• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಅಮೆರಿಕ ಉತ್ಪನ್ನಗಳಿಗೆ ಆಮದು ಸುಂಕ ಹಾಕಿ ಭಾರತದಿಂದ ಸರಿಯಾದ ತಿರುಗೇಟು

|

ನವದೆಹಲಿ, ಜೂನ್ 14: ಅಮೆರಿಕದಿಂದ ಭಾರತಕ್ಕೆ ಆಮದಾಗುವ ಹಲವು ವಸ್ತುಗಳಿಗೆ ಹಾಕುವ ಸುಂಕಕ್ಕೆ ಗಡುವು ಹಲವು ಸಲ ವಿಸ್ತರಣೆ ಆದ ಮೇಲೆ, ಇದೀಗ ಅಮೆರಿಕದ ಇಪ್ಪತ್ತೊಂಬತ್ತು ಉತ್ಪನ್ನಗಳ ಮೇಲೆ ಹೆಚ್ಚುವರಿ ಸೀಮಾ ಸುಂಕ ವಿಧಿಸಲು ನಿರ್ಧಾರ ಮಾಡಲಾಗಿದೆ. ಬಾದಾಮಿ, ವಾಲ್ ನಟ್, ಧಾನ್ಯಗಳು ಇದರಲ್ಲಿ ಒಳಗೊಂಡಿದ್ದು, ಜೂನ್ ಹದಿನಾರರಿಂದ ಅನ್ವಯ ಆಗಲಿದೆ.

ಈ ಸಂಬಂಧವಾಗಿ ಶೀಘ್ರದಲ್ಲೇ ಆರ್ಥಿಕ ಸಚಿವಾಲಯದಿಂದ ಅಧಿಸೂಚನೆ ಹೊರಡಿಸಲಾಗುವುದು. ಈ ಇಪ್ಪತ್ತೊಂಬತ್ತು ಉತ್ಪನ್ನಗಳನ್ನು ಅಮೆರಿಕದಿಂದ ರಫ್ತು ಮಾಡುವವರಿಗೆ ಹೊರೆಯಾಗಿ ಪರಿಣಮಿಸಲಿದೆ. ಇನ್ನು ಈ ವಸ್ತುಗಳನ್ನು ಆಮದು ಮಾಡಿಕೊಳ್ಳುವವರ ಮೂಲಕ ಸೀಮಾ ಸುಂಕ ರೂಪದಲ್ಲಿ $ 217 ಮಿಲಿಯನ್ ಹೆಚ್ಚುವರಿ ಆದಾಯ ದೊರೆಯಲಿದೆ.

ಪಾಕಿಸ್ತಾನವನ್ನು ಮತ್ತೊಮ್ಮೆ ತರಾಟೆಗೆ ತೆಗೆದುಕೊಂಡ ಅಮೆರಿಕ

ಯಾವಾಗ ಕೆಲವು ಸ್ಟೀಲ್ ಮತ್ತು ಅಲ್ಯೂಮಿನಿಯಂ ಉತ್ಪನ್ನಗಳ ಮೇಲೆ ಸುಂಕ ಏರಿಸಲು ಅಮೆರಿಕ ತೀರ್ಮಾನಿಸಿತೋ ಆಗಲೇ ಅದಕ್ಕೆ ಪ್ರತಿಕ್ರಿಯೆ ಎಂಬಂತೆ, ಅಂದರೆ ಜೂನ್ 21, 2018ರಲ್ಲೇ ಸುಂಕ ವಿಧಿಸಲು ಭಾರತ ತೀರ್ಮಾನಿಸಿತು ಎಂದು ಮೂಲಗಳು ತಿಳಿಸಿವೆ.

ಅಮೆರಿಕವು ಕಳೆದ ವರ್ಷ ಮಾರ್ಚ್ ನಲ್ಲಿ ಸ್ಟೀಲ್ ಮೇಲೆ ಇಪ್ಪತ್ತೈದು ಪರ್ಸೆಂಟ್ ಹಾಗೂ ಅಲ್ಯೂಮಿನಿಯಂ ಉತ್ಪನ್ನದ ಮೇಲೆ ಹತ್ತು ಪರ್ಸೆಂಟ್ ಆಮದು ಸುಂಕ ವಿಧಿಸಿತ್ತು. ಈ ಎರಡು ಉತ್ಪನ್ನಗಳನ್ನು ಅಮೆರಿಕಕ್ಕೆ ಪ್ರಮುಖವಾಗಿ ರಫ್ತು ಮಾಡುವ ದೇಶ ಭಾರತ. ಆ ನಿರ್ಧಾರವನ್ನು ಅಮೆರಿಕ ತೆಗೆದುಕೊಂಡಿದ್ದರಿಂದ ಭಾರತದ ಸ್ಟೀಲ್ ಹಾಗೂ ಅಲ್ಯೂಮಿನಿಯಂ ಉತ್ಪನ್ನಗಳ ಆದಾಯದ ಮೇಲೆ $ 240 ಮಿಲಿಯನ್ ನಷ್ಟು ಪರಿಣಾಮ ಬೀರಿತು.

ಎರಡೂ ದೇಶಗಳು ಈ ಸಂಬಂಧ ಹಲವು ಸಲ ಚೌಕಾಶಿಗೆ ಯತ್ನಿಸಿದವು. ಆದರೆ ಯಾವಾಗ ಭಾರತದ ರಫ್ತುದಾರರಿಗೆ ನೀಡುತ್ತಿದ್ದ ಸಾಮಾನ್ಯ ಆದ್ಯತಾ ಕಾರ್ಯಕ್ರಮದ ಪ್ರೋತ್ಸಾಹಧನವನ್ನು ಅಮೆರಿಕ ಹಿಂಪಡೆಯಿತೋ ಅಲ್ಲಿಗೆ ಮಾತುಕತೆಗಳು ನಿಂತುಹೋದವು. ಜೂನ್ ಐದರಿಂದ ಪ್ರೋತ್ಸಾಹಧನ ನೀಡುವುದನ್ನು ಹಿಂಪಡೆಯುವುದು ಜಾರಿಗೂ ಬಂತು. ಇದರಿಂದ ಭಾರತದಿಂದ ಅಮೆರಿಕಕ್ಕೆ ರಫ್ತಾಗುವ $ 5.5 ಬಿಲಿಯನ್ ಡಾಲರ್ ಮೌಲ್ಯದ ವಸ್ತುಗಳ ಮೇಲೆ ಪ್ರಭಾವ ಬೀರುತ್ತದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
India imposed customs duty on 29 US products in retaliation for America move. India's new custom duty will be come in to effect from June 16th.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more