ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗಡಿ ಬಿಕ್ಕಟ್ಟು: ಕೊನೆಗೂ ಒಂದು ನಿರ್ಧಾರಕ್ಕೆ ಬಂದ ಭಾರತ-ಚೀನಾ

|
Google Oneindia Kannada News

ನವದೆಹಲಿ, ಜೂನ್ 15: ಗಡಿ ಬಿಕ್ಕಟ್ಟನ್ನು ಕಮಾಂಡರ್ ಮಟ್ಟದಲ್ಲಿ ಬಗೆಹರಿಸಿಕೊಳ್ಳಲು ಭಾರತ-ಚೀನಾ ಪರಸ್ಪರ ಒಪ್ಪಿಗೆ ನೀಡಿವೆ ಎನ್ನುವ ಮಾಹಿತಿ ಲಭ್ಯವಾಗಿದೆ.

Recommended Video

ಒಳ್ಳೆ ಒಪ್ಪಂದಕ್ಕೆ ಬಂತು ಚೀನಾ - ಭಾರತ ಗಡಿ ವಿವಾದ !! | Oneindia Kannada

ಗೋಗ್ರಾ, ಹಾಟ್ ಸ್ಪ್ರಿಂಗ್‌ಗಳಲ್ಲಿನ ಬಿಕ್ಕಟುಗಳಿಗೆ ಸಂಬಂಧಿಸಿದ ನಿರ್ಣಯ, ಮಾತುಕತೆಗಳನ್ನು ವಿಭಾಗೀಯ ಕಮಾಂಡರ್ ಗಳ ಮಟ್ಟದಲ್ಲಿಯೇ ನಡೆಸಬಹುದೆಂದು ಚೀನಾ ಭಾವಿಸಿರುವುದರಿಂದ ಇನ್ನು ಮುಂದಿನ ದಿನಗಳಲ್ಲಿ ಗಡಿ ಬಿಕ್ಕಟ್ಟಿಗೆ ಸಂಬಂಧಿಸಿದಂತೆ ಮಾತುಕತೆಗಳು ವಿಭಾಗೀಯ ಕಮಾಂಡರ್ ಗಳ ಮಟ್ಟದಲ್ಲಿಯೇ ನಡೆಯಲಿದೆ ಎಂದು ಸೇನೆಯ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಈಶಾನ್ಯ ಲಡಾಖ್ ನಲ್ಲಿ ಕಳೆದ ವರ್ಷ ಜೂ.15 ರಂದು ನಡೆದಿದ್ದ ಘರ್ಷಣೆ, ಬಿಕ್ಕಟ್ಟುಗಳನ್ನು ಬಗೆಹರಿಸಿಕೊಳ್ಳುವ ನಿಟ್ಟಿನಲ್ಲಿ ಉಭಯ ಸೇನೆಗಳು ಮಾತುಕತೆಯಲ್ಲಿ ತೊಡಗಿವೆ.

India-China

ಈ ಪೈಕಿ ಸೇನಾ ಹಿಂತೆಗೆತದಿಂದ ಎಲ್ಎಸಿಯಲ್ಲಿ ಪರಿಸ್ಥಿತಿ ಒಂದಷ್ಟು ತಿಳಿಗೊಂಡಿರುವಂತಿದ್ದು, ಮುಂದಿನ ದಿನಗಳಲ್ಲಿ ಕಾರ್ಪ್ಸ್ ಕಮಾಂಡರ್ ಗಳ ಬದಲಾಗಿ ವಿಭಾಗೀಯ ಕಮಾಂಡರ್ ಗಳೇ ಮಾತುಕತೆ ಮೂಲಕ ಬಿಕ್ಕಟ್ಟನ್ನು ಬಗೆಹರಿಸಿಕೊಳ್ಳಲಿದ್ದಾರೆ ಹಾಗೂ ನಿರ್ಣಯಗಳು ಈ ಮಟ್ಟದಲ್ಲಿ ಚರ್ಚಿಸಬಹುದಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಗಾಲ್ವಾನ್ ಕಣಿವೆಯಲ್ಲಿ ಕಾಯಂ ನೆಲೆಯೂರುತ್ತಿರುವ ಚೀನಾ ಸೈನಿಕರುಗಾಲ್ವಾನ್ ಕಣಿವೆಯಲ್ಲಿ ಕಾಯಂ ನೆಲೆಯೂರುತ್ತಿರುವ ಚೀನಾ ಸೈನಿಕರು

ಗಲ್ವಾನ್ ಘರ್ಷಣೆಗೆ ಸಂಬಂಧಿಸಿದಂತೆ ವರ್ಕಿಂಗ್ ಮೆಕಾನಿಸಮ್ ಫಾರ್ ಕನ್ಸಲ್ಟೇಷನ್- ಕೋ-ಆರ್ಡಿನೇಷನ್ ಆನ್ ಇಂಡಿಯಾ-ಚೀನಾ ಬಾರ್ಡರ್ ಅಫೇರ್ಸ್ ಅಡಿಯಲ್ಲಿ ಈ ವರೆಗೂ 21 ಸುತ್ತಿನ ರಾಜತಾಂತ್ರಿಕ ಮಟ್ಟದ ಮಾತುಕತೆಗಳು ನಡೆದಿದ್ದು, ಭಾರತೀಯ XIV ಕಾರ್ಪ್ಸ್ ಕಮಾಂಡರ್ ಗಳು ಹಾಗೂ ಪಿಎಲ್ಎ ಕಮಾಂಡರ್ ಆಫ್ ಸೌತ್ ಜಿಂಗ್ಜಿಯಾಂಗ್ ಸೇನಾ ಜಿಲ್ಲೆಯ ನಡುವೆ 11 ಸುತ್ತಿನ ಮಾತುಕತೆ ನಡೆದಿದೆ.

ಮುಂದಿನ ದಿನಗಳಲ್ಲಿ ಕಾರ್ಪ್ಸ್ ಕಮಾಂಡರ್ ಗಳ ಮಾತುಕತೆಯ ಅಗತ್ಯ ಬಂದಲ್ಲಿ ಮಾತ್ರ ಆ ಮಟ್ಟದ ಮಾತುಕತೆಗಳು ನಡೆಯಲಿವೆ.

ಗಲ್ವಾನ್ ಕಣಿವೆಗೆ ಸಂಬಂಧಿಸಿದಂತೆ ಸೇನಾಧಿಕಾರಿ ಯಾವುದೇ ಪ್ರತಿಕ್ರಿಯೆಯನ್ನೂ ನೀಡಲಿಲ್ಲ. ಉಭಯ ದೇಶಗಳ ನಡುವೆ ಮೊದಲ ಮಿಲಿಟರಿ ಉನ್ನತ ಮಟ್ಟದ ಸಭೆ ಜೂನ್ 6 ರಂದು ನಡೆಯಿತು, ಇದರಲ್ಲಿ ಸೇನೆಯನ್ನು ಹಿಂದೆ ಕರೆಸಿಕೊಳ್ಳುವ ಬಗ್ಗೆ ಮಾತುಕತೆ ನಡೆಯಿತು, ಇದರಂತೆ ಗಾಲ್ವಾನ್ ಕಣಿವೆಯಲ್ಲಿ ಎಂಗೇಜ್ಮೆಂಟ್ ಪ್ರಕ್ರಿಯೆ ನಡೆಯುತ್ತಿತ್ತು.

ಇದನ್ನು ನೋಡಿಕೊಳ್ಳುವ ಹೊಣೆ ಕರ್ನಲ್ ಸಂತೋಷ್ ಬಾಬು ಅವರಿಗೆ ವಹಿಸಲಾಗಿತ್ತು. ಕರ್ನಲ್ ಬಾಬು ತಮ್ಮ ಕರ್ತವ್ಯವನ್ನು ಯಶಸ್ವಿಯಾಗಿ ನಿರ್ವಹಿಸುತ್ತಿದ್ದರು. ಆದರೆ, ಚೀನಾ ಸೈನಿಕರು ಶಸ್ತ್ರಾಸ್ತ್ರಗಳೊಂದಿಗೆ ಮಾರಕ ದಾಳಿ ಮಾಡಿದರು. ಕಲ್ಲೆಸೆತ ಸಂಘರ್ಷಕ್ಕೂ ಮುಂದಾದರು. ದಾಳಿಗೆ ಕುಗ್ಗದ ಭಾರತೀಯ ಸೇನೆ ಈ ದಾಳಿಯನ್ನು ಸಮರ್ಥವಾಗಿ ಎದುರಿಸಿತು.

English summary
The ongoing army degree processes to resolve palpable tensions alongside the Line of Actual Control within the Eastern Ladakh will change from now with the decision talks to be held a degree beneath the Corps Commanders
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X