ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶುಭಸುದ್ದಿ: ಲಡಾಕ್ ಪ್ರದೇಶದಿಂದ ಸೇನಾ ಪಡೆಗಳು ಹಿಂದಕ್ಕೆ

|
Google Oneindia Kannada News

ಲಡಾಕ್, ಜೂನ್ 9: ಲಡಾಕ್ ನ ಗಾಲ್ವನ್‌‌ ಕಣಿವೆ ಹಾಗೂ ಇತರ ಎರಡು ಪ್ರದೇಶಗಳಿಂದ ಭಾರತ ಹಾಗೂ ಚೀನಾ ಸೇನಾಪಡೆಗಳನ್ನು ಹಿಂದಕ್ಕೆ ಚಲಿಸಿರುವ ಮಾಹಿತಿ ಸಿಕ್ಕಿದೆ. ಈ ಮೂಲಕ ಪರಸ್ಪರ ಶಾಂತ ಪರಿಸ್ಥಿತಿ ಕಾಯ್ದುಕೊಳ್ಳಲು ಉಭಯ ದೇಶಗಳು ನಿರ್ಧರಿಸಿದ್ದಂತಾಗಿದೆ ಎಂದು ಸೇನಾ ಮೂಲಗಳಿಂದ ತಿಳಿದು ಬಂದಿದೆ.

Recommended Video

ವಿರಾಟ್ ಕೆಲಸಕ್ಕೆ ಮೆಚ್ಚುಗೆಯನ್ನು ವ್ಯಕ್ತ ಪಡಿಸಿದ ರಾಹುಲ್ ದ್ರಾವಿಡ್ | Dravid praised Virat Kohli

ಕಳೆದ ಒಂದು ತಿಂಗಳಿಂದ ಗಡಿಭಾಗದ ಪ್ರದೇಶದಲ್ಲಿ ಪ್ರಕ್ಷುಬ್ಧ ಪರಿಸ್ಥಿತಿ ನಿರ್ಮಾಣವಾಗಿತ್ತು. ಉಭಯ ದೇಶಗಳ ಪಡೆಗಳು ಗಡಿ ಭಾಗದಲ್ಲಿ ನೆಲೆಸಿದ್ದರಿಂದ ಆತಂಕ ಹೆಚ್ಚಾಗಿತ್ತು. ಆದರೆ, ಮಾತುಕತೆಯ ಮೂಲಕ ಸಮಸ್ಯೆ ಪರಿಹರಿಸಿಕೊಳ್ಳಲು ಉಭಯ ದೇಶಗಳು ನಿರ್ಧರಿಸಿದ ಬೆನ್ನಲ್ಲೇ ಈ ಮಹತ್ವದ ಬೆಳವಣಿಗೆ ನಡೆದಿದೆ. ಆದರೆ, ಪ್ಯಾಂಗಾಂಗ್‌ ತ್ಸೊ ಹಾಗೂ ದೌಲತ್‌ಬೇಗ್‌ ಓಲ್ಡಿಯಲ್ಲಿ ಇನ್ನೂ ಪರಿಸ್ಥಿತಿ ತಿಳಿಗೊಂಡಿಲ್ಲ ಎಂದು ತಿಳಿದು ಬಂದಿದೆ.

ಸೇನಾ ಚಟುವಟಿಕೆ ನಿಲ್ಲಿಸುತ್ತಿರೋ ಇಲ್ವೋ; ಚೀನಾಗೆ ಭಾರತದ ಎಚ್ಚರಿಕೆ!ಸೇನಾ ಚಟುವಟಿಕೆ ನಿಲ್ಲಿಸುತ್ತಿರೋ ಇಲ್ವೋ; ಚೀನಾಗೆ ಭಾರತದ ಎಚ್ಚರಿಕೆ!

ಸೇನಾ ತುಕಡಿ ಹಿಂದಕ್ಕೆ ಕರೆಸಿಕೊಂಡಿರುವ ಬಗ್ಗೆ ಉಭಯ ದೇಶಗಳ ರಕ್ಷಣಾ ಸಚಿವಾಲಯದ ವಕ್ತಾರರಿಂದ ಯಾವುದೇ ಅಧಿಕೃತ ಹೇಳಿಕೆ ಬಂದಿಲ್ಲ. ಬುಧವಾರ (ಜೂನ್ 10)ದಂದು ಎರಡೂ ಸೇನೆಗಳ ಮೇಜರ್‌ ಜನರಲ್‌ ಮಟ್ಟದ ಅಧಿಕಾರಿಗಳ ಸಭೆಯು ನಿಗದಿಯಾಗಿದೆ.

India & China troops pull back from Eastern Ladakh

ಈಶಾನ್ಯ ಲಡಾಕ್ ಪ್ರದೇಶದ ಗಾಲ್ವನ್ ಕಣಿವೆ, ಪಿಪಿ 15, ಹಾಟ್ ಸ್ಪ್ರಿಂಗ್ಸ್ ಪ್ರದೇಶದಿಂದ ಚೀನಾ ತನ್ನ ಪಡೆಯನ್ನು ಸುಮಾರು 2.5 ಕಿ.ಮೀ ಹಿಂದಕ್ಕೆ ಕರೆಸಿಕೊಂಡ ಬಳಿಕ ಭಾರತವೂ ತನ್ನ ಪಡೆಯನ್ನು ಹಿಂದಕ್ಕೆ ಚಲಿಸುವಂತೆ ಸೂಚಿಸಿದೆ ಎಂದು ತಿಳಿದು ಬಂದಿದೆ.

English summary
India and Chinese armies have undertaken a "symbolic disengagement" in a few areas in eastern Ladakh in displaying their resolve to end the border standoff peacefully.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X