ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವೊಡಾಫೋನ್ ಪರವಾದ ಅಂತರರಾಷ್ಟ್ರೀಯ ನ್ಯಾಯಮಂಡಳಿ ತೀರ್ಪನ್ನು ಪ್ರಶ್ನಿಸಿದ ಭಾರತ

|
Google Oneindia Kannada News

ನವದೆಹಲಿ, ಡಿಸೆಂಬರ್ 24: ಸಿಂಗಾಪುರದಲ್ಲಿ ಭಾರತೀಯ ಆದಾಯ ತೆರಿಗೆ ಅಧಿಕಾರಿಗಳಿಂದ 20,000 ಕೋಟಿ ರೂ.ಗಳ ಬೇಡಿಕೆಯನ್ನು ಒಳಗೊಂಡ ಪ್ರಕರಣದಲ್ಲಿ, ಬ್ರಿಟಿಷ್ ಟೆಲಿಕಾಂ ದೈತ್ಯ ವೊಡಾಫೋನ್ ಗ್ರೂಪ್ ಪರವಾಗಿ ಅಂತರರಾಷ್ಟ್ರೀಯ ನ್ಯಾಯಮಂಡಳಿಯ ತೀರ್ಪನ್ನು ಭಾರತ ಪ್ರಶ್ನಿಸಿದೆ ಎಂದು ಮೂಲಗಳು ತಿಳಿಸಿದೆ.

ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರ ಸಲಹೆಯನ್ನು ಗಂಭೀರವಾಗಿ ಪರಿಗಣಿಸಿದ್ದ ಸರ್ಕಾರವು, 20,000 ಕೋಟಿ ತೆರಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಧ್ಯಸ್ಥಿಕೆ ನಿರ್ಧಾರವನ್ನು ಪ್ರಶ್ನಿಸಿದೆ.

ಅಂತಾರಾಷ್ಟ್ರೀಯ ನ್ಯಾಯಾಧಿಕರಣದ ತೀರ್ಪು ಸಾರ್ವಭೌಮ ಹಕ್ಕು ಹೊಂದಿರುವ ಸಂಸತ್ ಅಂಗೀಕರಿಸಿರುವ ಕಾನೂನಿನ ವಿರುದ್ಧ ಹೋಗುವುದಕ್ಕೆ ಸಾಧ್ಯವಿಲ್ಲ ಎಂದು ಸಾಲಿಸಿಟರ್ ಜನರಲ್ ಅಭಿಪ್ರಾಯಪಟ್ಟಿದ್ದು, ಸರ್ಕಾರಕ್ಕೆ ವೊಡೋಫೋನ್ ಪರವಾಗಿ ಬಂದಿರುವ ನಿರ್ಧಾರವನ್ನು ಪ್ರಶ್ನಿಸುವಂತೆ ಸಲಹೆ ನೀಡಿತ್ತು.

India Challenges Vodafone Group Arbitration Ruling In Singapore: Source

ಹೇಗ್ ನಲ್ಲಿರುವ ಅಂತಾರಾಷ್ಟ್ರೀಯ ನ್ಯಾಯಾಧಿಕರಣ ಈ ಹಿಂದೆ ನೀಡಿದ್ದ ತೀರ್ಪಿನಲ್ಲಿ ವೊಡೋಫೋನ್ ಸಂಸ್ಥೆಯ ಮೇಲೆ ಭಾರತ ಸರ್ಕಾರ ಹೊರಿಸಿರುವ ತೆರಿಗೆ ಭಾರ, ಬಡ್ಡಿ ಹಾಗೂ ದಂಡದ ಮೊತ್ತ ಭಾರತ ಹಾಗೂ ನೆದರ್ಲ್ಯಾಂಡ್ ನ ನಡುವಿನ ಹೂಡಿಕೆ ಒಪ್ಪಂದವನ್ನು ಉಲ್ಲಂಘಿಸುತ್ತದೆ ಎಂದು ತೀರ್ಪು ನೀಡಿತ್ತು. ಪರಿಣಾಮ ಭಾರತದಲ್ಲಿ ಹೂಡಿಕೆ ಮಾಡಿರುವ ನೆದರ್ಲ್ಯಾಂಡ್ ಮೂಲದ ಸಂಸ್ಥೆಗೆ 20,000 ಕೋಟಿ ರೂಪಾಯಿ ತೆರಿಗೆ ಮೊತ್ತದ ಭಾರ ಕಡಿಮೆಯಾಗುವ ಸಂಭವವಿತ್ತು.

ಮನೆಮನೆ ಮಾತಾದ ಗೋಲ್ಡ್ ವಿನ್ನರ್‌ನಿಂದ ಎಲ್ಡಿಯಾ ಶುದ್ಧ ಕೊಬ್ಬರಿ ಎಣ್ಣೆಮನೆಮನೆ ಮಾತಾದ ಗೋಲ್ಡ್ ವಿನ್ನರ್‌ನಿಂದ ಎಲ್ಡಿಯಾ ಶುದ್ಧ ಕೊಬ್ಬರಿ ಎಣ್ಣೆ

ಜೊತೆಗೆ ಇತ್ತೀಚೆಗಷ್ಟೇ ವೊಡಾಫೋನ್ ಪ್ರಕರಣದ ನ್ಯಾಯಮಂಡಳಿ ಭಾರತಕ್ಕೆ 4.3 ಮಿಲಿಯನ್ ಪೌಂಡ್‌ಗಳನ್ನು ಮತ್ತು 3,000 ಯೂರೋಗಳನ್ನು ಕಾನೂನು ವೆಚ್ಚವಾಗಿ ಮರುಪಾವತಿಸುವಂತೆ ನಿರ್ದೇಶಿಸಿದೆ. ಸರ್ಕಾರದ ಒಟ್ಟು ಹೊಣೆಗಾರಿಕೆಯು ಒಟ್ಟು 85 ಕೋಟಿ ರೂ.ಗಳಾಗಿದ್ದು, ಅದರಲ್ಲಿ 45 ಕೋಟಿ ರೂ.ಗಳನ್ನು ತೆರಿಗೆ ವಿಧಿಸಲು ಮರುಪಾವತಿಸಬೇಕಾಗಿತ್ತು

English summary
India has challenged an international tribunal’s verdict in favour of British telecom giant Vodafone Group in a case involving a Rs 20,000 crore demand from the Indian income tax authorities
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X