ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾದಿಂದ ಮತ್ತೊಂದು ಸಮಸ್ಯೆ ಸೃಷ್ಟಿ; ತ್ಯಾಜ್ಯ ಪ್ರಮಾಣದಲ್ಲಿ ಭಾರೀ ಹೆಚ್ಚಳ

|
Google Oneindia Kannada News

ನವದೆಹಲಿ, ಜನವರಿ 11: ಕೊರೊನಾ ಸೋಂಕಿನ ಕಾರಣದಿಂದಾಗಿ ದೇಶದಲ್ಲಿ ವೈದ್ಯಕೀಯ ತ್ಯಾಜ್ಯ ಪ್ರಮಾಣದಲ್ಲಿಯೂ ಭಾರೀ ಏರಿಕೆಯಾಗಿದೆ. ಭಾರತದಲ್ಲಿ ಕಳೆದ ಏಳು ತಿಂಗಳ ಅವಧಿಯಲ್ಲಿ 33 ಸಾವಿರ ಟನ್ ಗಳಷ್ಟು ಜೈವಿಕ ವೈದ್ಯಕೀಯ ತ್ಯಾಜ್ಯ ಉತ್ಪಾದನೆಯಾಗಿರುವುದಾಗಿ ತಿಳಿದುಬಂದಿದೆ.

ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಈ ಮಾಹಿತಿ ನೀಡಿದ್ದು, ಕೊರೊನಾ ಸೋಂಕಿನ ಕಾರಣವಾಗಿ ವೈದ್ಯಕೀಯ ತ್ಯಾಜ್ಯದ ಪ್ರಮಾಣವು ಹೆಚ್ಚಾಗಿದೆ ಎಂದು ತಿಳಿಸಿದೆ. ಇವುಗಳ ನಿರ್ವಹಣೆ ಕುರಿತೂ ಮಾಹಿತಿ ನೀಡಿದೆ. ಮುಂದೆ ಓದಿ...

 ಮಹಾರಾಷ್ಟ್ರದಲ್ಲಿ ಅಧಿಕ ವೈದ್ಯಕೀಯ ತ್ಯಾಜ್ಯ

ಮಹಾರಾಷ್ಟ್ರದಲ್ಲಿ ಅಧಿಕ ವೈದ್ಯಕೀಯ ತ್ಯಾಜ್ಯ

ಭಾರತದಲ್ಲಿ ಕಳೆದ ಏಳು ತಿಂಗಳಿನಲ್ಲಿ 33 ಸಾವಿರ ಟನ್ ಗಳಷ್ಟು ಜೈವಿಕ ವೈದ್ಯಕೀಯ ತ್ಯಾಜ್ಯ ಉತ್ಪಾದನೆಯಾಗಿದ್ದು, ಇದರಲ್ಲಿ ಮಹಾರಾಷ್ಟ್ರ ರಾಜ್ಯದ್ದು ಅತಿ ಹೆಚ್ಚಿನ ತ್ಯಾಜ್ಯ ಎನ್ನಲಾಗಿದೆ. ಮಹಾರಾಷ್ಟ್ರ ಒಂದರಲ್ಲೇ 3,587 ಟನ್ ವೈದ್ಯಕೀಯ ತ್ಯಾಜ್ಯ ಉತ್ಪಾದನೆಯಾಗಿದೆ.

ಸಾವಯವ ವಸ್ತುಗಳಿಂದ ಸ್ಯಾನಿಟರಿ ಪ್ಯಾಡ್ ಸಿದ್ಧಪಡಿಸಿದ ತೆಲಂಗಾಣ ವಿದ್ಯಾರ್ಥಿಗಳುಸಾವಯವ ವಸ್ತುಗಳಿಂದ ಸ್ಯಾನಿಟರಿ ಪ್ಯಾಡ್ ಸಿದ್ಧಪಡಿಸಿದ ತೆಲಂಗಾಣ ವಿದ್ಯಾರ್ಥಿಗಳು

 ಅಕ್ಟೋಬರ್ ನಲ್ಲಿ ಹೆಚ್ಚಿನ ತ್ಯಾಜ್ಯ ಉತ್ಪಾದನೆ

ಅಕ್ಟೋಬರ್ ನಲ್ಲಿ ಹೆಚ್ಚಿನ ತ್ಯಾಜ್ಯ ಉತ್ಪಾದನೆ

ಕಳೆದ ಅಕ್ಟೋಬರ್ ತಿಂಗಳಿನಲ್ಲಿ ದೇಶದಲ್ಲಿ ಅತಿ ಹೆಚ್ಚು ತ್ಯಾಜ್ಯ ಉತ್ಪಾನೆಯಾಗಿದ್ದು, 5,500 ಟನ್ ಗಳಷ್ಟು ತ್ಯಾಜ್ಯ ಉತ್ಪಾದನೆಯಾಗಿದೆ ಎಂದು ತಿಳಿದುಬಂದಿದೆ. ಪಿಪಿಇ ಕಿಟ್ ಗಳು, ಮಾಸ್ಕ್, ಶೂ ಕವರ್ ಗಳು, ಕೈಗವಸುಗಳು, ಜೀವಕೋಶಗಳು, ಹತ್ತಿ ಬಟ್ಟೆಗಳು, ಹಾಸಿಗೆ ಬಟ್ಟೆಗಳು, ರಕ್ತದ ಬ್ಯಾಗ್ ಗಳು, ಸೂಜಿ, ಸಿರಿಂಜ್, ರಕ್ತ ಪರೀಕ್ಷಾ ಉಪಕರಣಗಳು, ಔಷಧದ ಕವರ್ ಗಳು ಇವುಗಳನ್ನು ಈ ವೈದ್ಯಕೀಯ ತ್ಯಾಜ್ಯ ಒಳಗೊಂಡಿದೆ.

 198 ವೈದ್ಯಕೀಯ ತ್ಯಾಜ್ಯ ನಿರ್ವಹಣಾ ಘಟಕಗಳಿಂದ ವಿಲೇವಾರಿ

198 ವೈದ್ಯಕೀಯ ತ್ಯಾಜ್ಯ ನಿರ್ವಹಣಾ ಘಟಕಗಳಿಂದ ವಿಲೇವಾರಿ

ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗಳಿಂದ ಕೇಂದ್ರವು ಮಾಹಿತಿಯನ್ನು ಪಡೆದಿದ್ದು, ಜೂನ್ 2020 ರಿಂದ ಎಲ್ಲಾ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳು 32,994 ಟನ್ ಗಳಷ್ಟು ಕೊರೊನಾ ಸಂಬಂಧಿತ ಜೈವಿಕ ವೈದ್ಯಕೀಯ ತ್ಯಾಜ್ಯ ಉತ್ಪಾದನೆಯಾಗಿದ್ದು, ಅವನ್ನು 198 ಜೈವಿಕ ತ್ಯಾಜ್ಯ ನಿರ್ವಹಣಾ ಘಟಕಗಳಲ್ಲಿ ವಿಲೇವಾರಿ ಮಾಡಲಾಗಿದೆ ಎಂದು ತಿಳಿದುಬಂದಿದೆ.

ಹನಿಮೂನ್ ಯೋಚನೆ ಕೈಬಿಟ್ಟು, ಬೀಚ್ ಸ್ವಚ್ಛಗೊಳಿಸಿ ಜನಮನ ಗೆದ್ದ ನವದಂಪತಿಹನಿಮೂನ್ ಯೋಚನೆ ಕೈಬಿಟ್ಟು, ಬೀಚ್ ಸ್ವಚ್ಛಗೊಳಿಸಿ ಜನಮನ ಗೆದ್ದ ನವದಂಪತಿ

 ರಾಜ್ಯಾವಾರು ವೈದ್ಯಕೀಯ ತ್ಯಾಜ್ಯ ವಿವರ

ರಾಜ್ಯಾವಾರು ವೈದ್ಯಕೀಯ ತ್ಯಾಜ್ಯ ವಿವರ

ಕಳೆದ ಜೂನ್ ನಿಂದ ಮಹಾರಾಷ್ಟ್ರದಲ್ಲಿ 5367 ಟನ್ ತ್ಯಾಜ್ಯ ಉತ್ಪಾದನೆಯಾಗಿದ್ದರೆ, ಕೇರಳದಲ್ಲಿ 3300 ಟನ್, ಗುಜರಾತ್ ನಲ್ಲಿ 3086 ಟನ್, ತಮಿಳುನಾಡಿನಲ್ಲಿ 2,806 ಟನ್, ಉತ್ತರ ಪ್ರದೇಶದಲ್ಲಿ 2502 ಟನ್, ದೆಹಲಿಯಲ್ಲಿ 2471 ಟನ್, ಪಶ್ಚಿಮ ಬಂಗಾಳದಲ್ಲಿ 2095 ಟನ್ ಹಾಗೂ ಕರ್ನಾಟಕದಲ್ಲಿ 2026 ಟನ್ ತ್ಯಾಜ್ಯ ಉತ್ಪಾದನೆಯಾಗಿದೆ. ಡಿಸೆಂಬರ್ ತಿಂಗಳಿನಲ್ಲಿ 4530 ಟನ್ ತ್ಯಾಜ್ಯ ಉತ್ಪಾದನೆಯಾಗಿದ್ದು, ಮಹಾರಾಷ್ಟ್ರದಲ್ಲಿ 629 ಟನ್, ಕೇರಳದಲ್ಲಿ 542 ಟನ್ ಹಾಗೂ ಗುಜರಾತ್ ನಲ್ಲಿ 479 ಟನ್ ತ್ಯಾಜ್ಯ ಉತ್ಪಾದನೆಯಾಗಿದೆ.

English summary
India generated around 33,000 tonnes of Covid-19 biomedical waste in the last seven months, with Maharashtra contributing the maximum
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X