ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗಣರಾಜ್ಯೋತ್ಸವಕ್ಕೆ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಅತಿಥಿ

|
Google Oneindia Kannada News

ನವದೆಹಲಿ, ಡಿಸೆಂಬರ್ 2: ಮುಂದಿನ ವರ್ಷದ ಜನವರಿ 26ರಂದು ನಡೆಯುವ ಗಣರಾಜ್ಯೋತ್ಸವ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಅವರು ಆಗಮಿಸುವ ನಿರೀಕ್ಷೆಯಿದೆ. ನವೆಂಬರ್ 27ರಂದು ನಡೆದ ದೂರವಾಣಿ ಮಾತುಕತೆಯ ವೇಳೆ ಬೋರಿಸ್ ಅವರನ್ನು ಅತಿಥಿಯಾಗಿ ಆಗಮಿಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ಔಪಚಾರಿಕವಾಗಿ ಆಹ್ವಾನ ನೀಡಿದ್ದರು.

ಹಾಗೆಯೇ ಮುಂದಿನ ವರ್ಷ ಬ್ರಿಟನ್‌ನಲ್ಲಿ ನಡೆಯಲಿರುವ ಜಿ-7 ಶೃಂಗಸಭೆಗೆ ಮೋದಿ ಅವರನ್ನು ಬೋರಿಸ್ ಜಾನ್ಸನ್ ಆಹ್ವಾನಿಸಿದರು ಎಂದು ಮೂಲಗಳು ತಿಳಿಸಿವೆ.

ನರೇಂದ್ರ ಮೋದಿ-ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಮಹತ್ವದ ಮಾತುಕತೆನರೇಂದ್ರ ಮೋದಿ-ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಮಹತ್ವದ ಮಾತುಕತೆ

1993ರಲ್ಲಿ ನಡೆದ ಗಣರಾಜ್ಯೋತ್ಸವ ಪಥಸಂಚಲನದಲ್ಲಿ ಆಗಿನ ಬ್ರಿಟನ್ ಪ್ರಧಾನಿ ಜಾನ್ ಮೇಜರ್ ಪಾಲ್ಗೊಂಡಿದ್ದರು. ಅದರ ಬಳಿಕ ಇದುವರೆಗೂ ಬ್ರಿಟನ್‌ನ ಯಾವ ಪ್ರಧಾನಿಯೂ ಅತಿಥಿಯಾಗಿ ಆಗಮಿಸಿರಲಿಲ್ಲ. ಬ್ರಿಟನ್ ಈಗಷ್ಟೇ ಐರೋಪಿಯನ್ ಒಕ್ಕೂಟದಿಂದ ಹೊರಬಂದಿದ್ದು, ಜಗತ್ತಿನ ಎಲ್ಲ ದೇಶಗಳ ಜತೆಗೆ ಹೊಸದಾಗಿ ಒಪ್ಪಂದಗಳನ್ನು ಮಾಡಿಕೊಳ್ಳಲು ಎದುರು ನೋಡುತ್ತಿದೆ. ಅತ್ತ ಅಮೆರಿಕದ ನೂತನ ಅಧ್ಯಕ್ಷ ಜೋ ಬೈಡನ್ ಆಡಳಿತದ ಜತೆಗೆ ವಿಶೇಷ ಸಂಬಂಧ ಬೆಳೆಸಲು ಸಮಯ ತೆಗೆದುಕೊಳ್ಳುತ್ತದೆ.

India Invites UK PM Boris Johnson As Chief Guest For Republic Day 2021

ಈ ನಿಟ್ಟಿನಲ್ಲಿ ಮೋದಿ ಅವರು ಬ್ರಿಟನ್ ಪ್ರಧಾನಿಯನ್ನು ಭಾರತಕ್ಕೆ ಆಹ್ವಾನಿಸಿರುವುದು ಉತ್ತಮ ಯೋಜಿತ ನಡೆಯಾಗಿದೆ ಎಂದು ರಾಜತಾಂತ್ರಿಕರು ಅಭಿಪ್ರಾಯಪಟ್ಟಿದ್ದಾರೆ.

ನ. 27ರಂದು ಬೋರಿಸ್ ಜಾನ್ಸನ್ ಅವರೊಂದಿಗೆ ದೂರವಾಣಿ ಮಾತುಕತೆ ನಡೆಸಿದ್ದ ಪ್ರಧಾನಿ ನರೇಂದ್ರ ಮೋದಿ ಅವರು, ಮುಂದಿನ ದಶಕದಲ್ಲಿ ಭಾರತ-ಬ್ರಿಟನ್ ಸಂಬಂಧವನ್ನು ವೃದ್ಧಿಪಡಿಸುವ ಮಹತ್ವಾಕಾಂಕ್ಷಿ ಯೋಜನೆಯ ಕುರಿತು ಉತ್ತಮ ಚರ್ಚೆ ನಡೆಸಿದ್ದಾಗಿ ತಿಳಿಸಿದ್ದರು.

'ನನ್ನ ಸ್ನೇಹಿತ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಅವರೊಂದಿಗೆ ಉತ್ತಮ ಚರ್ಚೆ ನಡೆಸಿದೆ. ಇದು ಮುಂದಿನ ದಶಕಕ್ಕೆ ಭಾರತ-ಬ್ರಿಟನ್ ಸಂಬಂಧದ ಮಹತ್ವಾಕಾಂಕ್ಷಿ ರಹದಾರಿಯಾಗಲಿದೆ. ವ್ಯಾಪಾರ ಮತ್ತು ಹೂಡಿಕೆ, ರಕ್ಷಣೆ ಮತ್ತು ಭದ್ರತೆ, ಹವಾಮಾನ ವೈಪರೀತ್ಯ ಮತ್ತು ಕೋವಿಡ್ 19 ವಿರುದ್ಧದ ಹೋರಾಟ ಸೇರಿದಂತೆ ಎಲ್ಲ ವಿಭಾಗಗಳಲ್ಲಿಯೂ ನಮ್ಮ ಸಹಕಾರವನ್ನು ದೊಡ್ಡ ಮಟ್ಟದಲ್ಲಿ ಹೆಚ್ಚಿಸುವ ನಿಟ್ಟಿನಲ್ಲಿ ಕೆಲಸ ಮಾಡಲು ನಾವು ಒಪ್ಪಿಕೊಂಡಿದ್ದೇವೆ' ಎಂದು ಮೋದಿ ಟ್ವೀಟ್ ಮಾಡಿದ್ದರು.

'ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಅವರು, ಹವಾಮಾನ ವೈಪರೀತ್ಯ ಮತ್ತು ಆರೋಗ್ಯ ವಲಯ ಸೇರಿದಂತೆ ಭಾರತ ಮತ್ತು ಬ್ರಿಟನ್ ನಡುವಿನ ಸಂಬಂಧವನ್ನು ತೀವ್ರಗೊಳಿಸುವ ಮತ್ತು ಬಲಪಡಿಸಲು 2021ರ ವರ್ಷವನ್ನು ತಳಹದಿಯನ್ನಾಗಿ ಬಳಸಿಕೊಳ್ಳುವುದಾಗಿ ತಿಳಿಸಿದ್ದರು.

English summary
India invites UK PM Boris Johnson as chief guest for Republic Day 2021
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X