ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಗಸ್ಟ್ ಆರಂಭಕ್ಕೆ ಭಾರತದಲ್ಲಿ ಕೊರೊನಾಗೆ 10 ಲಕ್ಷ ಮಂದಿ ಬಲಿ: ದಿ ಲ್ಯಾನ್ಸೆಟ್ ವರದಿ

|
Google Oneindia Kannada News

ಖ್ಯಾತ ವೈದ್ಯಕೀಯ ಜರ್ನಲ್ 'ದಿ ಲ್ಯಾನ್ಸೆಟ್' ನರೇಂದ್ರ ಮೋದಿ ಸರ್ಕಾರ ಕೋವಿಡ್ ನಿರ್ವಹಣೆ ಕುರಿತು ಅಸಮಾಧಾನ ವ್ಯಕ್ತಪಡಿಸಿದ್ದು, ಕೊರೊನಾ ನಿಯಂತ್ರಣದ ಬದಲಿಗೆ ಸರ್ಕಾರ ಟೀಕೆಗಳ ನಿಯಂತ್ರಣಕ್ಕೆ ಹೆಚ್ಚು ಒತ್ತು ನೀಡಿದೆ ಎಂದು ಕಿಡಿಕಾರಿದೆ.

ದಿ ಲ್ಯಾನ್ಸೆಟ್ ಜರ್ನಲ್‌ನ ಸಂಪಾದಕೀಯದಲ್ಲಿ ಭಾರತ ಸರ್ಕಾರದ ವೈಫಲ್ಯಗಳ ಪಟ್ಟಿ ಮಾಡಿದ್ದು, ಈಗಲೂ ಎಚ್ಚೆತ್ತುಕೊಳ್ಳದಿದ್ದರೆ ದೊಡ್ಡ ಅಪಾಯದ ಸಾಧ್ಯತೆ ಇದೆ ಎಂದು ಎಚ್ಚರಿಸಿದೆ.

ದಿ ಇನ್‌ಸ್ಟಿಟ್ಯೂಟ್ ಆಫ್ರ ಹೆಲ್ತ್ ಮ್ಯಾಟ್ರಿಕ್ಸ್ ಮತ್ತು ಆಂಡ್ ಇವ್ಯಾಲ್ಯುವೇಷನ್‌ನ ವರದಿ ಉಲ್ಲೇಖಿಸಿ ದಿ ಲ್ಯಾನ್ಸೆಟ್ ವರದಿ ಮಾಡಿರುವಂತೆ 'ಆಗಸ್ಟ್ ಆರಂಭದ ವೇಳೆಗೆ ಭಾರತದಲ್ಲಿ ಕೊರೊನಾ ಸೋಂಕಿಗೆ ಬಲಿಯಾಗುವವರ ಸಂಖ್ಯೆ 10 ಲಕ್ಷಕ್ಕೆ ಏರಲಿದೆ'.

Corona death

ಈ ಅಂಕಿ ನಿಜವಾದರೆ ಇಂಥಹದ್ದೊಂದು ದುರಂತಕ್ಕೆ ಮೋದಿ ಸರ್ಕಾರವೇ ಜವಾಬ್ದಾರಿಹೊರಬೇಕಾಗುತ್ತದೆ ಎಂದು ವರದಿಯಲ್ಲಿ ಹೇಳಲಾಗಿದೆ.
ತಜ್ಞರ ಎಚ್ಚರಿಕೆಯ ಹೊರತಾಗಿಯೂ ಭಾರತದಲ್ಲಿ ಕೊರೊನಾ ಸೂಪರ್‌ ಸ್ಪ್ರೆಡರ್ ಕಾರ್ಯಕ್ರಮಗಳಾದ ಧಾರ್ಮಿಕ ಜಾತ್ರೆ, ಸಭೆ, ಚುನಾವಣಾ ಮೆರವಣಿಗೆಗಳನ್ನು ನಡೆಸಲಾಯಿತು.

ಅಬ್ಬಬ್ಬಾ..! ಮತ್ತೆ 4 ಲಕ್ಷ ಗಡಿ ದಾಟಿದ ದೈನಂದಿನ ಕೊರೊನಾ ಸಂಖ್ಯೆಅಬ್ಬಬ್ಬಾ..! ಮತ್ತೆ 4 ಲಕ್ಷ ಗಡಿ ದಾಟಿದ ದೈನಂದಿನ ಕೊರೊನಾ ಸಂಖ್ಯೆ

ಈ ಸಂದರ್ಭದಲ್ಲಿ ಎಚ್ಚರವಹಿಸದಿರುವುದೇ ಕೊರೊನಾ ಹಬ್ಬಲು ಪ್ರಮುಖ ಕಾರಣವಾಯಿತು, ಇನ್ನೊಂದೆಡೆ ದೇಶದ ವೈದ್ಯಕೀಯ ಮೂಲಸೌಕರ್ಯವು ಆತಂಕಕ್ಕೆ ಕಾರಣವಾಗಿದೆ.

ಆಸ್ಪತ್ರೆಗಳು ಕೊರೊನಾ ಸೋಂಕಿತರಿಂದ ತುಂಬಿ ತುಳುಕುತ್ತಿವೆ. ಆರೋಗ್ಯ ಸೇವೆ ಮಾಡುತ್ತಿರುವವರು ಬಳಲಿದ್ದಾರೆ, ಅವರಿಗೂ ಸೋಂಕು ತಗುಲುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಸಾರ್ವಜನಿಕರು ತಮ್ಮ ಹತಾಶ ಭಾವನೆಯನ್ನು ಹಂಚಿಕೊಳ್ಳುತ್ತಿದ್ದಾರೆ.

ವೈದ್ಯಕೀಯ ಆಮ್ಲಜನಕ, ಹಾಸಿಗೆ ಹಾಗೂ ಇತರೆ ಸೌಕರ್ಯಗಳಿಗಾಗಿ ಬೇಡುತ್ತಿದ್ದಾರೆ, ಆದರೆ ಇದ್ಯಾವುದರ ಅರಿವೇ ಇಲ್ಲದೆ ಭಾರತದ ಆರೋಗ್ಯ ಕತೆ ಮುಗಿಯಿತೆಂದು ಮಾರ್ಚ್‌ನಲ್ಲಿ ಘೋಷಿಸಿದ್ದರು ಎಂದು ಉಲ್ಲೇಖಿಸಲಾಗಿದೆ.

ಭಾರತದಲ್ಲಿ ಕೆಲ ತಿಂಗಳುಗಳ ಕಾಲ ಕೊರೊನಾ ಪ್ರಕರಣಗಳ ಸಂಖ್ಯೆ ಇಳಿಕೆಯಾಗಿದ್ದರಿಂದ ಕೊರೊನಾ ವಿರುದ್ಧದಹೋರಾಟವನ್ನು ಭಾರತ ಗೆದ್ದಿದೆ ಎನ್ನುವ ಅಭಿಪ್ರಾಯಕ್ಕೆ ಸರ್ಕಾರ ಬಂದಿತ್ತು. ತಜ್ಞರ ಎಚ್ಚರಿಕೆ ಹೊರತಾಗಿಯೂ ಸರ್ಕಾರ ಈ ಬಗ್ಗೆ ತಲೆ ಕೆಡಿಸಿಕೊಂಡಿರಲಿಲ್ಲ.

ಭಾರತೀಯರಿಗೆ ಕೊರೊನಾದ ವಿರುದ್ಧ ಹೋರಾಡುವ ರೋಗ ನಿರೋಧಕ ಶಕ್ತಿ ಬಂದಿದೆ ಎಂದು ಸರ್ಕಾರ ನಂಬಿತ್ತು, ಆದರೆ ಐಸಿಎಂಆರ್ ಸಂಶೋಧನೆ ಪ್ರಕಾರ ಕೇವಲ ಶೇ.21ರಷ್ಟು ಜನರಿಗೆ ಮಾತ್ರ ಪ್ರತಿಕಾಯಗಳು ಉತ್ಪಾದನೆಯಾಗಿತ್ತು.

ಹೀಗಾಗಿ ಏಪ್ರಿಲ್ ವರೆಗೂ ಕೊರೊನಾ ಟಾಸ್ಕ್‌ಫೋರ್ಸ್ ಸಭೆಯನ್ನೇ ನಡೆಸಲಿಲ್ಲ, ಇನ್ನು ಭಾರತದ ಲಸಿಕಾ ವಿತರಣೆಯೂ ಕೂಡ ಸಾಕಷ್ಟು ಟೀಕೆಗಳಿಗೆ ಗುರಿಯಾಗಿದೆ.

ಭಾರತದಲ್ಲಿ ಶೇ.2ರಷ್ಟು ಜನರಿಗೂ ಕೂಡ ಲಸಿಕೆ ಹಾಕಲಾಗಿಲ್ಲ, ರಾಜ್ಯಗಳೊಂದಿಗೆ ಯಾವುದೇ ಚರ್ಚೆಗಳನ್ನು ನಡೆಸದೇ 18ನೇ ವಯಸ್ಸಿನ ಮೇಲ್ಪಟ್ಟವರೆಲ್ಲರಿಗೂ ಕೊರೊನಾ ಲಸಿಕೆ ನೀಡುವ ಘೋಷಣೆ ಮಾಡಲಾಯಿತು.

ಆದರೆ ಇದರಿಂದ ಇನ್ನಷ್ಟು ಗೊಂದಲಗಳು ಸೃಷ್ಟಿಯಾದವು ಹಾಗೂ ರಾಜ್ಯಗಳಲ್ಲಿ ತೀವ್ರ ಪ್ರಮಾಣದಲ್ಲಿ ಲಸಿಕೆಗಳ ಕೊರತೆ ಉಂಟಾಯಿತು.

ಇನ್ನೂ ರಾಜ್ಯಗಳಲ್ಲಿಯೂ ಸಮಸ್ಯೆಗಳಿದ್ದವು, ಉತ್ತರ ಪ್ರದೇಶ ಹಾಗೂ ಮಹಾರಾಷ್ಟ್ರದಂತಹ ರಾಜ್ಯಗಳಲ್ಲಿ ಇದ್ದಕ್ಕಿದ್ದಂತೆ ಪ್ರಕರಣಗಳು ಹೆಚ್ಚಾದವು. ಇದರಿಂದ ಆ ರಾಜ್ಯಗಳಲ್ಲಿ ವೈದ್ಯಕೀಯ ಮೂಲಸೌಕರ್ಯಗಳ ಕೊರತೆ ಉಂಟಾಗಿ ಪರಿಸ್ಥಿತಿಯನ್ನು ನಿಭಾಯಿಸಲು ಸಾಧ್ಯವೇ ಆಗಲಿಲ್ಲ.

ಆದರೆ, ಕೇರಳ ಒಡಿಶಾದಂತಹ ರಾಜ್ಯಗಳು ತಕ್ಕಮಟ್ಟಿಗೆ ತಯಾರಿ ನಡೆಸಿಕೊಂಡಿದ್ದವು. ಈಗಲಾದರೂ ಸರ್ಕಾರ ತನ್ನ ತಪ್ಪನ್ನು ಅರಿತುಕೊಂಡು ಸಮರೋಪಾದಿಯಲ್ಲಿ ಕೆಲಸ ಮಾಡಬೇಕಿದೆ.

ಇದಕ್ಕಾಗಿ ಲಸಿಕಾ ವಿತರಣೆ ಕಾರ್ಯಕ್ರಮಕ್ಕೆ ಅತ್ಯಂತ ಹೆಚ್ಚಿನ ವೇಗ ನೀಡಬೇಕಿದ್ದು, ನಗರ ಪ್ರದೇಶಗಳ ಜತೆಗೆ ಗ್ರಾಮೀಣ ಪ್ರದೇಶದಲ್ಲಿರುವ ಬಡವರಿಗೂ ಲಸಿಕೆ ದೊರೆಯುವಂತೆ ಮಾಡಬೇಕಿದೆ.

ಹಾಗೂ ಲಸಿಕೆ ಕುರಿತು ಲಸಿಕೆ ಕುರಿತು ದೊಡ್ಡ ಪ್ರಮಾಣದ ಜಾಗೃತಿ ಮೂಡಿಸುವುದು ತುರ್ತು ಕ್ರಮವಾಗಿದೆ. ಸ್ಥಳೀಯ ಸರ್ಕಾರಗಳ ಜತೆಗೆ ಮಾತುಕತೆ ನಡೆಸಿ ಕೊರೊನಾ ನಿಯಂತ್ರಣಕ್ಕೆ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬೇಕಿದೆ ಎಂದು ಜರ್ನಲ್‌ ಎಚ್ಚರಿಸಿದೆ.

English summary
India could see a staggering 1 million deaths from Covid-19 by August 1, according to an editorial in the British medical journal Lancet. If that outcome were to happen, Prime Minister Narendra Modi’s government would be responsible for presiding over a self-inflicted national catastrophe, the top peer reviewed journal said on Friday
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X