ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಾಮಾಜಿಕ ಮಾಧ್ಯಮದಲ್ಲಿ ಕೊರೊನಾ ಸುಳ್ಳು ಮಾಹಿತಿ ಹರಡುವಿಕೆಯಲ್ಲಿ ಭಾರತವೇ ಮೊದಲು

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 15: ಕೊರೊನಾ ಸೋಂಕಿನ ಕುರಿತು ಸಾಕಷ್ಟು ಸುಳ್ಳು, ತಪ್ಪು ಮಾಹಿತಿಗಳು ದಿನನಿತ್ಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುತ್ತವೆ. ಸೋಂಕು ಪತ್ತೆಯಾದ ಆರಂಭದಲ್ಲಂತೂ ಕೊರೊನಾ ಕುರಿತು ಊಹಾಪೋಹಗಳು ಹರಿದಾಡಿದ್ದು ಲೆಕ್ಕವೇ ಇಲ್ಲ. ಸೋಂಕಿನ ಕುರಿತು ಯಾರಿಗೂ ಸ್ಪಷ್ಟ ಮಾಹಿತಿ ಇಲ್ಲದಿರುವುದು, ಈ ಸುಳ್ಳು ಸುದ್ದಿ ಹರಡಲು ಹಾಗೂ ಅದನ್ನು ನಂಬುವವರು ಹೆಚ್ಚಾಗಲು ಕಾರಣವಾಗಿತ್ತು.

ಹೀಗೆ ಸಾಮಾಜಿಕ ಜಾಲತಾಣಗಳಲ್ಲಿ ಕೊರೊನಾ ಸೋಂಕಿನ ಕುರಿತು ಸೃಷ್ಟಿಯಾಗಿದ್ದ ಸುಳ್ಳು ಮಾಹಿತಿಗಳ ಕುರಿತು ಅಧ್ಯಯನವೊಂದನ್ನು ನಡೆಸಲಾಗಿದೆ. ಯಾವ ದೇಶಗಳು ಸಾಮಾಜಿಕ ಜಾಲತಾಣಗಳಲ್ಲಿ ಕೊರೊನಾ ಸೋಂಕಿನ ಕುರಿತು ಹೆಚ್ಚು ಸುಳ್ಳು ಸುದ್ದಿಗಳನ್ನು ಹರಡಿವೆ ಎಂಬುದರ ಕುರಿತು ಈ ಅಧ್ಯಯನದಲ್ಲಿ ಮಾಹಿತಿ ಸಂಗ್ರಹಿಸಲಾಗಿತ್ತು.

ಹೊಸ ಐಟಿ ನಿಯಮದ ಪ್ರಕಾರ ಗೂಗಲ್, ಫೇಸ್‌ಬುಕ್ ವೆಬ್‌ಸೈಟ್‌ನಲ್ಲಿ ಬದಲಾವಣೆಹೊಸ ಐಟಿ ನಿಯಮದ ಪ್ರಕಾರ ಗೂಗಲ್, ಫೇಸ್‌ಬುಕ್ ವೆಬ್‌ಸೈಟ್‌ನಲ್ಲಿ ಬದಲಾವಣೆ

ಅದರ ಪ್ರಕಾರ ಸಾಮಾಜಿಕ ಮಾಧ್ಯಮಗಳಲ್ಲಿ ಸುಳ್ಳು ಅಥವಾ ತಪ್ಪು ಮಾಹಿತಿ ಹರಡಿರುವ ದೇಶಗಳಲ್ಲಿ ಭಾರತ ಮೊದಲ ಸ್ಥಾನದಲ್ಲಿದೆ.

India Creates More Misinformation About Coronavirus In Social Media As Per Study

'138 ದೇಶಗಳಲ್ಲಿ ಕೊರೊನಾ ಕುರಿತು ತಪ್ಪು ಮಾಹಿತಿ ಹರಡುವಿಕೆ ಹಾಗೂ ಅವುಗಳ ಮೂಲ ವಿಶ್ಲೇಷಣೆ' ಶೀರ್ಷಿಕೆಯಲ್ಲಿ ನಡೆಸಿದ ಅಧ್ಯಯನದಿಂದ ಈ ಮಾಹಿತಿ ದೊರೆತಿದೆ. ಸಜ್‌ನ 'ಇಂಟರ್ ನ್ಯಾಷನಲ್ ಫೆಡರೇಷನ್ ಆಫ್ ಲೈಬ್ರರಿ ಅಸೋಸಿಯೇಟ್ಸ್ ಅಂಡ್ ಇನ್‌ಸ್ಟಿಟ್ಯೂಷನಲ್ ಜರ್ನಲ್‌'ನಲ್ಲಿ ಈ ಅಧ್ಯಯನವನ್ನು ಪ್ರಕಟಿಸಲಾಗಿದೆ.

ಹೊಸ ಐಟಿ ನಿಯಮ ಪಾಲಿಸದೆ ಭಾರತದಲ್ಲಿ ಕಾನೂನಾತ್ಮಕ ರಕ್ಷಣೆ ಕಳೆದುಕೊಂಡ ಟ್ವಿಟ್ಟರ್‌ ಹೊಸ ಐಟಿ ನಿಯಮ ಪಾಲಿಸದೆ ಭಾರತದಲ್ಲಿ ಕಾನೂನಾತ್ಮಕ ರಕ್ಷಣೆ ಕಳೆದುಕೊಂಡ ಟ್ವಿಟ್ಟರ್‌

ಎಲ್ಲೆಲ್ಲೂ ಅಂತರ್ಜಾಲ ಸೌಲಭ್ಯ ವ್ಯಾಪಕವಾಗಿರುವುದು, ಸಾಮಾಜಿಕ ಮಾಧ್ಯಮಗಳ ಬಳಕೆ ಹೆಚ್ಚಾಗಿರುವುದು, ಅಂತರಜಾಲ ಬಳಕೆ ಕುರಿತ ಅರಿವಿನ ಕೊರತೆ ಭಾರತದ ಸಾಮಾಜಿಕ ಮಾಧ್ಯಮಗಳಲ್ಲಿ ಕೊರೊನಾ ಕುರಿತು ತಪ್ಪು ಮಾಹಿತಿ ಹರಡಲು ಪ್ರಮುಖ ಕಾರಣವಾಗಿವೆ' ಎಂಬುದನ್ನು ಅಧ್ಯಯನ ಉಲ್ಲೇಖಿಸಿದೆ.

ಅಧ್ಯಯನದಲ್ಲಿ 138 ದೇಶಗಳಲ್ಲಿ, ಕೊರೊನಾ ಸೋಂಕಿನ ಕುರಿತು ಸೃಷ್ಟಿಯಾಗಿರುವ 9657 ಸುಳ್ಳು ಸುದ್ದಿಯನ್ನು ವಿಶ್ಲೇಷಣೆಗೆ ಒಳಪಡಿಸಲಾಗಿದೆ. ವಿವಿಧ ದೇಶಗಳಿಂದ ಹರಡಿರುವ ತಪ್ಪು ಮಾಹಿತಿಯ ಮೂಲಗಳನ್ನು ತಿಳಿದುಕೊಳ್ಳಲು 94 ಸಂಸ್ಥೆಗಳು ಪರಿಶೀಲನೆ ನಡೆಸಿವೆ.

India Creates More Misinformation About Coronavirus In Social Media As Per Study

ಈ ಅಧ್ಯಯನದ ಫಲಿತಾಂಶದಲ್ಲಿ, ಇತರೆ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಕೊರೊನಾ ಸೋಂಕಿನ ಕುರಿತು ಸಾಮಾಜಿಕ ಜಾಲತಾಣದ ಮೂಲಕ ತಪ್ಪು ಮಾಹಿತಿ ಹರಡುವಿಕೆ ಹೆಚ್ಚಾಗಿರುವುದು ಕಂಡುಬಂದಿದೆ. ಇದರ ಪ್ರಮಾಣ 18.07% ಆಗಿದೆ. ಅಧ್ಯಯನ ವರದಿ ಪ್ರಕಾರ, ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹರಡುವಿಕೆಯಲ್ಲಿ ಭಾರತ 18.07%, ಬ್ರೆಜಿಲ್ 8.57%, ಸ್ಪೇನ್ 8.03% ಪಡೆದಿವೆ.

ಭಾರತದ ನಂತರ ಅಮೆರಿಕ ಎರಡನೇ ಸ್ಥಾನದಲ್ಲಿದ್ದು, ಕೊರೊನಾ ಕುರಿತು 9.74% ಸುಳ್ಳುಸುದ್ದಿಯನ್ನು ಹರಡಿದೆ.

ಭಾರತದಲ್ಲಿ ಮೊಟ್ಟ ಮೊದಲನೆಯದಾಗಿ ಕೊರೊನಾ ಸೋಂಕಿನ ಲಸಿಕೆ ಸಂಬಂಧ ಸಾಕಷ್ಟು ಮಾಹಿತಿಗಳು ಹರಿದಾಡಿದ್ದವು. ಲಸಿಕೆಗಳ ದಕ್ಷತೆ, ಅಡ್ಡಪರಿಣಾಮಗಳ ಕುರಿತು ಸುಳ್ಳು, ತಪ್ಪು ಮಾಹಿತಿಗಳು ಹರಿದಾಡಿದ್ದು, ಕೇಂದ್ರ ಸರ್ಕಾರ ಈ ಯಾವುದೇ ತಪ್ಪು ಮಾಹಿತಿಯನ್ನು ಜನರು ನಂಬದಂತೆ ಮನವಿ ಮಾಡಿತ್ತು. ಕೇಂದ್ರ ಆರೋಗ್ಯ ಸಚಿವಾಲಯ ನೀಡುವ ನಿಖರ ಮಾಹಿತಿಯನ್ನಷ್ಟೇ ಪರಿಗಣಿಸಬೇಕಾಗಿ ತಿಳಿಸಿತ್ತು.

ಆದರೆ ಹೀಗೆ ಸೋಂಕಿನ ಕುರಿತು ತಪ್ಪು ಮಾಹಿತಿ ಹರಡಿರುವುದು ಸಕಾರಾತ್ಮಕ ಪರಿಣಾಮವನ್ನೇ ಬೀರಿದೆ ಎಂದು ಅಧ್ಯಯನ ತಿಳಿಸಿದೆ. ಇದರಿಂದ ಜನರು ಸೋಂಕಿನ ಕುರಿತು ಜಾಗೃತರಾಗಿದ್ದಾರೆ ಎಂದು ಹೇಳಿದೆ.

'ಸಾಮಾಜಿಕ ಮಾಧ್ಯಮ ತಪ್ಪು ಮಾಹಿತಿ ಸೃಷ್ಟಿಯಾಗುವ ತಾಣವಾಗಿ ಗುರುತಿಸಿಕೊಳ್ಳುತ್ತಿದೆ. ಸುಮಾರು 90.5%ರಷ್ಟು ತಪ್ಪು ಮಾಹಿತಿ ಅಂತರ್ಜಾಲದ ಮೂಲಕ ಹರಡುತ್ತದೆ. ಫೇಸ್‌ಬುಕ್‌ ಒಂದೇ ತಾಣ 66.87%ರಷ್ಟು ತಪ್ಪು ಮಾಹಿತಿ ಸೃಷ್ಟಿ ಮಾಡುತ್ತಿದೆ' ಎಂದು ಅಧ್ಯಯನ ತಿಳಿಸಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಕೊರೊನಾ ಸೋಂಕಿನ ಕುರಿತು ಸುಳ್ಳು ಮಾಹಿತಿ ಹರಡುವುದರಿಂದ ಜನರು ಆತಂಕಕ್ಕೆ ಒಳಗಾಗುತ್ತಾರೆ. ಕೊರೊನಾ ಸೋಂಕಿನ ಕುರಿತು ಯಾವುದೇ ಮಾಹಿತಿ ಲಭ್ಯವಾದರೆ, ಈ ಮಾಹಿತಿ ಮೂಲದ ವಿಶ್ವಾಸಾರ್ಹತೆಯನ್ನು ಪರಿಶೀಲಿಸಬೇಕು ಎಂದು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ ನೀಡಿತ್ತು.

English summary
India has ranked number 1 in producing the largest amount of social media misinformation on the Covid-19 pandemic, according to study,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X