ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೇಶದ ಟೋಲ್ ಪ್ಲಾಜಾ ಕ್ಯೂನಲ್ಲಿ 12 ಸಾವಿರ ಕೋಟಿ

|
Google Oneindia Kannada News

ನವದೆಹಲಿ, ನವೆಂಬರ್ 29:ದೇಶದ ರಾಷ್ಟ್ರೀಯ ಹೆದ್ದಾರಿಗಳಲ್ಲಿರುವ ಟೋಲ್ ಪ್ಲಾಜಾಗಳು ಹಾಗೂ ಅಲ್ಲಿರುವ ವಾಹನಗಳ ಸಾಲುಗಳ ಬಗ್ಗೆ ವಾಹನ ಮಾಲಿಕರು ಅಸಮಾಧಾನ ಹೊರಹಾಕುವುದು ಸಾಮಾನ್ಯ.

ಆದರೆ ಸರ್ಕಾರಗಳ ಅವೈಜ್ಞಾನಿಕ ಟೋಲ್ ಪ್ಲಾಜಾಗಳಿಂದ ವರ್ಷಕ್ಕೆ ಬರೋಬ್ಬರಿ 12 ಸಾವಿರ ಕೋಟಿ ರೂ. ನಷ್ಟವಾಗುತ್ತಿದೆ. ಫಾಸ್ಟ್ಯಾಗ್ ಅಳವಡಿಕೆ ಹಿನ್ನೆಲೆಯಲ್ಲಿ ಉಲ್ಲೈ ಟೆಕ್ನಾಲಜಿ ನಡೆಸಿರುವ ಸಮೀಕ್ಷೆ ಅಧ್ಯಯನದಲ್ಲಿ ಈ ವಿಚಾರ ಹೊರಬಿದ್ದಿದೆ.

ಈ 12 ಸಾವಿರ ಕೋಟಿ ರೂ.ಗಳಲ್ಲಿ ಶೇ.35ರಷ್ಟು ಹಣವು ವಾಹನದ ಇಂಧನಕ್ಕೆ ಸಂಬಂಧಿಸಿದ್ದರೆ ಉಳಿದ ಹಣವು ವಾಹನ ಮಾಲಿಕರು ಹಾಗೂ ಮಾನವನ ಕೆಲಸದ ಅವಧಿಯ ನಷ್ಟವಾಗಿದೆ.

toll

ಟೋಲ್ ಪ್ಲಾಜಾಗಳಲ್ಲಿ ಸರದಿ ಸಾಲಿನಲ್ಲಿ ನಿಲ್ಲುವಾಗ ವಾಹನಗಳ ಎಂಜಿನ್‌ಗಳನ್ನು ಆನ್ ಮಾಡಿಯೇ ಇಡಬೇಕಾಗುತ್ತದೆ ಇದರಿಂದ ಇಂಧನ ವ್ಯರ್ಥವಾಗುವುದರ ಜೊತೆಗೆ ಇಂಗಾಲದ ಡೈ ಆಕ್ಸೈಸ್ ಹೊರಸೂಸುವಿಕೆ ಕೂಡ ದೊಡ್ಡ ಪ್ರಮಾಣದಲ್ಲಿ ಆಗುತ್ತದೆ. ಈ ಅಧ್ಯಯನದಲ್ಲಿ ಇಂಗಾಲ ಹೊರಸೂಸುವಿಕೆಯಿಂದಾಗುವ ನಷ್ಟ ಹಾಗೂ ಟೋಲ್ ಪ್ಲಾಜಾಗಳಲ್ಲಿ ಚಿಲ್ಲರೆಯ ಸಮಸ್ಯೆಗಳ ಬಗ್ಗೆ ಉಲ್ಲೇಖಿಸಲಾಗಿಲ್ಲ.

ಇಂತಹ ಕಾರಣದಿಂದ ಕೇಂದ್ರ ಸರ್ಕಾರವು ಡಿಸೆಂಬರ್ 1ರಿಂದ ಟೋಲ್ ಪ್ಲಾಜಾಗಳಲ್ಲಿ ಫಾಸ್ಟ್ಯಾಗ್ ಕಡ್ಡಾಯಗೊಳಿಸಲಾಗಿದೆ.

ಫಾಸ್ಟ್ಯಾಗ್‌ ಅಳವಡಿಸಿಕೊಳ್ಳದಿದ್ದರೆ ದುಪ್ಪಟ್ಟು ಶುಲ್ಕ ನೀಡಿಹೋಗಬೇಕಾಗುತ್ತದೆ. ಈಗಾಗಲೇ ಭಾರತದಲ್ಲಿ ಸುಮಾರು 72 ಲಕ್ಷ ಫಾಸ್ಟ್ಯಾಗ್ ಖರೀದಿಯಾಗಿದೆ.

ಫಾಸ್ಟ್ಯಾಗ್ ಫಾಸ್ಟಾಗಿಲ್ಲ: ಈ 12 ಸಾವಿರ ಕೋಟಿ ರೂ ನಷ್ಟದ ಮಾತುಕತೆ ಹೊರತಾಗಿಯೂ ಟೋಲ್ ಪ್ಲಾಜಾಗಳಲ್ಲಿ ಇನ್ನೂ ಫಾಸ್ಟ್ಯಾಗ್ ಫಾಸ್ಟಾಗಿಲ್ಲ. ಎಲ್ಲಾ ಟೋಲ್‌ಗಳಲ್ಲಿ ಆಟೋಮೆಟಿಕ್ ಫಾಸ್ಟ್ಯಾಗ್‌ಗಳು ಬಂದಿಲ್ಲ.

ಇದರಿಂದ ಫಾಸ್ಟ್ಯಾಗ್ ಹೊಂದಿರುವ ಮಾಲಿಕರು ಕೂಡ ಒದ್ದಾಡುವ ಪರಿಸ್ಥಿತಿ ಬಂದಿದೆ. ಇದಲ್ಲದೆ ವಾಹನ ಮಾಲಿಕರು ಮೊದಲಿನಂತೆ ಕಾಯುವ ದಿನಗಳು ದೂರವಾಗುತ್ತಿಲ್ಲ.

ಹೀಗಾಗಿ ಫಾಸ್ಟ್ಯಾಗ್ ಕಡ್ಡಾಯವಾದ ಜೊತೆಗೆ 12ಸಾವಿರ ಕೋಟಿ ರೂ ವಾರ್ಷಿಕ ನಷ್ಟವನ್ನು ಕೇವಲ ಫಾಸ್ಟ್ಯಾಗ್‌ನಿಂದ ಮಾತ್ರ ಮಾಡಲು ಸಾಧ್ಯವಿಲ್ಲ, ಅದಕ್ಕೆ ತಕ್ಕ ಹಾಗೆ ಮೂಲಸೌಕರ್ಯ ಅಭಿವೃದ್ಧಿಪಡಿಸಬೇಕಿದೆ.

English summary
Delhi Based Institutions revealed that India is loosing 12 thousand crore per annum at toll plaza.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X