ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದಲ್ಲಿ ಸ್ಪುಟ್ನಿಕ್-V ಲಸಿಕೆ ಪ್ರಯೋಗ: ರಷ್ಯಾಕ್ಕೆ ಹಿನ್ನಡೆ

|
Google Oneindia Kannada News

ನವದೆಹಲಿ, ಅಕ್ಟೋಬರ್ 8: ರಷ್ಯಾದ ಸ್ಪುಟ್ನಿಕ್-5 ಕೊರೊನಾ ವೈರಸ್ ಲಸಿಕೆಯನ್ನು ಭಾರತದಲ್ಲಿ ದೊಡ್ಡ ಮಟ್ಟದಲ್ಲಿ ಪ್ರಯೋಗಕ್ಕೆ ಒಳಪಡಿಸುವ ಡಾ. ರೆಡ್ಡಿ ಲ್ಯಾಬೋರೇಟರೀಸ್ ಲಿಮಿಟೆಡ್‌ನ ಪ್ರಸ್ತಾವವನ್ನು ದೇಶದ ಔಷಧ ನಿಯಂತ್ರಕ ಸಂಸ್ಥೆ ತಿರಸ್ಕರಿಸಿದೆ. ಲಸಿಕೆಯ ಆರಂಭದ ಪ್ರಯೋಗವನ್ನು ಚಿಕ್ಕ ಪ್ರಮಾಣದಲ್ಲಿ ನಡೆಸುವಂತೆ ಸೂಚಿಸಿದೆ.

ಕೇಂದ್ರ ಔ‍ಷಧ ಗುಣಮಟ್ಟ ನಿಯಂತ್ರಣ ಸಂಸ್ಥೆಯ (ಸಿಡಿಎಸ್‌ಸಿಒ) ಪರಿಣತರ ಸಮಿತಿಯು ನೀಡಿರುವ ಶಿಫಾರಸುಗಳಲ್ಲಿ ವಿದೇಶಗಳಲ್ಲಿ ಯಾವುದೇ ಲಸಿಕೆಯ ಪ್ರಾಥಮಿಕ ಹಂತದ ಪರೀಕ್ಷೆಗಳ ಸುರಕ್ಷತೆ ಮತ್ತು ಪ್ರತಿರೋಧಕ ಶಕ್ತಿಯ ದತ್ತಾಂಶಗಳು ತೀರಾ ಅಲ್ಪ ಪ್ರಮಾಣದಲ್ಲಿರುತ್ತದೆ. ಭಾರತೀಯ ಪಾಲುದಾರರಿಗೆ ಯಾವುದೇ ಮಾಹಿತಿ ಸಿಗುವುದಿಲ್ಲ ಎಂದು ಹೇಳಿದೆ.

ಭಾರತದಲ್ಲಿ ಸ್ಪುಟ್ನಿಕ್ v ಪ್ರಯೋಗಕ್ಕೆ ಡಿಸಿಜಿಐನಿಂದ ಅನುಮತಿ ಕೇಳಿದ ರೆಡ್ಡೀಸ್ ಲ್ಯಾಬ್ಭಾರತದಲ್ಲಿ ಸ್ಪುಟ್ನಿಕ್ v ಪ್ರಯೋಗಕ್ಕೆ ಡಿಸಿಜಿಐನಿಂದ ಅನುಮತಿ ಕೇಳಿದ ರೆಡ್ಡೀಸ್ ಲ್ಯಾಬ್

ಸ್ಪುಟ್ನಿಕ್ ಲಸಿಕೆಯು ಎಷ್ಟು ದಕ್ಷವಾಗಿ ಕೆಲಸ ಮಾಡುತ್ತದೆ ಎಂಬ ಪ್ರಯೋಗದ ಮಾಹಿತಿ ಪರಿಪೂರ್ಣವಾಗಿ ದೊರಕುವ ಮುನ್ನವೇ ಭಾರತದಲ್ಲಿ ವ್ಯಾಪಕ ಪ್ರಯೋಗ ನಡೆಸುವ ರಷ್ಯಾದ ಯೋಜನೆಗೆ ಭಾರತದ ತೀರ್ಮಾನ ಹಿನ್ನಡೆಯುಂಟುಮಾಡಿದೆ. ಭಾರತದಲ್ಲಿ ಲಸಿಕೆ ಪ್ರಯೋಗದ ಮೂಲಕ ಜಗತ್ತಿನ ಮೊದಲ ಹಾಗೂ ಮುಂಚೂಣಿ ಲಸಿಕೆ ಎಂಬ ಅನುಮೋದನೆ ಪಡೆಯುವ ಪ್ರಯತ್ನಕ್ಕೆ ತಡೆ ಬಿದ್ದಂತಾಗಿದೆ.

India Declines Proposal To Test Russias Sputnik-V Covid-19 Vaccine In Large Scale

ರಷ್ಯಾ: 3 ಸಾವಿರಕ್ಕೂ ಹೆಚ್ಚು ಮಂದಿಗೆ ಕೊರೊನಾ ಲಸಿಕೆ ನೀಡಿಕೆರಷ್ಯಾ: 3 ಸಾವಿರಕ್ಕೂ ಹೆಚ್ಚು ಮಂದಿಗೆ ಕೊರೊನಾ ಲಸಿಕೆ ನೀಡಿಕೆ

ರಷ್ಯನ್ ನೇರ ಹೂಡಿಕೆ ನಿಧಿ (ಆರ್‌ಡಿಐಎಫ್) ಸ್ಪುಟ್ನಿಕ್ ಲಸಿಕೆಯನ್ನು ಮಾರುಕಟ್ಟೆಯಲ್ಲಿ ವಿತರಣೆ ಮಾಡುತ್ತಿದೆ. ಭಾರತದ ಡಾ. ರೆಡ್ಡೀಸ್ ಲ್ಯಾಬೊರೇಟರೀಸ್, ದೇಶದಲ್ಲಿ ಲಸಿಕೆಯ ಪ್ರಾಯೋಗಿಕ ಪರೀಕ್ಷೆಗಳನ್ನು ನಡೆಸುವ ಮತ್ತು ವಿತರಿಸುವ ಸಂಬಂಧ ಆರ್‌ಡಿಐಎಫ್‌ ಜತೆಗಿನ ತನ್ನ ಪಾಲುದಾರಿಕೆಯನ್ನು ಕಳೆದ ತಿಂಗಳು ಘೋಷಿಸಿತ್ತು.

English summary
India has declined the proposal conduct a large study of Russia's Sputnik-V Covid-19 vaccine.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X