ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗಡಿಯಲ್ಲಿನ ಪಡೆಗಳನ್ನು ವಾಪಸ್ ಕರೆಸಿಕೊಳ್ಳಿ: ಚೀನಾಕ್ಕೆ ಭಾರತ ಆಗ್ರಹ

|
Google Oneindia Kannada News

ನವದೆಹಲಿ, ಜನವರಿ 25: ವಾಸ್ತವ ಗಡಿ ನಿಯಂತ್ರಣ ರೇಖೆಯಲ್ಲಿನ ತನ್ನ ಪಡೆಗಳನ್ನು ಸಂಪೂರ್ಣವಾಗಿ ಹಿಂದಕ್ಕೆ ಕರೆಸಿಕೊಳ್ಳುವಂತೆ ಚೀನಾಕ್ಕೆ ಭಾರತ ಸೂಚಿಸಿದೆ. ಭಾರತೀಯ ಸೇನೆ ಮತ್ತು ಚೀನಾದ ಪೀಪಲ್ಸ್ ಲಿಬರೇಷನ್ ಆರ್ಮಿ (ಪಿಎಲ್‌ಎ) ನಡುವೆ ಭಾನುವಾರ ನಡೆದ ಒಂಬತ್ತನೇ ಸುತ್ತಿನ ಕಮಾಂಡರ್ ಮಟ್ಟದ ಮಾತುಕತೆ ಸಂದರ್ಭದಲ್ಲಿ ಭಾರತ ಈ ಒತ್ತಾಯ ಮಾಡಿದೆ.

ಚುಷುಲ್-ಮೋಲ್ಡೊ ಗಡಿ ಸಿಬ್ಬಂದಿ ಸಭೆ (ಬಿಪಿಎಂ) ಸ್ಥಳದಲ್ಲಿ ಬೆಳಿಗ್ಗೆ 10 ಗಂಟೆಗೆ ಆರಂಭವಾದ ಮಾತುಕತೆ, ಸೋಮವಾರ ಮಧ್ಯರಾತ್ರಿ 2.30ರವರೆಗೂ ಮುಂದುವರಿಯಿತು. ಪೂರ್ವ ಲಡಾಖ್ ಪ್ರದೇಶದಲ್ಲಿ ನವೆಂಬರ್ 6ರಂದು ಟ್ಯಾಂಕ್‌ಗಳು, ವೈಮಾನಿಕ ರಕ್ಷಣಾ ಸಾಮಗ್ರಿಗಳೊಂದಿಗೆ ಸುಮಾರು 50 ಸಾವಿರ ಪಡೆಗಳನ್ನು ನಿಯೋಜಿಸಿದ ಬಳಿಕ ಎರಡು ದೇಶಗಳ ನಡುವೆ ಮಾತುಕತೆ ನಡೆದಿತ್ತು.

56 ಇಂಚ್ ಎದೆಯ ವ್ಯಕ್ತಿಗೆ ಚೀನಾ ಹೆಸರೆತ್ತುವ ತಾಕತ್ತಿಲ್ಲ: ರಾಹುಲ್ ಗಾಂಧಿ56 ಇಂಚ್ ಎದೆಯ ವ್ಯಕ್ತಿಗೆ ಚೀನಾ ಹೆಸರೆತ್ತುವ ತಾಕತ್ತಿಲ್ಲ: ರಾಹುಲ್ ಗಾಂಧಿ

'ಭಾರತ ಚೀನಾ ಕಾರ್ಪ್ಸ್ ಕಮಾಂಡರ್ ಮಟ್ಟದ 9ನೇ ಸುತ್ತಿನ ಮಾತುಕತೆ ಇಂದು ರಾತ್ರಿ 2.30ಕ್ಕೆ ಅಂತ್ಯಗೊಂಡಿತು. ಪೂರ್ವ ಲಡಾಖ್ ವಲಯದ ಚುಷುಲ್‌ನಲ್ಲಿ ಈ ಸಭೆಯು 15 ಗಂಟೆಗೂ ಹೆಚ್ಚು ಕಾಲ ನಡೆಯಿತು' ಎಂದು ಎಎನ್‌ಐ ವರದಿ ಮಾಡಿದೆ.

 India-China Hold Ninth Round Of LAC Talks That Lasted For 15 Hours

ಮಾತುಕತೆಯಲ್ಲಿ ಭಾರತ ನಿಯೋಗದ ನೇತೃತ್ವ ವಹಿಸಿದ್ದ ಲೇಹ್ ಮೂಲದ ಎಚ್‌ಕ್ಯೂ 14 ಕಾರ್ಪ್ಸ್‌ನ ಕಾರ್ಪ್ಸ್ ಕಮಾಂಡರ್ ಲೆಫ್ಟಿನೆಂಟ್ ಜನರಲ್ ಪಿಜಿಕೆ ಮೆನನ್ ಅವರು ಎಲ್‌ಎಸಿಯಲ್ಲಿನ ಪಡೆಗಳನ್ನು ಹಿಂದಕ್ಕೆ ಕರೆಸಿಕೊಳ್ಳುವಂತೆ ಚೀನಾಕ್ಕೆ ಒತ್ತಾಯಿಸಿದರು ಎನ್ನಲಾಗಿದೆ.

ಹಿಂದೂ ಮಹಾಸಾಗರದಲ್ಲಿ ಸಂಶೋಧನೆ ನೆಪದಲ್ಲಿ ಚೀನಾ ಹಡಗುಗಳು: ತಜ್ಞರ ಎಚ್ಚರಿಕೆಹಿಂದೂ ಮಹಾಸಾಗರದಲ್ಲಿ ಸಂಶೋಧನೆ ನೆಪದಲ್ಲಿ ಚೀನಾ ಹಡಗುಗಳು: ತಜ್ಞರ ಎಚ್ಚರಿಕೆ

ಕಳೆದ ವರ್ಷದ ಆರಂಭದಿಂದ ಇದುವರೆಗೂ ಎಲ್‌ಎಸಿಯಲ್ಲಿ ಭಾರತ ಮತ್ತು ಚೀನಾದ 1 ಲಕ್ಷಕ್ಕೂ ಅಧಿಕ ಪಡೆಗಳು ಬೀಡುಬಿಟ್ಟಿವೆ. ನವೆಂಬರ್ 6ರಂದು ನಡೆದ ಎಂಟನೇ ಸುತ್ತಿನ ಸಭೆಯಲ್ಲಿ ಎರಡೂ ಪಡೆಗಳು ಕೆಲವು ನಿರ್ದಿಷ್ಟ ಸ್ಥಳಗಳಲ್ಲಿ ಪಡೆಗಳನ್ನು ವಾಪಸ್ ಕರೆಯಿಸಿಕೊಳ್ಳುವ ಬಗ್ಗೆ ಮಾತುಕತೆ ನಡೆಸಿದ್ದವು.

English summary
India and China hold the 9th rount of LAC standoff talk on Sunday for 15 hours. India asks China for complete disengagement of force.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X