ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಾನವೀಯತೆ ಕಥೆ: ಮಾನಸಿಕ ಅಸ್ವಸ್ಥನಿಗೆ ಪೊಲೀಸರಿಂದ ಆರೈಕೆ

|
Google Oneindia Kannada News

ಡೆಹ್ರಾಡೂನ್, ಏಪ್ರಿಲ್.23: ಕೊರೊನಾ ವೈರಸ್ ಸೋಂಕು ಹರಡದಂತೆ ಮುನ್ನೆಚ್ಚರಿಕೆ ವಹಿಸಲು ಭಾರತ ಲಾಕ್ ಡೌನ್ ಘೋಷಿಸಲಾಗಿದ್ದು ದೇಶಾದ್ಯಂತ ಸಂಚಾರಕ್ಕೆ ಬ್ರೇಕ್ ಬಿದ್ದಿದೆ. ಇದರ ನಡುವೆ ಉತ್ತರಾಖಂಡ್ ನಲ್ಲಿ ಪೊಲೀಸರು ತೋರಿದ ಮಾನವೀಯತೆ ಸಖತ್ ಸದ್ದು ಮಾಡಿದೆ.

ಭಾರತ ಲಾಕ್ ಡೌನ್ ನಿಂದಾಗಿ ದಾರಿ ಕಾಣದೇ ಪಿತೋರ್ ಘರ್ ನಲ್ಲಿ ಬೀದಿ ಬೀದಿ ಸುತ್ತುತ್ತಿದ್ದ ಮಾನಸಿಕ ಅಸ್ವಸ್ಥನ ಬಗ್ಗೆ ಪೊಲೀಸರು ಕಾಳಜಿ ತೋರಿದ್ದಾರೆ. ಇನ್ಸ್ ಪೆಕ್ಟರ್ ವಿಜಯ್ ಬೊಹ್ರಾ ಮತ್ತು ಪರ್ವಿಂದರ್ ಮಾನಸಿಕ ಅಸ್ವಸ್ಥನಿಗೆ ಸ್ನಾನ ಮಾಡಿಸಿದ್ದಾರೆ.

ಬೆಂಗಳೂರಿಗೆ ಕಂಟಕವಾದ ಹೊಂಗಸಂದ್ರ ರೋಗಿ: ಭಯ ಹುಟ್ಟಿಸಿದೆ ಟ್ರಾವಲ್ ಹಿಸ್ಟರಿಬೆಂಗಳೂರಿಗೆ ಕಂಟಕವಾದ ಹೊಂಗಸಂದ್ರ ರೋಗಿ: ಭಯ ಹುಟ್ಟಿಸಿದೆ ಟ್ರಾವಲ್ ಹಿಸ್ಟರಿ

ಕೊರೊನಾ ವೈರಸ್ ವಿರುದ್ಧ ಹೋರಾಟಕ್ಕಾಗಿ ದೇಶಕ್ಕೆ ದೇಶವೇ ಸ್ತಬ್ಧಗೊಂಡಿದೆ. ಕಾನೂನು ಸುವ್ಯವಸ್ಥೆಯನ್ನು ಕಾಪಾಡುವುದರ ಜೊತೆ ಜೊತೆಗೆ ಅಸಹಾಯಕರಿಗೆ ನೆರವು ನೀಡುವ ಉದ್ದೇಶದಿಂದ ಪೊಲೀಸರು ಬೀದಿ ಬೀದಿಗಳಲ್ಲಿ ರೌಂಡ್ಸ್ ಹೊಡೆಯುತ್ತಿದ್ದಾರೆ.

India Lockdown: Uttarakhand Police Help Mentally ill Person

ಮಾನಸಿಕ ಅಸ್ವಸ್ಥನಿಗೆ ಕಟಿಂಗ್ ಶೇವಿಂಗ್:

ಮನೆ ಮಠವಿಲ್ಲದೇ ಭಾರತ ಲಾಕ್ ಡೌನ್ ನಿಂದ ಬೀದಿ ಬೀದಿ ಸುತ್ತುತ್ತಾ ತುತ್ತು ಅನ್ನಕ್ಕಾಗಿ ಅಂಗಲಾಚುತ್ತಿದ್ದ ಮಾನಸಿಕ ಅಸ್ವಸ್ಥನಿಗೆ ಪೊಲೀಸರು ಆಹಾರವನ್ನು ನೀಡಿದ್ದಾರೆ. ನಂತರ ಆತನಿಗೆ ಸ್ವತಃ ಪೊಲೀಸರೇ ಟ್ರಿಮ್ಮರ್ ಬಳಸಿ ಕಟಿಂಗ್ ಮತ್ತು ಶೇವಿಂಗ್ ಮಾಡಿದ್ದಾರೆ. ಇನ್ನು, ಕೆಲವು ಪೊಲೀಸರು ಉತ್ತರಾಖಂಡ್ ನಾದ್ಯಂತ ಅಸಹಾಯಕ ಮತ್ತು ಅತಂತ್ರ ಸ್ಥಿತಿಯಲ್ಲಿ ಇರುವ ಜನರಿಗೆ ಆಹಾರ ಪೂರೈಕೆ ಮಾಡುವ ನಿಟ್ಟಿನಲ್ಲಿ ಶ್ರಮಿಸುತ್ತಿದ್ದಾರೆ.

English summary
India Lockdown: Uttarakhand Police Help Mentally ill Person.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X