ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯುಕೆ- ಭಾರತ ಪ್ರಶಸ್ತಿಗಳ ಅಂತಿಮ ಪಟ್ಟಿ ಘೋಷಣೆ; ಜೂನ್ 28ಕ್ಕೆ ವಿತರಣೆ

|
Google Oneindia Kannada News

ಯುಕೆ- ಭಾರತ ಪ್ರಶಸ್ತಿಗಳ ಅಂತಿಮ ಪಟ್ಟಿಯನ್ನು ಗುರುವಾರ ಘೋಷಣೆ ಮಾಡಲಾಗಿದೆ. ಜೂನ್ 24- 28, 2019 ಯುಕೆ- ಭಾರತ ಸಪ್ತಾಹ. ಈ ಸಪ್ತಾಹದ ಪ್ರಮುಖ ಆಕರ್ಷಣೆಗಳಲ್ಲಿ ಪ್ರಶಸ್ತಿ ಕೂಡ ಒಂದು. ಯುಕೆ ಮತ್ತು ಭಾರತದ ಮಧ್ಯೆ ಸಂಬಂಧ ಬೆಸೆಯಲು, ಬೆಳೆಯಲು ಮಹತ್ವದ ಕೊಡುಗೆ ನೀಡಿದ ವ್ಯಕ್ತಿಗಳು ಹಾಗೂ ಸಂಸ್ಥೆಗಳನ್ನು ಗುರುತಿಸಿ, ಗೌರವಿಸುವುದು ಮುಖ್ಯ ಉದ್ದೇಶ.

848 ಭಾರತೀಯ ಕಂಪೆನಿಗಳು ಯುಕೆಯಲ್ಲಿ ಕಾರ್ಯ ನಿರ್ವಹಿಸುತ್ತಿವೆ. ಅವುಗಳಿಂದ ಒಟ್ಟಾರೆ ಆದಾಯ 48 ಬಿಲಿಯನ್ ಯುರೋ ಬಂದಿದೆ. 2018ರಲ್ಲಿ ಈ ಪ್ರಮಾಣ 46.4 ಬಿಲಿಯನ್ ಯುರೋ ಇತ್ತು (ಮೂಲ: ಗ್ರ್ಯಾಂಟ್ ಥೋರ್ನ್ ಟಾನ್ ಇಂಡಿಯಾ ಸಭೆ ಬ್ರಿಟನ್ ಟ್ರ್ಯಾಕರ್ 2019). ಭಾರತದಿಂದ ಕಳೆದ ವರ್ಷ ಹೂಡಿಕೆಯಾದ ಮೊತ್ತಕ್ಕೆ ಹೋಲಿಸಿದರೆ 321% ಏರಿಕೆ ಆಗಿದೆ (ಮೂಲ: ONS).

ಅದರಲ್ಲಿ ಮುಖ್ಯವಾಗಿ ಭಾರತದ ಹೂಡಿಕೆ ಆಗಿರುವುದು ಲಂಡನ್ ಕೇಂದ್ರಿತವಾಗಿ. ಬೇರೆ ಯಾವುದೇ ಯುರೋಪಿಯನ್ ನಗರಕ್ಕಿಂತ ಲಂಡನ್ ನಲ್ಲಿ ಹೆಚ್ಚಿನ ಹೂಡಿಕೆ ಆಗಿದೆ (ಮೂಲ: ಲಂಡನ್ ಅಂಡ್ ಪಾರ್ಟನರ್ಸ್). ಬ್ರೆಕ್ಸಿಟ್ ಆಗಲಿ ಅಥವಾ ಆಗದಿರಲಿ ಯುಕೆ ಜತೆಗೆ ಉತ್ತಮ ಸಂಬಂಧ ಗಟ್ಟಿಗೊಳಿಸಲು ಭಾರತ ಬದ್ಧವಾಗಿದೆ.

 India Inc announces the shortlist for this year’s UK-India Awards

ಈ ಬಾರಿಯ ಯುಕೆ- ಭಾರತ ಪ್ರಶಸ್ತಿಯ ತೀರ್ಪು ನೀಡುವ ಪಟ್ಟಿಯಲ್ಲಿ ಎಲ್ಲರೂ ಮಹಿಳೆಯರೇ ಇದ್ದಾರೆ. ವಾಣಿಜ್ಯ, ತಂತ್ರಜ್ಞಾನ, ಮಾಧ್ಯಮ ಹಾಗೂ ರಾಜಕೀಯ ಹಿನ್ನೆಲೆಗೆ ಸೇರಿದವರಾಗಿದ್ದಾರೆ.

* ರುಥ್ ಡೇವಿಡ್ ಸನ್ ಎಂಪಿ, ಸ್ಕಾಟಿಷ್ ಕನ್ಸರ್ವೆಟಿವ್ ಪಕ್ಷದ ಅಧ್ಯಕ್ಷರು

* ಶಾಲಿನಿ ಅರೋರಾ, ಸಿಇಒ, ಸವನ್ನಾ ವಿಸ್ಡಮ್

* ದೆಬೋರಾ ಡಿ ಅಬ್ನೆ, ನಿರ್ದೇಶಕರು, ರೋಲ್ಸ್ ರಾಯ್ಸ್

* ಪ್ಯಾಟ್ರಿಸಿಯಾ ಹೆವಿಟ್, ಯುಕೆ ಮಾಜಿ ಸಂಪುಟ ಸಚಿವರು

* ಗಿನಾ ಮಿಲ್ಲರ್, ಟ್ರೂ ಅಂಡ್ ಫೇರ್ ಫೌಂಡೇಷನ್ ಸ್ಥಾಪಕರು

* ಫಲ್ಗುಣಿ ನಾಯರ್, Nykaa.com ಸ್ಥಾಪಕರು

ಈ ವರ್ಷ ಮೂವತ್ತೈದು ಸಂಸ್ಥೆಗಳ ಹೆಸರನ್ನು ಅಂತಿಮಗೊಳಿಸಲಾಗಿದ್ದು, ಅವುಗಳಲ್ಲಿ ಈ ಕೆಳಕಂಡವು ಸೇರಿವೆ.

* ಜಾನ್ ಲೆವಿಸ್ ಫೌಂಡೇಷನ್

* ಟೆಕ್ ಯುಕೆ

* ಎನರ್ಜಿ ಎಫಿಷಿಯೆನ್ಸಿ ಸರ್ವೀಸನ್ ಲಿಮಿಟೆಡ್

* ಬಫೆಲೊ ಗ್ರಿಡ್

* ಬೇಕರ್ ಮೆಕ್ ಕೆಂಜಿ

* ದ ಸಾಫ್ಟ್ ಬ್ಯಾಂಕ್ ವಿಷನ್ ಫಂಡ್

* ಪಿಡಬ್ಲ್ಯುಸಿ

ಸಂಪೂರ್ಣ ಪಟ್ಟಿಗೆ ಇಲ್ಲಿ ಕ್ಲಿಕ್ ಮಾಡಿ . ಬ್ರಿಟಿಷ್ ಭಾರತೀಯ ಉದ್ಯಮಿ ಹಾಗೂ ರಾಜಕೀಯ ತಂತ್ರಗಾರಿಕೆ ನಿಪುಣ, ಇಂಡಿಯಾ ಇಂಕ್ ಸ್ಥಾಪಕ ಮನೋಜ್ ಲಾಡ್ವಾ ಮಾತನಾಡಿ, ಯುಕೆ-ಭಾರತದ ಮಧ್ಯೆ ಸೇತುವೆ ನಿರ್ಮಿಸಲು ಶ್ರಮಿಸಿದ ಸಂಸ್ಥೆ ಹಾಗೂ ವ್ಯಕ್ತಿಗಳನ್ನು ಗುರುತಿಸಲು ಈ ಪ್ರಶಸ್ತಿ ನೀಡಲಾಗುತ್ತದೆ. ಅವರೆಲ್ಲ ಶ್ರೀಮಂತ ಕ್ರಿಯಾತ್ಮಕತೆಯನ್ನು ತಂದಿದ್ದಾರೆ ಎಂದಿದ್ದಾರೆ.

ಈ ವರ್ಷದ ನಾಮ ನಿರ್ದೇಶನದಲ್ಲಿ ಕೂಡ ಯಾವುದೆ ವ್ಯತ್ಯಾಸ ಇಲ್ಲ. ಯುಕೆ- ಭಾರತದ ಸಂಬಂಧ ವೃದ್ಧಿಗೆ ಶ್ರಮಿಸಿದವರು, ಸಂಸ್ಥೆಗಳನ್ನೇ ಗುರುತಿಸಲಾಗಿದೆ. ಇದರ ಜತೆಗೆ ಯುಕೆ- ಭಾರತ ಪಾಲುದಾರಿಕೆಯನ್ನು ಮುನ್ನಡೆಸುವುದಕ್ಕೆ ಕೊಡುಗೆ ನೀಡಿದವರಿಗೆ ಸಹ ಗೌರವ ಸಲ್ಲಲಿದೆ. ಯು.ಕೆ.- ಭಾರತ ಪ್ರಶಸ್ತಿಯನ್ನು ಜೂನ್ ಇಪ್ಪತ್ತೆಂಟನೇ ತಾರೀಕಿನಂದು ಲಂಡನ್ ನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಘೋಷಿಸಲಾಗುತ್ತದೆ.

English summary
A key highlight of UK-India Week (24 - 28 June 2019), the UK-India Awards brings together and celebrates the innovative and trailblazing individuals and organisations that are making a significant contribution to the strong global partnership between the UK and India. This year’s UK-India Awards will be judged by an all-women panel.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X