ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ಸಂಕಷ್ಟ: ಇರಾನ್ ಹಿಂದಿಕ್ಕಿದ ಭಾರತ ಟಾಪ್ ಹತ್ತರೊಳಗೆ ಪ್ರವೇಶ

|
Google Oneindia Kannada News

ದೆಹಲಿ, ಮೇ 25: ಚೀನಾದಲ್ಲಿ ಹುಟ್ಟಿದ ಕೊರೊನಾ ವೈರಸ್ ಬಳಿಕ ವಿಶ್ವದ ಬಹುತೇಕ ರಾಷ್ಟ್ರಗಳಿಗೆ ಸಂಕಷ್ಟ ತಂದೊಡ್ಡಿದೆ. ಯುಎಸ್, ಸ್ಪೇನ್, ಇಟಲಿ, ಫ್ರಾನ್ಸ್, ಜರ್ಮನಿ ಅಂತಹ ರಾಷ್ಟ್ರಗಳಲ್ಲಿ ಮಾರಣಹೋಮವೇ ನಡೆದು ಹೋಗಿದೆ. ಲಕ್ಷಾಂತರ ಜನರಲ್ಲಿ ಸೋಂಕು ಕಾಣಿಸಿಕೊಂಡಿದ್ದು, ಸಾವಿರಾರು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.

Recommended Video

ತರಕಾರಿಯಿಂದಲು ಹಬ್ಬುತ್ತಿದೆ ಕೊರೋನಾ ಮಹಾಮಾರಿ!! ಎಚ್ಚರ!! | Oneindia Kannada

ಆ ದೇಶಗಳಿಗೆ ಹೋಲಿಸಿಕೊಂಡರೆ ಭಾರತದಲ್ಲಿ ಜನಸಂಖ್ಯೆ ಹೆಚ್ಚು. ಭವಿಷ್ಯದಲ್ಲಿ ಭಾರತಕ್ಕೂ ಇಂತಹ ಸ್ಥಿತಿ ಬರಬಹುದು ಎಂಬ ಆತಂಕ ಕಾಡಿತ್ತು. ಆದ್ರೀಗ, ಇದು ನಿಜಾ ಆಗುವತ್ತ ಸಾಗಿದೆ. ಭಾರತದಲ್ಲಿ ಕೊರೊನಾ ಕೇಸ್‌ಗಳು ದಿನದಿಂದ ದಿನಕ್ಕೆ ದ್ವಿಗುಣವಾಗಿದೆ.

ಏರ್ ಪೋರ್ಟ್ ನಲ್ಲಿ ಪ್ರಯಾಣಿಕರ ಕಿರಿಕ್: ಕ್ವಾರಂಟೈನ್ ಗೆ ಹೋಗಲು ನಕಾರಏರ್ ಪೋರ್ಟ್ ನಲ್ಲಿ ಪ್ರಯಾಣಿಕರ ಕಿರಿಕ್: ಕ್ವಾರಂಟೈನ್ ಗೆ ಹೋಗಲು ನಕಾರ

ಅತಿ ಹೆಚ್ಚು ಕೊರೊನಾ ಕೇಸ್‌ಗಳ ದಾಖಲಾಗಿರುವ ದೇಶಗಳ ಪಟ್ಟಿಯಲ್ಲಿ ಭಾರತ ಟಾಪ್ ಹತ್ತರೊಳಗೆ ಪ್ರವೇಶವಾಗಿದೆ. ಇರಾನ್ ದೇಶವನ್ನು ಹಿಂದಿಕ್ಕಿದ ಭಾರತ ಈಗ ಕೊವಿಡ್ ಹಾಟ್‌ಸ್ಪಾಟ್‌ ಆಗಿದೆ. ಮುಂದೆ ಓದಿ....

ಭಾರತದಲ್ಲಿ 1,39 ಲಕ್ಷ ಕೇಸ್

ಭಾರತದಲ್ಲಿ 1,39 ಲಕ್ಷ ಕೇಸ್

ಭಾರತದಲ್ಲಿ ಕೊರೊನಾ ಪೀಡಿತರ ಸಂಖ್ಯೆ 1.39 ಲಕ್ಷ ದಾಟಿದೆ. ಈ ಮೂಲಕ ಅತಿ ಹೆಚ್ಚು ಕೊವಿಡ್ ಸೋಂಕು ಹೊಂದಿರುವ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತ ಹತ್ತನೇ ಸ್ಥಾನಕ್ಕೆ ಜಿಗಿದಿದೆ. ಇರಾನ್ ದೇಶವನ್ನು ಹಿಂದಿಕ್ಕಿದ ಭಾರತದ ಟಾಪ್ ಹತ್ತರೊಳಗೆ ಪ್ರವೇಶವಾಗಿದೆ. ಇರಾನ್‌ನಲ್ಲಿ ಒಟ್ಟು 135,701 ಪ್ರಕರಣಗಳು ದಾಖಲಾಗಿದೆ. ಭಾರತದಲ್ಲಿ 139,911 ಕೇಸ್ ವರದಿಯಾಗಿದೆ.

ಮಹಾರಾಷ್ಟ್ರದಲ್ಲಿ 50 ಸಾವಿರ ಕೇಸ್

ಮಹಾರಾಷ್ಟ್ರದಲ್ಲಿ 50 ಸಾವಿರ ಕೇಸ್

ಭಾರತದಲ್ಲಿ ಅತಿ ಹೆಚ್ಚು ಕೊರೊನಾ ಕೇಸ್ ದಾಖಲಾಗಿರುವುದು ಮಹಾರಾಷ್ಟ್ರದಲ್ಲಿ. ಸುಮಾರು 50 ಜನರಿಗೆ ಮಹಾರಾಷ್ಟ್ರದಲ್ಲಿ ಮಹಾಮಾರಿ ವಕ್ಕರಿಸಿದೆ. ಮಹಾರಾಷ್ಟ್ರ ಬಿಟ್ಟರೆ ತಮಿಳುನಾಡು (16 ಸಾವಿರ), ಗುಜರಾತ್ (14 ಸಾವಿರ), ದೆಹಲಿ (14 ಸಾವಿರ) ರಾಜ್ಯಗಳಲ್ಲಿ ಹೆಚ್ಚು ಸೋಂಕು ಕಾಣಿಸಿಕೊಂಡಿದೆ.

ಕರ್ನಾಟಕದಾದ್ಯಂತ ಕೊರೊನಾ ವೈರಸ್ ಸೋಂಕು ಹರಡಲು 121 ಯುನೀಕ್ ಸ್ಪ್ರೆಡರ್ಸ್ ಕಾರಣ!ಕರ್ನಾಟಕದಾದ್ಯಂತ ಕೊರೊನಾ ವೈರಸ್ ಸೋಂಕು ಹರಡಲು 121 ಯುನೀಕ್ ಸ್ಪ್ರೆಡರ್ಸ್ ಕಾರಣ!

ಯುಎಸ್‌ನಲ್ಲಿ 16.8 ಲಕ್ಷ ಪ್ರಕರಣ

ಯುಎಸ್‌ನಲ್ಲಿ 16.8 ಲಕ್ಷ ಪ್ರಕರಣ

ಪ್ರಸ್ತುತ ಯುಎಸ್‌ನಲ್ಲಿ ಅತಿ ಹೆಚ್ಚು ಕೊರೊನಾ ವೈರಸ್‌ ಪ್ರಕರಣ ದಾಖಲಾಗಿದೆ. ಈವರೆಗೂ 16 ಲಕ್ಷ (1,686,436) ಮಂದಿಗೆ ಸೋಂಕು ತಗುಲಿದೆ. 99,300 ಮಂದಿ ಸೋಂಕಿನಿಂದ ಮೃತಪಟ್ಟಿದ್ದಾರೆ. 4.5 ಲಕ್ಷ ಮಂದಿ ಕೊರೊನಾದಿಂದ ಚೇತರಿಸಿಕೊಂಡಿದ್ದಾರೆ. ಇನ್ನುಳಿದಂತೆ 1,135,434 ಪ್ರಕರಣಗಳು ಸಕ್ರಿಯವಾಗಿದೆ.

ರಷ್ಯಾ ಮತ್ತು ಬ್ರೆಜಿಲ್ ಹೊಸ ಹಾಟ್‌ಸ್ಪಾಟ್

ರಷ್ಯಾ ಮತ್ತು ಬ್ರೆಜಿಲ್ ಹೊಸ ಹಾಟ್‌ಸ್ಪಾಟ್

ಯುಎಸ್ ನಂತರ ಅತಿ ಹೆಚ್ಚು ಸೋಂಕು ಹೊಂದಿರುವುದು ಬ್ರೆಜಿಲ್ (363,618). ರಷ್ಯಾದಲ್ಲೂ ಕೊವಿಡ್ ಪ್ರಕರಣಗಳು ಏರಿಕೆಯಾಗುತ್ತಿದೆ. ರಷ್ಯಾದಲ್ಲಿ 344,481 ಮಂದಿಗೆ ಸೋಂಕು ತಗುಲಿದೆ. ಬ್ರೆಜಿಲ್‌ನಲ್ಲಿ ದಿನಕ್ಕೆ 16 ಸಾವಿರ ಕೇಸ್ ದಾಖಲಾಗುತ್ತಿದೆ. ರಷ್ಯಾದಲ್ಲಿ ದಿನಕ್ಕೆ 8.5 ಸಾವಿರ ಹೊಸ ಕೇಸ್ ವರದಿಯಾಗುತ್ತಿದೆ.

ಚೇತರಿಕೆ ಕಂಡ ಸ್ಪೇನ್, ಇಟಲಿ, ಫ್ರಾನ್ಸ್

ಚೇತರಿಕೆ ಕಂಡ ಸ್ಪೇನ್, ಇಟಲಿ, ಫ್ರಾನ್ಸ್

ಆರಂಭಿಕ ಹಂತದಲ್ಲಿ ಕೊರೊನಾ ಅಟ್ಟಹಾಸಕ್ಕೆ ಬಲಿಯಾಗಿದ್ದ ಸ್ಪೇನ್ (282,852), ಇಟಲಿ (229,858), ಫ್ರಾನ್ಸ್ (182,584), ಯುಕೆ (259,559), ಜರ್ಮನಿ (180,328) ದೇಶಗಳು ಈಗ ನಿಯಂತ್ರಣಕ್ಕೆ ಬಂದಿದೆ. ಟರ್ಕಿ ದೇಶದಲ್ಲಿ 156,827 ಮಂದಿಗೆ ಸೋಂಕು ತಗುಲಿದೆ.

English summary
India enter the top 10 list of countries with most COVID-19 cases today by surpassing Iran.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X