ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊವಿಡ್ ಸಾವಿನಲ್ಲಿ ಇಟಲಿ ಹಿಂದಿಕ್ಕಿ 5ನೇ ಸ್ಥಾನಕ್ಕೇರಿದ ಭಾರತ

|
Google Oneindia Kannada News

ದೆಹಲಿ, ಜುಲೈ 31: ಶುಕ್ರವಾರದ ವರದಿ ಬಳಿಕ ಭಾರತದಲ್ಲಿ ಕೊರೊನಾ ಸಾವಿನ ಸಂಖ್ಯೆ 35 ಸಾವಿರ ದಾಟಿದೆ. ಕೇಂದ್ರ ಆರೋಗ್ಯ ಇಲಾಖೆ ನೀಡಿದ ಮಾಹಿತಿ ಪ್ರಕಾರ ಕಳೆದ 24 ಗಂಟೆಯಲ್ಲಿ 779 ಮಂದಿ ಸಾವನ್ನಪ್ಪಿದ್ದು, ಒಟ್ಟು ಮೃತಪಟ್ಟವರ ಸಂಖ್ಯೆ 35,747ಕ್ಕೆ ತಲುಪಿದೆ.

ಈ ಮೂಲಕ ಜಗತ್ತಿನಲ್ಲಿ ಅತಿ ಹೆಚ್ಚು ಕೊವಿಡ್ ಸಾವು ಹೊಂದಿರುವ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತ ಐದನೇ ಸ್ಥಾನಕ್ಕೇರಿದೆ. ಇಟಲಿ ದೇಶವನ್ನು ಹಿಂದಿಕ್ಕಿರುವ ಭಾರತ ಪಟ್ಟಿಯಲ್ಲಿ ಒಂದು ಸ್ಥಾನ ಜಿಗಿದಿದೆ. ಇಟಲಿಯಲ್ಲಿ ಇದುವರೆಗೂ 35,132 ಜನರು ಕೊರೊನಾಗೆ ಬಲಿಯಾಗಿದ್ದರು.

ಭಾರತದಲ್ಲಿ ಮತ್ತೆ ಕೊರೊನಾ ಸ್ಫೋಟ: 55,079 ಸೋಂಕಿತರು ಪತ್ತೆಭಾರತದಲ್ಲಿ ಮತ್ತೆ ಕೊರೊನಾ ಸ್ಫೋಟ: 55,079 ಸೋಂಕಿತರು ಪತ್ತೆ

ಭಾರತದಲ್ಲಿ ಒಂದೇ ದಿನ 55,079 ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ. ಇಂದಿನ ವರದಿ ಬಳಿ ಒಟ್ಟು ಕೊವಿಡ್ ರೋಗಿಗಳ ಸಂಖ್ಯೆ 16,38,871ಕ್ಕೆ ಏರಿದೆ.

Indias coronavirus death toll passed 35,000 and takes 5th place in world

ಭಾರತದ ಪೈಕಿ ಮಹಾರಾಷ್ಟ್ರದಲ್ಲಿ ಅತಿ ಹೆಚ್ಚು ಸಾವು ವರದಿಯಾಗಿದೆ. 14,729 ಜನ ಕೊವಿಡ್‌ನಿಂದ ಪ್ರಾಣ ಕಳೆದುಕೊಂಡಿದ್ದಾರೆ. ತಮಿಳುನಾಡಿನಲ್ಲಿ 3841 ಮಂದಿ ಮೃತಪಟ್ಟಿದ್ದಾರೆ. ದೆಹಲಿಯಲ್ಲಿ 3936 ಜನರು ಸಾವನ್ನಪ್ಪಿದ್ದಾರೆ. ಕರ್ನಾಟಕದಲ್ಲಿ 2230 ಸಾವು ವರದಿಯಾಗಿದ್ದು, ಉತ್ತರ ಪ್ರದೇಶದಲ್ಲಿ 1587 ಮಂದಿ ಮೃತಪಟ್ಟಿದ್ದಾರೆ.

ಇನ್ನು ಜಗತ್ತಿನಲ್ಲಿ ಅತಿ ಹೆಚ್ಚು ಕೊರೊನಾ ಸಾವು ಕಂಡಿರುವ ರಾಷ್ಟ್ರಗಳ ಪಟ್ಟಿಯಲ್ಲಿ ಅಮೆರಿಕ ಮೊದಲ ಸ್ಥಾನದಲ್ಲಿದೆ. ಯುಎಸ್‌ನಲ್ಲಿ ಒಟ್ಟು 155,285 ಸಾವು ಸಂಭವಿಸಿದೆ. ಬ್ರೆಜಿಲ್‌ನಲ್ಲಿ 91,377 ಜನ ಸತ್ತಿದ್ದಾರೆ. ಮೆಕ್ಸಿಕೋದಲ್ಲಿ 46,000 ಸಾವು ವರದಿಯಾಗಿದ್ದರೆ, ಯುಕೆದಲ್ಲಿ 45,999 ಮಂದಿ ಮೃತಪಟ್ಟಿರುವ ದಾಖಲೆ ಇದೆ.

English summary
India's coronavirus death toll passed 35,000 on Friday, overtaking that of Italy. India's COVID-19 cases tally to 16,38,870.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X