ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಂತುಷ್ಟ ದೇಶಗಳ ಪಟ್ಟಿಯಲ್ಲಿ ಪಾಕ್, ಚೀನಾಗೂ ಹಿಂದಿದೆ ಭಾರತ

|
Google Oneindia Kannada News

2018ನೇ ಇಸವಿಗೆ ಹೋಲಿಸಿದರೆ 2019ರಲ್ಲಿ ಭಾರತೀಯರು ಸಂತೋಷವಾಗಿಲ್ಲ. ಸಂತುಷ್ಟ ದೇಶಗಳ ಪಟ್ಟಿಯಲ್ಲಿ ಭಾರತ 140ನೇ ಸ್ಥಾನದಲ್ಲಿ ಇದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ 7 ಸ್ಥಾನ ಕುಸಿತ ಕಂಡಿದೆ. ಈ ವರ್ಷದ ವಿಶ್ವ ಸಂತುಷ್ಟ ವರದಿಯನ್ನು ವಿಶ್ವಸಂಸ್ಥೆಯು ಬುಧವಾರ ಬಿಡುಗಡೆ ಮಾಡಿದ್ದು, ಅದರಲ್ಲಿ ಸತತ ಎರಡನೇ ವರ್ಷವೂ ಫಿನ್ ಲ್ಯಾಂಡ್ ಮೊದಲನೇ ಸ್ಥಾನದಲ್ಲಿದೆ.

ಈ ವರದಿಯು ವಿಶ್ವಸಂಸ್ಥೆಯ ಪರವಾಗಿ ಸಸ್ಟೈನಬಲ್ ಡೆವಲಪ್ ಮೆಂಟ್ ಸಲ್ಯೂಷನ್ ನೆಟ್ ವರ್ಕ್ ನಿಂದ ಮಾರ್ಚ್ ಇಪ್ಪತ್ತರಂದು ಬಿಡುಗಡೆ ಆಗಿದೆ. ಮಾರ್ಚ್ ಇಪ್ಪತ್ತನೇ ತಾರೀಕನ್ನು ವಿಶ್ವ ಸಂತುಷ್ಟ ದಿನ ಎಂದು ಆಚರಿಸುತ್ತಾ ಬರಲಾಗುತ್ತಿದೆ. ಆರು ಮುಖ್ಯ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಶ್ರೇಯಾಂಕವನ್ನು ನೀಡಲಾಗುತ್ತದೆ.

ಭಾರತೀಯರು ಅತ್ಯಂತ ಸುಖಿಗಳು, ಯಾಕೆ ಗೊತ್ತಾ?ಭಾರತೀಯರು ಅತ್ಯಂತ ಸುಖಿಗಳು, ಯಾಕೆ ಗೊತ್ತಾ?

ಆದಾಯ, ಸ್ವಾತಂತ್ರ್ಯ, ವಿಶ್ವಾಸ, ಆರೋಗ್ಯಪೂರ್ಣ ಜೀವನ ನಿರೀಕ್ಷೆ, ಸಾಮಾಜಿಕ ಬೆಂಬಲ ಹಾಗೂ ಉದಾರತೆ ಈ ಆರು ಅಂಶಗಳನ್ನು ಪರಿಗಣನೆಗೆ ತೆಗೆದುಕೊಳ್ಳಲಾಗಿದೆ. ವರದಿ ಪ್ರಕಾರ, ಒಟ್ಟಾರೆಯಾಗಿ ವಿಶ್ವದ ಸಂತೋಷದಲ್ಲಿ ಕಳೆದ ಕೆಲ ವರ್ಷಗಳಲ್ಲಿ ಇಳಿಕೆ ಆಗುತ್ತಾ ಬಂದಿದೆ. ಅದಕ್ಕೆ ಕಾರಣ ಭಾರತದಲ್ಲಿನ ಪರಿಸ್ಥಿತಿಯೂ ಆಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಏಳು ಸ್ಥಾನ ಇಳಿಕೆ ಆಗಲಿದೆ.

India drops 7 spots in list of happiest nations

ವಿಶ್ವಸಂಸ್ಥೆಯ ವಾರ್ಷಿಕ ಏಳನೇ ವರದಿಯಲ್ಲಿ 156 ದೇಶಗಳ ನಾಗರಿಕರು ತಾವೆಷ್ಟು ಸಂತುಷ್ಟರು ಎಂದುಕೊಳ್ಳುತ್ತಾರೆ ಎಂಬುದನ್ನು ಅಳತೆಗೋಲಾಗಿ ತೆಗೆದುಕೊಳ್ಳಲಾಗಿದೆ. ಈ ಮಧ್ಯ ನಕಾರಾತ್ಮಕ ಭಾವನೆಗಳಾದ ಚಿಂತೆ, ದುಃಖ ಮತ್ತು ಕೋಪ ಕೂಡ ಹೆಚ್ಚಾಗಿರುವುದು ಕಂಡುಬಂದಿದೆ.

ಸತತವಾಗಿ ಎರಡನೇ ವರ್ಷ ಫಿನ್ ಲ್ಯಾಂಡ್ ಅತ್ಯಂತ ಸಂತುಷ್ಟ ದೇಶ ಎಂಬ ಅಗ್ಗಳಿಕೆಗೆ ಪಾತ್ರವಾಗಿದೆ. ಆ ನಂತರದ ಸ್ಥಾನಗಳಲ್ಲಿ ಡೆನ್ಮಾರ್ಕ್, ನಾರ್ವೆ, ಐಸ್ ಲ್ಯಾಂಡ್, ನೆದರ್ ಲ್ಯಾಂಡ್ಸ್ ಇದೆ. ಪಾಕಿಸ್ತಾನವು ಈ ಪಟ್ಟಿಯಲ್ಲಿ 67ನೇ ಸ್ಥಾನದಲ್ಲಿದ್ದರೆ, ಬಾಂಗ್ಲಾದೇಶ 125ನೇ ಸ್ಥಾನ ಹಾಗೂ ಚೀನಾ 93ನೇ ಸ್ಥಾನದಲ್ಲಿದೆ.

ಯುದ್ಧಪೀಡಿತ ದಕ್ಷಿಣ ಸೂಡಾನ್ ಜನರು ಅತ್ಯಂತ ದುಃಖದಲ್ಲಿರುವ ಜನರಾದರೆ, ಆ ಸಾಲಿನಲ್ಲೇ ಸೆಂಟ್ರಲ್ ಆಫ್ರಿಕನ್ ರಿಪಬ್ಲಿಕ್ (155), ಅಫ್ಘಾನಿಸ್ತಾನ (154), ತಾಂಜೇನಿಯಾ (153) ಹಾಗೂ ರುವಾಂಡ (152) ಇದೆ. ಈ ಪಟ್ಟಿ ತಯಾರಿಸುವ ವೇಳೆಯಲ್ಲಿ ಜಿಡಿಪಿ, ಸಾಮಾಜಿಕ ಭದ್ರತೆಯನ್ನೂ ಗಣನೆಗೆ ತೆಗೆದುಕೊಳ್ಳಲಾಗಿದೆ.

ವಿಶ್ವದ ಅತ್ಯಂತ ಶ್ರೀಮಂತ ರಾಷ್ಟ್ರಗಳ ಪೈಕಿ ಒಂದಾದ ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕವು ಸಂತುಷ್ಟ ದೇಶಗಳ ಪಟ್ಟಿಯಲ್ಲಿ 19ನೇ ಸ್ಥಾನದಲ್ಲಿದೆ.

English summary
Indians are not as happy in 2019 as they were in 2018 and the country figures at 140th place, seven spots down from last year, on this year's UN World Happiness Report released Wednesday which is topped by Finland for the second year in a row.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X