ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಧೂಮಪಾನಿಗಳ ಸಂಖ್ಯೆ: ಚೀನಾದ ಹಿಂದೆಯೇ ಇದೆ ಭಾರತ!

|
Google Oneindia Kannada News

ನವದೆಹಲಿ, ಮೇ 31: ಜನಸಂಖ್ಯೆಯಲ್ಲಿ ಚೀನಾವನ್ನು ಹಿಂದಿಕ್ಕುವ ರಭಸದಲ್ಲಿರುವ ಭಾರತ, ಧೂಮಪಾನಿಗಳ ಸಂಖ್ಯೆಯ ವಿಚಾರದಲ್ಲಿಯೂ ಚೀನಾವನ್ನು ಹಿಂಬಾಲಿಸುತ್ತಿದೆ.

15 ವರ್ಷ ಮತ್ತು ಅದಕ್ಕಿಂತ ಮೇಲ್ಪಟ್ಟ ಜಗತ್ತಿನ 1.1 ಬಿಲಿಯನ್ ಧೂಮಪಾನಿಗಳಲ್ಲಿ ಭಾರತೀಯರ ಧೂಮಪಾನಿಗಳ ಸಂಖ್ಯೆ 106 ಮಿಲಿಯನ್‌ನಷ್ಟಿದೆ. ಚೀನಾದ ನಂತರದ ಸ್ಥಾನವನ್ನು ಭಾರತ ಗಳಿಸಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ವರದಿ ತಿಳಿಸಿದೆ.

ವಿಶ್ವ ತಂಬಾಕು ರಹಿತ ದಿನ: ತಂಬಾಕು ನಿಮ್ಮ ಬದುಕು ಕಸಿಯದಿರಲಿ...ವಿಶ್ವ ತಂಬಾಕು ರಹಿತ ದಿನ: ತಂಬಾಕು ನಿಮ್ಮ ಬದುಕು ಕಸಿಯದಿರಲಿ...

ಮೂರನೇ ಸ್ಥಾನದಲ್ಲಿರುವ ಇಂಡೋನೇಷ್ಯಾದಲ್ಲಿ 74 ಮಿಲಿಯನ್ ಧೂಮಪಾನಿಗಳಿದ್ದಾರೆ. ವಿಶ್ವದ 367 ಮಿಲಿಯನ್ ಹೊಗೆರಹಿತ ತಂಬಾಕು ಬಳಕೆದಾರರ ಪೈಕಿ 200 ಮಿಲಿಯನ್‌ನಷ್ಟು ಮಂದಿ ಭಾರತದಲ್ಲಿಯೇ ಇದ್ದಾರೆ ಎಂದು ಈ ವರದಿ ಅಂದಾಜಿಸಿದೆ.

India is second to china in number of smokers

15 ವರ್ಷ ಮತ್ತು ಅದಕ್ಕಿಂತ ಮೇಲ್ಪಟ್ಟ ಕನಿಷ್ಠ 367 ಮಿಲಿಯನ್ ಜನರು ಸಿಗರೇಟು, ಬೀಡಿ ಮುಂತಾದವುಗಳಲ್ಲದೆ ತಂಬಾಕನ್ನು ಬಳಕೆ ಮಾಡುತ್ತಿದ್ದಾರೆ. ತಂಬಾಕು ಬಳಕೆದಾರರಲ್ಲಿ ಪುರುಷರ ಸಂಖ್ಯೆ (237 ಮಿಲಿಯನ್‌) ಮಹಿಳೆಯರ (129 ಮಿಲಿಯನ್‌) ಸಂಖ್ಯೆಗಿಂತ ಹೆಚ್ಚಿದೆ ಎಂದು ಡಬ್ಲ್ಯೂಎಚ್‌ಒ ಅಂದಾಜಿಸಿದೆ.

ಹೊಗೆರಹಿತ ತಂಬಾಕು ಬಳಕೆ ಎಲ್ಲ ಪ್ರದೇಶಗಳಲ್ಲಿ ಇದ್ದರೂ, ಆಗ್ನೇಯ ಏಷ್ಯಾ ಪ್ರದೇಶದಲ್ಲಿ ಅತಿ ಹೆಚ್ಚು ಪ್ರಮಾಣದಲ್ಲಿ (301 ಮಿಲಿಯನ್) ಬಳಕೆದಾರರಿದ್ದು, ಇದು ಜಗತ್ತಿನ ಎಲ್ಲ ಬಳಕೆದಾರರ ಶೇ 82ರಷ್ಟಾಗಿದೆ.

ಧೂಮಪಾನ ತ್ಯಜಿಸಲು ನಿಕೋಟೀನ್ ಬದಲಿ ಚಿಕಿತ್ಸೆಧೂಮಪಾನ ತ್ಯಜಿಸಲು ನಿಕೋಟೀನ್ ಬದಲಿ ಚಿಕಿತ್ಸೆ

15 ಮತ್ತು ಅದಕ್ಕಿಂತ ಮೇಲಿನ ವಯಸ್ಸಿನ ಜನರಲ್ಲಿನ ತಂಬಾಕು ಬಳಕೆಯನ್ನು ಶೇ 30ರಷ್ಟು ತಗ್ಗಿಸುವ ಮೂಲಕ ತಂಬಾಕು ಕಾರಣದಿಮದ ಸಂಭವಿಸುವ ಕಾಯಿಲೆಗಳು ಮತ್ತು ಸಾವಿನ ಪ್ರಮಾಣವನ್ನು ಕಡಿಮೆ ಮಾಡುವ ಉದ್ದೇಶ ತೀವ್ರ ಹಿನ್ನಡೆ ಅನುಭವಿಸಿದೆ. ಈಗಿನ ಸನ್ನಿವೇಶವೇ ಮುಂದುವರಿದರೆ 2025ರ ವೇಳೆಗೆ ಶೇ 22ರಷ್ಟು ಸಾಧನೆ ಮಾತ್ರ ಸಾಧ್ಯ ಎನ್ನಲಾಗಿದೆ.

2000ನೇ ಇಸವಿಯಿಂದಲೂ ತಂಬಾಕು ಬಳಕೆ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿದೆ. ಆದರೆ ತಂಬಾಕು ಸಂಬಂಧಿ ಕಾಯಿಲೆಗಳಿಂದ ಜನರನ್ನು ರಕ್ಷಿಸುವ ಜಾಗತಿಕ ಗುರಿಯನ್ನು ತಲುಪುವಲ್ಲಿ ವಿಫಲವಾಗಿದ್ದೇವೆ.

ಪ್ರತಿ ವರ್ಷ ಜಗತ್ತಿನಲ್ಲಿ 7 ಮಿಲಿಯನ್ ಜನರು ತಂಬಾಕಿಗೆ ಬಲಿಯಾಗುತ್ತಿದ್ದಾರೆ. 2000ರಲ್ಲಿ ತಂಬಾಕು ಬಳಸುವವರ ಸಂಖ್ಯೆ ಶೇ 27 ರಷ್ಟಿದ್ದರೆ 2016ರಲ್ಲಿ ಶೇ 20ರಷ್ಟಿತ್ತು ಎಂದು ಡಬ್ಲ್ಯೂಎಚ್‌ಒದ ಹೊಸ ಜಾಗತಿಕ ವರದಿ ತಿಳಿಸಿದೆ.

ತಂಬಾಕು ಬಳಕೆ ಮತ್ತು ಪರೋಕ್ಷವಾಗಿ ಧೂಮಪಾನಿಗಳಾಗುವವರು ಹೃದಯಾಘಾತ, ಪಾರ್ಶ್ವವಾಯುವಿನಂತಹ ಹೃದಯ ಸಂಬಂಧಿ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ. ಇವರ ಪ್ರಮಾಣ ವರ್ಷಕ್ಕೆ 3 ಮಿಲಿಯನ್‌ನಷ್ಟಿದೆ.

English summary
India is in the second place in terms of number of smokers aged 15 or above. China is in the first place and Indonesia is in third. There are 106 millions of people in India who used to smoke.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X