ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಸ್ರೋದಿಂದ ಮತ್ತೊಂದು ವಿಕ್ರಮ, ಆಸ್ಟ್ರೋಸ್ಯಾಟ್ ಉಡಾವಣೆ

By Mahesh
|
Google Oneindia Kannada News

ಶ್ರೀಹರಿಕೋಟಾ, ಸೆ. 28: ಇಲ್ಲಿನ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಲ್ಲಿ ಹರ್ಷೋದ್ಗಾರ ಮುಗಿಲು ಮುಟ್ಟಿದೆ. ಪ್ರಪ್ರಥಮ ಬಾರಿಗೆ ಭಾರತ ತನ್ನದೇ ಆದ ಟೆಲಿಸ್ಕೋಪ್ ವೊಂದನ್ನು ಬಾಹ್ಯಾಕಾಶದಲ್ಲಿ ಹೊಂದಬಹುದಾಗಿದೆ. ಆಸ್ಟ್ರೋಸ್ಯಾಟ್ ಸೇರಿದಂತೆ ವಿದೇಶದ 6 ಉಪಗ್ರಹಗಳನ್ನು ಹೊಂದಿದ್ದ ಪಿಎಸ್ ಎಲ್ ವಿ ಸಿ 30 ರಾಕೆಟ್ ಯಶಸ್ವಿಯಾಗಿ ಸೋಮವಾರ ಬೆಳಗ್ಗೆ ಆಕಾಶಕ್ಕೆ ಚಿಮ್ಮಿದೆ.

ಸುಮಾರು 320 ಟನ್ ತೂಗುವ ವಿಶಿಷ್ಟ ಉಪಗ್ರಹ ಆಸ್ಟ್ರೋಸ್ಯಾಟ್ ಮೂಲಕ ಬ್ರಹ್ಮಾಂಡ ಕುರಿತ ಅನೇಕ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಲು ಭಾರತೀಯ ಬಾಹ್ಯಾಕಾಶ ಸಂಶೋಧನಾ ಕೇಂದ್ರ(ಇಸ್ರೋ)ದ ವಿಜ್ಞಾನಿಗಳು ಯೋಜನೆ ಹಾಕಿಕೊಂಡಿದ್ದಾರೆ.

India launches its first dedicated space observatory ASTROSTAT

ಅಭಿವೃದ್ಧಿಶೀಲ ರಾಷ್ಟ್ರಗಳ ಪೈಕಿ ತನ್ನದೇ ಆದ ಬಾಹ್ಯಾಕಾಶ ನಿರ್ವಹಣಾ ಉಪಗ್ರಹ ಹೊಂದಿರುವ ಪ್ರಪ್ರಥಮ ದೇಶ ಎಂಬ ಹೆಗ್ಗಳಿಕೆ ಭಾರತಕ್ಕೆ ಸಿಕ್ಕಿದೆ.

ಚೀನಾ ಕೂಡಾ ಈ ರೀತಿಯ ಬಾಹ್ಯಾಕಾಶ ಅಬ್ಸವೇಟರಿ ಹೊಂದಿಲ್ಲ. ಯುಎಸ್ಎ, ಯುರೋಪಿಯನ್ ಯೂನಿಯನ್ ಹಾಗೂ ಜಪಾನ್ ಮಾತ್ರ ಬಾಹ್ಯಾಕಾಶದಲ್ಲಿ ತಮ್ಮದೇ ಟೆಲಿಸ್ಕೋಪ್ ಸ್ಥಾಪಿಸಿ ಸಂಶೋಧನೆ ನಡೆಸುತ್ತಿವೆ.

ಆಸ್ಟ್ರೋಸ್ಯಾಟ್ ನಿಂದ ಇಸ್ರೋಗಿರುವ ನಿರೀಕ್ಷೆಗಳು:

* ಕಪ್ಪುರಂಧ್ರ ಹಾಗೂ ಅವಳಿ ನಕ್ಷತ್ರ ಪುಂಜಗಳಲ್ಲಿನ ಶಕ್ತಿ ಪ್ರಕ್ರಿಯೆಯ ಮೇಲೆ ನಿಗಾ ಇರಿಸುವುದು
* ನ್ಯೂಟ್ರಾನ್‌ ನಕ್ಷತ್ರಗಳ ಕಾಂತಕ್ಷೇತ್ರಗಳ ಅಂದಾಜು ಲೆಕ್ಕಾಚಾರ.
* ನಮ್ಮ ಗ್ಯಾಲಕ್ಸಿ ಇಂದ ಆಚೆ ಇರುವ ನಕ್ಷತ್ರ ಪುಂಜಗಳ ಶಕ್ತಿ ಪ್ರಕ್ರಿಯೆಮ್ ನಕ್ಷತ್ರಗಳ ಹುಟ್ಟಿನ ಬಗ್ಗೆ ಅಧ್ಯಯನ
* ಆಕಾಶದಲ್ಲಿರುವ ಅತಿ ಪ್ರಬಲ ಎಕ್ಸರೇ ಕಿರಣ ಪತ್ತೆ ಕಾರ್ಯ
* ನೇರಳಾತೀತ ಪ್ರದೇಶದಲ್ಲಿ ಬ್ರಹ್ಮಾಂಡ ಕುರಿತ ಸೀಮಿತ ಕ್ಷೇತ್ರ ಸಮೀಕ್ಷೆ ಹಾಗೂ ಅಧ್ಯಯನ

ಇದಲ್ಲದೆ, ವಿವಿಧ ಆಕಾಶಕಾಯಗಳ ರಚನೆ ವಿನ್ಯಾಸ ವಿವರಗಳು, ಕಪ್ಪುರಂಧ್ರ, ಧೂಮಕೇತು, ಗ್ರಹಗಳು, ನಕ್ಷತ್ರಗಳು ಸೇರಿದಂತೆ ವಿವಿಧ ಆಕಾಶಕಾಯಗಳ ಮೇಲೆ ಸದಾ ನಿಗಾ ಇಡಲು ನಮ್ಮದೇ ಆದ ಒಂದು ಸಾಧನೆ ನಮಗಾಗಿ ಬಾಹ್ಯಾಕಾಶದಲ್ಲಿ ಸದಾಕಾಲ ಕಾರ್ಯನಿರ್ವಹಿಸಲಿದೆ.

ಭಾರತದಲ್ಲಿ ಭೂ ಸ್ಥಿರ ಟೆಲಿಸ್ಕೋಪ್ ಗಳನ್ನು ಪುಣೆ ಹಾಗೂ ಲಡಾಕ್ ನಲ್ಲಿ ಹೊಂದಿದೆ. ಈ ಟೆಲಿಸ್ಕೋಪ್ ಗಳು ರೇಡಿಯೋ ತರಂಗಗಳು ಹಾಗೂ ಇನ್ ಫ್ರಾ ರೆಡ್ ಕಿರಣಗಳನ್ನು ಮಾತ್ರ ಗುರುತಿಸಬಲ್ಲುದು. ಹೆಚ್ಚಿನ ಫ್ರಿಕ್ವೆನ್ಸಿಯಲ್ಲಿರುವ ಅತಿನೇರಳೆ ವಿಕಿರಣ(UV rays), ಎಕ್ಸ್ ರೇ ಹಾಗೂ ಗಾಮಾ ರೇ ಗಳನ್ನು ಗುರುತಿಸಲು ತಡೆಗಟ್ಟಲು ಬೇಕಾದ ಮಾಹಿತಿ ಪಡೆಯಲು ಇತರೆ ದೇಶ ಹೆಚ್ಚಾಗಿ ನಾಸಾದ ಮೊರೆ ಹೋಗಬೇಕಿತ್ತು. ಅದರೆ, ಈಗ ಯಾವುದೇ ನಕ್ಷತ್ರಗಳಿಂದ ಬರುವ ಕಿರಣಗಳು ಭೂಮಿಯ ವಾತಾವರಣದ ಒಳಹೊಕ್ಕುವ ಮುಂಚೆಯೇ ಮಾಹಿತಿ ಸಿಗುತ್ತದೆ.

English summary
India launches its first dedicated space observatory ASTROSTAT. PSLV rocket, carrying seven satellites, including India's first space observatory, blasted off from here on Monday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X