ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಾಸ್ಕೋದಲ್ಲಿ ಭಾರತ- ಚೀನಾ ಮಾತುಕತೆ: ವಿದೇಶಾಂಗ ಸಚಿವ ಜೈಶಂಕರ್ ಮಾಹಿತಿ

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 4: ರಷ್ಯಾದ ಮಾಸ್ಕೋದಲ್ಲಿ ಸೆ.10ರಂದು ನಡೆಯುವ ಸಮಾರಂಭದಲ್ಲಿ ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ಅವರನ್ನು ಭೇಟಿಯಾಗುವುದಾಗಿ ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ತಿಳಿಸಿದ್ದಾರೆ.

ಅಬ್ಸರ್ವರ್ ರೀಸರ್ಚ್ ಫೌಂಡೇಷನ್ ಗುರುವಾರ ಆಯೋಜಿಸಿದ್ದ ತಮ್ಮ 'ದಿ ಇಂಡಿಯಾ ವೇ' ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಜೈಶಂಕರ್, ನಮ್ಮ ಪೂರ್ವ ವಲಯದಲ್ಲಿ ಉದ್ವಿಗ್ನ ಸ್ಥಿತಿಇದೆ. ಈ ಸ್ಥಿತಿಯ ಗಂಭೀರತೆಯನ್ನು ನಾನು ನಿರಾಕರಿಸುವುದಿಲ್ಲ. ಯಾವ ದೇಶವೂ ತಮ್ಮ ಈಗಿನ ನಿಲುವನ್ನು ಬದಲಿಸಲು ಸಿದ್ಧರಿಲ್ಲ. ಗಡಿಯಲ್ಲಿ ನಡೆಯುವ ಸಂಗತಿಗಳು ನಮ್ಮ ಸಂಬಂಧದ ಮೇಲೆ ಪರಿಣಾಮ ಬೀರುತ್ತದೆ ಎಂದಿದ್ದಾರೆ.

SCO ಸಭೆ: ರಾಜನಾಥ್ ಸಿಂಗ್ ಭೇಟಿಗೆ ಚೀನಾ ಸಚಿವರ ದುಂಬಾಲು?SCO ಸಭೆ: ರಾಜನಾಥ್ ಸಿಂಗ್ ಭೇಟಿಗೆ ಚೀನಾ ಸಚಿವರ ದುಂಬಾಲು?

ಮಾತುಕತೆ ಮತ್ತು ಸಂಧಾನ ಸೂತ್ರಗಳ ಮೂಲಕ ಬಿಕ್ಕಟ್ಟನ್ನು ಬಗೆಹರಿಸಿಕೊಳ್ಳಬೇಕು. ಎರಡೂ ದೇಶಗಳು ತಮ್ಮದೇ ಹಿತಾಸಕ್ತಿಯಿಂದ ಮುಂದಾದರೆ ಇದು ಸಾಧ್ಯ. ಭಾರತ ಮತ್ತು ಚೀನಾ ದೇಶಗಳು ಒಂದು ಹೊಂದಾಣಿಕೆಗೆ ಒಳಪಡುವುದು ಅಗತ್ಯವಾಗಿದೆ ಎಂದು ಹೇಳಿದ್ದಾರೆ.

 India-China To Meet And Discuss On Border Crisis In Moscow: Jaishankar

ಒಪ್ಪಂದದ ಜಗತ್ತು ಈಗ ಇಲ್ಲ. ಇದು ಒಮ್ಮುಖಗೊಳ್ಳುವ ಜಗತ್ತು. ಇದು ಹೆಚ್ಚು ಲೌಖಿಕವಾಗಿರುವ ಜಗತ್ತು. ಭಾರತವು ಎಸ್‌ಸಿಒ, ಬ್ರಿಕ್ಸ್ ಮತ್ತು ಕ್ವಾಡ್‌ನ ಸಕ್ರಿಯ ಸದಸ್ಯ ದೇಶವಾಗಿದೆ. ನೀವು ಬಹುಮುಖಿ ಜಗತ್ತು ಮತ್ತು ಒಮ್ಮುಖತೆಯಡೆಗೆ ನೋಡುತ್ತಿದ್ದರೆ, ನಾವು ವಿಭಿನ್ನ ಸಂಯೋಜನೆಗಳನ್ನು ನೋಡುತ್ತಿದ್ದೇವೆ. ಕ್ವಾಡ್, ಎಸ್‌ಸಿಒ, ಬ್ರಿಕ್ಸ್ ಹೀಗೆ- ವಿಶ್ವವು ಇದೇ ರೀತಿ ಸಾಗಬೇಕಿದೆ ಎಂದು ತಿಳಿಸಿದ್ದಾರೆ.

English summary
External affairs minister S Jaishankar said, he will meet his Chinese counterpart Wang Yi in Moscow on September 10.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X