• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಅಂತರರಾಷ್ಟ್ರೀಯ ವಿಮಾನ ಸಂಚಾರದ ಮೇಲಿನ ನಿರ್ಬಂಧ ಮುಂದುವರಿಕೆ

|

ನವದೆಹಲಿ, ಫೆಬ್ರವರಿ 27: ಕೆಲವು ರಾಜ್ಯಗಳಲ್ಲಿ ಕೊರೊನಾ ಸೋಂಕಿನ ಪ್ರಕರಣಗಳು ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಅಂತರರಾಷ್ಟ್ರೀಯ ವಾಣಿಜ್ಯ ವಿಮಾನ ಸಂಚಾರದ ಮೇಲಿನ ನಿರ್ಬಂಧವನ್ನು ವಿಸ್ತರಿಸಲಾಗಿದೆ. ಮಾರ್ಚ್ 31ರವರೆಗೂ ನಿರ್ಬಂಧ ವಿಸ್ತರಿಸಿರುವುದಾಗಿ ಕೇಂದ್ರ ಸರ್ಕಾರ ಘೋಷಿಸಿದೆ.

ನಾಗರೀಕ ವಿಮಾನಯಾನ ವ್ಯವಸ್ಥಾಪಕ ನಿರ್ದೇಶಕರು ಈ ಘೋಷಣೆ ಮಾಡಿದ್ದಾರೆ. ಫೆಬ್ರವರಿ 28ಕ್ಕೆ ನಿರ್ಬಂಧ ಕೊನೆಯಾಗುವ ಕಾರಣ ಮತ್ತೊಮ್ಮೆ ವಿಸ್ತರಿಸಿ ಆದೇಶ ಹೊರಡಿಸಿದ್ದಾರೆ. ವರದಿಯ ಪ್ರಕಾರ, ಕಾರ್ಗೋ ವಿಮಾನಗಳು ಹಾಗೂ ಅವಶ್ಯಕ ವಿಮಾನಗಳು ಕಾರ್ಯಾಚರಣೆ ಮುಂದುವರೆಸಲಿವೆ.

ಕೇಂದ್ರ ಕೋವಿಡ್ 19 ಮಾರ್ಗಸೂಚಿ ಮಾರ್ಚ್ 31ರವರೆಗೆ ವಿಸ್ತರಣೆ

ಶುಕ್ರವಾರ ದೇಶದಲ್ಲಿ 16,577 ಹೊಸ ಕೊರೊನಾ ಪ್ರಕರಣಗಳು ದಾಖಲಾಗಿವೆ. ಹೀಗಾಗಿ ಕೇಂದ್ರ ಸರ್ಕಾರ ಕೊರೊನಾ ಮಾರ್ಗಸೂಚಿಗಳನ್ನು ಮಾರ್ಚ್ 31ರವರೆಗೆ ವಿಸ್ತರಿಸಲಾಗಿದೆ.

ಭಾರತದಲ್ಲಿ ಒಟ್ಟು 1,10,63,491 ಕೊರೊನಾ ಸೋಂಕಿತರಿದ್ದಾರೆ. 24 ಗಂಟೆಯಲ್ಲಿ 120 ಮಂದಿ ಸಾವನ್ನಪ್ಪಿದ್ದಾರೆ.ಇನ್ನು ಒಂದೇ ದಿನ ಮಹಾಮಾರಿ ವೈರಸ್ 120 ಮಂದಿನ್ನು ಬಲಿಪಡೆದುಕೊಂಡಿದ್ದು, ಸಾವಿನ ಸಂಖ್ಯೆ 1,56,825ಕ್ಕೆ ಏರಿಕೆಯಾಗಿದೆ.

English summary
India extends ban on international passenger flights till March 31 due to rising coronavirus cases,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X