ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದಲ್ಲಿ 4000 ಮುಟ್ಟಿದ ಕೊರೊನಾ ಸೋಂಕಿತರ ಸಂಖ್ಯೆ, 109 ಸಾವು

|
Google Oneindia Kannada News

ದೆಹಲಿ, ಏಪ್ರಿಲ್ 6: ಭಾರತದಲ್ಲಿ ನೋಡು ನೋಡುತ್ತಿದ್ದಂತೆ ಕೊರೊನಾ ಸೋಂಕಿತರ ಸಂಖ್ಯೆ 4000 ಗಡಿದಾಟಿದೆ. ಕಳೆದ 12 ಗಂಟೆಗಳಲ್ಲಿ 490 ಸೋಂಕಿತರು ಪತ್ತೆಯಾಗಿದ್ದು, ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 4067ಕ್ಕೆ ಏರಿದೆ.

ಇದುವರೆಗೂ ಭಾರತದಲ್ಲಿ ಕೊವಿಡ್ ಸೋಂಕಿನಿಂದ 109 ಜನರು ಮೃತಪಟ್ಟಿದ್ದಾರೆ ಎಂದು ಕೇಂದ್ರ ಆರೋಗ್ಯ ಇಲಾಖೆ ಸ್ಪಷ್ಟಪಡಿಸಿದೆ. ಈ ಮೂಲಕ ಸಾವಿನಲ್ಲಿ ಶತಕ ದಾಟಿದ ಮಹಾಮಾರಿ ಕೊರೊನಾ ವೈರಸ್.

ಒಟ್ಟು 4067 ಸೋಂಕಿತರ ಪೈಕಿ 3666 ಜನರು ಇನ್ನು ಕ್ವಾರೆಂಟೈನ್ ಹಾಗೂ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. 292 ಜನರು ಕೊರೊನಾದಿಂದ ಚೇತರಿಸಿಕೊಂಡು ಡಿಸ್ಚಾರ್ಜ್ ಆಗಿ ಮನೆಗೆ ತೆರಳಿದ್ದಾರೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ಹುಲಿಗೂ ಬಂತು ಕೊರೊನಾ, ಜಗತ್ತಿನಲ್ಲಿ ಮೊದಲ ಪ್ರಾಣಿ ಕೇಸ್?ಹುಲಿಗೂ ಬಂತು ಕೊರೊನಾ, ಜಗತ್ತಿನಲ್ಲಿ ಮೊದಲ ಪ್ರಾಣಿ ಕೇಸ್?

ಅಂದ್ಹಾಗೆ, ಮಾರ್ಚ್ 31ನೇ ತಾರೀಖಿನವರೆಗೂ ದೇಶದಲ್ಲಿ ಕೊರೊನಾ ಹರಡುವಿಕೆ ಒಂದು ಹಂತಕ್ಕೆ ನಿಯಂತ್ರಣದಲ್ಲಿತ್ತು. ಆದರೆ, ದೆಹಲಿಯ ನಿಜಾಮುದ್ದೀನ್‌ನ ನಗರದಲ್ಲಿ ನಡೆದ ತಬ್ಲೀಘ್ ಧಾರ್ಮಿಕ ಸಭೆಯಲ್ಲಿ ವಿದೇಶಿಗರು ಸೇರಿದ ಭಾರತದ ಹಲವು ರಾಜ್ಯಗಳಿಂದ ಸಾವಿರಾರು ಜನರು ಒಟ್ಟಿಗೆ ಸೇರಿದ್ದರು.

 India Corona Positive Cases Cross 4000 Mark

ಘನಘೋರ ಸ್ಥಿತಿಯಲ್ಲಿದ್ದ ಇಟಲಿಯಲ್ಲಿ ಸಾವಿನ ಸಂಖ್ಯೆ ಇಳಿಮುಖಘನಘೋರ ಸ್ಥಿತಿಯಲ್ಲಿದ್ದ ಇಟಲಿಯಲ್ಲಿ ಸಾವಿನ ಸಂಖ್ಯೆ ಇಳಿಮುಖ

ಇಲ್ಲಿಂದ ಕೊರೊನಾ ವೈರಸ್‌ ದೇಶದಲ್ಲಿ ಇನ್ನೊಂದು ಹಂತಕ್ಕೆ ಹರಡಿತು. ನೋಡು ನೋಡುತ್ತಿದ್ದಂತೆ ಸಾವಿರದ ಆಸುಪಾಸಿನಲ್ಲಿದ್ದ ಸೋಂಕಿತರ ಸಂಖ್ಯೆ ಕೇವಲ ಐದು ದಿನದಲ್ಲಿ ಸುಮಾರು ಮೂರು ಸಾವಿರ ಏರಿಕೆಯಾಗಿದೆ. ಮಹಾರಾಷ್ಟ್ರ, ತಮಿಳುನಾಡು ಹಾಗೂ ದೆಹಲಿಯಲ್ಲಿ ಸೋಂಕಿತರ ಸಂಖ್ಯೆ 500 ದಾಟಿದೆ.

English summary
Increase of 490 COVID19 cases in the last 12 hours, India's positive cases cross 4000 mark at 4067: Ministry of Health and Family Welfare.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X