾನ್ ವಿಮಾನಗಳ ವಾಣಿಜ್ಯ ಸಂಚಾರ ಆರಂಭಿಸುವಂತೆ ಭಾರತ ಸೇರಿದಂತೆ ಹಲವು ದೇಶಗಳಿಗೆ ಪತ್ರವನ್ನು ಬರೆದಿದೆ.

ಅಫ್ಘಾನಿಸ್ತಾನದಲ್ಲಿ ಇನ್ನೂ ಹಲವು ಭಾರತೀಯರು ಸಿಲುಕಿದ್ದಾರೆ. ಆದ್ದರಿಂದ ಕೇಂದ್ರ ಸರ್ಕಾರ ಕಾಬೂಲ್ ಮತ್ತು ಭಾರತದ ನಡುವೆ ವಿಮಾನಗಳ ಹಾರಾಟಕ್ಕೆ ಅವಕಾಶ ನೀಡಲಿದೆ ಎಂಬ ಮಾಹಿತಿ ಸಿಕ್ಕಿದೆ.

ಭಾರತ-ಅಫ್ಘಾನ್ ನಡುವೆ ವಿಮಾನ ಸಂಚಾರ ಪುನಾರಂಭಿಸಲು ತಾಲಿಬಾನ್ ಪತ್ರ ಭಾರತ-ಅಫ್ಘಾನ್ ನಡುವೆ ವಿಮಾನ ಸಂಚಾರ ಪುನಾರಂಭಿಸಲು ತಾಲಿಬಾನ್ ಪತ್ರ

ಅಫ್ಘಾನಿಸ್ತಾನದ ವಿಮಾನಯಾನ ಸಚಿವ ಅಲ್ಹಜ್ ಹಮೀದುಲ್ಲಾ ಅಫ್ಘಾನಿಸ್ತಾನ ಮತ್ತು ಭಾರತದ ನಡುವೆ ವಿಮಾನ ಸೇವೆಯನ್ನು ಮರು ಆರಂಭಿಸಬೇಕು ಎಂದು ಭಾರತ ವಿಮಾನಯಾನ ಸಚಿವಾಲಯದ ನಿರ್ದೇಶಕ ಅರುಣ್ ಕುಮಾರ್‌ಗೆ ಪತ್ರವನ್ನು ಬರೆದಿದ್ದರು.

ಕಾಬೂಲ್ ಏರ್‌ಪೋರ್ಟ್ ಬಳಿ ಅಮೆರಿಕ ಡ್ರೋನ್ ದಾಳಿ 10 ಮಂದಿ ಸಾವುಕಾಬೂಲ್ ಏರ್‌ಪೋರ್ಟ್ ಬಳಿ ಅಮೆರಿಕ ಡ್ರೋನ್ ದಾಳಿ 10 ಮಂದಿ ಸಾವು

 India May Allow Flight Operations From Kabul To India Soon

ತಾಲಿಬಾನ್ ವಕ್ತಾರ ಖಾಹರ್ ಬಲ್‌ಕ್ಷಿ ಕೂಡಾ ವಿಮಾನ ಸೇವೆ ಆರಂಭಿಸುವ ಕುರಿತು ಮಾತನಾಡಿದ್ದರು. ಕಾಬೂಲ್‌ನ ಹಮೀದ್ ಕರ್ಜಾಯ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿದ್ದ ತೊಂದರೆ ನಿವಾರಣೆಯಾಗಿದೆ ಎಂದು ಭರವಸೆ ಕೊಟ್ಟಿದ್ದರು.

5 ತಿಂಗಳ ಬಳಿಕ ಕೆನಡಾದಿಂದ ಭಾರತಕ್ಕೆ ನೇರ ವಿಮಾನ ಹಾರಾಟ5 ತಿಂಗಳ ಬಳಿಕ ಕೆನಡಾದಿಂದ ಭಾರತಕ್ಕೆ ನೇರ ವಿಮಾನ ಹಾರಾಟ

ಅಫ್ಘಾನಿಸ್ತಾನದ ಅರಿಯಾನ ಆಫ್ಘನ್ ಏರ್ ಲೈನ್ ಮತ್ತು ಕಾಮ್ ವಿಮಾನಗಳು ಭಾರತಕ್ಕೆ ಸಂಚಾರ ಆರಂಭಿಸಲು ಸಿದ್ಧವಾಗಿವೆ. ಭಾರತ ಸಹ ಅಘ್ಘಾನ್‌ಗೆ ವಿಮಾನ ಸಂಚಾರ ಆರಂಭಿಸಿದರೆ ಅನುಕೂಲವಾಗಲಿದೆ ಎಂದು ಹೇಳಿದ್ದರು.

ಅಫ್ಘಾನಿಸ್ತಾನ ತಾಲಿಬಾನ್ ಉಗ್ರರ ವಶವಾದಾಗ ಭಾರತ 'ಆಪರೇಷನ್ ದೇವಿಶಕ್ತಿ' ಎಂಬ ಕಾರ್ಯಾಚರಣೆ ಮೂಲಕ ಅಲ್ಲಿ ಸಿಲುಕಿದ್ದವರನ್ನು ಭಾರತಕ್ಕೆ ವಾಪಸ್ ಕರೆತಂದಿತ್ತು. ಆದರೆ ಇನ್ನೂ ಹಲವರು ಅಲ್ಲಿಯೇ ಸಿಲುಕಿದ್ದಾರೆ ಎಂದು ಅಂದಾಜಿಸಲಾಗಿದೆ. ಅವರ ಅನುಕೂಲಕ್ಕಾಗಿ ಭಾರತ-ಕಾಬೂಲ್ ವಿಮಾನಗಳ ಸಂಚಾರಕ್ಕೆ ಅವಕಾಶ ನೀಡುವ ನಿರೀಕ್ಷೆ ಇದೆ.

ಮೂಲಗಳ ಪ್ರಕಾರ ಅಫ್ಘಾನಿಸ್ತಾನದ ವಿವಿಧ ಅಭಿವೃದ್ಧಿ ಯೋಜನೆಗಳಲ್ಲಿ ತೊಡಗಿಸಿಕೊಂಡಿದ್ದ 2000 ಉದ್ಯೋಗಿಗಳಿದ್ದರು. ಇವರಲ್ಲಿ ಶೇ 50ರಷ್ಟು ಜನರನ್ನು ಸಂಪರ್ಕಿಸಲು ಸಾಧ್ಯವಾಗಿಲ್ಲ. ವಿಮಾನ ಸಂಪರ್ಕ ಆರಂಭಿಸಿದರೆ ಇವರಿಗೆ ತವರಿಗೆ ವಾಪಸ್ ಬರಲು ಅನುಕೂಲವಾಗಲಿದೆ ಎಂದು ಭಾರತ ಚಿಂತಿಸುತ್ತಿದೆ.

ಆಗಸ್ಟ್ 15ರಂದು ಅಫ್ಘಾನಿಸ್ತಾನ ತಾಲಿಬಾನ್ ಉಗ್ರರ ವಶವಾದ ಬಳಿಕ ಅಂತರಾಷ್ಟ್ರೀಯ ವಿಮಾನಗಳ ಹಾರಾಟವನ್ನು ಸ್ಥಗಿತಗೊಳಿಸಲಾಗಿತ್ತು. ತಾಲಿಬಾನ್ ಉಗ್ರರು ಕಾಬೂಲ್ ವಿಮಾನ ನಿಲ್ದಾಣವನ್ನು ತಮ್ಮ ವಶಕ್ಕೆ ಪಡೆದಿದ್ದರು. ಬಳಿಕ ಅಮೆರಿಕ, ನ್ಯಾಟೋ ಪಡೆಗಳು ವಿಮಾಣ ನಿಲ್ದಾಣವನ್ನು ವಶಕ್ಕೆ ಪಡೆದು ಅಲ್ಲಿ ಸಿಲುಕಿದ್ದವರ ರಕ್ಷಣಾ ಕಾರ್ಯವನ್ನು ಕೈಗೊಂಡಿದ್ದವು.

ಭಾರತ ಸಹ ವಿಶೇಷ ವಿಮಾನದ ಮೂಲಕ ಅಫ್ಘಾನಿಸ್ತಾನದಲ್ಲಿ ಸಿಲುಕಿದ್ದವರ ರಕ್ಷಣಾ ಕಾರ್ಯ ಕೈಗೊಂಡಿತ್ತು. ಆಗಸ್ಟ್ 17ರಂದು 29 ರಾಯಭಾರ ಕಚೇರಿ ಸಿಬ್ಬಂದಿ, 99 ಐಟಿಬಿಪಿ ಸಿಬ್ಬಂದಿಗಳು, 21 ನಾಗರಿಕರನ್ನು ಹೊತ್ತ ವಿಮಾನ ಭಾರತಕ್ಕೆ ಬಂದಿತ್ತು.

ಆಗಸ್ಟ್ 22ರಂದು ಮೂರು ವಿಮಾನಗಳ ಮೂಲಕ 400 ಜನರನ್ನು ಭಾರತಕ್ಕೆ ಕತೆರತಲಾಗಿತ್ತು. ಆದರೆ ಅಫ್ಘಾನಿಸ್ತಾನದಲ್ಲಿ ಇನ್ನೂ ಹಲವಾರು ಭಾರತೀಯರು ಸಿಲುಕಿದ್ದಾರೆ ಎಂದು ಶಂಕಿಸಲಾಗಿದೆ. ಈಗ ಕಾಬೂಲ್-ಭಾರತ ವಿಮಾನ ಸೇವೆ ಆರಂಭಿಸಿದರೆ ಅವರು ದೇಶಕ್ಕೆ ವಾಪಸ್ ಆಗಬಹುದು.

ಕೋವಿಡ್ ಪರಿಸ್ಥಿತಿ ಕಾರಣದಿಂದಾಗಿ ಭಾರತ ಅಂತರಾಷ್ಟ್ರೀಯ ವಿಮಾನಗಳಿಗೆ ಅಕ್ಟೋಬರ್ 31ರ ತನಕ ನಿಷೇಧ ಹೇರಿದೆ. ಕಾಬೂಲ್-ಭಾರತ ವಿಮಾನ ಸಂಚಾರಕ್ಕೆ ಅವಕಶ ನೀಡಿದರೆ ಮುಂದಿನ ತಿಂಗಳು ನೀಡಬಹುದು ಎಂದು ಅಂದಾಜಿಸಲಾಗಿದೆ.

ಅಫ್ಘಾನಿಸ್ತಾನಕ್ಕೆ ವಿಮಾನ ಸಂಚಾರವನ್ನು ಪಾಕಿಸ್ತಾನ ಆರಂಭ ಮಾಡಿದೆ. ಈ ಹಿನ್ನಲೆಯಲ್ಲಿ ಭಾರತಕ್ಕೂ ಪತ್ರ ಬರೆದಿರುವ ತಾಲಿಬಾನಿಗಳು ವಿಮಾನಗಳ ವಾಣಿಜ್ಯ ಸಂಚಾರಕ್ಕೆ ಅವಕಾಶ ನೀಡಿ ಎಂದು ಮನವಿ ಮಾಡಿದ್ದಾರೆ.

ಅಫ್ಘಾನಿಸ್ತಾನ ಮತ್ತು ಭಾರತದ ನಡುವೆ ಸುಗಮವಾದ ವೈಮಾನಿಕ ಸಂಚಾರ ನಡೆಸಬೇಕು ಎಂದು ಪತ್ರದಲ್ಲಿ ವಿಮಾನಯಾನ ಸಚಿವ ಅಲ್ಹಾಜ್ ಹಮೀದುಲ್ಲಾ ಪತ್ರದಲ್ಲಿ ಭಾರತಕ್ಕೆ ಮನವಿಯನ್ನು ಮಾಡಿದ್ದಾರೆ.

English summary
India may allow flight operations from Kabul to India soon. In view of the large number of Indians still stranded in Afghanistan government considering to permit commercial flight operations.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X