ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಖಾಸಗಿ ಕೇಂದ್ರಗಳಲ್ಲಿ ಕೋವಿಶೀಲ್ಡ್ ಎರಡು ಡೋಸ್‌ಗಳ ಅಂತರ ತಗ್ಗಿಸುವ ಸಾಧ್ಯತೆ

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 22: ನ್ಯಾಯಾಲಯದ ಆದೇಶಕ್ಕೆ ಅನುಸಾರವಾಗಿ ಖಾಸಗಿ ಆಸ್ಪತ್ರೆ ಅಥವಾ ಕ್ಲಿನಿಕ್‌ಗಳಲ್ಲಿ ಕೋವಿಶೀಲ್ಡ್‌ ಲಸಿಕೆಯ ಎರಡು ಡೋಸ್‌ಗಳ ನಡುವಿನ ಅಂತರವನ್ನು ತಗ್ಗಿಸಲು ಭಾರತ ಸರ್ಕಾರ ಅನುಮತಿ ನೀಡುವ ಸಾಧ್ಯತೆಯಿದೆ ಎಂದು ಮೂಲಗಳು ರಾಯಿಟರ್ಸ್‌ ಸುದ್ದಿ ಸಂಸ್ಥೆಗೆ ತಿಳಿಸಿವೆ.

ಖಾಸಗಿ ಆಸ್ಪತ್ರೆಗಳು ಹಾಗೂ ಕ್ಲಿನಿಕ್‌ಗಳಲ್ಲಿ ಹಣ ಪಾವತಿಸಿ ಲಸಿಕೆ ಪಡೆದುಕೊಳ್ಳುವವರಿಗೆ ಕೋವಿಶೀಲ್ಡ್ ಲಸಿಕೆಯ ಎರಡನೇ ಡೋಸ್ ಅನ್ನು ನಾಲ್ಕು ವಾರಗಳ ಅಂತರದಲ್ಲಿ ಪಡೆಯುವ ಆಯ್ಕೆಯನ್ನು ಸರ್ಕಾರ ನೀಡಲಿರುವುದಾಗಿ ತಿಳಿದುಬಂದಿದೆ. ಪ್ರಸ್ತುತ ಕೋವಿಶೀಲ್ಡ್ ಲಸಿಕೆಯ ಎರಡು ಡೋಸ್‌ಗಳ ನಡುವೆ 12-16 ವಾರಗಳ ಅಂತರವಿದೆ.

ನೀವು ಬಯಸಿದರೆ 1 ಡೋಸ್ ಪಡೆದ 4 ವಾರದಲ್ಲೇ ಕೊವಿಶೀಲ್ಡ್ 2ನೇ ಡೋಸ್!ನೀವು ಬಯಸಿದರೆ 1 ಡೋಸ್ ಪಡೆದ 4 ವಾರದಲ್ಲೇ ಕೊವಿಶೀಲ್ಡ್ 2ನೇ ಡೋಸ್!

ಇದೇ ತಿಂಗಳ ಆರಂಭದಲ್ಲಿ ಕೇರಳ ಹೈಕೋರ್ಟ್ ಕೋವಿಶೀಲ್ಡ್ ಲಸಿಕೆಯ ಎರಡು ಡೋಸ್‌ಗಳ ನಡುವಿನ ಅಂತರದ ಸಂಬಂಧ ಆದೇಶ ನೀಡಿತ್ತು. ಆರೋಗ್ಯ ಸಚಿವಾಲಯದ ಲಸಿಕಾ ನೋಂದಣಿಯಲ್ಲಿ ಕೆಲವು ಬದಲಾವಣೆಗಳನ್ನು ತರಲು ಆದೇಶಿಸಿತ್ತು. ಹಣ ನೀಡಿ ಲಸಿಕೆ ಹಾಕಿಸಿಕೊಳ್ಳುವ ಜನರಿಗೆ ಹಾಗೂ ವಿದೇಶಕ್ಕೆ ಹೋಗುವವರಿಗೆ ಕಡಿಮೆ ಅಂತರದಲ್ಲಿ ಎರಡನೇ ಡೋಸ್ ಲಸಿಕೆ ನೀಡಲು ಅವಕಾಶ ನೀಡುವಂತೆ ತಿಳಿಸಿತ್ತು.

India Likely To Reduce Gap Between Two Doses Of Covishield In Private

ಭಾರತದಲ್ಲಿ ಕೋವಿಶೀಲ್ಡ್ ಮೊದಲ ಡೋಸ್ ಲಸಿಕೆ ಪಡೆದ ವ್ಯಕ್ತಿ ತಾನು ಬಯಸಿದರೆ 4 ವಾರಗಳಲ್ಲೇ ಎರಡನೇ ಡೋಸ್ ಲಸಿಕೆ ಪಡೆದುಕೊಳ್ಳಲು ಅವಕಾಶ ನೀಡಬೇಕು ಎಂದು ಕೇಂದ್ರ ಸರ್ಕಾರಕ್ಕೆ ಕೇರಳ ಹೈಕೋರ್ಟ್ ಆದೇಶಿಸಿತ್ತು.

ವಿದೇಶಕ್ಕೆ ಪ್ರಯಾಣಿಸಲು ಅಗತ್ಯವಿರುವ ಅಧಿಕೃತ ಪ್ರಯಾಣಿಕರಿಗೆ ಸೂಕ್ತ ಸುರಕ್ಷತೆ ಮತ್ತು ಆರೋಗ್ಯ ಭದ್ರತೆ ಒದಗಿಸುವುದು ಅಗತ್ಯ. ಉದ್ಯೋಗ ಮತ್ತು ಶೈಕ್ಷಣಿಕ ಉದ್ದೇಶಕ್ಕಾಗಿ ವಿದೇಶ ಮತ್ತು ಅನ್ಯರಾಜ್ಯಗಳಿಗೆ ಪ್ರಯಾಣಿಸುವ ವಿದ್ಯಾರ್ಥಿಗಳು ಹಾಗೂ ಉದ್ಯೋಗಿಗಳಿಗೆ ಈಗಿರುವ ಸಮಯದ ಮಿತಿಗಿಂತ ಕಡಿಮೆ ಅವಧಿಯಲ್ಲಿ ಏಕೆ ಲಸಿಕೆ ನೀಡಬಾರದು ಎಂದು ಕೇಂದ್ರವನ್ನು ಪ್ರಶ್ನಿಸಿತ್ತು.

ಕೋವಿಶೀಲ್ಡ್ ಲಸಿಕೆ ಅಂತರ ಕಡಿಮೆ ಮಾಡುವ ಕುರಿತು ಶೀಘ್ರ ನಿರ್ಧಾರಕೋವಿಶೀಲ್ಡ್ ಲಸಿಕೆ ಅಂತರ ಕಡಿಮೆ ಮಾಡುವ ಕುರಿತು ಶೀಘ್ರ ನಿರ್ಧಾರ

ಹೈಕೋರ್ಟ್ ತೀರ್ಪಿನ ಹಿನ್ನೆಲೆಯಲ್ಲಿ ಕೆಲವು ಬದಲಾವಣೆ ಮಾಡಲು ತೀರ್ಮಾನಿಸಿದ್ದು, ಖಾಸಗಿಯಾಗಿ ಲಸಿಕೆ ನೀಡುತ್ತಿರುವ ಕೇಂದ್ರಗಳಿಗೆ ಎರಡು ಡೋಸ್‌ಗಳ ನಡುವಿನ ಅಂತರ ತಗ್ಗಿಸಲು ಸೂಚನೆ ನೀಡುವ ಸಾಧ್ಯತೆಯಿದೆ. ಸರ್ಕಾರದ ಲಸಿಕಾ ಅಭಿಯಾನದಲ್ಲಿ ಈ ಅಂತರವು 12 ವಾರದವರೆಗೆ ಉಳಿದಿರುತ್ತದೆ.

India Likely To Reduce Gap Between Two Doses Of Covishield In Private

ಆದರೆ ಈ ಬದಲಾವಣೆಗಳ ಕುರಿತು ಅಧೀಕೃತ ಹಾಗೂ ನಿಖರ ಮಾಹಿತಿ ಇಲ್ಲ.

ಮೇ ತಿಂಗಳಿನಲ್ಲಿ, ದೇಶದಲ್ಲಿ ಕೊರೊನಾ ಎರಡನೇ ಅಲೆ ಉತ್ತುಂಗದಲ್ಲಿದ್ದಾಗ ಕೋವಿಶೀಲ್ಡ್ ಲಸಿಕೆಯ ಎರಡು ಡೋಸ್‌ಗಳ ನಡುವಿನ ಅಂತರವನ್ನು ಹೆಚ್ಚಿಸಲಾಗಿತ್ತು. ಎರಡನೇ ಅಲೆ ಸಂದರ್ಭ ಲಸಿಕೆ ಕೊರತೆ ಎದುರಾದಾಗ ಹೆಚ್ಚಿನ ಜನರಿಗೆ ಕನಿಷ್ಠ ಒಂದು ಡೋಸ್ ಲಸಿಕೆ ಪೂರೈಸಲು ಈ ನಿರ್ಧಾರವನ್ನು ಕೈಗೊಳ್ಳಲಾಗಿತ್ತು.

ಆನಂತರರ ಆಸ್ಟ್ರಾಜೆನೆಕಾ ತನ್ನ ಕೊರೊನಾ ಲಸಿಕೆಯ ಎರಡನೇ ಡೋಸ್ ಅನ್ನು ಮೊದಲ ಡೋಸ್ ಪಡೆದ 4 ವಾರಗಳ ನಂತರ ತೆಗೆದುಕೊಳ್ಳಲು ಶಿಫಾರಸು ಮಾಡಿತ್ತು. 'ನಾಲ್ಕು ವಾರಗಳಿಗಿಂತ ಹೆಚ್ಚಿನ ಅವಧಿ ಪ್ರತಿಕಾಯಗಳು ಉಳಿಯಬಲ್ಲವು' ಎಂದು ವೆಬ್‌ಸೈಟ್‌ನಲ್ಲಿ ಹೇಳಿಕೊಂಡಿತ್ತು. ಇದರೊಂದಿಗೆ ವಿಶ್ವ ಆರೋಗ್ಯ ಸಂಸ್ಥೆ, ಈ ಅಂತರವನ್ನು 8-12 ವಾರಗಳಿಗೆ ಶಿಫಾರಸು ಮಾಡಿತ್ತು.

ಈಚೆಗೆ, 45 ವರ್ಷ ಮೇಲ್ಪಟ್ಟವರಿಗೆ ಮಾತ್ರ ಎರಡು ಡೋಸ್‌ಗಳನ್ನು ಕಡಿಮೆ ಅಂತರದಲ್ಲಿ ನೀಡುವ ಕುರಿತು ಚರ್ಚೆ ನಡೆಯುತ್ತಿರುವುದಾಗಿ ಕೇಂದ್ರ ತಿಳಿಸಿತ್ತು. ವೈಜ್ಞಾನಿಕ ಸಾಕ್ಷ್ಯಗಳ ಅಂತಿಮ ವರದಿ ನಂತರ ತೀರ್ಮಾನ ಕೈಗೊಳ್ಳುವುದಾಗಿ ಕೊರೊನಾ ಕಾರ್ಯಕಾರಿ ಸಮಿತಿ ಅಧ್ಯಕ್ಷ ಡಾ. ಎನ್‌.ಕೆ. ಅರೋರಾ ಸಂದರ್ಶನದಲ್ಲಿ ತಿಳಿಸಿದ್ದರು.

ಕೋವಿಶೀಲ್ಡ್‌ ಲಸಿಕೆಯನ್ನು ಸದ್ಯಕ್ಕೆ 18 ವರ್ಷ ಮೇಲ್ಪಟ್ಟವರಿಗೆ 12ರಿಂದ 16 ವಾರಗಳ ಅಂತರದಲ್ಲಿ ನೀಡಲಾಗುತ್ತಿದೆ. ಕೊರೊನಾ ಲಸಿಕೆ ಅಭಿಯಾನ ಆರಂಭವಾದ ಮೊದಲ ದಿನಗಳಲ್ಲಿ ಕೋವಿಶೀಲ್ಡ್‌ ಲಸಿಕೆಯ ಎರಡು ಡೋಸ್‌ಗಳ ನಡುವಿನ ಅಂತರವು 4-6 ವಾರಗಳಾಗಿತ್ತು. ನಂತರ ಈ ಅಂತರವನ್ನು 4-8 ವಾರಗಳಿಗೆ ಏರಿಕೆ ಮಾಡಲಾಗಿತ್ತು. ಅಂತಿಮವಾಗಿ 12-16 ವಾರಗಳ ಅಂತರದಲ್ಲಿ ಲಸಿಕೆ ನೀಡಲು ಆದೇಶಿಸಲಾಯಿತು.

English summary
India likely to allow a smaller gap between AstraZeneca COVID-19 vaccine doses for inoculations being carried out privately, sources told Reuters
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X