ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದಲ್ಲಿ ಕೊರೊನಾ ವೈರಸ್ ಮರಣ ಪ್ರಮಾಣ ಏಕಾಏಕಿ ಹೆಚ್ಚಳ

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 9: ಅತ್ಯಧಿಕ ಕೊರೊನಾ ವೈರಸ್ ಪ್ರಕರಣಗಳು ದಾಖಲಾಗುತ್ತಿದ್ದರೂ, ಮರಣ ಪ್ರಮಾಣವನ್ನು ನಿಯಂತ್ರಿಸುವುದರಲ್ಲಿ ಗಮನಾರ್ಹ ಸಾಧನೆ ಮಾಡಿದ್ದ ಭಾರತ, ಕಳೆದ ಕೆಲವು ದಿನಗಳಿಂದ ಹಿನ್ನಡೆ ಅನುಭವಿಸಿದೆ. ಬುಧವಾರ ದೇಶದಲ್ಲಿ 89,706 ಹೊಸ ಪ್ರಕರಣಗಳು ದಾಖಲಾಗಿವೆ. ಒಟ್ಟಾರೆ ಕೊರೊನಾ ವೈರಸ್‌ ಪ್ರಕರಣಗಳ ಸಂಖ್ಯೆ 43.70 ಲಕ್ಷ ದಾಟಿದೆ. ಇದುವರೆಗೂ 73,912 ಮರಣಗಳು ವರದಿಯಾಗಿವೆ.

ಕಳೆದ ಒಂದು ವಾರದಿಂದ ಜಗತ್ತಿನಲ್ಲಿ ಸಂಭವಿಸುತ್ತಿರುವ ಪ್ರತಿ ಐದು ಕೊರೊನಾ ವೈರಸ್ ಸಾವಿನಲ್ಲಿ ಒಂದು ಭಾರತದಲ್ಲಿ ಉಂಟಾಗುತ್ತಿದೆ. ದೈನಂದಿನ ಮರಣ ಪ್ರಮಾಣ ಹೆಚ್ಚುತ್ತಿದ್ದು, ಏಪ್ರಿಲ್ ಮಧ್ಯಭಾಗದಲ್ಲಿ ಇದ್ದ ಮಟ್ಟಕ್ಕೆ ಏರುತ್ತಿದೆ.

ಭಾರತದಲ್ಲಿ ಕೊವಿಡ್-19 ಲಸಿಕೆ ಸಂಶೋಧನೆ ಯಾವ ಹಂತದಲ್ಲಿದೆ? ಭಾರತದಲ್ಲಿ ಕೊವಿಡ್-19 ಲಸಿಕೆ ಸಂಶೋಧನೆ ಯಾವ ಹಂತದಲ್ಲಿದೆ?

ಸೆ. 9ರ ವೇಳೆಗೆ ಜಗತ್ತಿನಾದ್ಯಂತ ಸುಮಾರು 9 ಲಕ್ಷ ಜನರು ಕೋವಿಡ್‌ಗೆ ಬಲಿಯಾಗಿದ್ದಾರೆ. ಏಪ್ರಿಲ್ ಮಧ್ಯವಾರದಲ್ಲಿ ಅತಿ ಹೆಚ್ಚು ದೈನಂದಿನ ಸರಾಸರಿ ಮರಣಗಳು ವರದಿಯಾಗಿದ್ದವು. ಆ ಸಮಯದಲ್ಲಿ ವಿಶ್ವದೆಲ್ಲೆಡೆ ಪ್ರತಿದಿನ 7 ಸಾವಿರಕ್ಕೂ ಅಧಿಕ ಮಂದಿ ಮೃತಪಡುತ್ತಿದ್ದರು. ಈಗ ಸೋಂಕಿನ ಸಾವಿನ ಎರಡನೆಯ ಹಂತದ ಮಾರಣಾಂತಿಕ ಘಟ್ಟ ಶುರುವಾಗಿದೆ ಎಂಬ ಭೀತಿ ಎದುರಾಗಿದೆ. ಮುಂದೆ ಓದಿ.

ಆಗಸ್ಟ್ ಮಧ್ಯಭಾಗದಿಂದ ಏರಿಕೆ

ಆಗಸ್ಟ್ ಮಧ್ಯಭಾಗದಿಂದ ಏರಿಕೆ

ಮೇ ಮತ್ತು ಜುಲೈ ತಿಂಗಳ ಅವಧಿಯಲ್ಲಿ ಜಾಗತಿಕ ಮರಣ ಪ್ರಮಾಣ ಸುಮಾರು 4,500ಕ್ಕೆ ಇಳಿದಿತ್ತು. ಆದರೆ ಜುಲೈ ಬಳಿಕ ಮತ್ತೆ ಮರಣ ಸಂಖ್ಯೆ ಹೆಚ್ಚಳವಾಗುತ್ತಿದೆ. ಆಗಸ್ಟ್ ಮಧ್ಯಭಾಗದಿಂದ ಜಾಗತಿಕ ದೈನಂದಿನ ಮರಣ ಪ್ರಮಾಣ ಸುಮಾರು 6,000 ದಾಟಿದೆ. ಸೆಪ್ಟೆಂಬರ್ ಆರಂಭದಲ್ಲಿ ಇದು ಸ್ವಲ್ಪ ಕಡಿಮೆಯಾದರೂ 5,000ಕ್ಕಿಂತಲೂ ಹೆಚ್ಚಿನ ಮಟ್ಟದಲ್ಲಿಯೇ ಇದೆ.

ದಕ್ಷಿಣ ಅಮೆರಿಕದಲ್ಲಿ ಹೆಚ್ಚು ಸಾವು

ದಕ್ಷಿಣ ಅಮೆರಿಕದಲ್ಲಿ ಹೆಚ್ಚು ಸಾವು

ಮಾರ್ಚ್ ಮಧ್ಯದಲ್ಲಿ ಏಷ್ಯಾದಲ್ಲಿನ ಮರಣ ಪ್ರಮಾಣವನ್ನು ಯುರೋಪ್‌ನ ಸರಾಸರಿ ಮರಣ ಪ್ರಮಾಣ ಹಿಂದಿಕ್ಕಿತ್ತು. ಇಟಲಿ, ಸ್ಪೇನ್ ಮತ್ತು ಬ್ರಿಟನ್‌ಗಳು ಜಗತ್ತಿನ ಹಾಟ್‌ಸ್ಪಾಟ್‌ಗಳಾಗಿ ಬದಲಾಗಿದ್ದವು. ಜುಲೈ ಬಳಿಕ ದಕ್ಷಿಣ ಅಮೆರಿಕ ಹಾಗೂ ಏಷ್ಯಾಗಳು ದೈನಂದಿನ ಮರಣ ಸಂಖ್ಯೆಯಲ್ಲಿ ಯುರೋಪ್‌ಅನ್ನು ಹಿಂದಿಕ್ಕಿದವು.

ದಕ್ಷಿಣ ಅಮೆರಿಕವು ಈಗಲೂ ಸೋಂಕಿನ ಪ್ರಮುಖ ಕೇಂದ್ರವಾಗಿ ಉಳಿದಿದೆ. ಪನಾಮಾ, ಪೆರು, ಬೊಲಿವಿಯಾ ಮತ್ತು ಕೊಲಂಬಿಯಾಗಳಲ್ಲಿ ಅಧಿಕ ಸಾವುಗಳು ಸಂಭವಿಸುತ್ತಿದ್ದು, ದೈನಂದಿನ ಮರಣ ಪ್ರಮಾಣದ ಅರ್ಧದಷ್ಟು ಇಲ್ಲಿಯೇ ವರದಿಯಾಗುತ್ತಿವೆ. ಆದರೆ ಒಂದು ಕಾಲದಲ್ಲಿ ಅತ್ಯಂತ ತೀವ್ರ ಹೊಡೆತ ಅನುಭವಿಸಿದ್ದ ಬ್ರೆಜಿಲ್, ಸೆಪ್ಟೆಂಬರ್‌ ಮೊದಲ ವಾರದಲ್ಲಿ ಕೆಲವೇ ಸಾವುಗಳನ್ನು ಕಂಡಿದೆ. ಏಷ್ಯಾದಲ್ಲಿ, ಭಾರತವು ಸೆಪ್ಟೆಂಬರ್ ಮೊದಲ ವಾರದಲ್ಲಿ ಪ್ರತಿದಿನ 1,000 ಸರಾಸರಿ ಸಾವನ್ನು ವರದಿ ಮಾಡುತ್ತಿದೆ.

ಕೊವಿಡ್ 19: ವಿಶ್ವದೆಲ್ಲೆಡೆ 10 ಲಕ್ಷ ಸಾವು, 1 ಕೋಟಿ ಚೇತರಿಕೆಕೊವಿಡ್ 19: ವಿಶ್ವದೆಲ್ಲೆಡೆ 10 ಲಕ್ಷ ಸಾವು, 1 ಕೋಟಿ ಚೇತರಿಕೆ

ಭಾರತದಲ್ಲಿ ಹೆಚ್ಚು ಸಾವು

ಭಾರತದಲ್ಲಿ ಹೆಚ್ಚು ಸಾವು

ಎರಡನೆಯ ಅಲೆಯ ಮರಣಗಳಲ್ಲಿ ಅತಿ ಹೆಚ್ಚು ಸಾವುಗಳು ವರದಿಯಾಗುತ್ತಿರುವುದು ಅಮೆರಿಕ, ಬ್ರೆಜಿಲ್ ಹಾಗೂ ಭಾರತದಲ್ಲಿ. ಈಗ ಅಮೆರಿಕ ಹಾಗೂ ಬ್ರೆಜಿಲ್‌ಅನ್ನು ಹಿಂದಿಕ್ಕುವ ಮೂಲಕ ಭಾರತವು ಸಾವಿನ ಸಂಖ್ಯೆಯಲ್ಲಿ ಅತ್ಯಂತ ಬಾಧಿತ ದೇಶವಾಗಿದೆ. ಕಳೆದ ಎರಡು ವಾರಗಳಲ್ಲಿ ಅಮೆರಿಕ 9,979 ಹಾಗೂ ಬ್ರೆಜಿಲ್ 9,799 ಸಾವುಗಳನ್ನು ಕಂಡಿದ್ದರೆ, ಇದೇ ಅವಧಿಯಲ್ಲಿ ಭಾರತದಲ್ಲಿ 13,418 ಸಾವುಗಳು ವರದಿಯಾಗಿವೆ.

ಕೊವಿಡ್ 19 ರೋಗಿಯ ಶ್ವಾಸಕೋಶ ಮೊದಲಿನಂತಾಗಬಲ್ಲದು:ಎಷ್ಟು ದಿನ ಬೇಕು?ಕೊವಿಡ್ 19 ರೋಗಿಯ ಶ್ವಾಸಕೋಶ ಮೊದಲಿನಂತಾಗಬಲ್ಲದು:ಎಷ್ಟು ದಿನ ಬೇಕು?

ಸರ್ಕಾರ ಹೇಳುವುದೇನು?

ಸರ್ಕಾರ ಹೇಳುವುದೇನು?

ಆದರೆ ಭಾರತದಲ್ಲಿ ಮರಣ ಪ್ರಮಾಣ ನಿಯಂತ್ರಣದಲ್ಲಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ. ಮರಣ ಪ್ರಮಾಣದ ಪ್ರಕರಣಗಳು ನಿರಂತರವಾಗಿ ಇಳಿಕೆಯಾಗುತ್ತಿದೆ. ಆಗಸ್ಟ್ ಮೊದಲ ವಾರದಲ್ಲಿ ಅದು 2.15%ರಷ್ಟಿತ್ತು. ಈಗ ಅದು ಶೇ 1.70ರಲ್ಲಿದೆ ಎಂದು ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಬುಧವಾರ ತಿಳಿಸಿದ್ದಾರೆ.

Recommended Video

ನಮ್ ಹಣೆಬರಹ ಯಾವಾಗ್ಲೂ ಇಷ್ಟೇ ಬಿಡಿ.? | Oneindia Kannada
ಶೇ 19ಕ್ಕೆ ಏರಿದ ಸಾವಿನ ಪ್ರಮಾಣ

ಶೇ 19ಕ್ಕೆ ಏರಿದ ಸಾವಿನ ಪ್ರಮಾಣ

ಜೂನ್ ಮತ್ತು ಜುಲೈ ಮಧ್ಯಭಾಗದಲ್ಲಿ ಜಾಗತಿಕ ದೈನಂದಿನ ಮರಣ ಪ್ರಮಾಣದಲ್ಲಿ ಶೇ 12ರಷ್ಟು ಸರಾಸರಿ ಭಾರತದಲ್ಲಿ ವರದಿಯಾಗಿದೆ. ಜುಲೈನಿಂದ ಭಾರತದಲ್ಲಿ ಮರಣ ಸಂಖ್ಯೆ ಗಣನೀಯ ಏರಿಕೆಯಾಗಿದೆ. ಆಗಸ್ಟ್ ಮಧ್ಯವಾರದಲ್ಲಿ ಅದರ ದೈನಂದಿನ ಸಾವಿನ ಸಂಖ್ಯೆ ಶೇ 16ಕ್ಕೆ ತಲುಪಿದ್ದರೆ, ಸೆಪ್ಟೆಂಬರ್ ಮೊದಲ ವಾರದಲ್ಲಿ ಶೇ 19ಕ್ಕೆ (ಸುಮಾರು 1,000) ಮುಟ್ಟಿದೆ.

ಸೆಪ್ಟೆಂಬರ್‌ನ ಮೊದಲ ಆರು ದಿನದಲ್ಲಿ ದೈನಂದಿನ ಸಾವಿನ ಸಂಖ್ಯೆ ಇಳಿಕೆಯಾಗಿದೆ. ಹಾಗೆಯೇ ಬ್ರೆಜಿಲ್‌ನಲ್ಲಿ ದೈನಂದಿನ ಮರಣ ಪ್ರಮಾಣ 1,000ದಿಂದ 900ಕ್ಕೆ ಇಳಿಕೆಯಾಗಿದೆ. ಕಳೆದ 24 ಗಂಟೆಗಳಲ್ಲಿ ಜಗತ್ತಿನಾದ್ಯಂತ 4,737 ಸಾವುಗಳು ವರದಿಯಾಗಿದ್ದರೆ, ಅದರಲ್ಲಿ 1,115 ಪ್ರಕರಣಗಳು ಭಾರತದಲ್ಲಿಯೇ ಸಂಭವಿಸಿವೆ.

English summary
Despite the control in Covid mortality rate, India found unusual surge in daily coronavirus death cases in September first week.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X