ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊವಿಡ್ ಲಸಿಕೆ ಅಭಿವೃದ್ಧಿ ಕುರಿತು ಮಾಡೆರ್ನಾ ಜತೆ ಭಾರತ ಮಾತುಕತೆ

|
Google Oneindia Kannada News

ನವದೆಹಲಿ, ನವೆಂಬರ್ 17: ಕೊವಿಡ್ ಲಸಿಕೆ ಅಭಿವೃದ್ಧಿ ಕುರಿತು ಮಾಡೆರ್ನಾ ಜತೆ ಭಾರತ ಮಾತುಕತೆ ನಡೆಸಿದೆ.

ಕೊವಿಡ್- ಲಸಿಕೆಯ ಕೊನೆಯ ಹಂತದ ಕ್ಲಿನಿಕಲ್ ಪ್ರಯೋಗಗಳ ಅಧ್ಯಯನಕ್ಕಾಗಿ ಸ್ವತಂತ್ರ ರಾಷ್ಟ್ರೀಯ ಆರೋಗ್ಯ ರಚಿಸಿರುವ ದತ್ತಾಂಶ ಸುರಕ್ಷತಾ ಮಾನಿಟರಿಂಗ್ ಮಂಡಳಿ ಲಸಿಕೆ 94.5 ಪ್ರತಿಶತದಷ್ಟು ಪರಿಣಾಮಕಾರಿತ್ವವನ್ನು ಹೊಂದಿದೆ ಎಂದು ಕಂಡುಹಿಡಿದಿದೆ ಎಂದು ಮಾಡರ್ನ ಸಂಸ್ಥೆ ತಿಳಿಸಿದೆ.

ಭಾರತದಲ್ಲಿ ಹೊಸ ಕೊರೊನಾ ಸೋಂಕಿತ ಪ್ರಕರಣಗಳಲ್ಲಿ ಮತ್ತಷ್ಟು ಇಳಿಕೆಭಾರತದಲ್ಲಿ ಹೊಸ ಕೊರೊನಾ ಸೋಂಕಿತ ಪ್ರಕರಣಗಳಲ್ಲಿ ಮತ್ತಷ್ಟು ಇಳಿಕೆ

ವೈದ್ಯಕೀಯ ಪ್ರಯೋಗಗಳಲ್ಲಿ ಶೇ.94.5ರಷ್ಟು ಪರಿಣಾಮಕಾರಿಯಾಗಿದೆ ಎನ್ನಲಾಗಿರುವ ಕೊವಿಡ್-19 ಲಸಿಕೆ ಅಭಿವೃದ್ಧಿಪಡಿಸಿರುವ ಅಮೆರಿಕ ಮೂಲದ ಬಯೋಟೆಕ್ ಸಂಸ್ಥೆ ಮಾಡೆರ್ನಾ ಸಂಸ್ಥೆಯೊಂದಿಗೆ ಭಾರತ ಮಾತುಕತೆ ನಡೆಸುತ್ತಿದೆ ಎಂದು ಅಧಿಕೃತ ಮೂಲಗಳಿಂದ ತಿಳಿದುಬಂದಿದೆ.

India In Dialogue With Moderna Over Progress In COVID Vaccine Development

ಕೊವಿಡ್ - ಲಸಿಕೆಯ ಕ್ಲಿನಿಕಲ್ ಪ್ರಯೋಗದ ಬಗ್ಗೆ ಮಾಡೆರ್ನಾ ಸಂಸ್ಥೆಯೊಂದಿಗೆ ಮಾತ್ರವಲ್ಲದೇ, ಪಿಫೈಜರ್, ಸೀರಮ್ ಇನ್ಸಿಟ್ಯೂಟ್, ಭಾರತ್ ಬಯೋಟೆಕ್ ಮತ್ತು ಜಿಡಸ್ ಕ್ಯಾಡಿಲಾ ಸಂಸ್ಥೆಗಳೊಂದಿಗೆ ಲಸಿಕೆಯ ಸುರಕ್ಷತೆ, ರೋಗ ನಿರೋಧಕ ಶಕ್ತಿ ವೃದ್ಧಿ, ದಕ್ಷತೆ , ನಿಯಂತ್ರಣ ಕುರಿತಂತೆ ಮಾತುಕತೆ ನಡೆಸುತ್ತಿರುವುದಾಗಿ ಮೂಲಗಳು ಹೇಳಿವೆ.

ಕೊವಿಡ್-19 ನಿಯಂತ್ರಣದಲ್ಲಿ ತಾವು ಅಭಿವೃದ್ಧಿಪಡಿಸಿರುವ ಲಸಿಕೆ ಶೇ. 90 ರಷ್ಟು ಪರಿಣಾಮಕಾರಿಯಾಗಿದೆ ಎಂದು ಪಿಫೈಜರ್ ಮತ್ತು ಬಯೋಟೆಕ್ ಸಂಸ್ಥೆಗಳು ಹೇಳಿದ ಒಂದು ವಾರದೊಳಗೆ ಕೆಂಬ್ರಿಡ್ಡ್ - ಮೆಸಾಚೂಸೆಟ್ಸ್ ಮೂಲದ ಮಾಡರ್ನ ಸಂಸ್ಥೆ , ಕೊವಿಡ್-19 ಲಸಿಕೆ ಅಭಿವೃದ್ಧಿ ಬಗ್ಗೆ ಘೋಷಣೆ ಮಾಡಿದ್ದು, ಅಧಿಕೃತತೆಗಾಗಿ ಜಾಗತಿಕ ನಿಯಂತ್ರಣ ಏಜೆನ್ಸಿಗಳಿಗೆ ಅರ್ಜಿಸಲ್ಲಿಸಲು ಯೋಜನೆ ಮಾಡಿಕೊಂಡಿದೆ.

ಹೊಸ ಔಷಧಿ ಮತ್ತು ಕಾಸ್ ಮೆಟಿಕ್ಸ್ ನಿಯಮ 2019ರ ಪ್ರಕಾರ, ಯಾವುದೇ ಔಷಧ ಅಥವಾ ಲಸಿಕೆಯನ್ನು ಪರೀಕ್ಷಿಸಿದರೆ ಮತ್ತು ಭಾರತದ ಹೊರಗೆ ನಿಯಂತ್ರಣದ ಅನುಮೋದನೆ ಪಡೆದರೆ, ಇಲ್ಲಿ ಅದರ ಸುರಕ್ಷತೆ ನಿಯಂತ್ರಣದ ಬಗ್ಗೆ ಅನುಮೋದನೆಗಾಗಿ ಎರಡು ಹಾಗೂ ಮೂರನೇ ಹಂತದ ಅಧ್ಯಯನಕ್ಕಾಗಿ ಸಮನ್ವಯತೆ ಮಾಡಲಾಗುವುದು ಎಂದು ಮೂಲಗಳು ತಿಳಿಸಿವೆ.

ಅಮೆರಿಕದ ಬಯೋಟೆಕ್ ಫರ್ಮ್ ಮಾಟೆರ್ನಾ ಅಭಿವೃದ್ಧಿಪಡಿಸಿರುವ ಕೊವಿಡ್ ಲಸಿಕೆ ಶೇ.94ರಷ್ಟು ಸುರಕ್ಷಿತ ಎನ್ನುವ ಮಾಹಿತಿ ಲಭ್ಯವಾಗಿದೆ.

ಮಾಡೆರ್ನಾವು 30 ಸಾವಿರ ಮಂದಿ ಮೇಲೆ ಕೊರೊನಾ ಲಸಿಕೆ ಪ್ರಯೋಗವನ್ನು ಮಾಡಿದೆ. ಕಳೆದ ವಾರವಷ್ಟೇ ಅಮೆರಿಕದ ಫಾರ್ಮಾಸುಟಿಕಲ್ ಕಂಪನಿ ಪಿಫೈಜರ್ ಹಾಗೂ ಅದರ ಜರ್ಮಲ್ ಪಾಲುದಾರ ಬಯೋಎನ್‌ಟೆಕ್ ತಮ್ಮ ಲಸಿಕೆ ಶೇ.90ರಷ್ಟು ಸುರಕ್ಷಿತ ಎಂದು ಹೇಳಿಕೊಂಡಿದ್ದವು.

ಕೊರೊನಾ ಲಸಿಕೆಯ ಮೂರನೇ ಪ್ರಯೋಗದಲ್ಲಿ ಗಂಭೀರ ಸ್ಥಿತಿಯಲ್ಲಿರುವವರನ್ನು ಕೂಡ ಕೊರೊನಾ ಲಸಿಕೆ ಗುಣಪಡಿಸಿದೆ.

ಈಗ ಪಿಫೈಜರ್ ನಂತರ ಎರಡನೇ ಕೊರೊನಾ ಲಸಿಕೆ ಮೇಲೆ ನಂಬಿಕೆ ಬಂದಿದೆ. ಅಮೆರಿಕದ ಜನತೆಯು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕು.ಮಾಸ್ಕ್ ಕಡ್ಡಾಯವಾಗಿ ಧರಿಸಬೇಕು.

English summary
India is in dialogue with the US-based biotech giant Moderna over the progress in the clinical trials of its coronavirus vaccine candidate, which the firm said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X