ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಬ್ಬಂದಿ ಸಂಬಳ ಕಟ್ ಮಾಡಲ್ಲ ಸಂಸ್ಥೆ: ಇಂಡಿಗೋ ಯುಟರ್ನ್!

|
Google Oneindia Kannada News

ನವದೆಹಲಿ, ಏಪ್ರಿಲ್.23: ಕೊರೊನಾ ವೈರಸ್ ಕಾಟ ಹಾಗೂ ಭಾರತ ಲಾಕ್ ಡೌನ್ ನಿಂದಾಗಿ ಬಹುತೇಕ ವಿಮಾನಯಾನ ಸಂಸ್ಥೆಗಳು ನಷ್ಟ ಅನುಭವಿಸುತ್ತಿವೆ. ಈ ನಷ್ಟವನ್ನೇ ಸಿಬ್ಬಂದಿ ಮೇಲೆ ಹೊರಿಸಲು ಮುಂದಾಗಿದ್ದ ಇಂಡಿಗೋ ವಿಮಾನಯಾನ ಸಂಸ್ಥೆಯು ಯೂಟರ್ನ್ ಹೊಡೆದಿದೆ.

ಇಂಡಿಗೋ ವಿಮಾನಯಾನ ಸಂಸ್ಥೆಯು ತನ್ನ ಸಿಬ್ಬಂದಿಗೆ ನೀಡುವ ಏಪ್ರಿಲ್ ತಿಂಗಳ ಸಂಬಳದಲ್ಲಿ ಯಾವುದೇ ರೀತಿ ಕಡಿತ ಮಾಡುವುದಿಲ್ಲ ಎಂದು ಸಂಸ್ಥೆಯ ಮುಖ್ಯ ಕಾರ್ಯ ನಿರ್ವಾಹಣಾ ಅಧಿಕಾರಿ ಸಿಇಓ ರೊನೊಜಾಯ್ ದತ್ತ ಸ್ಪಷ್ಟನೆ ನೀಡಿದ್ದಾರೆ.

ಲಾಕ್ ಡೌನ್; ಶೇ 20ರಷ್ಟು ವೇತನ ಕಡಿತಗೊಳಿಸಿದ ಏರ್ ಏಷ್ಯಾ ಲಾಕ್ ಡೌನ್; ಶೇ 20ರಷ್ಟು ವೇತನ ಕಡಿತಗೊಳಿಸಿದ ಏರ್ ಏಷ್ಯಾ

ಭಾರತ ಲಾಕ್ ಡೌನ್ ಘೋಷಣೆಯಾದ ಹಿನ್ನೆಲೆ ಈ ಹಿಂದೆ ಇಂಡಿಗೋ ಸಂಸ್ಥೆಯು ಹೇಳಿದಂತೆ ಸಿಬ್ಬಂದಿಯ ವೇತನ ಕಡಿತಗೊಳಿಸುವ ಪ್ರಕ್ರಿಯೆಯನ್ನು ಏಪ್ರಿಲ್ ನಲ್ಲಿ ಜಾರಿಗೊಳಿಸುವುದಿಲ್ಲ. ಕೆಲ ಸಿಬ್ಬಂದಿ ಸ್ವಯಂಪ್ರೇರಿತರಾಗಿ ನಿರ್ದಿಷ್ಟ ಪ್ರಮಾಣದ ವೇತನವನ್ನು ನೀಡಲು ಮುಂದಾಗಿದ್ದಾರೆ. ಈ ಹಿನ್ನೆಲೆ ಎಲ್ಲ ಸಿಬ್ಬಂದಿಯ ವೇತನದಲ್ಲಿ ಯಾವುದೇ ಕಡಿತ ಇರುವುದಿಲ್ಲ ಎಂದು ದತ್ತ ಸ್ಪಷ್ಟಪಡಿಸಿದ್ದಾರೆ.

India Lockdown: IndiGo Not Cut Employees April Month Salary

ಸರಕು ಸಾಗಾಣಿಕೆಯಲ್ಲಿ ಕಂಪನಿಗೆ ಆದಾಯ:

ಇಂಡಿಗೋ ಕಂಪನಿ ಆದಾಯ ಮೂಲಗಳಲ್ಲಿ ಒಂದಾಗಿರುವ ಸರಕು ಸಾಗಾಣಿಕೆ ಕಾರ್ಯಾಚರಣೆ ಯಥಾ ಪ್ರಕಾರ ನಡೆಯುತ್ತಿದೆ. ಸರ್ಕಾರವು ಹಣ ಪಾವತಿಸುವುದನ್ನು ತಡೆ ಹಿಡಿಯುವುದಿಲ್ಲ ಎಂದು ಕಂಪನಿ ಭಾವಿಸುತ್ತದೆ. ಹೀಗಾಗಿ ಉದ್ಯೋಗಿಗಳ ವೇತನದಲ್ಲಿ ಕಂಪನಿಯು ಯಾವುದೇ ರೀತಿ ಕಡಿತವನ್ನು ಮಾಡುವುದಿಲ್ಲ. ಕಳೆದ ಒಂದು ವಾರದ ಹಿಂದೆಯಷ್ಟೇ ಇಂಡಿಗೋ ಸಂಸ್ಥೆಯು ತನ್ನ ಸಿಬ್ಬಂದಿ ವೇತನದಲ್ಲಿ ಶೇ.10 ರಿಂದ ಶೇ.20ರಷ್ಟು ಕಡಿತಗೊಳಿಸಲಾಗುತ್ತದೆ ಎಂದು ತಿಳಿಸಿತ್ತು.

ಭಾರತದಲ್ಲಿ ಅತಿಕಡಿಮೆ ಬೆಲೆಗೆ ವಿಮಾನಯಾನ ಸೇವೆಯನ್ನು ನೀಡುವುದರಷ್ಟೇ ಪ್ರಸಿದ್ಧಿ ಪಡೆದಿರುವ ಇಂಡಿಗೋ ಸಂಸ್ಥೆಯು ಜೂನ್.12, 2014ರಂದು ಕಾರ್ಯಾರಂಭ ಮಾಡಿತು. ಬೆಂಗಳೂರಿನಲ್ಲಿ ಇಂಡಿಗೋ ಸಂಸ್ಥೆಯ ಪ್ರಧಾನ ಕಚೇರಿ ಇರುವುದು ಮತ್ತೊಂದು ವಿಶೇಷವಾಗಿದೆ.

English summary
India Lockdown: IndiGo Not Cut Employees April Month Salary.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X