ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದ ಗಡಿಯ ಹತ್ತಿರ ತನ್ನ ವಾಯುನೆಲೆ ವಿಸ್ತರಿಸಿದ ಚೀನಾ

|
Google Oneindia Kannada News

ನವದೆಹಲಿ, ಮೇ 26: ಚೀನಾ ಮತ್ತು ಭಾರತದ ಗಡಿ ಭಾಗದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ. ಲಡಾಕ್ ಸೆಕ್ಟರ್ ನಲ್ಲಿ ಚೀನಾ ಹೆಚ್ಚಿನ ಸಂಖ್ಯೆಯಲ್ಲಿ ತನ್ನ ಸೈನಿಕರನ್ನು ಜಮಾವಣೆ ಮಾಡುತ್ತಿದೆ. ಇತ್ತ ಭಾರತವೂ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ, ತಾನೂ ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಸೇನಾ ಸಿಬ್ಬಂದಿಯನ್ನು ಜಮಾವಣೆ ಮಾಡುತ್ತಿದೆ.

Recommended Video

ಧೋನಿ ಬಳಿ ಕ್ಷಮೆ ಕೇಳಿದ ಮಹಮದ್ ಕೈಫ್..? | Oneindia Kannada

ಅತ್ತ ಚೀನಾ ಏನೂ ನಡೆದಿಲ್ಲ ಎಂಬಂತೆ ಪ್ರತಿಪಾದಿಸುತ್ತಿದೆ. ಆದರೆ, ಇಂದು ಕೆಲ ಉಪಗ್ರಹ ಚಿತ್ರಗಳು ಬಯಲಾಗಿದ್ದು, ಚೀನಾ ಗಡಿ ಪ್ರದೇಶದಲ್ಲಿನ ತನ್ನ ವಾಯುನೆಲೆಯನ್ನು ವಿಸ್ತರಿಸಿರುವುದು ಬೆಳಕಿಗೆ ಬಂದಿದೆ. ಅಲ್ಲದೇ ಈ ವಾಯುನೆಲೆಯಲ್ಲಿ ಯುದ್ಧ ವಿಮಾನಗಳನ್ನು ಜಮಾವಣೆ ಮಾಡಿರುವುದು ಕಂಡು ಬಂದಿದೆ.

ಭಾರತಕ್ಕೆ ಸೆಡ್ಡು, ಚೀನಾ ಸಂಪರ್ಕಕ್ಕೆ ನೇಪಾಳದಿಂದ ರಸ್ತೆ ನಿರ್ಮಾಣಭಾರತಕ್ಕೆ ಸೆಡ್ಡು, ಚೀನಾ ಸಂಪರ್ಕಕ್ಕೆ ನೇಪಾಳದಿಂದ ರಸ್ತೆ ನಿರ್ಮಾಣ

ಮಂಗಳವಾರ ಎನ್‌ಡಿಟಿವಿ ಬಿಡುಗಡೆ ಮಾಡಿರುವ ಮೂರು ಉಪಗ್ರಹ ಚಿತ್ರಗಳು ಚೀನಾದ ಕುತಂತ್ರವನ್ನು ಬಟಾಬಯಲು ಮಾಡಿದೆ. ಟಿಬೆಟ್‌ನಲ್ಲಿರುವ ಚೀನಾದ Ngari Gunsa airport ನಲ್ಲಿ ಚೀನಾ ದೊಡ್ಡ ಮಟ್ಟದ ವಿಸ್ತರಣಾ ಕಾಮಗಾರಿಗಳನ್ನು ನಡೆಸಿರುವುದು ಬೆಳಕಿಗೆ ಬಂದಿದೆ. ಈ ವಿಮಾನ ನಿಲ್ದಾಣ ಲಡಾಕ್‌ ಸೆಕ್ಟರ್‌ನ ಭಾರತದ Pangong Lake ನಿಂದ ಕೇವಲ 200 ಕಿಲೋ ಮೀಟರ್ ದೂರ ಇದೆ ಮತ್ತು ಸಮುದ್ರ ಮಟ್ಟದಿಂದ 14,022 ಮೀಟರ್ ಎತ್ತರದಲ್ಲಿದೆ. ಚೀನಾಕ್ಕೆ ಮಹತ್ವದ ವಾಯುನೆಲೆಯಾಗಿದೆ.

India China Border Tense: China Expand Airbase Near India Border

ಉಪಗ್ರಹ ಚಿತ್ರಗಳಲ್ಲಿ ಈ ವಿಮಾನ ನಿಲ್ದಾಣದ ರನ್‌ವೇಯನ್ನೂ ವಿಸ್ತರಿಸಲಾಗಿದೆ. ನಾಲ್ಕು ಪೈಟರ್ ಜೆಟ್‌ಗಳನ್ನು ನಿಲ್ಲಿಸಲಾಗಿದೆ. ಅಲ್ಲದೇ ಚೀನಾ ಯೋಧರ ಗುಂಪುಗಳು ಬೀಡು ಬಿಟ್ಟಿರುವುದಾಗಿ ತಿಳಿದು ಬರುತ್ತದೆ.

ಕೊರೊನಾ ವೈರಸ್ ಅಲ್ಲ: ಹೊಸ ಕಿಡಿ ಹೊತ್ತಿಸಿತು ಚೀನಾದ ಅದೊಂದು ಮಾತು!ಕೊರೊನಾ ವೈರಸ್ ಅಲ್ಲ: ಹೊಸ ಕಿಡಿ ಹೊತ್ತಿಸಿತು ಚೀನಾದ ಅದೊಂದು ಮಾತು!

ಕಳೆದ ಎರಡು ದಿನದಿಂದ ಈ ಭಾಗದಲ್ಲಿ ಚೀನಾ ಮತ್ತು ಭಾರತದ ಯೋಧರ ನಡುವೆ ಉದ್ವಿಗ್ನತೆಯ ವಾತಾವರಣ ನಿರ್ಮಾಣವಾಗಿದೆ. ಇದಕ್ಕೆ ಕಾರಣ ಭಾರತೀಯ ಯೋಧರನ್ನು ಚೀನಾ ಯೋಧರು ವಶಕ್ಕೆ ಪಡೆದು ಬಿಡುಗಡೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಹೀಗಾಗಿ ಭಾರತೀಯ ಸೇನೆಯ ಉನ್ನತ ಅಧಿಕಾರಿಗಳು ಕೂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ಯೋಧರನ್ನು ನಿಯೋಜಿಸಿ ಚೀನಾಕ್ಕೆ ಸೆಡ್ಡು ಹೊಡೆಯಲಾಗಿದೆ.

English summary
India China Border Tense: China Expand Airbase Near India Border. setellite images shows china Expand Airbase and landing the war aircrafts.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X