ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಮ್ರಾನ್ ಖಾನ್ 'ರಕ್ತಪಾತ' ಭಾಷಣಕ್ಕೆ ಭಾರತದ ತಿರುಗೇಟು

|
Google Oneindia Kannada News

Recommended Video

ಪಾಕಿಸ್ತಾನಕ್ಕೆ ತಿರುಗೇಟು ಕೊಡಲು ಭಾರತ ರೆಡಿ | Oneindia Kannada

ನವದೆಹಲಿ, ಸೆಪ್ಟೆಂಬರ್ 28: ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ 'ರಕ್ತಪಾತ' ಭಾಷಣಕ್ಕೆ ಭಾರತ ಆರಂಭಿಕ ತಿರುಗೇಟು ನೀಡಿದೆ.

ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಇಮ್ರಾನ್ ಖಾನ್ ಭಾಷಣದ ಪ್ರತಿ ಅಂಶಕ್ಕೂ ಅದೇ ವೇದಿಕೆಯಲ್ಲಿ ತಿರುಗೇಟು ನೀಡಲು ಈಗಾಗಲೇ ಭಾರತ ಮನವಿ ಮಾಡಿದೆ.

ಇದಕ್ಕೂ ಮುನ್ನ ಟ್ವಿಟ್ಟರ್‌ನಲ್ಲಿ ಭಾರತದ ವಿದೇಶಾಂಗ ಸಚಿವಾಲಯದ ವಕ್ತಾರ ರವೀಶ್ ಕುಮಾರ್ ಇಮ್ರಾನ್ ಖಾನ್‌ಗೆ ಸಮರ್ಥವಾಗಿ ಪ್ರತ್ಯುತ್ತರ ನೀಡಿದ್ದಾರೆ.

Narendra modi

ಇಮ್ರಾನ್ ಖಾನ್ ಭಾಷಣದಲ್ಲಿಅಣ್ವಸ್ತ್ರ ಯುದ್ಧ, ಜಿಹಾದ್, ಭಯೋತ್ಪಾದನೆ ಘೋಷಣೆ, ಯುದ್ಧೋನ್ಮಾದ, ಸುಳ್ಳಿನ ಕಂತೆ, ಮೋಸದ ಬಡಬಡಾಯಿಸುವಿಕೆ ಹಾಗೂ ಇದರ ಜತೆಗೆ ಜಾಗತಿಯ ವೇದಿಕೆಯ ದುರ್ಬಳಕೆ ಬಿಟ್ಟು ಬೇರೆ ಅಂಶಗಳೇ ಇರಲಿಲ್ಲ ಎಂದು ರವೀಶ್ ಕುಮಾರ್ ತಿರುಗೇಟು ನೀಡಿದ್ದಾರೆ.

ಇಮ್ರಾನ್ 50 ನಿಮಿಷಗಳ ತಮ್ಮ ಭಾಷಣದಲ್ಲಿ 70 ಬಾರಿ ಇಸ್ಲಾಂ, 21 ಬಾರಿ ಕಾಶ್ಮೀರ, 16 ಬಾರಿ ಭಾರತ, 12 ಬಾರಿ ಮೋದಿ, 10 ಬಾರಿ ಆರ್‌ಎಸ್ಎಸ್‌, 5 ಬಾರಿ ಹಿಂದೂ ವಿಚಾರಗಳನ್ನು ಪ್ರಸ್ತಾಪಿಸಿ ನೈಜ ಜಾಗತಿಕವಿಚಾರಗಳಿಂದಲೇ ದೂರ ಸರಿದಿದ್ದಾರೆ.

ಆದರೆ ಇದಕ್ಕೆ ತದ್ವಿರುದ್ಧ ಎನ್ನುವಂತೆ ನರೇಂದ್ರ ಮೋದಿಯು ಹವಾಮಾನ ವೈಪರೀತ್ಯ, ವಿಶ್ವ ಆರೋಗ್ಯ ಸಂಸ್ಥೆ, ಶೌಚಾಲಯ, ಸ್ವಚ್ಛತೆ ಹೀಗೆ ಜಾಗತಿಕ ವಿಚಾರಗಳ ಬಗ್ಗೆ ಮಾತನಾಡುವ ಮೂಲಕ ತಮ್ಮ ಪ್ರಬುದ್ಧತೆ ಮೆರೆದಿದ್ದಾರೆ.

ಭಾರತದ ವಿದೇಶಾಂಗ ಸಚಿವರ ಸಭೆಗೆ ಪಾಕ್ ಬಾಯ್ಕಾಟ್: ಭಾರತದ ಟಿಟ್ ಫಾರ್ ಟ್ಯಾಟ್ಭಾರತದ ವಿದೇಶಾಂಗ ಸಚಿವರ ಸಭೆಗೆ ಪಾಕ್ ಬಾಯ್ಕಾಟ್: ಭಾರತದ ಟಿಟ್ ಫಾರ್ ಟ್ಯಾಟ್

ಅಮೆರಿಕ ಪ್ರವಾಸದಲ್ಲಿ ಮಹಾತ್ಮಾ ಗಾಂಧಿ 150ನೇ ಜನ್ಮ ದಿನೋತ್ಸವ ಉದ್ಯಮಿಗಳೊಂದಿಗೆ ಸಂವಾದ ಸೇರಿ ಇತರೆ ಧನಾತ್ಮಕ ವಿಚಾರಗಳಿಗೆ ಸಮಯ ನೀಡಿದ್ದಾರೆ ಎಂದು ಇಮ್ರಾನ್ ಗೆ ತಿರುಗೇಟು ನೀಡಿದ್ದಾರೆ.

ಭಾರತದ ಪ್ರತಿಕ್ರಿಯೆಗೆ ಅವಕಾಶ?: ಇಮ್ರಾನ್ ಖಾನ್ ಪ್ರಚೋದನಕಾರಿ ಭಾಷಣಕ್ಕೆ ವಿಶ್ವಸಂಸ್ಥೆ ಸಾಮಾನ್ಯ ಸಭೆಯಲ್ಲಿ ತಿರುಗೇಟು ನೀಡಲು ಭಾರತ ಸಜ್ಜಾಗಿದೆ.

ಭಾಷಣದಲ್ಲಿ ಇಮ್ರಾನ್ ಖಾನ್ ಭಾರತದಲ್ಲಿ ಭಯೋತ್ಪಾದನೆ ಹೆಚ್ಚಳ ಆಗಬಹುದು, ನಮಗೆ ಯುದ್ಧ ಅನಿವಾರ್ಯವಾಗಬಹುದು, ಅಣ್ವಸ್ತ್ರ ದಾಳಿ ನಡೆಸಬಹುದು ಸೇರಿ ಇತರೆ ವಿಚಾರಗಳ ಬಗ್ಗೆ ಅನಗತ್ಯ ಗೊಂದಲ ಸೃಷ್ಟಿಸುವ ಮಾತುಗಳನ್ನಾಡಿದ್ದಾರೆ.

ಹೀಗಾಗಿ ವಿಶ್ವ ಸಂಸ್ಥೆಯ ಎದುರು ಪಾಕಿಸ್ತಾನದ ಈ ಯುದ್ಧೋನ್ಮಾದದ ಮಾತುಗಳಿಗೆ ತಿರುಗೇಟು ನೀಡಿ ಮುಖವಾಡ ಬಯಲು ಮಾಡಲು ವಿಶ್ವಸಂಸ್ಥೆಗೆ ಭಾರತ ಮನವಿ ಮಾಡಿದೆ.

ಇದಕ್ಕೆ ವಿಶ್ವಸಂಸ್ಥೆ ಒಪ್ಪಿಗೆ ನೀಡಿದೆ ಎನ್ನಲಾಗಿದ್ದು, ಶೀಘ್ರವೇ ಭಾರತ ಇಮ್ರಾನ್ ಖಾನ್ ಭಾಷಣದ ಪ್ರತಿ ಅಂಶಗಳ ಮೇಲೂ ಪ್ರತಿಕ್ರಿಯೆ ನೀಡುವ ಸಾಧ್ಯತೆ ಇದೆ.

English summary
Indian Foreign ministry gave stunning replay to imran khan unga speech.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X