ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚೀನಾಗೆ ತಕ್ಕ ಪಾಠ: ಭಾರತೀಯರಿಗೆ ಸುಳ್ಳು ಹೇಳಿದರಾ ಪ್ರಧಾನಿ ಮೋದಿ?

|
Google Oneindia Kannada News

ನವದೆಹಲಿ, ಜೂನ್.25: ಲಡಾಖ್ ಪೂರ್ವ ಗಡಿಯಲ್ಲಿ ದೇಶಕ್ಕಾಗಿ ಪ್ರಾಣ ಅರ್ಪಿಸಿದ 20 ಭಾರತೀಯ ಯೋಧರ ಸಾವಿಗೆ ತಕ್ಕ ಉತ್ತರ ನೀಡಲಾಗಿದೆ. ಚೀನಾದ ಸರಿಯಾದ ಪಾಠವನ್ನು ಕಲಿಸಲಾಗುತ್ತದೆ ಎಂದು ಕೇಂದ್ರ ಸರ್ಕಾರ ಹಾಗೂ ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳುತ್ತಿದ್ದಾರೆ. ಆದರೆ ವಾಸ್ತವ ಅಂಶವೇ ಬೇರೆ ಇದೆ.

Recommended Video

ಪ್ರಪಂಚದ ಮುಂದೆ ಮತ್ತೆ ಪಾಕಿಸ್ತಾನಕ್ಕೆ ಮುಖಭಂಗ | Oneindia Kannada

ಭಾರತದ 20 ಯೋಧರನ್ನು ಬಲಿ ಪಡೆದ ಚೀನಾಗೆ ಸರಿಯಾದ ಪಾಠವನ್ನು ಕಲಿಸಬೇಕು. ಚೀನೀ ವಸ್ತುಗಳನ್ನು ಬ್ಯಾನ್ ಮಾಡಬೇಕು, ಚೀನೀ ಕಂಪನಿಗಳನ್ನು ದೇಶದಿಂದ ಹೊರಗಟ್ಟಬೇಕು, ಚೀನಾದ ವಸ್ತುಗಳ ಮೇಲೆ ಹೆಚ್ಚಿನ ಆಮದು ಸುಂಕವನ್ನು ವಿಧಿಸಬೇಕು. ಹೀಗೆ ಪ್ರತಿಯೊಬ್ಬ ಭಾರತೀಯರು ಆಕ್ರೋಶಭರಿತ ಆಗ್ರಹಕ್ಕೆ ಕೇಂದ್ರ ಸರ್ಕಾರ ಕೂಡಾ ಧ್ವನಿಗೂಡಿಸಿತ್ತು. ನಮ್ಮ ಯೋಧರ ಹೋರಾಟ ವ್ಯರ್ಥವಾಗುವುದಕ್ಕೆ ಬಿಡುವುದಿಲ್ಲ ಎಂದು ಸ್ವತಃ ಪ್ರಧಾನಮಂತ್ರಿಗಳೇ ಭರವಸೆ ನೀಡಿದ್ದರು. ಆದರೆ ಇದೆಲ್ಲ ಹುಸಿ ಭರವಸೆಗಳು ಎಂದು ಭಾರತೀಯರು ನಂಬಿದಂತೆ ತೋರುತ್ತಿದೆ.

ಭಾರತದ ಸುರಕ್ಷತೆಗೆ ರಾಹುಲ್ ಗಾಂಧಿಯೇ ಬೆಸ್ಟ್ ಎಂದವರೆಷ್ಟು ಜನ?ಭಾರತದ ಸುರಕ್ಷತೆಗೆ ರಾಹುಲ್ ಗಾಂಧಿಯೇ ಬೆಸ್ಟ್ ಎಂದವರೆಷ್ಟು ಜನ?

ಗಾಲ್ವಾನ್ ಕಣಿವೆಯಲ್ಲಿ ಕಾಲ್ಕೆರೆದು ನಿಂತಿದ್ದ ಚೀನೀ ಯೋಧರಿಗೆ ಭಾರತವು ಮುಟ್ಟಿ ನೋಡಿಕೊಳ್ಳುವಂತೆ ಪೆಟ್ಟು ಕೊಟ್ಟಿಲ್ಲ ಎಂದು ಬಹುಪಾಲು ಭಾರತೀಯರು ನಂಬಿದ್ದಾರೆ. ಐಎಎನ್ಎಸ್-ಸಿ-ವೋಟರ್ ಸಮೀಕ್ಷೆಯು ಈ ಅಂಶವನ್ನು ಜಗತ್ಜಾಹೀರುಗೊಳಿಸಿದೆ. ಭಾರತ-ಚೀನಾ ಗಡಿಯಲ್ಲಿ ನಡೆದ ಸಂಘರ್ಷದಲ್ಲಿ ಭಾರತೀಯ ಯೋಧರು ಚೀನಾಗೆ ತಿರುಗೇಟು ನೀಡಿದ್ದಾರೆ ಎಂದು ಹೇಳಲಾಗುತ್ತಿತ್ತು. ಇದನ್ನು ಆಧಾರವಾಗಿಟ್ಟುಕೊಂಡು ನಡೆಸಿದ ಸಮೀಕ್ಷೆಯಲ್ಲಿ ಅಚ್ಚರಿಯ ಫಲಿತಾಂಶ ಹೊರಬಿದ್ದಿದೆ.

ಶೇ.60.20ರಷ್ಟು ಜನ ಚೀನಾಗೆ ಪಾಠ ಕಲಿಸಿ ಅಂತಿದ್ದಾರೆ

ಶೇ.60.20ರಷ್ಟು ಜನ ಚೀನಾಗೆ ಪಾಠ ಕಲಿಸಿ ಅಂತಿದ್ದಾರೆ

ಭಾರತ-ಚೀನಾ ಸಂಘರ್ಷಕ್ಕೆ ಸಂಬಂಧಿಸಿದಂತೆ ಐಎಎನ್ಎಸ್-ಸಿವೋಟರ್ 10,000 ಮಾದರಿಯನ್ನು ಸಂಗ್ರಹಿಸಿ ಸಮೀಕ್ಷೆ ನಡೆಸಲಾಯಿತು. ಚೀನಾಗೆ ತಿರುಗೇಟು ನೀಡುವ ನಿಟ್ಟಿನಲ್ಲಿ ಭಾರತವು ಸೂಕ್ತ ಕ್ರಮಗಳನ್ನು ತೆಗೆದುಕೊಂಡಿದೆ ಎಂದು ನಿಮಗೆ ಅನಿಸುತ್ತದೆಯೇ ಎಂದು ಪ್ರಶ್ನಿಸಲಾಗಿತ್ತು. ಇದಕ್ಕೆ ಶೇ.60.20ರಷ್ಟು ಜನರು ಇಲ್ಲ ಎಂದು ಉತ್ತರಿಸಿದ್ದಾರೆ. ಅಲ್ಲದೇ ಚೀನಾಗೆ ಸರಿಯಾಗಿ ಪಾಠ ಕಲಿಸುವಲ್ಲಿ ಸರ್ಕಾರವು ಕಟ್ಟುನಿಟ್ಟಿನ ಕ್ರಮಗಳನ್ನು ಜಾರಿಗೊಳಿಸಿಲ್ಲ ಎಂದು ಹೇಳಲಾಗಿದೆ.

ಕೇಂದ್ರದ ಕಾರ್ಯವೈಖರಿಯನ್ನು ಮೆಚ್ಚಿಕೊಂಡಿದ್ದೆಷ್ಟು ಜನ?

ಕೇಂದ್ರದ ಕಾರ್ಯವೈಖರಿಯನ್ನು ಮೆಚ್ಚಿಕೊಂಡಿದ್ದೆಷ್ಟು ಜನ?

ಚೀನಾಗೆ ಪಾಠ ಕಲಿಸುವ ನಿಟ್ಟಿನಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಎಷ್ಟರ ಮಟ್ಟಿಗೆ ಯಶಸ್ವಿಯಾಗಿದೆ ಎಂದು ಕೇಳಿದ ಪ್ರಶ್ನೆಗೆ ಶೇ.39.80ರಷ್ಟು ಜನರು ಉತ್ತಮವಾಗಿದೆ ಎಂದು ಉತ್ತರಿಸಿದ್ದಾರೆ. ಚೀನಾಗೆ ಸರ್ಕಾರದ ಕ್ರಮಗಳಿಂದ ತಿರುಗೇಟು ನೀಡಿದಂತಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ವಯಸ್ಸು, ಧರ್ಮ, ಶಿಕ್ಷಣ, ಮೇಲ್ವರ್ಗ, ಮಧ್ಯಮ ವರ್ಗ ಹಾಗೂ ಕೆಳವರ್ಗ, ಎನ್ ಡಿಎ ಮೈತ್ರಿಕೂಟದ ಬೆಂಬಲಿಗರು, ಯುಪಿಎ ಮೈತ್ರಿಕೂಟದ ಬೆಂಬಲಿಗರು ಹೀಗೆ ಎಲ್ಲ ವಲಯಗಳ ಜನರನ್ನು ಸಮೀಕ್ಷೆಯಲ್ಲಿ ಪ್ರಶ್ನಿಸಲಾಗಿದೆ.

ವಯಸ್ಸು, ಮತ್ತು ಧರ್ಮವಾರು ವಿಂಗಡಣೆ ಅಂಕಿ-ಅಂಶ

ವಯಸ್ಸು, ಮತ್ತು ಧರ್ಮವಾರು ವಿಂಗಡಣೆ ಅಂಕಿ-ಅಂಶ

ಐಎಎನ್ಎಸ್-ಸಿ-ವೋಟರ್ ನಡೆಸಿದ ಸಮೀಕ್ಷೆಯಲ್ಲಿ ವಯಸ್ಸು, ಧರ್ಮ, ಶಿಕ್ಷಣ, ಸಾಮಾಜಿಕ ಮತ್ತು ಆರ್ಥಿಕ ಸ್ತರವಾರು ವಿಂಗಡಣೆ ಮಾಡಲಾಗಿದೆ. ಈ ಪೈಕಿ 60 ವರ್ಷಕ್ಕಿಂತ ಮೇಲ್ಪಟ್ಟವರಲ್ಲಿ ಶೇ.68.10ರಷ್ಟು ಜನರು ಮೆಚ್ಚಿಕೊಂಡಿದ್ದಾರೆ. ಚೀನಾಗೆ ಭಾರತೀಯ ಸೇನೆ ನೀಡಿದ ತಿರುಗೇಟು ಡ್ರ್ಯಾಗನ್ ಗೆ ಆನೆಯು ತಿರುಗಿಸಿ ಹೊಡೆದಂತಿದೆ ಎಂದಿದ್ದಾರೆ. ಧರ್ಮದ ವಿಚಾರಕ್ಕೆ ಬಂದಾಗ ಶೇ.79.20ರಷ್ಟು ಕ್ರಿಶ್ಚಿಯನ್ನರು ಚೀನಾಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಸರ್ಕಾರವು ಸರಿಯಾಗಿ ತಿರುಗೇಟು ನೀಡಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ಪೈಕಿ ಸಿಖ್ಖ್ ಸಮುದಾಯದ ಜನರು ಚೀನಾದ ವಿರುದ್ಧ ಅತಿಹೆಚ್ಚು ಕೆರಳಿ ಕೆಂಡವಾಗಿದ್ದಾರೆ. ಡ್ರ್ಗಾಗನ್ ರಾಷ್ಟ್ರ ಮುಟ್ಟಿ ನೋಡಿಕೊಳ್ಳುವಂತಾ ಪೆಟ್ಟು ಕೊಡಬೇಕು ಎಂದು ವಾದಿಸುತ್ತಿದೆ.

ಸಾಮಾಜಿಕ-ಆರ್ಥಿಕ ವರ್ವಗಳನುಸಾರ ವಿಂಗಡಣೆ

ಸಾಮಾಜಿಕ-ಆರ್ಥಿಕ ವರ್ವಗಳನುಸಾರ ವಿಂಗಡಣೆ

ಭಾರತವು ಚೀನಾಗೆ ತಕ್ಕ ಪಾಠ ಕಲಿಸಿದೆಯೋ ಇಲ್ಲವೋ ಎನ್ನುವುದರ ಬಗ್ಗೆ ಮಹಿಳೆಯರು-ಪುರುಷರು, ಮೇಲ್ವರ್ಗ, ಮಧ್ಯಮವರ್ಗ ಹಾಗೂ ಕೆಳವರ್ಗದ ಜನರನ್ನು ಸಮೀಕ್ಷೆಯಲ್ಲಿ ಬಳಸಿಕೊಳ್ಳಲಾಗಿತ್ತು. ಈ ಪೈಕಿ ಶೇ.57.70ರಷ್ಟು ಕೆಳವರ್ಗದ ಹಾಗೂ ಶೇ.51.10ರಷ್ಟು ಮೇಲ್ವರ್ಗದ ಜನರು ಚೀನಾಗೆ ಇನ್ನೂ ಸರಿಯಾಗಿ ಪಾಠ ಕಲಿಸಬೇಕಿದೆ ಎಂದಿದ್ದಾರೆ. ಇದೇ ಪ್ರಶ್ನೆಗೆ ಮಧ್ಯಮ ವರ್ಗದ ಶೇ.68.10ರಷ್ಟು ಜನರು ಚೀನಾಗಿನ್ನೂ ಬುದ್ಧಿ ಕಲಿಸಬೇಕಿದೆ ಎಂದು ಉತ್ತರಿಸಿದ್ದಾರೆ.

ಭಾರತ ಚೀನಾಗಿನ್ನೂ ಪಾಠ ಕಲಿಸಿಲ್ಲ ಎಂದ ವಿದ್ಯಾವಂತರು

ಭಾರತ ಚೀನಾಗಿನ್ನೂ ಪಾಠ ಕಲಿಸಿಲ್ಲ ಎಂದ ವಿದ್ಯಾವಂತರು

ಸಿ-ವೋಟರ್ ನಡೆಸಿದ ಸಮೀಕ್ಷೆಯಲ್ಲಿ ಪ್ರಶ್ನಿಸಲಾದ ಎಲ್ಲ ವಿದ್ಯಾವಂತರು ಕೂಡಾ ಪ್ರಧಾನಿ ಮೋದಿ ಹೇಳಿಕೆಗೆ ತದ್ವಿರುದ್ಧವಾಗಿ ಉತ್ತರಿಸಿದ್ದಾರೆ. ಅಂದರೆ ಚೀನಾಗೆ ತಕ್ಕ ಪಾಠ ಕಲಿಸುವಲ್ಲಿ ಭಾರತವು ಯಶಸ್ವಿಯಾಗಿಲ್ಲ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ರಾಜಕೀಯ ರಂಗದಲ್ಲಿ ಯುಪಿಎ ರಂಗವನ್ನು ಬೆಂಬಲಿಸಿದ ಎಲ್ಲರೂ ಕೂಡಾ ಚೀನಾಗೆ ಇನ್ನೂ ಸರಿಯಾದ ಉತ್ತರ ನೀಡಬೇಕಿತ್ತು ಎಂದು ಹೇಳಿದರೆ, ಸಾಂಪ್ರದಾಯಿಕವಾಗಿ ಎನ್ ಡಿಎ ಮೈತ್ರಿಕೂಟದ ಬೆಂಬಲಿಗರು ಕೇಂದ್ರ ಸರ್ಕಾರದ ಕ್ರಮವನ್ನು ಮೆಚ್ಚಿಕೊಂಡಿದ್ದಾರೆ.

English summary
India China Face-off: India Did Not Give Befitting Reply To China Says Majority in C Voter Survey.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X