ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚೀನಾಕ್ಕೆ ಯಾವ ಭೂಮಿಯನ್ನೂ ಬಿಟ್ಟುಕೊಟ್ಟಿಲ್ಲ: ರಕ್ಷಣಾ ಸಚಿವಾಲಯ

|
Google Oneindia Kannada News

ನವದೆಹಲಿ, ಫೆಬ್ರವರಿ 12: ಪೂರ್ವ ಲಡಾಖ್‌ನ ಪ್ಯಾಂಗಾಂಗ್ ತ್ಸೊ ಸರೋವರದ ಪ್ರದೇಶದಲ್ಲಿನ ಸೇನಾ ಪಡೆಗಳನ್ನು ವಾಪಸ್ ಕರೆಸಿಕೊಳ್ಳುವ ಸಂಬಂಧ ಚೀನಾದೊಂದಿಗೆ ಮಾಡಿಕೊಂಡಿರುವ ಒಪ್ಪಂದದ ಫಲವಾಗಿ ಯಾವುದೇ ಭೂಭಾಗವನ್ನು ಬಿಟ್ಟುಕೊಟ್ಟಿಲ್ಲ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

ಭಾರತವು ಚೀನಾಕ್ಕೆ ತನ್ನ ಭೂ ಪ್ರದೇಶವನ್ನು ಬಿಟ್ಟುಕೊಟ್ಟಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸಂಸತ್‌ನಲ್ಲಿ ಆರೋಪಿಸಿದ ಬಳಿಕ ರಕ್ಷಣಾ ಸಚಿವಾಲಯವು ಹೇಳಿಕೆ ಹೊರಡಿಸಿದ್ದು, ಪೂರ್ವ ಲಡಾಖ್‌ನಲ್ಲಿ ದೇಶದ ರಾಷ್ಟ್ರೀಯ ಹಿತಾಸಕ್ತಿ ಮತ್ತು ಭೂಪ್ರದೇಶವನ್ನು ಪರಿಣಾಮಕಾರಿಯಾಗಿ ಕಾಪಾಡುವ ಕ್ರಮ ತೆಗೆದುಕೊಳ್ಳಲಾಗಿದೆ. ಏಕೆಂದರೆ ಸರ್ಕಾರವು ಸಶಸ್ತ್ರ ಪಡೆಗಳ ಸಾಮರ್ಥ್ಯದ ಮೇಲೆ ಪೂರ್ತಿ ನಂಬಿಕೆ ಇರಿಸಿದೆ ಎಂದು ಸ್ಪಷ್ಟಪಡಿಸಿದೆ.

ಚೀನಾಕ್ಕೆ ಭೂಮಿ ಕೊಟ್ಟವರು ಯಾರೆಂದು ನಿಮ್ಮ ಅಜ್ಜನನ್ನು ಕೇಳಿ: ರಾಹುಲ್‌ಗೆ ತಿರುಗೇಟುಚೀನಾಕ್ಕೆ ಭೂಮಿ ಕೊಟ್ಟವರು ಯಾರೆಂದು ನಿಮ್ಮ ಅಜ್ಜನನ್ನು ಕೇಳಿ: ರಾಹುಲ್‌ಗೆ ತಿರುಗೇಟು

'ನಮ್ಮ ಸೇನಾ ಸಿಬ್ಬಂದಿ ಮಾಡಿದ ತ್ಯಾಗಗಳ ಮೂಲಕ ಸಾಧ್ಯವಾದ ಸಾಧನೆಗಳ ಬಗ್ಗೆ ಅನುಮಾನ ಪಡುವವರು ವಾಸ್ತವವಾಗಿ ಅವರನ್ನು ಅಗೌರವಿಸುತ್ತಿದ್ದಾರೆ' ಎಂದು ರಕ್ಷಣಾ ಸಚಿವಾಲಯ ರಾಹುಲ್ ಗಾಂಧಿ ವಿರುದ್ಧ ಪರೋಕ್ಷವಾಗಿ ಕಿಡಿಕಾರಿದೆ.

India Has Not Conceded Any Territory To China: Ministry Of Defence

'ಭಾರತದ ಭೂಪ್ರದೇಶವು ಫಿಂಗರ್ 4ರವರೆಗೂ ಇದೆ ಎನ್ನುವ ಪ್ರತಿಪಾದನೆಯು ಖಂಡಿತವಾಗಿಯೂ ಸುಳ್ಳು. 1962ರಿಂದ ಚೀನಾವು ಅಕ್ರಮವಾಗಿ ಆಕ್ರಮಿಸಿಕೊಂಡಿರುವ 43,000 ಚದರ ಕಿಮೀಗೂ ಅಧಿಕ ಪ್ರದೇಶ ಸೇರಿದಂತೆ ಭಾರತದ ಭೂಪಟದಲ್ಲಿ ಚಿತ್ರಿಸಿರುವ ಹಾಗೆ ಭಾರತದ ಭೂಪ್ರದೇಶವಿದೆ. ವಾಸ್ತವ ನಿಯಂತ್ರಣ ರೇಖೆಯಲ್ಲಿ (ಎಲ್ಎಸಿ) ಕೂಡ ಭಾರತದ ಗ್ರಹಿಕೆಯಂತೆ ಇರುವುದು ಫಿಂಗರ್ 8ರಲ್ಲಿಯೇ ವಿನಾ ಫಿಂಗರ್ 4 ಅಲ್ಲ. ಈ ಕಾರಣದಿಂದಾಗಿಯೇ ಭಾರತವು ಚೀನಾದೊಂದಿಗಿನ ಈಗಿನ ಒಪ್ಪಂದ ಸೇರಿದಂತೆ ಫಿಂಗರ್ 8ರವರೆಗೂ ಗಸ್ತು ತಿರುಗುವ ಹಕ್ಕನ್ನು ದೃಢವಾಗಿ ಪ್ರತಿಪಾದಿಸಿದೆ' ಎಂದು ಹೇಳಿಕೆ ವಿವರಿಸಿದೆ.

English summary
Ministry of Defence in a statement said India has not conceded any territory to China as a result of the Pangong Tso agreement.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X