ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇವಿಎಂ ಹ್ಯಾಕ್ ಸಾಧ್ಯವಿಲ್ಲ , ಮತಪತ್ರ ಬಳಕೆ ಮಾಡಲ್ಲ: ಸಿಇಸಿ

|
Google Oneindia Kannada News

ನವದೆಹಲಿ, ಜನವರಿ 24: ಭಾರತದಲ್ಲಿ ಬಳಸುವ ಎಲೆಕ್ಟ್ರಾನಿಕ್ ಮತಯಂತ್ರ (ಇವಿಎಂ) ಗಳು ಹ್ಯಾಕ್ ಮಾಡಬಹುದು ಎಂದು ಸ್ವಯಂಘೋಷಿತ ಸೈಬರ್ ತಜ್ಞರೊಬ್ಬರು ಸವಾಲು ಹಾಕಿರುವ ಸಂದರ್ಭದಲ್ಲೇ ಮುಂದಿನ ಚುನಾವಣೆಯಲ್ಲಿ ಮತಪತ್ರ ಬಳಕೆಗೆ ಆಗ್ರಹ ಕೇಳಿ ಬಂದಿದೆ. ಆದರೆ, ಎಲ್ಲಾ ಬೇಡಿಕೆ, ಆಗ್ರಹಗಳನ್ನು ತಳ್ಳಿ ಹಾಕಿರುವ ಕೇಂದ್ರ ಚುನಾವಣಾ ಆಯೋಗ, ಇವಿಎಂ ಸುರಕ್ಷಿತವಾಗಿದ್ದು, ಯಾವುದೇ ಕಾಲಕ್ಕೂ ಮತಪತ್ರಗಳ ಬಳಕೆ ಮಾಡುವುದಿಲ್ಲ ಎಂದು ಗುರುವಾರ(ಜನವರಿ 24)ದಂದು ಸ್ಪಷ್ಟಪಡಿಸಿದೆ.

ಖಾಸಗಿ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡು ಮಾತನಾಡಿರುವ ಕೇಂದ್ರ ಚುನಾವಣಾ ಆಯುಕ್ತ ಸುನಿಲ್​ಅರೋರಾ, "ಯಾವುದೇ ಕಾರಣಕ್ಕೂ ಮತಪತ್ರಗಳನ್ನು ಬಳಸುವುದಿಲ್ಲ. ಮರಳಿ ಮತಪತ್ರಗಳ ಯುಗಕ್ಕೆ ಹೋಗಲು ಸಾಧ್ಯವಿಲ್ಲ ಎಂಬುದನ್ನು ನಾನು ಸ್ಪಷ್ಟಪಡಿಸುತ್ತೇನೆ," ಎಂದು ಅವರು ಹೇಳಿದರು.

India is not going back to paper ballots, says CEC Sunil Arora amid EVM hackathon row

ಇವಿಎಂ ಹ್ಯಾಕ್ ಹೇಳಿಕೆ : ಸೈಯದ್ ವಿರುದ್ಧ ದೂರು ದಾಖಲು ಇವಿಎಂ ಹ್ಯಾಕ್ ಹೇಳಿಕೆ : ಸೈಯದ್ ವಿರುದ್ಧ ದೂರು ದಾಖಲು

"ಮತಯಂತ್ರ ಬಳಕೆ ಹಾಗೂ ವಿವಿಪ್ಯಾಟ್ ಗಳ ಬಳಕೆ ಕುರಿತಂತೆ ಮತದಾರರು, ಪಕ್ಷಗಳ ಯಾವುದೇ ಟೀಕೆ, ಪ್ರತಿಕ್ರಿಯೆಗಳಿಗೆ ನಾವು ಮುಕ್ತರಾಗಿದ್ದೇವೆ. ಆದರೆ ಯಾವುದೇ ಒತ್ತಾಯಕ್ಕೂ ನಾವು ಮಣಿಯುವುದಿಲ್ಲ, ಹಲವು ವರ್ಷಗಳ ಸಂಶೋಧನೆ ಹಾಗೂ ಪ್ರಯತ್ನದ ಫಲವಾಗಿ ಇವಿಎಂ ವ್ಯವಸ್ಥೆ ರೂಪಿಸಲಾಗಿದೆ ಎಂದರು.

ಇವಿಎಂ ಹ್ಯಾಕ್ ಬಗ್ಗೆ ಮಾತನಾಡಿದ ಶುಜಾ ವಿರುದ್ಧ ಎಫ್ಐಆರ್?ಇವಿಎಂ ಹ್ಯಾಕ್ ಬಗ್ಗೆ ಮಾತನಾಡಿದ ಶುಜಾ ವಿರುದ್ಧ ಎಫ್ಐಆರ್?

2014ರ ಲೋಕಸಭೆ ಚುನಾವಣೆ ಹಾಗೂ ಉತ್ತರಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ದಿಗ್ವಿಜಯ ಸಾಧಿಸಲು ಮತಯಂತ್ರಗಳ ದುರುಪಯೋಗವೇ ಕಾರಣ, ಇವಿಎಂ ಹ್ಯಾಕ್ ಮಾಡಿದ್ದರಿಂದ ಬಿಜೆಪಿಗೆ ಲಾಭವಾಯಿತು. ಹಿರಿಯ ಬಿಜೆಪಿ ನಾಯಕ ಗೋಪಿನಾಥ್ ಮುಂಡೆ ಅವರು ಈ ರಹಸ್ಯವನ್ನು ಹೊರಹಾಕುವ ಭೀತಿ ಎದುರಾಗಿದ್ದರಿಂದ ಅವರನ್ನು ಹತ್ಯೆ ಮಾಡಲಾಯಿತು ಎಂದು ಸೈಬರ್ ತಜ್ಞ ಶುಜಾ ಅವರು ಲಂಡನ್ನಿನ ಹ್ಯಾಕಥಾನ್ ನಲ್ಲಿ ನೀಡಿದ ವಿವರಗಳನ್ನು ಚುನಾವಣಾ ಆಯೋಗದ ಮುಖ್ಯಸ್ಥ ಸುನಿಲ್ ಅವರು ತಳ್ಳಿ ಹಾಕಿದ್ದಾರೆ. ಶುಜಾ ಅವರು ಇಸಿಐಎಲ್ ನ ಉದ್ಯೋಗಿಯಾಗಿರಲೇ ಇಲ್ಲ ಎಬುದು ಸಾಬೀತಾಗಿದೆ ಎಂದು ಹೇಳಿದರು.

English summary
Amid EVM hackathon row, Chief Election Commissioner (CEC) Sunil Arora has said that elections will continue to be held through electronic voting machines (EVMs) and the country will not return to ballot papers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X