ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

1000 ರೂ.ಗೆ ಕೊವಿಡ್-19 ಲಸಿಕೆ; ಭಾರತಕ್ಕೆ ಮೊದಲ ಆದ್ಯತೆ ಎಂದ ಸಂಸ್ಥೆ!

|
Google Oneindia Kannada News

ನವದೆಹಲಿ, ನವೆಂಬರ್.24: ಜಗತ್ತಿನಲ್ಲೇ ಅತಿಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ಭಾರತದಲ್ಲಿ ಕೊವಿಡ್-19 ಲಸಿಕೆಯನ್ನು ಮೊದಲ ವಿತರಿಸುವುದು ಸೂಕ್ತ ಎಂದು ಸೇರಮ್ ಇನ್ಸ್ ಟಿಟ್ಯೂಟ್ ಆಫ್ ಇಂಡಿಯಾದ ಮುಖ್ಯಾಧಿಕಾರಿ ಅದರ್ ಪೂನಾವಾಲಾ ತಿಳಿಸಿದ್ದಾರೆ.

ಸೆರಮ್ ಇನ್ಸ್ ಟಿಟ್ಯೂಟ್ ಆಫ್ ಇಂಡಿಯಾ ಕಂಪನಿಯು ವಿಶ್ವದಲ್ಲೇ ಅತಿಹೆಚ್ಚು ಔಷಧಿ ಮತ್ತು ಲಸಿಕೆಗಳನ್ನು ಉತ್ಪಾದಿಸುವ ಕೇಂದ್ರವಾಗಿದೆ. ಆಸ್ಟ್ರಾಜೆನಿಕಾ ಪಿಎಲ್ ಸಿ ಕೊವಿಡ್-19 ಲಸಿಕೆಯನ್ನು ಬೇರೆ ರಾಷ್ಟ್ರಗಳಿಗೆ ನೀಡುವುದಕ್ಕೂ ಮೊದಲು ಭಾರತದಲ್ಲಿ ವಿತರಿಸುವುದಕ್ಕೆ ಆದ್ಯತೆ ನೀಡುವುದಾಗಿ ಅದರ್ ಪೂನಾವಾಲಾ ಹೇಳಿದ್ದಾರೆ.

ಸಿಹಿಸುದ್ದಿ: ಕೊವಿಡ್-19 ಸೋಂಕಿಗೆ ಸಿಹಿಸುದ್ದಿ: ಕೊವಿಡ್-19 ಸೋಂಕಿಗೆ "Cheap And Best" ಲಸಿಕೆ!

ಖಾಸಗಿ ವಾಹಿನಿಗೆ ಸಂದರ್ಶನ ನೀಡಿದ ಅವರು, "ನಮ್ಮ ದೇಶದ ಮೇಲೆ ಲಕ್ಷ್ಯ ವಹಿಸುವುದು ತೀರಾ ಅಗತ್ಯವಾಗಿದೆ. ನಂತರದಲ್ಲಿ ಕೊವ್ಯಾಕ್ಸ್ ಹಾಗೂ ಅದರ ನಂತರದಲ್ಲಿ ಅನ್ಯರಾಷ್ಟ್ರಗಳ ಜೊತೆಗೆ ದ್ವಿಪಕ್ಷೀಯ ಒಪ್ಪಂದವನ್ನು ಮಾಡಿಕೊಳ್ಳಲಾಗುತ್ತದೆ. ಆದ್ದರಿಂದ ನಾವು ಮೊದಲಿಗೆ ನಮ್ಮ ದೇಶದಲ್ಲಿ ಕೊವಿಡ್-19 ಲಸಿಕೆ ವಿತರಣೆಗೆ ಮೊದಲ ಆದ್ಯತೆಯನ್ನು ನೀಡುತ್ತೇವೆ" ಎಂದು ಹೇಳಿದ್ದಾರೆ.

ಆಸ್ಟ್ರಾಜೆನಿಕಾ ಲಸಿಕೆ ಶೇ.90ರಷ್ಟು ಪರಿಣಾಮಕಾರಿ ಎಂದ ಸಂಸ್ಥೆ

ಆಸ್ಟ್ರಾಜೆನಿಕಾ ಲಸಿಕೆ ಶೇ.90ರಷ್ಟು ಪರಿಣಾಮಕಾರಿ ಎಂದ ಸಂಸ್ಥೆ

ಸೋಮವಾರವಷ್ಟೇ ಆಸ್ಟ್ರಾಜೆನಿಕಾ ಕಂಪನಿಯು ಸಿದ್ಧಪಡಿಸಿರುವ ಕೊರೊನಾವೈರಸ್ ಲಸಿಕೆಯು ಶೇ.90ರಷ್ಟು ಪರಿಣಾಮಕಾರಿ ಎಂದು ಹೇಳಲಾಗಿತ್ತು. ಜಗತ್ತನ್ನು ಕಾಡುತ್ತಿರುವ ಸಾಂಕ್ರಾಮಿಕ ಪಿಡುಗಿನ ವಿರುದ್ಧ ಹೋರಾಡಬಲ್ಲ ಪರಿಣಾಮಕಾರಿ ಹಾಗೂ ಕಡಿಮೆ ದರದಲ್ಲಿ ಸಾರ್ವಜನಿಕರಿಗೆ ಸಿಗುವ ಲಸಿಕೆ ಎಂದೇ ಹೇಳಲಾಗಿತ್ತು. ಸಾಮಾನ್ಯರ ಚಿಕಿತ್ಸೆಗೂ ಕೈಗೆಟುಕುವ ದರದಲ್ಲಿ ಲಸಿಕೆ ಸಿಗಲಿದ್ದು, ವಿತರಣೆ ಮತ್ತು ಸಾಗಾಣಿಕೆಗೂ ಸುಲಭವಾಗಿರಲಿದೆ ಎಂದು ಕಂಪನಿಯು ಹೇಳಿಕೊಂಡಿತ್ತು.

ಕೊರೊನಾವೈರಸ್ ಸೋಂಕಿತರ ತುರ್ತು ಚಿಕಿಕ್ಸೆಗೆ ಲಸಿಕೆ

ಕೊರೊನಾವೈರಸ್ ಸೋಂಕಿತರ ತುರ್ತು ಚಿಕಿಕ್ಸೆಗೆ ಲಸಿಕೆ

ಕೊವಿಡ್-19 ಲಸಿಕೆ ಸಂಶೋಧನಾ ದತ್ತಾಂಶಗಳಿಗೆ ಸಂಬಂಧಿಸಿದಂತೆ ಸೇರಮ್ ಕಂಪನಿಯು ಸೋಮವಾರ ವರದಿ ನೀಡಿದೆ. ಭಾರತದಲ್ಲಿ ಪ್ರಾಥಮಿಕವಾಗಿ ನಡೆಯುತ್ತಿರುವ ವೈದ್ಯಕೀಯ ಪ್ರಯೋಗ ಮತ್ತು ಸಂಶೋಧನೆ ಪ್ರಕಾರ, ತುರ್ತು ಸಂದರ್ಭಗಳಲ್ಲಿ ಲಸಿಕೆಯನ್ನು ಸೋಂಕಿತರ ಮೇಲೆ ಪ್ರಯೋಗಿಸುವುದಕ್ಕೆ ಈ ವರ್ಷಾಂತ್ಯದ ವೇಳೆಗೆ ಅನುಮತಿ ಸಿಗಲಿದೆ. ತದನಂತರದಲ್ಲಿ 2021ರ ಫೆಬ್ರವರಿ ಅಥವಾ ಮಾರ್ಚ್ ನಲ್ಲಿ ಲಸಿಕೆ ಹಂಚಿಕೆಗೆ ಪೂರ್ಣ ಅನುಮತಿ ಸಿಗಲಿದೆ ಎಂದು ಅದರ್ ಪೂನಾವಾಲಾ ತಿಳಿಸಿದ್ದಾರೆ.

ಆಸ್ಟ್ರಾಜೆನಿಕಾ ಕಂಪನಿ ನೀಡುವ ಲಸಿಕೆ ಬೆಲೆ ಕಡಿಮೆ

ಆಸ್ಟ್ರಾಜೆನಿಕಾ ಕಂಪನಿ ನೀಡುವ ಲಸಿಕೆ ಬೆಲೆ ಕಡಿಮೆ

2021ರ ಮೊದಲ ತ್ರೈಮಾಸಿಕದಲ್ಲಿ ಆಸ್ಟ್ರಾಜೆನಿಕಾ ಸಂಸ್ಥೆಯು ಸಿದ್ಧಪಡಿಸಿರುವ ಕೊವಿಡ್-19 ಲಸಿಕೆಯನ್ನು ಖಾಸಗಿ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗುತ್ತದೆ. ಖಾಸಗಿ ಮಾರುಕಟ್ಟೆಯಲ್ಲಿ ಕನಿಷ್ಠ ಲಸಿಕೆ ಬೆಲೆ 1000 ರೂಪಾಯಿ(13.50 ಡಾಲರ್) ಆಗಿರುತ್ತದೆ. ಆದರೆ ಸರ್ಕಾರವು ಅತಿಹೆಚ್ಚು ಪ್ರಮಾಣದ ಲಸಿಕೆ ಪಡೆದುಕೊಳ್ಳುವುದಕ್ಕೆ ಒಪ್ಪಂದ ಮಾಡಿಕೊಳ್ಳುವುದರಿಂದ ಇದಕ್ಕಿಂತ ಕಡಿಮೆ ದರದಲ್ಲಿ ಲಸಿಕೆಯನ್ನು ನೀಡಲಾಗುತ್ತದೆ. 2021ರ ಜುಲೈ ವೇಳೆಗೆ 40 ಕೋಟಿ ಕೊವಿಡ್-19 ಲಸಿಕೆಯನ್ನು ಉತ್ಪಾದಿಸುವ ಗುರಿಯನ್ನು ಹೊಂದಲಾಗಿದೆ ಎಂದು ಅದರ್ ಪೂನಾವಾಲಾ ಹೇಳಿದ್ದಾರೆ.

Recommended Video

Covid Vaccine ಹಂಚುವಿಕೆ ಬಗ್ಗೆ ಮುಖ್ಯಮಂತ್ರಿಗಳ ಸಭೆ ಕರೆದ Modi | Oneindia Kannada
ಯಾವ ಸಂಸ್ಥೆಯ ಕೊರೊನಾವೈರಸ್ ಲಸಿಕೆಗೆ ಎಷ್ಟು ಬೆಲೆ?

ಯಾವ ಸಂಸ್ಥೆಯ ಕೊರೊನಾವೈರಸ್ ಲಸಿಕೆಗೆ ಎಷ್ಟು ಬೆಲೆ?

ಸರ್ಕಾರಕ್ಕೆ ಮಾಡರ್ನ ಕಂಪನಿಯು ಕೊರೊನಾವೈರಸ್ ಲಸಿಕೆ ಮಾರಾಟ ಮಾಡುವುದಕ್ಕೆ ಸಿದ್ಧವಾಗಿದೆ. ಒಂದು ಡೋಸ್ ಕೊವಿಡ್-19 ಲಸಿಕೆಗೆ 1854 ರೂಪಾಯಿಯಿಂದ 2744 ರೂಪಾಯಿ (25-37 ಡಾಲರ್) ನಿಗದಿಗೊಳಿಸಲಾಗುತ್ತದೆ ಎಂದು ಕಂಪನಿಯ ಸಿಇಓ ಸ್ಟೆಫನ್ ಬ್ಯಾನ್ಸಲ್ ತಿಳಿಸಿದ್ದಾರೆ. ಕೊರೊನಾವೈರಸ್ ಸೋಂಕಿತರಿಗೆ ಪಿ-ಫಿಜರ್ ಕಂಪನಿಯ ಲಸಿಕೆಯ ಒಂದು ಡೋಸ್ ಗೆ 1447 ರೂಪಾಯಿ(19.50 ಡಾಲರ್ ) ದರ ನಿಗದಿಗೊಳಿಸಲಾಗಿದೆ. ಒಬ್ಬ ಕೊವಿಡ್-19 ಸೋಂಕಿತನಿಗೆ ಕನಿಷ್ಠ 2 ಡೋಸ್ ಲಸಿಕೆ ಅಗತ್ಯವಿರುತ್ತದೆ. ಈ ಹಿನ್ನೆಲೆ ಪಿ-ಫಿಜರ್ ಕಂಪನಿಯ ಲಸಿಕೆ ಪಡೆದುಕೊಳ್ಳಲು ಕನಿಷ್ಠ 3708 ರೂಪಾಯಿ (50 ಡಾಲರ್) ವೆಚ್ಚವಾಗಲಿದೆ. ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾದ ಪಿ-ಫಿಜರ್ ಮತ್ತು ಮಾಡರ್ನಾ ಕಂಪನಿಯ ಕೊವಿಡ್-19 ಲಸಿಕೆಗಿಂತ ಅಗ್ಗದ ದರದಲ್ಲಿ ರಷ್ಯಾದ ಸ್ಪುಟಿಕ್-ವಿ ಲಸಿಕೆಯನ್ನು ನೀಡಲಾಗುತ್ತದೆ ಎಂದು ಕಂಪನಿ ಹೇಳಿಕೊಂಡಿದೆ.

English summary
Coronavirus Vaccine: India First Priority For Coronavirus Vaccine Delivery, Says Serum Institute.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X