ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

10 ದಿನದೊಳಗೆ ಸ್ವಿಸ್ ನ ಎಚ್ ಎಸ್ ಬಿಸಿ ಖಾತೆ ಮಾಹಿತಿ ಭಾರತಕ್ಕೆ

|
Google Oneindia Kannada News

ನವದೆಹಲಿ, ಆಗಸ್ಟ್ 8: ಇನ್ನು ಹತ್ತು ದಿನದೊಳಗೆ ಭಾರತವು ಎಚ್ ಎಸ್ ಬಿಸಿ ಖಾತೆಯ ಬಗ್ಗೆ ಸ್ವಿಸ್ ಅಧಿಕಾರಿಗಳಿಂದ ಮಾಹಿತಿ ಪಡೆಯಲಿದೆ. ಸ್ವಿಟ್ಜರ್ ಲೆಂಡ್ ನ ಸರ್ವೋಚ್ಚ ನ್ಯಾಯಾಲಯದ ನಿರ್ದೇಶನದ ಮೇರೆಗೆ ತನ್ನ ನಾಗರಿಕರ ಎಚ್ ಎಸ್ ಬಿಸಿ ಬ್ಯಾಂಕ್ ಖಾತೆಯ ದತ್ತಾಂಶಗಳನ್ನು ಭಾರತ ಸರಕಾರದ ಜತೆ ಹಂಚಿಕೊಳ್ಳಲಿದೆ ಎಂದು ಕೇಂದ್ರ ಹಣಕಾಸು ಸಚಿವ ಪಿಯೂಷ್ ಗೋಯಲ್ ಹೇಳಿದ್ದಾರೆ.

ರಾಜ್ಯಸಭೆಯ ಪ್ರಶ್ನೋತ್ತರ ವೇಳೆಯಲ್ಲಿ ಉತ್ತರ ನೀಡಿದ ಅವರು, ಕಪ್ಪು ಹಣದ ವಾಪಸಿಗೆ ಗಂಭೀರ ಪ್ರಯತ್ನಗಳು ಮಾಡುತ್ತಿದ್ದೇವೆ. ಎಷ್ಟು ಮೊತ್ತ ಎಂಬ ಬಗ್ಗೆ ಅಧಿಕೃತ ಅಂದಾಜಿಲ್ಲ. ಲೆಕ್ಕಕ್ಕೆ ನೀಡದೆ ಎಚ್ ಎಸ್ ಬಿಸಿ ಖಾತೆಯಲ್ಲಿ ಇಟ್ಟಿರುವ 8,448 ಕೋಟಿ ರುಪಾಯಿಗೆ 5,447 ಕೋಟಿ ತೆರಿಗೆಗೆ ಬೇಡಿಕೆ ಬಂದಿದೆ ಎಂದರು.

ಜಿಎಸ್ಟಿ ಬಲವರ್ಧನೆ: ಡಿಜಿಟಲ್ ವ್ಯವಹಾರಕ್ಕೆ ಕ್ಯಾಶ್ ಬ್ಯಾಕ್ ಆಫರ್ಜಿಎಸ್ಟಿ ಬಲವರ್ಧನೆ: ಡಿಜಿಟಲ್ ವ್ಯವಹಾರಕ್ಕೆ ಕ್ಯಾಶ್ ಬ್ಯಾಕ್ ಆಫರ್

ಇನ್ನೊಂದು ವಾರ ಅಥವಾ ಹತ್ತು ದಿನದೊಳಗೆ ಈ ಬಗ್ಗೆ ಮಾಹಿತಿ ಹಂಚಿಕೊಳ್ಳುವಂತೆ ಸ್ವಿಟ್ಜರ್ ಲೆಂಡ್ ಸರಕಾರಕ್ಕೆ ಅಲ್ಲಿನ ಸರ್ವೋಚ್ಚ ನ್ಯಾಯಾಲಯ ಆದೇಶ ನೀಡಿದೆ. ಅದನ್ನು ಪಡೆಯುವ ಸಲುವಾಗಿ ಅಲ್ಲಿಗೆ ಹೋಗುತ್ತಿದ್ದೇವೆ ಎಂದು ಗೋಯಲ್ ಹೇಳಿದ್ದಾರೆ.

India expects HSBC account data from Switzerland in 10 days: Piyush Goyal

ಈ ಹಿಂದೆ ನಮ್ಮ ಕಂದಾಯ ಕಾರ್ಯದರ್ಶಿಗಳು ಆ ದೇಶಕ್ಕೆ ಹೋಗಿ, ಮಾತು-ಕತೆ ನಡೆಸಿ, ಪರಸ್ಪರ ಮಾಹಿತಿ ಹಂಚಿಕೊಳ್ಳುವ ಬಗ್ಗೆ ಘೋಷಣೆಯಾಗಿತ್ತು. ಆ ನಂತರ ಎಚ್ ಎಸ್ ಬಿಸಿ ಖಾತೆಗಳ ಬಗ್ಗೆ ಮಾಹಿತಿ ದೊರೆಯಲು ಆರಂಭಿಸಿದ್ದವು. ಇದೇ ಮಾದರಿಯಲ್ಲೇ ಇತರ ದೇಶಗಳ ಜತೆಗೆ ಕೂಡ ಮಾಹಿತಿ ಹಂಚಿಕೊಳ್ಳುವ ಪ್ರಕ್ರಿಯೆ ಆರಂಭವಾಗಿದೆ ಎಂದಿದ್ದಾರೆ.

ಎಚ್ ಎಸ್ ಬಿಸಿ ಪಟ್ಟಿಯಲ್ಲಿ ಬಹಿರಂಗ ಪಡಿಸದ 8,448 ಕೋಟಿ ರುಪಾಯಿ ಪತ್ತೆಯಾಗಿದೆ. ಅದಕ್ಕೆ ತೆರಿಗೆ 5,447 ಕೋಟಿ. ಮತ್ತು 164 ಪ್ರಕರಣಗಳಲ್ಲಿ 1290 ಕೋಟಿ ದಂಡ ಹಾಕಲಾಗಿದೆ. 84 ಪ್ರಕರಣಗಳಲ್ಲಿ 199 ವಿಚಾರಣೆ ದೂರುಗಳನ್ನು ದಾಖಲಿಸಲಾಗಿದೆ. ಇನ್ನು ಪನಾಮ ಪೇಪರ್ಸ್ ವಿಚಾರವಾಗಿ 426 ಮಂದಿ ಹೆಸರಿದ್ದು, ಎಲ್ಲ ಪ್ರಕರಣದಲ್ಲಿ ತನಿಖೆ ಆರಂಭವಾಗಿದೆ ಎಂದು ತಿಳಿಸಿದ್ದಾರೆ.

ಪನಾಮ ಪೇಪರ್ಸ್ ಜತೆಗೆ ಪ್ಯಾರಡೈಸ್ ಪೇಪರ್ಸ್ ನ ಆರೋಪದ ಬಗ್ಗೆ ಕೂಡ ತನಿಖೆ ಆಗಬೇಕು ಎಂದು ಸಚಿವರು ಮಾಹಿತಿ ನೀಡಿದ್ದಾರೆ.

English summary
India expects to receive data from Swiss authorities on HSBC accounts of its citizens in about 10 days after Switzerland’s apex court directions that data be shared with the Indian government, Finance Minister Piyush Goyal said on Tuesday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X