ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉದ್ಯಮ ಸ್ನೇಹಿ ಸೂಚ್ಯಂಕದಲ್ಲಿ 23 ಸ್ಥಾನಗಳ ಜಿಗಿತ ಕಂಡ ಭಾರತ

|
Google Oneindia Kannada News

ಉದ್ಯಮ ಸ್ನೇಹಿ ಸೂಚ್ಯಂಕದಲ್ಲಿ ಭಾರತವು 23 ಸ್ಥಾನಗಳ ಜಿಗಿತ ಕಂಡಿದೆ. ಸುಲಭವಾಗಿ ವ್ಯಾಪಾರ ಮಾಡಬಹುದಾದ ದೇಶಗಳ ಸೂಚ್ಯಂಕವನ್ನು ವಿಶ್ವಬ್ಯಾಂಕ್ ಬುಧವಾರ ಬಿಡುಗಡೆ ಮಾಡಿದೆ. ಇದರಲ್ಲಿ 2018ನೇ ಸಾಲಿನಲ್ಲಿ 190 ರಾಷ್ಟ್ರಗಳ ಪೈಕಿ ಭಾರತವು 77ನೇ ಸ್ಥಾನವನ್ನು ತಲುಪಿದೆ.

ಕಳೆದ ವರ್ಷ ಭಾರತವು 100ನೇ ಸ್ಥಾನದಲ್ಲಿತ್ತು. 2015 ಹಾಗೂ 2016ರಲ್ಲಿ 130ನೇ ಸ್ಥಾನದಲ್ಲಿತ್ತು. ವ್ಯಾಪಾರ ಮಾಡಲು ಅನುಕೂಲ ವಾತಾವರಣ ಇರುವ ಸೂಚ್ಯಂಕದ ಸಾಲಿನಲ್ಲಿ ಭಾರತವು ನಿರಂತರವಾಗಿ ಏರಿಕೆ ಕಾಣುತ್ತಿದೆ. ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರಕ್ಕೆ ಇದು ಶುಭ ಸುದ್ದಿಯಾಗಿ ಪರಿಣಮಿಸಲಿದೆ ಎಂದು ಅಂದಾಜು ಮಾಡಲಾಗಿದೆ.

ರೈತರ ಶ್ರಮಕ್ಕೆ ಕೇಂದ್ರ ಸರಕಾರದಿಂದ ಬೆಂಬಲ ಬೆಲೆಯ ಬೆನ್ನೆಲುಬುರೈತರ ಶ್ರಮಕ್ಕೆ ಕೇಂದ್ರ ಸರಕಾರದಿಂದ ಬೆಂಬಲ ಬೆಲೆಯ ಬೆನ್ನೆಲುಬು

ಏಕೆಂದರೆ, ಮುಂದಿನ ವರ್ಷ ನಡೆಯುವ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ವಿರೋಧ ಪಕ್ಷದ ಧ್ವನಿ ಅಡಗಿಸಲು ಇದರಿಂದ ಸಹಾಯ ಆಗುತ್ತದೆ ಎನ್ನಲಾಗುತ್ತದೆ. ಭಾರತದಲ್ಲಿ ಉದ್ಯಮ ಆರಂಭಕ್ಕೆ ಹಾಗೂ ನಡೆಸಲು ಇರುವ ಮಾನದಂಡಗಳ ಪೈಕಿ 10ರಲ್ಲಿ 6 ಭಾರತದಲ್ಲಿ ಉತ್ತಮ ಬೆಳವಣಿಗೆ ಕಂಡಿವೆ.

India jump 23 place, moves to 77th rank in Ease of Doing Business Index

ಉದ್ಯಮ ಆರಂಭಕ್ಕೆ ಅನುಕೂಲ, ನಿರ್ಮಾಣ ಅನುಮತಿ, ವಿದ್ಯುತ್ ಸಂಪರ್ಕ ಪಡೆಯುವುದು, ಸಾಲ ಪಡೆಯುವುದು, ತೆರಿಗೆ ಪಾವತಿ, ಗಡಿಯಾಚೆಗೆ ವ್ಯಾಪಾರ, ಒಪ್ಪಂದಗಳ ಜಾರಿ ಹಾಗೂ ಉದ್ಯಮ ಸ್ಥಗಿತಗೊಳಿಸುವಾಗಿನ ನಿಯಮಗಳು...ಇವೆಲ್ಲವನ್ನೂ ಮಾನದಂಡವಾಗಿ ಪರಿಗಣಿಸಲಾಗಿದೆ.

2014ರಲ್ಲಿ ಮೋದಿ ನೇತೃತ್ವದ ಸರಕಾರ ಅಧಿಕಾರಕ್ಕೆ ಬರುವ ವೇಳೆ 190 ರಾಷ್ಟ್ರಗಳ ಪೈಕಿ ಭಾರತವು 142ನೇ ಸ್ಥಾನದಲ್ಲಿತ್ತು.

English summary
India jumped 23 positions in the World Bank's Ease of Doing Business Index on Wednesday. It is now ranked 77 out of 190 countries in 2018. India was ranked 100th last year and 130th in 2016 and 2015.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X