ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

India-China standoff LIVE: ಕೊರೊನಾ ವಿರುದ್ಧ ಸಮರದಲ್ಲಿ ನಿಮ್ಮ ಪಾತ್ರ ಏನು?: ವಿಶ್ವಸಂಸ್ಥೆಗೆ ಮೋದಿ ಪ್ರಶ್ನೆ

|
Google Oneindia Kannada News

ನವದೆಹಲಿ, ಸಪ್ಟೆಂಬರ್ 26: ಭಾರತ-ಚೀನಾ ಪೂರ್ವ ಗಡಿ ಪ್ರದೇಶ ಲಡಾಖ್ ನಲ್ಲಿ ಪ್ಯಾಂಗಾಂಗ್ ತ್ಸೋ ಸರೋವರದ ಬಳಿ ಚೀನಾ ಸೇನೆಯು ಪ್ರಚೋದನಾತ್ಮಕ ಸೇನಾ ಚಟುವಟಿಕೆಗಳನ್ನು ನಡೆಸುತ್ತಿದ್ದು, ಗಡಿ ರೇಖೆಯು ಬೂದಿ ಮುಚ್ಚಿದ ಕೆಂಡದಂತೆ ಮಾರ್ಪಟ್ಟಿದೆ.

ಪ್ಯಾಂಗಾಂಗ್ ತ್ಸೋ ಸರೋವರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಚೀನಾ ಹೆಚ್ಚುವರಿ ಸೇನೆಯನ್ನು ನಿಯೋಜನೆ ಮಾಡುತ್ತಿದ್ದು, ಪ್ರತಿಯಾಗಿ ಭಾರತೀಯ ಸೇನೆ ಕೂಡಾ ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಇದರ ನಡುವೆ ಚುಶುಲ್ ಬಯಲು ಪ್ರದೇಶದಲ್ಲೇ ಬ್ರಿಗೇಡಿಯರ್ ಹಂತದ ಸಭೆ ನಡೆಸಲಾಗುತ್ತಿದೆ.

ಪೂರ್ವ ಗಡಿಯಲ್ಲಿ ಸೇನಾ ಚಟುವಟಿಕೆಗಳನ್ನು ನಿಲ್ಲಿಸುವುದು ಹಾಗೂ ಸೇನೆಯನ್ನು ಹಿಂದಕ್ಕೆ ತೆಗೆದುಕೊಳ್ಳುವ ಬಗ್ಗೆ ಚರ್ಚಿಸಿದ್ದು, ಒಮ್ಮತದ ತೀರ್ಮಾನವನ್ನು ಇದುವರೆಗೂ ತೆಗೆದುಕೊಳ್ಳಲು ಆಗಿಲ್ಲ.

ಕಣಿವೆ ಕದನ: ಗುಲಾಂ ರಸೂಲ್ ಗಾಲ್ವಾನ್ ಯಾರುಕಣಿವೆ ಕದನ: ಗುಲಾಂ ರಸೂಲ್ ಗಾಲ್ವಾನ್ ಯಾರು

ಕಳೆದ ಆಗಸ್ಟ್.29 ಮತ್ತು 30ರ ರಾತ್ರಿ ಸಂದರ್ಭದಲ್ಲಿ ಚೀನಾ ಸೇನೆಯು ಪ್ರಚೋದನಾತ್ಮಕ ಚಟುವಟಿಕೆಗಳಲ್ಲಿ ಭಾಗಿಯಾಗಿರುವುದು ಬೆಳಕಿಗೆ ಬಂದಿದೆ.

ಕಳೆದ ಜೂನ್.15ರ ಸೋಮವಾರ ರಾತ್ರಿ ಕೂಡಾ ಭಾರತ-ಚೀನಾ ಸೇನೆ ನಡುವಿನ ಮುಖಾಮುಖಿಯ ಸಂಘರ್ಷ ನಡೆದಿತ್ತು. ಈ ವೇಳೆ ಒಬ್ಬ ಭಾರತೀಯ ಸೇನಾಧಿಕಾರಿ, 20 ಯೋಧರು ಹುತಾತ್ಮರಾಗಿದ್ದರು. ಚೀನಾದ 43 ಸೈನಿಕರು ಮೃತಪಟ್ಟಿರುವ ಬಗ್ಗೆ ಅಮೆರಿಕಾದ ಸುದ್ದಿಸಂಸ್ಥೆಯು ವರದಿ ಮಾಡಿತ್ತು.

India-China standoff live updates and Highlights in Kannada

ಭಾರತ-ಚೀನಾ ಯೋಧರ ನಡುವೆ ಗಾಲ್ವಾನ್ ಗಡಿ ಪ್ರದೇಶದಲ್ಲಿ ನಡೆದ ಸಂಘರ್ಷದಲ್ಲಿ ಚೀನಾದ ಯೋಧರು ಮೃತಪಟ್ಟಿರುವ ಬಗ್ಗೆ ಅಲ್ಲಿನ ಸರ್ಕಾರವು ಯಾವುದೇ ಮಾಹಿತಿಯನ್ನು ನೀಡಿರಲಿಲ್ಲ.

1975ರ ಬಳಿಕ ಮೊದಲ ಬಾರಿ ಚೀನಾ ಗಡಿಯಲ್ಲಿ ಭಾರತೀಯ ಸೈನಿಕರ ಹತ್ಯೆ
ಇದರ ನಡುವೆ ಪೂರ್ವ ಲಡಾಖ್‌ ಗಡಿಯಿಂದ ಉಭಯ ದೇಶಗಳ ಸೇನಾ ಪಡೆಗಳೂ ಹಿಂದಕ್ಕೆ ಸರಿಯುತ್ತಿದ್ದು, ಪೆಟ್ರೋಲಿಂಗ್ ಪಾಯಿಂಟ್(ಗಸ್ತು ಪ್ರದೇಶ) 14, 15 ಹಾಗೂ 17 ಸ್ಥಳಗಳಿಂದ ಸುಮಾರು 2 ರಿಂದ 2.5 ಕಿ.ಮೀ ಹಿಂದಕ್ಕೆ ಸರಿಯಲು ಸೂಚಿಸಲಾಗಿತ್ತು.

Newest FirstOldest First
6:59 PM, 26 Sep

ವಿಶ್ವಸಂಸ್ಥೆಯಲ್ಲಿ ಭಾರತಕ್ಕೆ ಭದ್ರತಾ ಸಮಿತಿ ಕಾಯಂ ಸದಸ್ಯ ಎಂದು, ಕೊರೊನಾ ಹೋರಾಟದಲ್ಲಿ ವಿಶ್ವಸಂಸ್ಥೆ ಏನು ಮಾಡಿದೆ-ಮೋದಿ ಪ್ರಶ್ನೆ
6:55 PM, 26 Sep

ಕೊವಿಡ್ 19 ಸಾಂಕ್ರಾಮಿಕದ ಸಮಯದಲ್ಲಿ 150 ದೇಶಗಳಿಗೆ ಭಾರತ ವೈದ್ಯಕೀಯ ಉಪಕರಣಗಳ ಹಾಗೂ ವೈದ್ಯಕೀಯ ನೆರವು ನೀಡಲಾಗಿದೆ.
6:53 PM, 26 Sep

ವಿಶ್ವಸಂಸ್ಥೆಯಲ್ಲಿ ಸಮತೋಲನ ಹಾಗೂ ಎಲ್ಲರ ಅಭಿವೃದ್ಧಿಗಾಗಿ ಪಣ ತೊಡುವುದು ಅನಿವಾರ್ಯ-ಮೋದಿ
6:52 PM, 26 Sep

ಶುದ್ಧಜಲ ನೀರು ಪೂರೈಕೆ ಯೋಜನೆ ಆರಂಭಿಸಿದ್ದೇವೆ, ದೇಶದ ಪ್ರತಿ ಹಳ್ಳಿಗೂ ಕುಡಿಯುವ ನೀರಿನ ಯೋಜನೆ ತಲುಪಲಿದೆ, ಆತ್ಮ ನಿರ್ಭರ ಭಾರತ್ ಅಭಿಯಾನದಿಂದ ಜಾಗತಿಕ ಆರ್ಥಿಕತೆಗೆ ಬಲ ದೊರೆಯಲಿದೆ-ಮೋದಿ
6:51 PM, 26 Sep

ಭಾರತ ಎಂದಿಗೂ ವಿಕಾಸಶೀಲ ದೇಶದ ಪರವಾಗಿ ನಿಲ್ಲಲಿದೆ, ಭಾರತದಲ್ಲಿ ಬಹಿರ್ದೆಸೆ ಮುಕ್ತ, ಎಲ್ಲರಿಗೂ ಸಿಲಿಂಡರ್ ಕೊಟ್ಟಿದೆ. ಭಾರತ ಡಿಜಿಟಲ್ ಕ್ರಾಂತಿಯತ್ತ ಹೆಜ್ಜೆ ಇಟ್ಟಿದೆ- ಮೋದಿ
6:49 PM, 26 Sep

ಭಾರತ ಎಂದಿಗೂ ವಿಶ್ವ ಶಾಂತಿ, ಮಾನವೀಯತೆ ರಕ್ಷಣೆಗೆ ನಿಲ್ಲಲಿದೆ. ಭಯೋತ್ಪಾದನೆ ವಿರುದ್ಧ, ಡ್ರಗ್ಸ್ ಹಾಗೂ ಮನಿ ಲಾಂಡರಿಂಗ್ ವಿರುದ್ಧ ಹೋರಾಡಲಿದೆ-ಮೋದಿ
6:48 PM, 26 Sep

ಭಾರತ ಸಶಕ್ತವಾಗಿರುವಾಗ ನಾವು ಆಕ್ರಮಣ ಮಾಡಿಲ್ಲ, ದುರ್ಬಲ ಆಗಿದ್ದಾಗ ಹೊರೆಯಾಗಿಲ್ಲ: ಮೋದಿ
Advertisement
6:46 PM, 26 Sep

ವಿಶ್ವಸಂಸ್ಥೆ ಮೇಲೆ 130 ಕೋಟಿ ಜನರು ನಂಬಿಕೆ ಇಟ್ಟಿದ್ದಾರೆ. ಆದರೆ ಈ 130 ಕೋಟಿ ಜನರ ನಂಬಿಕೆ ಎಷ್ಟು ವರ್ಷ ಹುಸಿ ಮಾಡುತ್ತೆ, ಈ ಜನರನ್ನು ನಿಮ್ಮ ನಿರ್ಣಯಗಳಿಂದ ಎಷ್ಟು ವರ್ಷ ದೂರ ಇಡುತ್ತೀರಿ-ಮೋದಿ
6:43 PM, 26 Sep

ಕಳೆದ 7-8 ತಿಂಗಳಿನಿಂದ ನಾವು ಕೊರೊನಾ ವಿರುದ್ಧ ಹೋರಾಡುತ್ತಿದ್ದೇವೆ. ಆದರೆ ವಿಶ್ವ ಸಂಸ್ಥೆ ಎಲ್ಲಿದೆ ಏನು ಮಾಡುತ್ತಿದೆ. ಕೊರೊನಾ ವಿರುದ್ಧದ ಸಮರದಲ್ಲಿ ವಿಶ್ವಸಂಸ್ಥೆ ಪಾತ್ರವೇನು, ವಿಶ್ವಸಂಸ್ಥೆ ಏನು ಮಾಡುತ್ತಿದೆ-ಮೋದಿ ಪ್ರಶ್ನೆ
6:41 PM, 26 Sep

ನಾವು ಮೂರನೇ ವಿಶ್ವ ಯುದ್ಧ ತಡೆದಿದ್ದೇವೆ, ಆದರೆ ಬೇರೆ ಬೇರೆಎ ರೂಪದಲ್ಲಿ ಯುದ್ಧ ಸಂಭವಿಸಬಹುದು. ಭಯೋತ್ಪಾದನೆಯು ವಿಶ್ವವನ್ನು ನಲುಗಿಸುತ್ತಿದೆ. ಎಲ್ಲರೂ ಶಿಖಾರಿಯಾಗುತ್ತಿದ್ದಾರೆ-ಮೋದಿ
6:40 PM, 26 Sep

ವಿಶ್ವ ಸಂಸ್ಥೆಯ 75ನೇ ವರ್ಷದ ಇತಿಹಾಸದಲ್ಲಿ ಸಾಕಷ್ಟು ಉತ್ತಮ ಕೆಲಸ ಮಾಡಿದ್ದಾರೆ, ಆದರೆ ಕೆಲವೊಂದು ಆತ್ಮ ವಿಮರ್ಷೆ ಮಾಡಿಕೊಳ್ಳಬೇಕಿದೆ-ಮೋದಿ
6:38 PM, 26 Sep

ವಿಶ್ವಸಂಸ್ಥೆಯ ಸ್ಥಾಪಕ ಸದಸ್ಯರಲ್ಲಿ ಒಬ್ಬರು ಎಂದು ಭಾರತ ಹೆಮ್ಮೆಪಡುತ್ತದೆ. ಈ ಐತಿಹಾಸಿಕ ಸಂದರ್ಭದಲ್ಲಿ, ಭಾರತದ 1.3 ಶತಕೋಟಿ ಜನರ ಭಾವನೆಗಳನ್ನು ಹಂಚಿಕೊಳ್ಳಲು ನಾನು ಈ ಜಾಗತಿಕ ವೇದಿಕೆಗೆ ಬಂದಿದ್ದೇನೆ.
Advertisement
6:35 PM, 26 Sep

130 ಕೋಟಿ ಜನರ ಮನದಾಳದ ಮಾತು ಹೇಳಲು ನಾನು ಇಲ್ಲಿಗೆ ಬಂದಿದ್ದೇನೆ.
6:34 PM, 26 Sep

ಎಲ್ಲರೂ ಬದಲಾದರು ನಾವು ಬದಲಾಗಲಿಲ್ಲ ಎಂದರೆ ಬದಲಾಗುವ ಸಾಧ್ಯತೆಗೂ ಕೂಡ ಕ್ಷೀಣಿಸುತ್ತವೆ-ಮೋದಿ
6:16 PM, 26 Sep

ವಿಶ್ವಸಂಸ್ಥೆ ಸಾಮಾನ್ಯ ಸಭೆಯ 75ನೇ ಸದನವನ್ನು ಉದ್ದೇಶಿಸಿ ಇಂದು ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಭಾಷಣ ಮಾಡಲಿದ್ದಾರೆ. ಕೊವಿಡ್-19 ಸಾಂಕ್ರಾಮಿಕ ಪಿಡುಗು ಜಗತ್ತನ್ನು ಕಾಡಲು ಆರಂಭಿಸಿದ ದಿನನಿಂದ ವಿಶ್ವಸಂಸ್ಥೆ ಜೊತೆಗೆ ಭಾರತವು ನಿರಂತರ ಸಂಪರ್ಕವನ್ನು ಹೊಂದಿದೆ.
11:21 AM, 11 Sep

ಭಾರತ-ಚೀನಾ ನಡುವಿನ ಸಂಬಂಧ ಸರಿಯಾದ ದಿಕ್ಕಿನಲ್ಲಿ ಮುಂದುವರೆಯಬೇಕು. ಎರಡೂ ದೇಶಗಳು ಒಟ್ಟಿಗೆ ಮುನ್ನೆಡೆಯಲು ಯಾವುದೇ ಯಾವುದೇ ಸವಾಲಯಗಳು ಅಡ್ಡಿಯಾಗುವುದಿಲ್ಲ ಎಂದು ಚೀನಾ ವಿದೇಶಾಂಗ ಸಚಿವ ವಾಂಗ್ ಯಿ ಹೇಳಿದ್ದಾರೆ.
11:00 AM, 11 Sep

ಪಾಂಗಾಂಗ್ ಸರೋವರದ ಬಳಿ ಗುರುವಾರವೂ ಚೀನಾ ಸೇನೆ ಗಡಿರೇಖೆ ಉಲ್ಲಂಘನೆಗೆ ಪ್ರಯತ್ನ ನಡೆಸಿದೆ. 4 ಬೋಟ್ ಮೂಲಕ ಚೀನಾ ಸೈನಿಕರು ಗಸ್ತು ತಿರುಗುತ್ತಾ ಗಡಿ ಉಲ್ಲಂಘನೆಗೆ ಪ್ರಯತ್ನ ನಡೆಸಿದರು.
10:38 AM, 11 Sep

ಚೀನಾ ಪಡೆಗಳನ್ನು ವಾಪಸ್ ಕರೆಸಿಕೊಳ್ಳಬೇಕು ಎಂದು ಭಾರತ ಆಗ್ರಹಿಸಿದೆ.
10:21 AM, 11 Sep

ತಗಾದೆ ಶುರುಮಾಡಿದ್ದು ನಾವಲ್ಲ: ಚೀನಾಕ್ಕೆ ಜೈಶಂಕರ್ ಖಡಕ್ ನುಡಿ

ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಮತ್ತು ಚೀನಾ ಸಚಿವ ವಾಂಗ್ ಯಿ ನಡುವೆ ಸುಮಾರು ಎರಡು ಗಂಟೆ ಮಾತುಕತೆ ನಡೆಯಿತು. ವಾಸ್ತವ ಗಡಿ ನಿಯಂತ್ರಣ ರೇಖೆಯಿಂದ ಸಂಪೂರ್ಣವಾಗಿ ಎರಡೂ ದೇಶಗಳ ಪಡೆಗಳು ಹಿಂದೆ ಸರಿಯವುದು, ತಮ್ಮ ಚಟುವಟಿಕೆಗಳನ್ನು ನಿಲ್ಲಿಸುವ ಕುರಿತು ಹಾಗೂ ಗಡಿಯಲ್ಲಿನ ಪ್ರಸ್ತುತ ಸನ್ನಿವೇಶಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು.
10:08 AM, 11 Sep

ಎರಡು ದಿನಗಳ ಹಿಂದೆ ಭಾರತ-ಚೀನಾ ಗಡಿಯಲ್ಲಿ ಗುಂಡಿನ ದಾಳಿ ನಡೆದಿತ್ತು. ಈ ಘಟನೆ ಬಳಿಕ ಎರಡೂ ದೇಶದ ವಿದೇಶಾಂಗ ಸಚಿವರು ರಷ್ಯಾದ ಮಾಸ್ಕೋದಲ್ಲಿ ಭೇಟಿಯಾಗಿ ಮಹತ್ವದ ಚರ್ಚೆ ನಡೆಸಿದ್ದಾರೆ.
10:01 AM, 11 Sep

ಭಾರತದ ವಿದೇಶಾಂಗ ಸಚಿವ ಎಸ್.ಜೈಶಂಕರ್ ಮತ್ತು ಚೀನಾದ ಸಚಿವ ವಾಂಗ್ ಯಿ ಮಾಸ್ಕೋದಲ್ಲಿ ಗುರುವಾರ ರಾತ್ರಿ ಮಹತ್ವದ ಸಭೆ ನಡೆಸಿದ್ದಾರೆ.
9:59 AM, 11 Sep

ಪೂರ್ವ ಲಡಾಖ್ ಗಡಿಯಲ್ಲಿ ಭಾರತ ಸೇನೆಯ ಪ್ರಾಬಲ್ಯವನ್ನು ಹೆಚ್ಚಿಸಿದೆ. ಪಾಂಗಾಂಗ್ ಸರೋವರದ ಬಳಿ ಚೀನಾ ಚಟುವಟಿಕೆ ಮೇಲೆ ನಿಗಾ ವಹಿಸಲು ಈ ಕ್ರಮ ಕೈಗೊಳ್ಳಲಾಗಿದೆ.
8:06 PM, 4 Sep

ಸೇನಾ ಮುಖ್ಯಸ್ಥ ಜನರಲ್ ಮನೋಜ್ ಮುಕುಂದ್ ನಾರವಾನೆ ಅವರು ಸೆಪ್ಟೆಂಬರ್ 3 ರಂದು ಪೂರ್ವ ಲಡಾಖ್‌ಗೆ ಭೇಟಿ ನೀಡಿದ ಸಂದರ್ಭದಲ್ಲಿ ಲಾಜಿಸ್ಟಿಕ್ಸ್ ಮೂಲಸೌಕರ್ಯಗಳ ಬಗ್ಗೆ ನೇರ ಪರಿಶೀಲನೆ ನಡೆಸಿದರು.
7:14 PM, 4 Sep

ಸೇನಾ ಮುಖ್ಯಸ್ಥ ಜನರಲ್ ಮನೋಜ್ ಮುಕುಂದ್ ನಾರವಾನೆ ಅವರು ಲಡಾಕ್ ಭೇಟಿಯಲ್ಲಿ ಇಂದು ಭದ್ರತಾ ಪರಿಸ್ಥಿತಿಯನ್ನು ಪರಿಶೀಲಿಸಿದರು.
6:09 PM, 4 Sep

ಭಾರತೀಯ ನೌಕಾಪಡೆ ಮತ್ತು ರಷ್ಯಾದ ನೌಕಾಪಡೆಯ ಹಡಗುಗಳು ಬಂಗಾಳಕೊಲ್ಲಿಯಲ್ಲಿ ಒಟ್ಟಿಗೆ ಕಾರ್ಯನಿರ್ವಹಿಸುತ್ತಿವೆ.
6:08 PM, 4 Sep

ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ ಮುಖ್ಯಸ್ಥರು ಲಡಾಖ್‌ನಲ್ಲಿನ ಚೀನಾದ ಗಡಿಯಲ್ಲಿ ಆರು ದಿನಗಳನ್ನು ಕಳೆಯಲಿದ್ದಾರೆ.
4:18 PM, 4 Sep

ಭಾರತ-ನೇಪಾಳ ಗಡಿಯಲ್ಲಿ ಭಾರತ ವಿರೋಧಿ ಪ್ರತಿಭಟನೆಗಳನ್ನು ನಡೆಸಲು ಚೀನಾ ಹಣ ನೀಡುತ್ತಿದೆ ಎಂದು ಗುಪ್ತಚರ ಇಲಾಖೆ ಮಾಹಿತಿ ನೀಡಿದೆ.
3:48 PM, 4 Sep

ಚೀನಾಕ್ಕೆ ಸೇರಿದ ಸುಖೋಯ್ ಸರಣಿಯ ಯುದ್ಧ ವಿಮಾನವನ್ನು ತೈವಾನ್ ಹೊಡೆದುರುಳಿಸಿದೆ ಎನ್ನಲಾಗಿದೆ.
2:38 PM, 4 Sep

ಭಾರತ-ಚೀನಾ ನಡುವಿನ ಸಂಘರ್ಷ ಹಿನ್ನೆಲೆ ಗಡಿ ಪ್ರದೇಶಕ್ಕೆ ಹೊರಟ ಭಾರತೀಯ ಯೋಧರನ್ನು ಹಿಮಾಚಲಪ್ರದೇಶದಲ್ಲಿ ಜೈಕಾರ, ಘೋಷಣೆಗಳ ಮೂಲಕ ಗೌರವಯುತವಾಗಿ ಕಳುಹಿಸಿ ಕೊಡಲಾಯಿತು.
12:10 PM, 4 Sep

ನಾನು ಲೇಹ್ ತಲುಪಿದ ನಂತರ ಬೇರೆ ಬೇರೆ ಸ್ಥಳಗಳಿಗೆ ಭೇಟಿ ನೀಡಿದ್ದೆ. ನಾನು ಅಧಿಕಾರಿಗಳು, ಜೆಸಿಒಗಳೊಂದಿಗೆ ಮಾತನಾಡಿದ್ದೇನೆ ಮತ್ತು ಸನ್ನದ್ಧತೆಯನ್ನು ಪಡೆದುಕೊಂಡಿದ್ದೇನೆ. ಜವಾನರ ಮನೋಸ್ಥೈರ್ಯ ಹೆಚ್ಚಾಗಿದೆ ಮತ್ತು ಅವರು ಎಲ್ಲಾ ಸವಾಲುಗಳನ್ನು ಎದುರಿಸಲು ಸಿದ್ಧರಾಗಿದ್ದಾರೆ ಎಂದು ಜನರಲ್ ಮೇಜರ್ ಮುಕುಂದ್ ನರವಾನೆ ಹೇಳಿದ್ದಾರೆ.
READ MORE

English summary
An Indian Army officer and two soldiers were killed during a violent confrontation with Chinese troops in the Galwan Valley in eastern Ladakh on Monday night, in the first such incident in the last 45 years reflecting massive escalation in the five-week border row.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X