• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಚೀನಾವನ್ನು ಎದುರಿಸಲು ಭಾರತದ ಬತ್ತಳಿಕೆಯಲ್ಲಿರುವ ಪ್ರಮುಖ ಅಸ್ತ್ರಗಳಿವು

|

ನವದೆಹಲಿ, ಸೆಪ್ಟೆಂಬರ್ 28: ಭಾರತ ಮತ್ತು ಚೀನಾ ಗಡಿಯಲ್ಲಿನ ಉದ್ವಿಗ್ನತೆ ಇನ್ನೂ ಶಮನವಾಗಿಲ್ಲ. ಅತ್ತ ಚೀನಾ ಸೇನೆ ಪಿಎಲ್‌ಎ ಭಾರತವನ್ನು ಕೆಣಕಲು ಚಟುವಟಿಕೆಗಳನ್ನು ನಡೆಸುತ್ತಿದ್ದರೆ, ಇತ್ತ ಭವಿಷ್ಯದ ಯಾವುದೇ ರೀತಿಯ ಅಪಾಯಗಳನ್ನು ಎದುರಿಸಲು ತಯಾರಿ ನಡೆಸುತ್ತಿದೆ.

500 ಕಿ.ಮೀ. ಹಾರಬಲ್ಲ ಬ್ರಹ್ಮೋಸ್ ಕ್ಷಿಪಣಿ, 800 ಕಿ.ಮೀ. ಸಾಮರ್ಥ್ಯದ ನಿರ್ಭಯ್ ಕ್ರೂಸ್ ಕ್ಷಿಪಣಿ ಮತ್ತು ಕ್ಸಿಂಜಿಯಾಂಗ್ ಹಾಗೂ ಟಿಬೆಟ್ ಪ್ರದೇಶದಲ್ಲಿನ ಚೀನಾ ಸೇನೆಯ ಕ್ಷಿಪಣಿ ನಿಯೋಜನೆಗಳನ್ನು ಹದಗೆಡಿಸುವಂತಹ, 40 ಕಿಮೀ ದೂರದ ವೈಮಾನಿಕ ಬೆದರಿಕೆಗಳನ್ನು ಎದುರಿಸಬಲ್ಲ ಸಾಮರ್ಥ್ಯವುಳ್ಳ ಆಕಾಶ್ ಮೇಲ್ಮೈ ವಾಯು ಕ್ಷಿಪಣಿಗಳು ಭಾರತದ ಬತ್ತಳಿಕೆಯಲ್ಲಿವೆ.

ತಿನ್ನಲು ಅನ್ನ ಅಹಾರವಿಲ್ಲ, ಆದರೂ ಚೀನಾಗೆ ಯುದ್ಧ ಬೇಕು..!ತಿನ್ನಲು ಅನ್ನ ಅಹಾರವಿಲ್ಲ, ಆದರೂ ಚೀನಾಗೆ ಯುದ್ಧ ಬೇಕು..!

ಪಿಎಲ್‌ಯದ ಪಶ್ಚಿಮ ಕಮಾಂಡ್‌ 2,000 ಕಿ.ಮೀ. ವಲಯದಲ್ಲಿ ಶಸ್ತ್ರಾಸ್ತ್ರಗಳನ್ನು ನಿಯೋಜಿಸಿದೆ. ಹಾಗೆಯೇ ಲಡಾಖ್ ಸೇನಾ ನಿಯೋಜನೆ ಶುರುವಾದ ಬಳಿಕ ಟಿಬೆಟ್ ಮತ್ತು ಕ್ಸಿಂಜಿಯಾಂಗ್‌ನಲ್ಲಿ ದೂರ ವ್ಯಾಪ್ತಿ ಕ್ರಮಿಸುವ ಮೇಲ್ಮೈ ವಾಯು ಕ್ಷಿಪಣಿಗಳನ್ನು ನಿಯೋಜನೆ ಮಾಡಿದೆ. ಮುಂದೆ ಓದಿ...

ಚೀನಾದ ಸೇನೆಯ ಚಟುವಟಿಕೆ

ಚೀನಾದ ಸೇನೆಯ ಚಟುವಟಿಕೆ

ಚೀನಾದ ಸೇನಾ ಪಡೆಗಳಿಗೆ ಪ್ರತಿಯಾಗಿ ಯಾವುದೇ ರೀತಿಯ ಅಪಾಯಕಾರಿ ಸನ್ನಿವೇಶಗಳನ್ನು ಎದುರಿಸಲು ಸೂಪರ್ ಸಾನಿಕ್ ಬ್ರಹ್ಮೋಸ್, ಸಬ್ ಸಾನಿಕ್ ನಿರ್ಭಯ್ ಹಾಗೂ ಆಕಾಶ್‌ಗಳನ್ನು ಸಿದ್ಧಪಡಿಸಿ ಇರಿಸಲಾಗಿದೆ. ಚೀನಾದ ಸೇನಾ ಜಮಾವಣೆಯು ಅಕ್ಸೈ ಚಿನ್ ಆಕ್ರಮಿಸುವುದಕ್ಕೆ ಮಾತ್ರವಲ್ಲ, ಅದು ವಾಸ್ತವ ಗಡಿ ನಿಯಂತ್ರಣ ರೇಖೆಯ (ಎಲ್‌ಎಸಿ) 3,488 ಕಿ.ಮೀ ಉದ್ದಕ್ಕೂ ಇರುವ ಕಶ್ಗರ್, ಹೋಟನ್, ಲ್ಹಾಸಾ ಮತ್ತು ನಿಯಿಂಗ್ಚಿಯ ಒಳಭಾಗಗಳ ಮೇಲೆಯೂ ಚೀನಾ ಹಿಡಿತ ಸಾಧಿಸಲು ಬಯಸಿದೆ.

ಬ್ರಹ್ಮೋಸ್ ಕ್ಷಿಪಣಿ

ಬ್ರಹ್ಮೋಸ್ ಕ್ಷಿಪಣಿ

ಲಡಾಖ್ ವಲಯದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಬ್ರಹ್ಮೋಸ್ ಕ್ಷಿಪಣಿಗಳನ್ನು ಸಿದ್ಧವಾಗಿರಿಸಲಾಗಿದೆ. ಜತೆಗೆ ಎಸ್‌ಯು-30 ಎಂಕೆಐ ಯುದ್ಧ ವಿಮಾನದ ಮೂಲಕ ಶಸ್ತ್ರಾಸ್ತ್ರ ಉಡಾವಣೆ ಮಾಡುವ ಆಯ್ಕೆಯನ್ನು ಹೊಂದಿದೆ. ಇದಲ್ಲದೆ ಕಾರ್ ನಿಕೋಬಾರ್ ವಾಯು ನೆಲೆಯ ಮೂಲಕ ಹಿಂದೂ ಮಹಾಸಾಗರದಲ್ಲಿ ಪ್ರಮುಖ ಭಾಗಗಳ ಮೇಲೆ ಬ್ರಹ್ಮೋಸ್ ಅನ್ನು ಬಳಸಬಹುದಾಗಿದೆ. ಇಂಡೋನೇಷ್ಯಾದ ದಿಕ್ಕಿನಿಂದ ಮಲಕ್ಕಾ ಜಲಸಂಧಿಯಿಂದ ಸುಂಡಾ ಜಲಸಂಧಿ ಮೂಲಕ ಎದುರಾಗಬಹುದಾದ ಚೀನಾ ಸೇನೆ ಅಪಾಯವನ್ನು ಎದುರಿಸಲು ಈ ನೌಕಾ ನೆಲೆ ಸಹಾಯವಾಗಲಿದೆ.

Video: ಲಡಾಖ್ ಗಡಿಯಲ್ಲಿ ಭಾರತೀಯ ಸೇನಾ ಟ್ಯಾಂಕ್Video: ಲಡಾಖ್ ಗಡಿಯಲ್ಲಿ ಭಾರತೀಯ ಸೇನಾ ಟ್ಯಾಂಕ್

ನಿರ್ಭಯ್ ಸಬ್ ಸಾನಿಕ್ ಕ್ಷಿಪಣಿ

ನಿರ್ಭಯ್ ಸಬ್ ಸಾನಿಕ್ ಕ್ಷಿಪಣಿ

ಸಮುದ್ರ ಹಾಗೂ ವಾಯು ಮಾರ್ಗದಲ್ಲಿ ಚಲಿಸಬಲ್ಲ ಸಾಮರ್ಥ್ಯವುಳ್ಳ 1,000 ಕಿ.ಮೀ ದೂರ ಕ್ರಮಿಸಬಲ್ಲ ಯುದ್ಧ ಶಸ್ತ್ರ ವ್ಯವಸ್ಥೆಯಾದ ನಿರ್ಭಯ್ ಸಬ್ ಸಾನಿಕ್ ಕ್ಷಿಪಣಿಗಳನ್ನು ಸೀಮಿತ ಸಂಖ್ಯೆಯಲ್ಲಿ ನಿಯೋಜಿಸಲಾಗಿದೆ. ಈ ಕ್ಷಿಪಣಿಯು ನೆಲದಿಂದ 100 ಮೀಟರ್‌ನಿಂದ 4 ಕಿ.ಮೀ. ನಡುವೆ ಚಲಿಸಿ ತನ್ನ ಗುರಿಯನ್ನು ತಲುಪಬಹುದು. ಇದು ಮೇಲ್ಮೈನಿಂದ ಮೇಲ್ಮೈಗೆ ಸಾಗುವ ಆವೃತ್ತಿಯದ್ದಾಗಿದೆ.

ಆಕಾಶ್ ಕ್ಷಿಪಣಿ

ಆಕಾಶ್ ಕ್ಷಿಪಣಿ

ಭಾರತೀಯ ಸೇನೆ ಬಳಸುತ್ತಿರುವ ಮೂರನೇ ಕ್ಷಿಪಣಿ ಆಕಾಶ್ ಸ್ಯಾಮ್. ಇದನ್ನು ಲಡಾಖ್ ವಲಯದಲ್ಲಿನ ಎಲ್‌ಎಸಿಯುದ್ದಕ್ಕೂ ಚೀನಾದ ವಿಮಾನಗಳು ಒಳನುಸುಳಲು ಪ್ರಯತ್ನಿಸಿದರೆ ಅವುಗಳನ್ನು ಹೊಡೆದುರುಳಿಸಲು ಸಾಕಾಗುವಷ್ಟು ಸಂಖ್ಯೆಯಲ್ಲಿ ನಿಯೋಜಿಸಲಾಗಿದೆ. ಇದು ಯುದ್ಧ ವಿಮಾನಗಳು, ಕ್ರೂಸ್ ಕ್ಷಿಪಣಿಗಳು ಮತ್ತು ಖಂಡಾಂತರ ಕ್ಷಿಪಣಿಗಳು ಸೇರಿದಂತೆ ಎಲ್ಲ ವೈಮಾನಿಕ ಗುರಿಗಳನ್ನು ಮುಟ್ಟುವ ಸಾಮರ್ಥ್ಯ ಹೊಂದಿದೆ.

ಚೀನಾ-ಪಾಕ್ ಒಟ್ಟಿಗೆ ದಾಳಿ ನಡೆಸಿದರೂ ಎದುರಿಸಲು ಭಾರತದ ವಾಯುಪಡೆ ಸಿದ್ಧಚೀನಾ-ಪಾಕ್ ಒಟ್ಟಿಗೆ ದಾಳಿ ನಡೆಸಿದರೂ ಎದುರಿಸಲು ಭಾರತದ ವಾಯುಪಡೆ ಸಿದ್ಧ

English summary
India-China stand-off: India's main stay in the stand-off weapons to counter Chinese threat are Brahmose, Akash and Nirbhay missiles.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X