ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗಣರಾಜ್ಯೋತ್ಸವ ಸಮಾರಂಭಕ್ಕೆ ಟ್ರಂಪ್ ಮುಖ್ಯ ಅತಿಥಿ?

By Mahesh
|
Google Oneindia Kannada News

ನವದೆಹಲಿ, ಜುಲೈ 13: ಭಾರತದ ಗಣರಾಜ್ಯೋತ್ಸವ(ಜನವರಿ 26) ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳುವಂತೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಅಧಿಕೃತ ಆಹ್ವಾನ ಕಳಿಸಲಾಗಿದೆ. ಆದರೆ, ಈ ಬಗ್ಗೆ ಯುಎಸ್ ಆಡಳಿತ ಇನ್ನೂ ತನ್ನ ನಿರ್ಧಾರ ಪ್ರಕಟಿಸಿಲ್ಲ.

ಕಳೆದ ಏಪ್ರಿಲ್​ ತಿಂಗಳಿನಲ್ಲೇ ವೈಟ್​ ಹೌಸ್​ಗೆ ಅಧಿಕೃತ ಆಹ್ವಾನವನ್ನು ಕಳುಹಿಸಲಾಗಿದೆ. ಇದಕ್ಕೆ ವೈಟ್​ಹೌಸ್​ ಸಕಾರಾತ್ಮಕವಾಗಿ ಪ್ರತಿಕ್ರಿಯಿಸುವ ನಿರೀಕ್ಷೆಯಿದ್ದು, ಟ್ರಂಪ್​ ಭಾರತಕ್ಕೆ ಭೇಟಿ ನೀಡುವ ಸಾಧ್ಯತೆ ಇದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.

ಜುಲೈ 16ರಂದು ಬಹುನಿರೀಕ್ಷಿತ ಪುಟಿನ್-ಟ್ರಂಪ್ ಭೇಟಿಜುಲೈ 16ರಂದು ಬಹುನಿರೀಕ್ಷಿತ ಪುಟಿನ್-ಟ್ರಂಪ್ ಭೇಟಿ

2015ರಲ್ಲಿ ಅಂದಿನ ಅಮೆರಿಕ ಅಧ್ಯಕ್ಷ ಬರಾಕ್​ ಒಬಾಮಾ ಅವರು ಗಣರಾಜ್ಯೋತ್ಸವ ಪರೇಡ್​ನಲ್ಲಿ ಪಾಲ್ಗೊಂಡಿದ್ದರು. ಟ್ರಂಪ್ ಅವರು ಭಾಗವಹಿಸಿದರೆ ಈ ಗೌರವ ಪಡೆಯಲಿರುವ ಅಮೆರಿಕದ 2ನೇ ಅಧ್ಯಕ್ಷ ಎನಿಸಲಿದ್ದಾರೆ.

India invites Donald Trump to be chief guest at next year’s Republic Day

2016ರಲ್ಲಿ ಫ್ರಾನ್ಸ್​ನ ಅಧ್ಯಕ್ಷ ಫ್ರಾಂಕೋಸಿಸ್​ ಹೊಲಾಂಡೆ, 2017ರಲ್ಲಿ ಯುನೈಟೆಡ್ ಅರಬ್​ ಎಮಿರೇಟ್ಸ್​ನ ಶೇಕ್​ ಮೊಹಮ್ಮದ್​ ಬಿನ್​ ಜಯಾದ್​ ಅಲ್​ ನಹ್ಯಾನ್​ ಅಲ್ಲದೆ 2017ರ ಜನವರಿಯಲ್ಲಿ ಆಸಿಯಾನ್​ ರಾಷ್ಟ್ರಗಳ 10 ನಾಯಕರನ್ನು ಮೋದಿ ಸರ್ಕಾರ ಆಹ್ವಾನಿಸಿದ್ದನ್ನು ಇಲ್ಲಿ ಸ್ಮರಿಸಬಹುದು. ಟ್ರಂಪ್ ಅವರ ಭಾರತ ಭೇಟಿ ಸಂದರ್ಭದಲ್ಲಿ ತೈಲ ಬೆಲೆ ಏರಿಳಿತದ ಬಗ್ಗೆ ಮಾತುಕತೆ ನಡೆಸುವ ನಿರೀಕ್ಷೆಯಿದೆ.

English summary
India invites Donald Trump to be chief guest at next year’s Republic Day. India still awaiting an official response from the US, the letter is said to hav indicated to the Indian government in the few weeks that the Trump administration is favourably considering the invite sent by India April this year.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X