ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದಲ್ಲಿ 2 ಡೋಸ್ ಪಡೆದವರಿಗೆ 3ನೇ ಡೋಸ್ ಕೊವಿಡ್-19 ಲಸಿಕೆ

|
Google Oneindia Kannada News

ನವದೆಹಲಿ, ನವೆಂಬರ್ 19: ಭಾರತದಲ್ಲಿ ಕೊರೊನಾವೈರಸ್ ಸೋಂಕು ನಿಯಂತ್ರಿಸುವುದಕ್ಕೆ ಎರಡು ಡೋಸ್ ಲಸಿಕೆ ವಿತರಣೆ ಅಭಿಯಾನ ಚಾಲ್ತಿಯಲ್ಲಿದೆ. ಈಗಾಗಲೇ ಎರಡೂ ಡೋಸ್ ಲಸಿಕೆ ಪಡೆದಿರುವ ಹಾಗೂ ತುರ್ತು ಅಗತ್ಯವನ್ನು ಹೊಂದಿರುವವರಿಗೆ 3ನೇ ಡೋಸ್ ಲಸಿಕೆಯನ್ನು ನೀಡುವ ಬಗ್ಗೆ ಸರ್ಕಾರ ಹೊಸ ನೀತಿ ರೂಪಿಸಲಿದೆ.

ಕೊವಿಡ್-19 ಸೋಂಕಿನಿಂದ ಅಪಾಯ ಎದುರಿಸುತ್ತಿರುವ ವೈದ್ಯಕೀಯ ವಲಯ, ಕಾರ್ಮಿಕರಿಗೆ 3ನೇ ಡೋಸ್ ಲಸಿಕೆ ವಿತರಿಸುವ ಅಗತ್ಯವಿದೆ. ಈ ಸಂಬಂಧ ಹೊಸ ನೀತಿ ನಿಯಮಗಳನ್ನು ರೂಪಿಸುವುದಕ್ಕಾಗಿ ಮುಂದಿನ ವಾರ ಸರ್ಕಾರದ ಉನ್ನತ ಅಧಿಕಾರಿಗಳ ಸಭೆ ನಿಗದಿಪಡಿಸಲಾಗಿದೆ.

ದೇಶದಲ್ಲಿ ಕೊರೊನಾವೈರಸ್ ಲಸಿಕೆಯ ಮೂರನೇ ಡೋಸ್ ಅನ್ನು ಹೆಚ್ಚುವರಿ ಡೋಸ್ ಆಗಿ ಶಿಫಾರಸ್ಸು ಮಾಡಲಾಗುತ್ತಿದೆಯೇ ವಿನಃ ಬೂಸ್ಟರ್ ಡೋಸ್ ಆಗಿ ಪರಿಗಣಿಸಲಾಗುವುದಿಲ್ಲ. ಮೂಲಗಳ ಪ್ರಕಾರ, ಹೆಚ್ಚುವರಿ ಡೋಸ್ ಅನ್ನು ಇಮ್ಯುನೊಕೊಪ್ರೊಮೈಸ್ಡ್ ಜನರಿಗೆ ನೀಡಲಾಗುತ್ತದೆ. ಆದರೆ ಆರೋಗ್ಯವಂತ ಜನರಿಗೆ ಬೂಸ್ಟರ್ ಶಾಟ್ ಅನ್ನು ಎರಡನೇ ಡೋಸ್ ಸ್ವೀಕರಿಸಿದ ಕೆಲವು ತಿಂಗಳ ನಂತರ ನೀಡಲಾಗುತ್ತದೆ.

ಭಾರತದ ಕೋವಿಡ್ ಲಸಿಕಾ ಪ್ರಮಾಣಪತ್ರಗಳ ಮಾನ್ಯತೆಗೆ 110 ದೇಶಗಳ ಒಪ್ಪಿಗೆಭಾರತದ ಕೋವಿಡ್ ಲಸಿಕಾ ಪ್ರಮಾಣಪತ್ರಗಳ ಮಾನ್ಯತೆಗೆ 110 ದೇಶಗಳ ಒಪ್ಪಿಗೆ

ಯಾಕೆ ಬೇಕು ಮೂರನೇ ಡೋಸ್ ಲಸಿಕೆ?

ಯಾಕೆ ಬೇಕು ಮೂರನೇ ಡೋಸ್ ಲಸಿಕೆ?

ಕ್ಯಾನ್ಸರ್‌ನಂತಹ ಕಾಯಿಲೆಗಳಿಂದಾಗಿ ಪ್ರತಿರಕ್ಷಣಾ ವ್ಯವಸ್ಥೆಯು ರಾಜಿ ಮಾಡಿಕೊಂಡಿರುವ ಜನರು ಪ್ರಮಾಣಿತ ಎರಡು-ಡೋಸ್ ಲಸಿಕೆ ಕಾರ್ಯಕ್ರಮದಿಂದ ಗಮನಾರ್ಹವಾಗಿ ರಕ್ಷಿಸಲ್ಪಡುವುದಿಲ್ಲ. ಆ ಸಂದರ್ಭದಲ್ಲಿ, ಮೂರನೇ ಡೋಸ್ ಅನ್ನು ನಿರ್ವಹಿಸುವುದು ಮುಖ್ಯವಾಗಿದೆ. ಆರೋಗ್ಯವಂತ ವ್ಯಕ್ತಿಗಳಿಗಾಗಿ ಉದ್ದೇಶಿಸಲಾದ ಬೂಸ್ಟರ್ ಶಾಟ್ ಕಾರ್ಯಕ್ರಮವನ್ನು ನಂತರದಲ್ಲಿ ನಡೆಸಲಾಗುವುದು.

ಬೂಸ್ಟರ್ ಡೋಸ್ ಲಸಿಕೆ ವಿತರಣೆಗೆ ಶಿಫಾರಸ್ಸು

ಬೂಸ್ಟರ್ ಡೋಸ್ ಲಸಿಕೆ ವಿತರಣೆಗೆ ಶಿಫಾರಸ್ಸು

ಕಳೆದ ಅಕ್ಟೋಬರ್‌ನಲ್ಲಿ, ವಿಶ್ವ ಆರೋಗ್ಯ ಸಂಸ್ಥೆಯ ಸಮಿತಿಯು ತೀವ್ರವಾಗಿ ಅಥವಾ ಮಧ್ಯಮವಾಗಿ ರೋಗನಿರೋಧಕ ಲಸಿಕೆಯನ್ನು ಹೊಂದಿರುವ ಜನರಿಗೆ WHO ಪಟ್ಟಿ ಮಾಡಿದ ಲಸಿಕೆಗಳ ಹೆಚ್ಚುವರಿ ಪ್ರಮಾಣವನ್ನು ಶಿಫಾರಸು ಮಾಡಿದೆ. ಈ ಹಿನ್ನೆಲೆಯಲ್ಲಿ ಭಾರತದಲ್ಲಿಯೂ ಕೊರೊನಾವೈರಸ್ ವಿರುದ್ಧ ನಿರಂತರವಾಗಿ ಹೋರಾಡುವ ವೈದ್ಯಕೀಯ ಸಿಬ್ಬಂದಿ ಹಾಗೂ ಕಾರ್ಮಿಕ ವಲಯಕ್ಕೆ ಹೆಚ್ಚುವರಿ ಡೋಸ್ ಅನ್ನು ವಿತರಿಸುವುದಕ್ಕೆ ಚಿಂತನೆ ನಡೆಸಲಾಗುತ್ತಿದೆ.

ದೇಶದಲ್ಲಿ ಎರಡೂ ಡೋಸ್ ಲಸಿಕೆ ಪಡೆದವರ ಸಂಖ್ಯೆ ಏರಿಕೆ

ದೇಶದಲ್ಲಿ ಎರಡೂ ಡೋಸ್ ಲಸಿಕೆ ಪಡೆದವರ ಸಂಖ್ಯೆ ಏರಿಕೆ

ದೇಶದಲ್ಲಿ ಎರಡೂ ಡೋಸ್ ಲಸಿಕೆಯನ್ನು ಪಡೆದುಕೊಂಡವರ ಸಂಖ್ಯೆಯು ಮೊದಲ ಬಾರಿಗೆ ಒಂದು ಡೋಸ್ ಲಸಿಕೆ ಪಡೆದುಕೊಂಡವರ ಪ್ರಮಾಣಕ್ಕಿಂತ ಹೆಚ್ಚಾಗಿದೆ. ಅಂದರೆ ಭಾರತದಲ್ಲಿ 37 ಕೋಟಿಗೂ ಅಧಿಕ ಜನರು ಕೊರೊನಾವೈರಸ್ ಲಸಿಕೆಯ ಒಂದೇ ಡೋಸ್ ಅನ್ನು ಪಡೆಕೊಂಡಿದ್ದರೆ, 39 ಕೋಟಿಗೂ ಹೆಚ್ಚು ಜನರು ಎರಡೂ ಡೋಸ್ ಲಸಿಕೆಯನ್ನು ಪಡೆದುಕೊಂಡಿದ್ದಾರೆ. ಭಾರತದಲ್ಲಿ ಒಟ್ಟು 1,15,14,76,793 ಡೋಸ್ ಲಸಿಕೆಯನ್ನು ವಿತರಿಸಲಾಗಿದ್ದು, 75,99,49,743 ಜನರು ಮೊದಲ ಡೋಸ್ ಲಸಿಕೆಯನ್ನು ಪಡೆದುಕೊಂಡಿದ್ದಾರೆ. ಉಳಿದಂತೆ 39,15,27,050 ಮಂದಿ ಎರಡೂ ಡೋಸ್ ಲಸಿಕೆಯನ್ನು ಹಾಕಿಸಿಕೊಂಡಿದ್ದಾರೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ.

Recommended Video

ಗೇಮ್ ಪ್ಲ್ಯಾನ್ ಸಕ್ಸಸ್ ಆಗಿದ್ದು ಹೇಗೆ ಅಂತಾ ಹೇಳಿದ ರೋಹಿತ್ | Oneindia Kannada
ದೇಶದಲ್ಲಿ ಕೊವಿಡ್-19 ಲಸಿಕೆ ವಿತರಣೆ ಹಂತಗಳು

ದೇಶದಲ್ಲಿ ಕೊವಿಡ್-19 ಲಸಿಕೆ ವಿತರಣೆ ಹಂತಗಳು

ಭಾರತದಲ್ಲಿ ಕೊರೊನಾವೈರಸ್ ಸೋಂಕು ನಿಯಂತ್ರಿಸುವ ಉದ್ದೇಶದಿಂದ ಲಸಿಕೆ ವಿತರಣೆಯನ್ನು ಸಮರೋಪಾದಿಯಲ್ಲಿ ನಡೆಸಲಾಗುತ್ತಿದೆ. ಕಳೆದ ಜನವರಿ 16ರಂದು ಮೊದಲ ಹಂತದಲ್ಲಿ ಆರೋಗ್ಯ ಕಾರ್ಯಕರ್ತರು, ಮೊದಲ ಶ್ರೇಣಿ ಕಾರ್ಮಿಕರಿಗೆ ಲಸಿಕೆ ವಿತರಣೆ ಆರಂಭಿಸಲಾಯಿತು. ಮಾರ್ಚ್ 1ರಂದು ಎರಡನೇ ಹಂತದಲ್ಲಿ ಆರೋಗ್ಯ ಸಮಸ್ಯೆ ಹೊಂದಿರುವ 45 ವರ್ಷ ಮೇಲ್ಪಟ್ಟ ಹಾಗೂ 60 ವರ್ಷದ ಮೇಲ್ಪಟ್ಟ ಪ್ರತಿಯೊಬ್ಬರಿಗೆ ಲಸಿಕೆ ವಿತರಣೆ ಆರಂಭಿಸಲಾಯಿತು. ಏಪ್ರಿಲ್ 1ರಂದು ಮೂರನೇ ಹಂತದಲ್ಲಿ 45 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರಿಗೂ ಕೊವಿಡ್-19 ಲಸಿಕೆ ವಿತರಣೆ ಶುರು ಮಾಡಲಾಗಿತ್ತು. ಜೂನ್ 21ರಿಂದ 18 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರಿಗೂ ಲಸಿಕೆ ವಿತರಣೆಯನ್ನು ಆರಂಭಿಸಲಾಗಿತ್ತು.

English summary
India is likely to form a policy on administering the third dose of the Covid-19 vaccine for which a key meeting to discuss the policy framework is scheduled next week. Know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X