ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ಯಾಂಗಾಂಗ್ ತ್ಸೊದಿಂದ ಭಾರತ-ಚೀನಾ ಸೇನಾ ವಾಪಸ್: ಒಪ್ಪಂದದ 5 ಪ್ರಮುಖ ಅಂಶಗಳು

|
Google Oneindia Kannada News

ನವದೆಹಲಿ, ಫೆಬ್ರವರಿ 11: ಲಡಾಖ್‌ನ ಪ್ಯಾಂಗಾಂಗ್ ತ್ಸೊ ಸರೋವರದ ಪ್ರದೇಶದಿಂದ ಸೇನಾ ಪಡೆಗಳನ್ನು ವಾಪಸ್ ಕರೆಸಿಕೊಳ್ಳುವ ಸಂಬಂಧ ಭಾರತ ಮತ್ತು ಚೀನಾ ಒಪ್ಪಂದಕ್ಕೆ ಬಂದಿವೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ರಾಜ್ಯಸಭೆಯಲ್ಲಿ ಗುರುವಾರ ತಿಳಿಸಿದರು. ಉಭಯ ದೇಶಗಳ ಸೇನಾ ಕಮಾಂಡರ್ ಮಟ್ಟದಲ್ಲಿ ಹಾಗೂ ರಾಜತಾಂತ್ರಿಕರ ನಡುವೆ ಹಲವು ಸುತ್ತಿನ ಮಾತುಕತೆಗಳ ಬಳಿಕ 9 ತಿಂಗಳ ಗಡಿ ಬಿಕ್ಕಟ್ಟಿನ ವಿಚಾರದಲ್ಲಿ ಕೊನೆಗೂ ಮಹತ್ವದ ಬೆಳವಣಿಗೆ ಉಂಟಾಗಿದೆ.

ಪ್ಯಾಂಗಾಂಗ್ ತ್ಸೊ ಸರೋವರದ ಫಿಂಗರ್ 8 ಪ್ರದೇಶವನ್ನು ಎರಡೂ ದೇಶಗಳ ಗಸ್ತು ಮುಕ್ತ ಜಾಗವನ್ನಾಗಿಸಲು ಸೇನಾ ಕಮಾಂಡರ್ ಮಟ್ಟದ ಮಾತುಕತೆ ಫಲಪ್ರದವಾಗಿದೆ ಎಂದು ಬುಧವಾರ ವರದಿಯಾಗಿತ್ತು. ಅದನ್ನು ರಾಜನಾಥ್ ಸಿಂಗ್ ಅವರು ಸಂಸತ್‌ನಲ್ಲಿ ದೃಢಪಡಿಸಿದ್ದಾರೆ.

ರಾಜ್ಯಸಭೆ ಸುದ್ದಿ: ಲಡಾಖ್ ಗಡಿ ಸ್ಥಿತಿ ಬಗ್ಗೆ ರಾಜನಾಥ್ ಸಿಂಗ್ ಸಂದೇಶ ರಾಜ್ಯಸಭೆ ಸುದ್ದಿ: ಲಡಾಖ್ ಗಡಿ ಸ್ಥಿತಿ ಬಗ್ಗೆ ರಾಜನಾಥ್ ಸಿಂಗ್ ಸಂದೇಶ

ಜನವರಿ 24ರಂದು ನಡೆದ ಕಾರ್ಪ್ಸ್ ಕಮಾಂಡರ್ ಮಟ್ಟದ ಸಭೆಯ ಬಳಿಕ ಈ ಒಪ್ಪಂದಕ್ಕೆ ಬರಲಾಗಿದೆ. ಎರಡೂ ದೇಶಗಳ ಪಡೆಗಳು ಪ್ಯಾಂಗಾಂಗ್ ತ್ಸೊ ಸರೋವರದ ಉತ್ತರ ಮತ್ತು ದಕ್ಷಿಣ ದಿಕ್ಕಿನಿಂದ ಹಂತ ಹಂತವಾಗಿ ತಮ್ಮ ಪಡೆಗಳನ್ನು ಹಿಂದಕ್ಕೆ ಕರೆಸಿಕೊಳ್ಳಲಿವೆ. ಈ ಸೇನಾ ಹಿಂದೆಗೆತದ ಕುರಿತಾದ ಐದು ಮಹತ್ವದ ಸಂಗತಿಗಳು ಇಲ್ಲಿವೆ.

ಕಾಯಂ ಶಿಬಿರಕ್ಕೆ ಭಾರತ ವಾಪಸ್

ಕಾಯಂ ಶಿಬಿರಕ್ಕೆ ಭಾರತ ವಾಪಸ್

ಚೀನಾದ ಪಡೆಗಳು ಫಿಂಗರ್ 8ರ ಪೂರ್ವ ಭಾಗದಲ್ಲಿನ ಪ್ಯಾಂಗಾಂಗ್ ತ್ಸೊ ಸರೋವರದ ಉತ್ತರ ತೀರದಲ್ಲಿ ತನ್ನ ತುಕಡಿಗಳನ್ನು ಇರಿಸುವುದನ್ನು ಮುಂದುವರಿಸಲಿದೆ. ಭಾರತವು ಫಿಂಗರ್ 3ರ ಸಮೀಪದ ಧನ್ ಸಿಂಗ್ ಥಾಪಾದಲ್ಲಿನ ತನ್ನ ಕಾಯಂ ಶಿಬಿರಕ್ಕೆ ತನ್ನ ಪಡೆಗಳನ್ನು ಮರು ಸ್ಥಾಪನೆ ಮಾಡಲಿವೆ.

ಪ್ಯಾಂಗಾಂಗ್ ತ್ಸೋದಿಂದ ಭಾರತ-ಚೀನಾ ಸೇನಾಪಡೆಗಳು ವಾಪಸ್ಪ್ಯಾಂಗಾಂಗ್ ತ್ಸೋದಿಂದ ಭಾರತ-ಚೀನಾ ಸೇನಾಪಡೆಗಳು ವಾಪಸ್

ನಿರ್ಣಾಯಕ ಕೈಲಾಶ್ ರೇಂಜ್

ನಿರ್ಣಾಯಕ ಕೈಲಾಶ್ ರೇಂಜ್

ಇದೇ ರೀತಿಯ ಸೇನಾ ಹಿಂದೆಗೆತವು ಪ್ಯಾಂಗಾಂಗ್ ತ್ಸೊ ಸರೋವರದ ದಕ್ಷಿಣ ತೀರದಿಂದಲೂ ನಡೆಯಲಿದೆ. ಈ ಪ್ರದೇಶದಲ್ಲಿಯೇ ಕೈಲಾಶ್ ರೇಂಜ್ ಇರುವುದು ಗಮನಿಸಬೇಕಾದ ಸಂಗತಿ. ಬಹಳ ನಿರ್ಣಾಯಕ ಪ್ರದೇಶವಾದ ಇದು ನಿಯಂತ್ರಣಕ್ಕೆ ಸಿಕ್ಕರೆ ದೊಡ್ಡಮಟ್ಟದ ಕಾರ್ಯತಂತ್ರಗಳಿಗೆ ಅನುಕೂಲವಾಗುತ್ತದೆ.

ಗಸ್ತುರಹಿತ ಪ್ರದೇಶ

ಗಸ್ತುರಹಿತ ಪ್ರದೇಶ

ಉಭಯ ದೇಶಗಳ ಪಡೆಗಳು ದೈನಂದಿನ ಗಸ್ತು ಚಟುವಟಿಕೆಗಳಿಂದ ದೂರ ಇರುವುದು ಸೇರಿದಂತೆ ಪ್ಯಾಂಗಾಂಗ್ ತ್ಸೊ ಸರೋವರದ ಉತ್ತರ ತೀರದಲ್ಲಿ ಯಾವುದೇ ಸೇನಾ ಚಟುವಟಿಕೆಗಳನ್ನು ನಡೆಸದಂತೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸುವುದೆಂದು ಒಪ್ಪಂದಕ್ಕೆ ಬರಲಾಗಿದೆ. ಫಿಂಗರ್ 3 ಮತ್ತು ಫಿಂಗರ್ 8ರ ನಡುವಿನ ಪ್ರದೇಶವು ಗಸ್ತುರಹಿತ ವಲಯ ಎಂದು ಘೋಷಿಸಲಾಗಿದೆ.

ಚೀನಾಕ್ಕೆ ಸಹಾಯ ಮಾಡುತ್ತಿರುವ ಸಿಂಗ್‌ರನ್ನು ಸಚಿವ ಸ್ಥಾನದಿಂದ ಕಿತ್ತೊಗೆಯಿರಿ: ರಾಹುಲ್ ಗಾಂಧಿಚೀನಾಕ್ಕೆ ಸಹಾಯ ಮಾಡುತ್ತಿರುವ ಸಿಂಗ್‌ರನ್ನು ಸಚಿವ ಸ್ಥಾನದಿಂದ ಕಿತ್ತೊಗೆಯಿರಿ: ರಾಹುಲ್ ಗಾಂಧಿ

ಯಾವುದೇ ನಿರ್ಮಾಣ ಮಾಡಿದ್ದರೆ ಧ್ವಂಸ

ಯಾವುದೇ ನಿರ್ಮಾಣ ಮಾಡಿದ್ದರೆ ಧ್ವಂಸ

ಸೇನಾ ವಾಪಸಾತಿಯು ಕಳೆದ ವರ್ಷದ ಏಪ್ರಿಲ್‌ನಿಂದ ಪ್ಯಾಂಗಾಂಗ್ ತ್ಸೊ ಸರೋವರದ ಉತ್ತರ ಹಾಗೂ ದಕ್ಷಿಣ ತೀರಗಳ ಪ್ರದೇಶಗಳಲ್ಲಿ ನಿರ್ಮಿಸಿದ ಯಾವುದೇ ರೀತಿಯ ಕಟ್ಟಡ ರಚನೆಗಳನ್ನು ನಾಶಪಡಿಸಲಾಗುತ್ತದೆ. ಹಿಂದಿನ ಭೂಸಂರಚನೆಯನ್ನು ಮರುಸ್ಥಾಪಿಸಲಾಗುತ್ತದೆ.

ಹಿರಿಯ ಕಮಾಂಡರ್ ಸಭೆ

ಹಿರಿಯ ಕಮಾಂಡರ್ ಸಭೆ

ಪ್ಯಾಂಗಾಂಗ್ ತ್ಸೊ ಸರೋವರದಿಂದ ಸಂಪೂರ್ಣ ಸೇನಾ ವಾಪಸಾತಿ ನಡೆದ ಬಳಿಕ ಬಾಕಿ ಉಳಿದ ಸಮಸ್ಯೆಗಳನ್ನು ಇತ್ಯರ್ಥಪಡಿಸಲು 48 ಗಂಟೆಗಳ ಒಳಗೆ ಹಿರಿಯ ಕಮಾಂಡರ್ ಮಟ್ಟದ ಮುಂದಿನ ಸಭೆ ನಡೆಸಲು ಸಹ ಒಪ್ಪಿಕೊಳ್ಳಲಾಗಿದೆ.

English summary
India and Chinese troops have agreed for disengagement from the banks of Pangong Tso lake. Here is 5 important points to explain this agreement.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X