ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದಲ್ಲಿರುವ ಹುಲಿಗಳ ಗಣತಿ ಲೆಕ್ಕ ಪ್ರಕಟಿಸಿದ ಪ್ರಧಾನಿ ಮೋದಿ

|
Google Oneindia Kannada News

ನವದೆಹಲಿ, ಜುಲೈ 29: ಬಹು ನಿರೀಕ್ಷಿತ ಅಖಿಲ ಭಾರತ ಹುಲಿ ಗಣತಿ 2018 ಅಂದಾಜು ಲೆಕ್ಕವನ್ನು ಪ್ರಧಾನಿ ಮೋದಿ ಅವರು ಸೋಮವಾರದಂದು ಪ್ರಕಟಿಸಿದ್ದಾರೆ.

"ಇತ್ತೀಚಿನ ಹುಲಿ ಗಣತಿಯಂತೆ ಭಾರತ ಹುಲಿಗಳಿಗೆ ಸುರಕ್ಷಿತ ತಾಣ ಎಂಬುದು ಸ್ಪಷ್ಟವಾಗುತ್ತದೆ, 2010ರಲ್ಲಿ ಹುಲಿಗಳ ಸಂಖ್ಯೆಯನ್ನು ದ್ವಿಗುಣಗೊಳಿಸುವ ಬಗ್ಗೆ ನಿರ್ಧಾರ ಕೈಗೊಳ್ಳಲಾಯಿತು, 2022ರಲ್ಲಿ ಗುರಿಯನ್ನು ಮುಟ್ಟಲಾಗುವುದು" ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ದೇಶದ ಹುಲಿಗಳ ಸಂಖ್ಯೆಯಲ್ಲಿ ಕರ್ನಾಟಕವೇ ನಂ.1 ದೇಶದ ಹುಲಿಗಳ ಸಂಖ್ಯೆಯಲ್ಲಿ ಕರ್ನಾಟಕವೇ ನಂ.1

ನಾಲ್ಕು ವರ್ಷಗಳ ಹುಲಿ ಗಣತಿ ವರದಿ ಬಿಡುಗಡೆ ಮಾಡಿ ಮಾತನಾಡಿದ ಮೋದಿ, "9 ವರ್ಷಗಳ ಹಿಂದೆ ಸೇಂಟ್ ಪೀಟರ್ಸ್​ಬರ್ಗ್ ನಲ್ಲಿ ಆಯಾ ದೇಶದಲ್ಲಿರುವ ಹುಲಿಗಳ ಸಂಖ್ಯೆಯನ್ನು ದ್ವಿಗುಣಗೊಳಿಸಬೇಕು ಎಂದು ನಿರ್ಧರಿಸಲಾಗಿತ್ತು. ಈ ಗುರಿಯನ್ನು ನಾವು ಕೇವಲ ನಾಲ್ಕು ವರ್ಷಗಳಲ್ಲಿ ಸಾಧಿಸಿದ್ದೇವೆ" ಎಂದರು. ತಮಿಳುನಾಡಿನ ಸತ್ಯಮಂಗಲಂ ಹುಲಿ ಸಂರಕ್ಷಣಾ ವಿಭಾಗಕ್ಕೆ ಈ ಬಾರಿಯ ಪ್ರಶಸ್ತಿಯನ್ನು ಮೋದಿ ಅವರು ಪ್ರದಾನ ಮಾಡಿದ್ದಾರೆ.

ಭಾರತದಲ್ಲಿ 2967 ಹುಲಿಗಳಿವೆ

ಭಾರತದಲ್ಲಿ 2967 ಹುಲಿಗಳಿವೆ

ಜಗತ್ತಿನ ಒಟ್ಟು ಹುಲಿಗಳ ಸಂಖ್ಯೆಯಲ್ಲಿ ಭಾರತದಲ್ಲೇ ಶೇಕಡಾ 57 ರಷ್ಟಿದೆ. ವಿಶ್ವದಲ್ಲಿರುವ ಹುಲಿಗಳ ಸಂಖ್ಯೆ ಒಟ್ಟು 3,890 ಹುಲಿಗಳದ್ದು ಇವುಗಳ ಪೈಕಿ ಭಾರತದಲ್ಲಿ 2967 ಹುಲಿಗಳಿವೆ.

ಭಾರತದಲ್ಲಿ 2006ರಲ್ಲಿ 1,411 ಹುಲಿ, 2010ರಲ್ಲಿ 1,706, 2014ರಲ್ಲಿ 2,226, 2018ರಲ್ಲಿ 2,967 ಹುಲಿಗಳಿರುವುದು ಪತ್ತೆಯಾಗಿವೆ. ಅಂದಾಜು 3 ಸಾವಿರ ಹುಲಿಗಳಿಗೆ ಭಾರತದ ಅರಣ್ಯಗಳು ಆಶ್ರಮ ಒದಗಿಸಿವೆ ಎಂದು ಅಂಕಿ ಅಂಶದಿಂದ ತಿಳಿದು ಬಂದಿದೆ.
ಮಧ್ಯಪ್ರದೇಶ

ಮಧ್ಯಪ್ರದೇಶ "ಟೈಗರ್ ರಾಜ್ಯ"

ವಿಶ್ವದಲ್ಲಿರುವ ಹುಲಿಗಳ ಸಂಖ್ಯೆ ಒಟ್ಟು 3,890 ಹುಲಿಗಳದ್ದು ಇವುಗಳ ಪೈಕಿ ಭಾರತದಲ್ಲಿ 2,967 ಹುಲಿಗಳಿವೆ. ಮಧ್ಯಪ್ರದೇಶದಲ್ಲಿ 526 ಹುಲಿಗಳಿದ್ದು ಅಗ್ರಸ್ಥಾನಕ್ಕೇರಿದೆ. ಕರ್ನಾಟಕದಲ್ಲಿ ಹುಲಿಗಳ ಸಂಖ್ಯೆ 524ಹುಲಿಗಳಿದ್ದು, ಕಡಿಮೆ ಅಂತರದಲ್ಲಿ ಎರಡನೇ ಸ್ಥಾನಕ್ಕೆ ಕುಸಿದಿದೆ. 442 ಹುಲಿಗಳೊಂದಿಗೆ ಉತ್ತರಾಖಂಡ್ ಮೂರನೇ ಸ್ಥಾನದಲ್ಲಿದೆ.

2014ರಲ್ಲಿ ಕರ್ನಾಟಕದಲ್ಲಿ 406 ಹುಲಿ

2014ರಲ್ಲಿ ಕರ್ನಾಟಕದಲ್ಲಿ 406 ಹುಲಿ

ಕಳೆದ ಗಣತಿಯಲ್ಲಿ 2014ರಲ್ಲಿ ಕರ್ನಾಟಕ 406 ಹುಲಿಗಳೊಂದಿಗೆ ಅಗ್ರಸ್ಥಾನದಲ್ಲಿತ್ತು. ಮಧ್ಯಪ್ರದೇಶ 308 ಹುಲಿಗಳೊಂದಿಗೆ 2ನೇ ಸ್ಥಾನದಲ್ಲಿತ್ತು. ಉತ್ತರಾಖಂಡ್ 340 ಹುಲಿ ಹಾಗೂ ತಮಿಳುನಾಡು 229 ಹುಲಿಗಳನ್ನು ಹೊಂದಿದ್ದವು.

ನಾಲ್ಕು ವರ್ಷಗಳಿಗೊಮ್ಮೆ ಹುಲಿ ಗಣತಿ

ನಾಲ್ಕು ವರ್ಷಗಳಿಗೊಮ್ಮೆ ಹುಲಿ ಗಣತಿ

ಹುಲಿ ಗಣತಿ: ನಾಲ್ಕು ವರ್ಷಗಳಿಗೊಮ್ಮೆ ಸುಮಾರು 10 ಕೋಟಿ ರು ವೆಚ್ಚದಲ್ಲಿ 40,000ಕ್ಕೂ ಅಧಿಕ ಅರಣ್ಯ ಸಿಬ್ಬಂದಿ, 4,00,000 ಚದರ ಕಿಲೋ ಮೀಟರ್ ವ್ಯಾಪ್ತಿಯ ಅರಣ್ಯ ಪ್ರದೇಶದಲ್ಲಿ ಹುಲಿಯ ಹೆಜ್ಜೆ ಗುರುತು, 26, 838 ಕ್ಯಾಮೆರಾ ಟ್ರ್ಯಾಪ್ ಮೂಲಕ ಪತ್ತೆ ಹಚ್ಚಿ, ಅಂದಾಜು ಲೆಕ್ಕ ಹಾಕಿ ವರದಿ ತಯಾರಿಸುತ್ತಾರೆ.

English summary
Prime Minister Narendra Modi on Monday released the much-awaited All India Tiger Estimation for the year 2018. The report shows a rise of 33 percent increase in population over the 2014 number of 2,226.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X