ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಓಮಿಕ್ರಾನ್ ಅಂಟಿದರೆ ಮನೆಯಲ್ಲೇ ಚಿಕಿತ್ಸೆ: ಹೀಗಿದೆ ವಿಧಾನ

|
Google Oneindia Kannada News

ಹೈದ್ರಾಬಾದ್, ಡಿಸೆಂಬರ್ 23: ತೆಲಂಗಾಣದಲ್ಲಿ ಮುಂದಿನ ಕೆಲವು ದಿನಗಳ ನಂತರ ಕೊವಿಡ್-19 ಹೊಸ ರೂಪಾಂತರಿ ಓಮಿಕ್ರಾನ್ ಸೋಂಕಿನಿಂದ ಚೇತರಿಸಿಕೊಳ್ಳುವುದಕ್ಕೆ ಮನೆ ಆಧಾರಿತ ಪ್ರತ್ಯೇಕತೆಯು(ಹೋಮ್ ಐಸೋಲೇಷನ್) ಪ್ರಮುಖ ಪಾತ್ರ ವಹಿಸಲಿದೆ.

ವೈದ್ಯಕೀಯ ಅಧ್ಯಯನಗಳ ಪ್ರಕಾರ, ಓಮಿಕ್ರಾನ್ ರೂಪಾಂತರಿಯು ಹೆಚ್ಚು ವೇಗವಾಗಿ ಒಬ್ಬರಿಂದ ಒಬ್ಬರಿಗೆ ಹರಡುವ ಸಾಮರ್ಥ್ಯವನ್ನು ಹೊಂದಿದೆ. ಆದರೆ ಡೆಲ್ಟಾ ರೂಪಾಂತರಿಗಿಂತ ಕಡಿಮೆ ತೀವ್ರತೆಯನ್ನು ಹೊಂದಿದೆ.

ಬಂತು ಬಂತು ಓಮಿಕ್ರಾನ್: ಭಾರತದಲ್ಲಿ ಶುರುವಾಗಿದೆಯಾ ಕೊರೊನಾ ಮೂರನೇ ಅಲೆ!?ಬಂತು ಬಂತು ಓಮಿಕ್ರಾನ್: ಭಾರತದಲ್ಲಿ ಶುರುವಾಗಿದೆಯಾ ಕೊರೊನಾ ಮೂರನೇ ಅಲೆ!?

ಕೊರೊನಾವೈರಸ್ ಡೆಲ್ಟಾ ರೂಪಾಂತರಿಗಿಂತ ಅಪಾಯಕಾರಿ ಆಗಿರದ ಓಮಿಕ್ರಾನ್ ಸೋಂಕು ತಗುಲಿದ ರೋಗಿಗಳಿಗೆ ಮನೆಯಲ್ಲಿ ಅಗತ್ಯ ವೈದ್ಯಕೀಯ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಓಮಿಕ್ರಾನ್ ಸೋಂಕಿತರನ್ನು ಆಸ್ಪತ್ರೆಗೆ ದಾಖಲಿಸಿಕೊಳ್ಳುವುದರ ಬದಲಿಗೆ ಮನೆಗಳಲ್ಲಿ ಪ್ರತ್ಯೇಕವಾಗಿ ಇರಿಸಿ ಚಿಕಿತ್ಸೆ ಒದಗಿಸಲು ರಾಜ್ಯ ಆರೋಗ್ಯ ಇಲಾಖೆಯು ಆಲೋಚಿಸುತ್ತಿದೆ.

ಹೋಮ್ ಐಸೋಲೇಷನ್ ಕಿಟ್ ಖರೀದಿಸಿದ ಸರ್ಕಾರ

ಹೋಮ್ ಐಸೋಲೇಷನ್ ಕಿಟ್ ಖರೀದಿಸಿದ ಸರ್ಕಾರ

ಓಮಿಕ್ರಾನ್ ಸೋಂಕು ತಗುಲಿದ ಸೋಂಕಿತರಿಗೆ ಹೋಮ್ ಐಸೋಲೇಷನ್ ತೀರಾ ಅಗತ್ಯವಾಗಿರುತ್ತದೆ. "ಹೋಮ್ ಐಸೋಲೇಶನ್ ಟ್ರೀಟ್‌ಮೆಂಟ್ ಮತ್ತು ಮಾನಿಟರಿಂಗ್ ಪ್ರೋಟೋಕಾಲ್" (HITAM) ಅನ್ನು ನಿಯೋಜಿಸಲು ಚಿಂತಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ಆರೋಗ್ಯ ಇಲಾಖೆಯು 25 ಲಕ್ಷಕ್ಕೂ ಹೆಚ್ಚು ಹೋಮ್ ಐಸೋಲೇಶನ್ ಕಿಟ್‌ಗಳನ್ನು ಖರೀದಿಸಲು ತಯಾರಿ ನಡೆಸುತ್ತಿದೆ. ಈ ಕಿಟ್‌ಗಳನ್ನು ಓಮಿಕ್ರಾನ್ ರೂಪಾಂತರ ಸೋಂಕು ತಗುಲಿದ ರೋಗಿಗಳಿಗೆ ಮಾರ್ಗದರ್ಶನ ಮತ್ತು ಔಷಧಿಗಳನ್ನು ಒದಗಿಸಲು ಸಹಕಾರಿ ಆಗಿರುತ್ತದೆ.

ಓಮಿಕ್ರಾನ್ ಸೋಂಕಿತರು ಮನೆಯಲ್ಲೇ ಚಿಕಿತ್ಸೆ ಪಡೆದುಕೊಳ್ಳಬಹುದು

ಓಮಿಕ್ರಾನ್ ಸೋಂಕಿತರು ಮನೆಯಲ್ಲೇ ಚಿಕಿತ್ಸೆ ಪಡೆದುಕೊಳ್ಳಬಹುದು

"ಕೊರೊನಾವೈರಸ್ ಹೊಸ ರೂಪಾಂತರಿ ಓಮಿಕ್ರಾನ್ ಸೋಂಕು ಅತಿಹೆಚ್ಚು ವೇಗವಾಗಿ ಹರಡುವ ರೋಗಾಣು ಆಗಿದೆ. ಆದರೆ ಈ ಸೋಂಕು ತಗುಲಿದ ವ್ಯಕ್ತಿಗಳಿಗೆ ಹೆಚ್ಚಿನ ಅಪಾಯ ಇರುವುದಿಲ್ಲ. ಈ ಸೋಂಕಿತರು ಆಸ್ಪತ್ರೆಗೆ ದಾಖಲಾಗುವ ಮಟ್ಟದ ತೀವ್ರತೆಯನ್ನು ಎದುರಿಸುವುದಿಲ್ಲ. ಓಮಿಕ್ರಾನ್ ಸೋಂಕಿತರಿಗೆ ಮನೆಯಲ್ಲಿಯೇ ಚಿಕಿತ್ಸೆ ನೀಡಿದರೆ ಸಾಕಾಗುತ್ತದೆ. ಈ ಹಿನ್ನೆಲೆ ಗೃಹ ಪ್ರತ್ಯೇಕತೆ ವ್ಯವಸ್ಥೆಯಲ್ಲಿ ವೈದ್ಯಕೀಯ ಸೌಲಭ್ಯಗಳನ್ನು ಒದಗಿಸುವುದಕ್ಕೆ ಕ್ರಮ ತೆಗೆದುಕೊಳ್ಳಲಾಗುತ್ತಿದೆ. ಆದ್ದರಿಂದ ನಾವು 25 ಲಕ್ಷಕ್ಕಿಂತ ಹೆಚ್ಚು ಹೋಮ್ ಐಸೋಲೇಷನ್ ಕಿಟ್ ಅನ್ನು ಖರೀದಿಸಿದ್ದೇವೆ," ಎಂದು ಸಾರ್ವಜನಿಕ ಆರೋಗ್ಯ ಇಲಾಖೆ ನಿರ್ದೇಶಕ ಡಾ. ಜಿ ಶ್ರೀನಿವಾಸ್ ರಾವ್ ತಿಳಿಸಿದ್ದಾರೆ.

ಓಮಿಕ್ರಾನ್ ಸೋಂಕಿತರ ಆರೋಗ್ಯದ ಮೇಲೆ ಕಣ್ಗಾವಲು

ಓಮಿಕ್ರಾನ್ ಸೋಂಕಿತರ ಆರೋಗ್ಯದ ಮೇಲೆ ಕಣ್ಗಾವಲು

ಗೃಹ ಪ್ರತ್ಯೇಕತೆ ವ್ಯವಸ್ಥೆಯಲ್ಲಿರುವ ಓಮಿಕ್ರಾನ್ ಸೋಂಕಿತರಿಗೆ ಔಷಧೀಯ ಕಿಟ್ ಅನ್ನು ವಿತರಿಸಿವುದರ ಜೊತೆಗೆ ಅವರ ಆರೋಗ್ಯದ ಬಗ್ಗೆ ಮೇಲ್ವಿಚಾರಣೆಯನ್ನು ನಡೆಸಲಾಗುವುದು. ತರಬೇತಿ ಪಡೆದ ಟೆಲಿಕಾಲರ್ ಮೂಲಕ ಆರೋಗ್ಯದಲ್ಲಿನ ಚೇತರಿಕೆ ಹಾಗೂ ಚಿಕಿತ್ಸೆಯ ಬಗ್ಗೆ ಮಾಹಿತಿ ಸಂಗ್ರಹಿಸಲಾಗುವುದು. ಹೋಮ್ ಐಸೋಲೇಶನ್ ಟ್ರೀಟ್‌ಮೆಂಟ್ ಮತ್ತು ಮಾನಿಟರಿಂಗ್ ಪ್ರೋಟೋಕಾಲ್ ಪ್ರಕಾರ ಆರೋಗ್ಯದ ಮೇಲ್ವಿಚಾರಣೆ ನಡೆಸಲಾಗುತ್ತದೆ. ಅದಕ್ಕಾಗಿ ಈ ಹಿಂದೆ ಕೊವಿಡ್-19 ಎರಡನೇ ಅಲೆಯ ಸಂದರ್ಭದಲ್ಲಿ ಹೈದ್ರಾಬಾದ್ ನಗರದಲ್ಲಿ ಕಾಲ್ ಸೆಂಟರ್ ಅನ್ನು ತೆರೆಯಲಾಗಿತ್ತು.

ಸೋಂಕಿತರ ಆರೋಗ್ಯ ಸ್ಥಿತಿ ಮೇಲೆ ಚಿಕಿತ್ಸೆ ವಿಧಾನ ನಿರ್ಧಾರ

ಸೋಂಕಿತರ ಆರೋಗ್ಯ ಸ್ಥಿತಿ ಮೇಲೆ ಚಿಕಿತ್ಸೆ ವಿಧಾನ ನಿರ್ಧಾರ

ಕೊವಿಡ್-19 ವೈದ್ಯಕೀಯ ಪರೀಕ್ಷೆ ಕೇಂದ್ರಗಳಲ್ಲಿ ಸೋಂಕಿತನ ಆರೋಗ್ಯ ಸ್ಥಿತಿ ಮತ್ತು ಗಂಭೀರತೆ ಆಧಾರದ ಮೇಲೆ ಹೋಮ್ ಐಸೋಲೇಷನ್ ಅಡಿ ಚಿಕಿತ್ಸೆ ನೀಡಬೇಕೇ ಅಥವಾ ಆಸ್ಪತ್ರೆಗೆ ದಾಖಲಿಸಬೇಕೇ ಎಂಬುದನ್ನು ನಿರ್ಧರಿಸಲಾಗುತ್ತದೆ. ಹಿರಿಯ ವೈದ್ಯರು ಪರೀಕ್ಷೆ ನಡೆಸಿದ ನಂತರ ರೋಗಿಯ ಆರೋಗ್ಯ ಸ್ಥಿತಿಯ ಬಗ್ಗೆ ಟೆಲಿ ಕಾಲರ್ ಸಿಬ್ಬಂದಿಗೆ ಸೂಚನೆ ನೀಡಲಾಗುತ್ತದೆ. ನಂತರ ಟೆಲಿಕಾಲರ್ ಸಿಬ್ಬಂದಿಯು ರೋಗಿಯ ಆರೋಗ್ಯ ಸ್ಥಿತಿ ಮತ್ತು ಚೇತರಿಕೆ ಕುರಿತು ನಿಗಾ ವಹಿಸುತ್ತಾರೆ.

ಒಂದು ವೇಳೆ ಉಸಿರಾಟ ಸಮಸ್ಯೆ, ತೀವ್ರ ಜ್ವರ ಸೇರಿದಂತೆ ಗಂಭೀರ ಆರೋಗ್ಯ ಸಮಸ್ಯೆಗಳನ್ನು ಹೊಂದಿದ್ದರೆ, ಅಂಥ ರೋಗಿಗಳನ್ನು ತಕ್ಷಣವೇ ಆಸ್ಪತ್ರೆಗೆ ರವಾನಿಸಲಾಗುತ್ತದೆ. ಆಸ್ಪತ್ರೆಗೆ ದಾಖಲು ಮಾಡಬೇಕಾದ ಪ್ರಕರಣಗಳನ್ನು ಗುರುತಿಸಲು ಟೆಲಿ-ಕಾಲರ್‌ಗಳಿಗೆ ತರಬೇತಿ ನೀಡಲಾಗುತ್ತದೆ. ಟೆಲಿ-ಕಾಲರ್‌ಗಳು ತುರ್ತು ಆಂಬ್ಯುಲೆನ್ಸ್ ಮತ್ತು ಕೊವಿಡ್-19 ಆಸ್ಪತ್ರೆಗಳಲ್ಲಿ ತ್ವರಿತ ಸಾರಿಗೆ ಮತ್ತು ಪ್ರವೇಶಕ್ಕಾಗಿ ಹಾಸಿಗೆ ಲಭ್ಯತೆಯ ಮಾಹಿತಿ ಹೊಂದಿರುತ್ತಾರೆ.

ಹೋಮ್ ಐಸೋಲೇಷನ್ ನಲ್ಲಿರುವ ರೋಗಿಗೆ ಔಷಧಿ

ಹೋಮ್ ಐಸೋಲೇಷನ್ ನಲ್ಲಿರುವ ರೋಗಿಗೆ ಔಷಧಿ

"ಒಮಿಕ್ರಾನ್ ಸೋಂಕಿತ ರೋಗಿಗಳ ಚಿಕಿತ್ಸಾ ಮಾರ್ಗಸೂಚಿಗಳಲ್ಲಿ ಇದುವರೆಗೆ ಯಾವುದೇ ನಿರ್ದಿಷ್ಟ ಔಷಧವನ್ನು ಸೇರಿಸಲಾಗಿಲ್ಲ. ಸಾಮಾನ್ಯ ಔಷಧಿಗಳಾದ ಪ್ಯಾರೆಸಿಟಮಾಲ್, ಸೆಟ್ರಿಜಿನ್, ಡಾಕ್ಸಿಸೈಕ್ಲಿನ್‌ನಂತಹ ಬ್ರಾಡ್ ಸ್ಪೆಕ್ಟ್ರಮ್ ಆ್ಯಂಟಿಬಯೋಟಿಕ್‌ಗಳು, ವಿಟಮಿನ್ ಸಿ ಯಂತಹ ಪೂರಕ ಔಷಧಿಗಳನ್ನು ಹೋಮ್ ಐಸೋಲೇಷನ್ ನಲ್ಲಿರುವ ರೋಗಿಗಳಿಗೆ ನೀಡಲಾಗುತ್ತದೆ," ಎಂದು ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ.

English summary
India: Home isolation may Control Omicron Variant surge.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X